AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

RBI projection: 2025-26ರಲ್ಲಿ ಜಿಡಿಪಿ ಶೇ. 6.5, ಹಣದುಬ್ಬರ ಶೇ. 3.7: ಆರ್​​ಬಿಐ ಅಂದಾಜು

RBI MPC meeting estimates on GDP and Inflation: ಈ ಹಣಕಾಸು ವರ್ಷದಲ್ಲಿ ಆರ್ಥಿಕ ಬೆಳವಣಿಗೆ ಮತ್ತು ಹಣದುಬ್ಬರ ನಿಯಂತ್ರಣದ ಬಗ್ಗೆ ಆರ್​​ಬಿಐ ಹೆಚ್ಚು ವಿಶ್ವಾಸ ಹೊಂದಿದೆ. ಜಾಗತಿಕ ಅನಿಶ್ಚಿತತೆ ನಡುವೆಯೂ ಜಿಡಿಪಿ ಶೇ. 6.5ರಷ್ಟು ಹೆಚ್ಚಾಗಬಹುದು ಎನ್ನುವ ನಿರೀಕ್ಷೆಯನ್ನು ಆರ್​ಬಿಐ ತೋರಿಸಿದೆ. ಹಾಗೆಯೇ, ಹಣದುಬ್ಬರವು 2025-26ರಲ್ಲಿ ಶೇ. 3.7ಕ್ಕೆ ಇಳಿಯಬಹುದು ಎಂದು ಹೇಳಿರುವ ಆರ್​ಬಿಐ, ಈ ಬೆಲೆ ಏರಿಕೆ ಮಟ್ಟವು ತಾನು ನಿಗದಿ ಮಾಡಿದ ತಾಳಿಕೆ ಮಿತಿಯೊಳಗೆಯೇ ಇರುತ್ತದೆಂದು ಸಮಾಧಾನ ಪಟ್ಟಿದೆ.

RBI projection: 2025-26ರಲ್ಲಿ ಜಿಡಿಪಿ ಶೇ. 6.5, ಹಣದುಬ್ಬರ ಶೇ. 3.7: ಆರ್​​ಬಿಐ ಅಂದಾಜು
ಆರ್ಥಿಕ ಬೆಳವಣಿಗೆ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 06, 2025 | 11:13 AM

Share

ನವದೆಹಲಿ, ಜೂನ್ 6: ರಿಪೋ ದರವನ್ನು 50 ಮೂಲಾಂಕಗಳಷ್ಟು ಭರ್ಜರಿ ಕಡಿತ ಮಾಡಿರುವ ಆರ್​​ಬಿಐ (RBI MPC meeting) ಭಾರತದ ಆರ್ಥಿಕ ಬೆಳವಣಿಗೆ ಬಗ್ಗೆ ಆಶಾದಾಯಕವಾಗಿದೆ. ಜಾಗತಿಕವಾಗಿ ಬಹಳ ಅನಿಶ್ಚಿತ ಸ್ಥಿತಿ ಇರುವುದರಿಂದ ಆರ್ಥಿಕ ಬೆಳವಣಿಗೆ ದೃಷ್ಟಿಯಿಂದ ಮುನ್ನೆಚ್ಚರಿಕೆಯಾಗಿ ರಿಪೋ ದರವನ್ನು ಆರ್​​ಬಿಐ ಇಳಿಸಿದೆ. ಆದರೆ, ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.5ರಷ್ಟು ಬೆಳೆಯಬಹುದು ಎಂದು ಹಿಂದಿನ ಎಂಪಿಸಿ ಸಭೆಯಲ್ಲಿ ಮಾಡಿದ್ದ ಅಂದಾಜನ್ನೇ ಆರ್​​ಬಿಐ ಪುನರುಚ್ಚರಿಸಿದೆ.

ವಾರ್ಷಿಕ ಹಣದುಬ್ಬರ ದರ ಮಾತ್ರವಲ್ಲ, ತ್ರೈಮಾಸಿಕ ಜಿಡಿಪಿ ದರಗಳ ಬಗೆಗಿನ ಆರ್​​ಬಿಐ ಅಂದಾಜಿನಲ್ಲಿ ಬದಲಾವಣೆ ಆಗಿಲ್ಲ. 2025-26ಕ್ಕೆ ಜಿಡಿಪಿ ವೃದ್ಧಿ ಎಷ್ಟಿರಬಹುದು ಎಂದು ಆರ್​​ಬಿಐ ಮಾಡಿರುವ ಅಂದಾಜು ಈ ಕೆಳಕಂಡಂತಿದೆ:

2025-26ಕ್ಕೆ ಒಟ್ಟಾರೆ ಜಿಡಿಪಿ ದರ: ಶೇ. 6.5

  • ಮೊದಲ ಕ್ವಾರ್ಟರ್: ಶೇ. 6.5
  • ಎರಡನೇ ಕ್ವಾರ್ಟರ್: ಶೇ. 6.7
  • ಮೂರನೇ ಕ್ವಾರ್ಟರ್: ಶೇ. 6.6
  • ನಾಲ್ಕನೇ ಕ್ವಾರ್ಟರ್: ಶೇ. 6.3

