RBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್​ಬಿಐ ಅಂದಾಜು

Prediction For 2023-24 FY: ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯು, ಈ ಹಣಕಾಸು ವರ್ಷದಲ್ಲಿ (2023-24) ದೇಶದ ಆರ್ಥಿಕ ಮತ್ತು ಹಣಕಾಸು ಸ್ಥಿತಿ ಹೇಗಿರಬಹುದು ಎಂದು ಮತ್ತೊಮ್ಮೆ ಅವಲೋಕಿಸಿದೆ. ಸಮಿತಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಸಮಗ್ರ ಗ್ರಾಹಕ ಬೆಲೆ ಅನುಸೂಚಿ (Headline CPI Inflation) ಹಣದುಬ್ಬರ ಶೇ. 5.1ರಷ್ಟು ಇರಬಹುದು ಎಂದಿದೆ. ಈ ಹಿಂದಿನ ಅದರ ಅಂದಾಜಿನಲ್ಲಿ ಹಣದುಬ್ಬರ ಶೇ. 5.2ರಷ್ಟು ಇರಬಹುದು ಎಂದಿತ್ತು. ಈಗ ಮುಂಗಾರು ಮಳೆ ಉತ್ತಮವಾಗುವ ಸಾಧ್ಯತೆ ಇತ್ಯಾದಿ ಸಂಗತಿಗಳಿಂದ ಹಣದುಬ್ಬರ ನಿರೀಕ್ಷೆಗಿಂತ ತುಸು ಕಡಿಮೆ ಆಗಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

RBI: ಈ ಹಣಕಾಸು ವರ್ಷ ಹಣದುಬ್ಬರ ಶೇ. 5.1, ಜಿಡಿಪಿ ಶೇ. 6.5; ಆರ್​ಬಿಐ ಅಂದಾಜು
ಆರ್​ಬಿಐ
Edited By:

Updated on: Oct 08, 2026 | 12:11 PM

ನವದೆಹಲಿ: ರೆಪೋ ದರವನ್ನು ಶೇ. 6.5ರಲ್ಲಿ ಮುಂದುವರಿಸಲು ನಿರ್ಧರಿಸಿರುವ ಭಾರತೀಯ ರಿಸರ್ವ್ ಬ್ಯಾಂಕ್​ನ ಹಣಕಾಸು ನೀತಿ ಸಮಿತಿಯು, ಈ ಹಣಕಾಸು ವರ್ಷದಲ್ಲಿ (2023-24) ದೇಶದ ಆರ್ಥಿಕ ಮತ್ತು ಹಣಕಾಸು ಸ್ಥಿತಿ ಹೇಗಿರಬಹುದು ಎಂದು ಮತ್ತೊಮ್ಮೆ ಅವಲೋಕಿಸಿದೆ. ಸಮಿತಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಸಮಗ್ರ ಗ್ರಾಹಕ ಬೆಲೆ ಅನುಸೂಚಿ (Headline CPI Inflation) ಹಣದುಬ್ಬರ ಶೇ. 5.1ರಷ್ಟು ಇರಬಹುದು ಎಂದಿದೆ. ಈ ಹಿಂದಿನ ಅದರ ಅಂದಾಜಿನಲ್ಲಿ ಹಣದುಬ್ಬರ ಶೇ. 5.2ರಷ್ಟು ಇರಬಹುದು ಎಂದಿತ್ತು. ಈಗ ಮುಂಗಾರು ಮಳೆ ಉತ್ತಮವಾಗುವ ಸಾಧ್ಯತೆ ಇತ್ಯಾದಿ ಸಂಗತಿಗಳಿಂದ ಹಣದುಬ್ಬರ ನಿರೀಕ್ಷೆಗಿಂತ ತುಸು ಕಡಿಮೆ ಆಗಬಹುದು ಎಂಬ ಅಭಿಪ್ರಾಯಕ್ಕೆ ಬರಲಾಗಿದೆ.

2023-24ರ ಹಣಕಾಸು ವರ್ಷದಲ್ಲಿ ಹಣದುಬ್ಬರ ಅಂದಾಜು:

  • ಇಡೀ ಹಣಕಾಸು ವರ್ಷದಲ್ಲಿ ಹಣದುಬ್ಬರ: ಶೇ. 5.1
  • ಮೊದಲ ಕ್ವಾರ್ಟರ್ (2023 ಏಪ್ರಿಲ್​ನಿಂದ ಜೂನ್​ವರೆಗೂ): ಶೇ. 4.6
  • ಎರಡನೇ ಕ್ವಾರ್ಟರ್ (2023 ಜುಲೈನಿಂದ ಸೆಪ್ಟೆಂಬರ್​ವರೆಗೂ): ಶೇ. 5.2
  • ಮೂರನೇ ಕ್ವಾರ್ಟರ್ (2023 ಅಕ್ಟೋಬರ್​ನಿಂದ ಡಿಸೆಂಬರ್​ವರೆಗೂ): ಶೇ. 5.4
  • ನಾಲ್ಕನೇ ಕ್ವಾರ್ಟರ್ (2024 ಜನವರಿಯಿಂದ ಮಾರ್ಚ್​ವರೆಗೂ): ಶೇ. 5.2.

 

ಜಿಡಿಪಿ ದರ 2023-24ರಲ್ಲಿ ಶೇ. 6.5 ಇರುವ ಸಾಧ್ಯತೆ

ಭಾರತೀಯ ರಿಸರ್ವ್ ಬ್ಯಾಂಕ್ 2023-24ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಬೆಳವಣಿಗೆ ದರ ಶೇ. 6.5ರಷ್ಟಿರಬಹುದು ಎಂದು ಅಂದಾಜು ಮಾಡಿತ್ತು. ಹಿಂದಿನ ವರ್ಷದಲ್ಲಿ, ಅಂದರೆ 2022-23 ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆ ಶೇ. 7.1ರಷ್ಟು ಬೆಳೆದಿತ್ತು. ಈ ಹಣಕಾಸು ವರ್ಷದಲ್ಲಿ ಶೇ. 6.5ರಷ್ಟು ಬೆಳೆಯಬಹುದು. ಅಂದರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೆಳವಣಿಗೆ ಸ್ವಲ್ಪ ಕುಂಠಿತಗೊಳ್ಳಬಹುದು. ಇನ್ನು, ತ್ರೈಮಾಸಿಕವಾರು ಬೆಳವಣಿಗೆ ಹೇಗಿರಬಹುದು ಎಂದು ಆರ್​ಬಿಐ ಅಂದಾಜು ಮಾಡಿದ್ದು ಅದರ ವಿವರ ಕೆಳಕಂಡಂತಿದೆ…

  • ಮೊದಲ ಕ್ವಾರ್ಟರ್ (2023 ಏಪ್ರಿಲ್​ನಿಂದ ಜೂನ್​ವರೆಗೂ): ಶೇ. 8.0
  • ಎರಡನೇ ಕ್ವಾರ್ಟರ್ (2023 ಜುಲೈನಿಂದ ಸೆಪ್ಟೆಂಬರ್​ವರೆಗೂ): ಶೇ. 6.5
  • ಮೂರನೇ ಕ್ವಾರ್ಟರ್ (2023 ಅಕ್ಟೋಬರ್​ನಿಂದ ಡಿಸೆಂಬರ್​ವರೆಗೂ): ಶೇ. 6.0
  • ನಾಲ್ಕನೇ ಕ್ವಾರ್ಟರ್ (2024 ಜನವರಿಯಿಂದ ಮಾರ್ಚ್​ವರೆಗೂ): ಶೇ. 5.7

 

ಆರ್​ಬಿಐನ ರೆಪೋ, ರಿವರ್ಸ್ ರೆಪೋ ಮತ್ತಿತರ ದರಗಳು

  • ರೆಪೋ ದರ: ಶೇ. 6.5
  • ರಿವರ್ಸ್ ರಿಪೋ ದರ: ಶೇ. 3.35
  • ಬ್ಯಾಂಕ್ ದರ: ಶೇ. 6.75
  • ಕ್ಯಾಷ್ ರಿಸರ್ವ್ ರೇಷಿಯೋ: ಶೇ. 4.5
  • ಎಸ್​ಎಲ್​ಆರ್: ಶೇ. 18
  • ಎಂಸಿಎಲ್​ಆರ್: ಶೇ. 7.90ರಿಂದ ಶೇ. 8.50

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:27 am, Thu, 8 June 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us