ಇದನ್ನೂ ಓದಿ: ಆರ್​​​ಬಿಐ ರಿಪೋ ದರ 50 ಮೂಲಾಂಕಗಳಷ್ಟು ಕಡಿತ; ಬಡ್ಡಿದರ ಈಗ ಶೇ. 5.50ಕ್ಕೆ ಇಳಿಕೆ

ಹಣದುಬ್ಬರ ಇಳಿಕೆ ಬಗ್ಗೆ ಆರ್​​ಬಿಐ ಉತ್ಸಾಹ

ಹಣದುಬ್ಬರದ ಬಗ್ಗೆ ರಿಸರ್ವ್ ಬ್ಯಾಂಕ್ ಬಹಳ ವಿಶ್ವಾಸದಲ್ಲಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹಣದುಬ್ಬರವು ಶೇ. 3.7ರಷ್ಟಿರಬಹುದು ಎಂದು ಅಂದಾಜು ಮಾಡಿದೆ. ಹಿಂದಿನ ಸಭೆಯಲ್ಲಿ ಅದು ಹಣದುಬ್ಬರ ಶೇ. 4ರಷ್ಟಿರಬಹುದು ಎಂದು ಅಭಿಪ್ರಾಯಪಟ್ಟಿತ್ತು. ಈ ಬಾರಿ ಮುಂಗಾರು ಮಳೆ ಬೆಳೆ ಉತ್ತಮವಾಗಿ ಆಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಬೆಲೆ ಏರಿಕೆ ಪ್ರಮಾಣ ತಗ್ಗುವ ಸಾಧ್ಯತೆ ಇದೆ. ಈ ಕಾರಣಕ್ಕೆ ಆರ್​​ಬಿಐ ಹಣದುಬ್ಬರ ಕಡಿಮೆ ಆಗಬಹುದು ಎಂದು ಹೇಳಿದೆ.

2025-26ಕ್ಕೆ ಹಣದುಬ್ಬದ ಬಗ್ಗೆ ಆರ್​​ಬಿಐ ಅಂದಾಜು

ಇಡೀ ವರ್ಷಕ್ಕೆ: ಶೇ. 3.7

  • ಮೊದಲ ಕ್ವಾರ್ಟರ್: ಶೇ. 2.9
  • ಎರಡನೇ ಕ್ವಾರ್ಟರ್: ಶೇ. 3.4
  • ಮೂರನೇ ಕ್ವಾರ್ಟರ್: ಶೇ. 3.9
  • ನಾಲ್ಕನೇ ಕ್ವಾರ್ಟರ್: ಶೇ. 4.4

ಇದನ್ನೂ ಓದಿ: ಸರ್ಕಾರಕ್ಕೆ ಅದಾನಿ ಗ್ರೂಪ್​​ನಿಂದ ಸಖತ್ ಟ್ಯಾಕ್ಸ್ ಕಲೆಕ್ಷನ್; ಇಡೀ ಬೆಂಗಳೂರು ಮೆಟ್ರೋ ನಿರ್ಮಾಣಕ್ಕಾಗುವಷ್ಟು ಹಣ ಅದು

ಆರ್​​ಬಿಐ ಅಂದಾಜು ಮಾಡಿರುವಂತೆ ಹಣದುಬ್ಬರವು ಶೇ. 3.7ಕ್ಕೆ ಮಿತಿಗೊಂಡರೆ ಅದು ಗಮನಾರ್ಹ ಸಾಧನೆ ಎನಿಸಲಿದೆ. ಕೋವಿಡ್ ಬಳಿಕ ಹಣದುಬ್ಬರವು ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟಕ್ಕೆ ಹೋಗಿತ್ತು. ಆರ್​​ಬಿಐ ಹಣದುಬ್ಬರವನ್ನು ಶೇ. 4ಕ್ಕೆ ಇಳಿಸುವ ಟಾರ್ಗೆಟ್ ಇಟ್ಟಿತ್ತು. ಹಣದುಬ್ಬರದ ತಾಳಿಕೆ ಮಿತಿಯಾಗಿ ಶೇ. 2ರಿಂದ 6 ಎಂದು ನಿಗದಿ ಮಾಡಿದೆ. ಹಣದುಬ್ಬರವು ಈ ತಾಳಿಕೆ ಮಿತಿಯೊಳಗೇ ಇರುವುದು ಆರ್​​ಬಿಐನ ಮುಖ್ಯ ಗುರಿಯಾಗಿದೆ.

ಈಗ್ಗೆ ಹಲವು ತಿಂಗಳಿಂದ ಹಣದುಬ್ಬರವು ಈ ತಾಳಿಕೆ ಮಿತಿಯೊಳಗೆಯೇ ಇದೆ. ಇದರಿಂದ ಆರ್​​ಬಿಐ ತನ್ನ ಬಡ್ಡಿದರಗಳನ್ನು ಇಳಿಸುವಂತಹ ರಿಸ್ಕ್ ತೆಗೆದುಕೊಳ್ಳಲು ಸಾಧ್ಯವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