ಗೇಮಿಂಗ್ ಕಂಪನಿಗಳಿಗೆ ಖುಷಿ ಸುದ್ದಿ; ಸರ್ಕಾರದ ಹೊಸ ಗೇಮಿಂಗ್ ನಿಯಮ ಜಾರಿ ಬಳಿಕ ಗೂಗಲ್ ಪ್ಲೇಸ್ಟೋರ್​ನಲ್ಲಿ ಲಭ್ಯ ಇರಲಿವೆ ಗೇಮಿಂಗ್ ಆ್ಯಪ್​ಗಳು

|

Updated on: Sep 06, 2023 | 12:35 PM

Google To Allow Real Money Games: ಶೇ. 28ರಷ್ಟು ಜಿಎಸ್​ಟಿ ತೆರಿಗೆ ಹೇರಿಕೆಯಿಂದ ಕಳೆಗುಂದಿರುವ ಭಾರತದ ಗೇಮಿಂಗ್ ಉದ್ಯಮಕ್ಕೆ ಖುಷಿಯ ಸುದ್ದಿ ಸಿಕ್ಕಿದೆ. ಭಾರತದ ಹೊಸ ಗೇಮಿಂಗ್ ನಿಯಮ ಜಾರಿಗೆ ಬಂದ ಬಳಿಕ ಸ್ವಯಂನಿಯಂತ್ರಕ ಸಂಸ್ಥೆಗಳಿಂದ ಅನುಮೋದನೆ ಪಡೆದ ರಿಯಲ್ ಮನಿ ಗೇಮಿಂಗ್ ಆ್ಯಪ್​ಗಳಿಗೆ ತನ್ನ ಪ್ಲೇಸ್ಟೋರ್ ವೇದಿಕೆಯಲ್ಲಿ ಅವಕಾಶ ಕೊಡುವುದಾಗಿ ಗೂಗಲ್ ಹೇಳಿದೆ.

ಗೇಮಿಂಗ್ ಕಂಪನಿಗಳಿಗೆ ಖುಷಿ ಸುದ್ದಿ; ಸರ್ಕಾರದ ಹೊಸ ಗೇಮಿಂಗ್ ನಿಯಮ ಜಾರಿ ಬಳಿಕ ಗೂಗಲ್ ಪ್ಲೇಸ್ಟೋರ್​ನಲ್ಲಿ ಲಭ್ಯ ಇರಲಿವೆ ಗೇಮಿಂಗ್ ಆ್ಯಪ್​ಗಳು
ಫ್ಯಾಂಟಸಿ ಸ್ಪೋರ್ಟ್ಸ್
Follow us on

ನವದೆಹಲಿ, ಸೆಪ್ಟೆಂಬರ್ 6: ಭಾರತದಲ್ಲಿ ಗೇಮಿಂಗ್ ಕ್ಷೇತ್ರಕ್ಕೆ ಹೊಸ ನಿಯಂತ್ರಕ ವ್ಯವಸ್ಥೆ ಜಾರಿಗೆ ಬಂದ ಬಳಿಕ ಗೂಗಲ್ ಪ್ಲೇ ಸ್ಟೋರ್​ನಲ್ಲಿ ರಿಯಲ್ ಮನಿ ಗೇಮಿಂಗ್ ಆ್ಯಪ್​ಗಳನ್ನು ಡೌನ್​ಲೋಡ್ ಮಾಡಬಹುದಾಗಿದೆ. ಸ್ವಯಂ ನಿಯಂತ್ರಕ ಸಂಸ್ಥೆಗಳ (SRB- Self Regulatory Bodies) ಅನುಮೋದನೆ ಪಡೆದಿರುವ ಗೇಮ್​ಗಳಿಗೆ ತನ್ನ ಪ್ಲೇಸ್ಟೋರ್ ಪ್ಲಾಟ್​ಫಾರ್ಮ್​​ನಲ್ಲಿ ಅನುಮತಿಸಲು ಗೂಗಲ್ ಯೋಜಿಸಿದೆ. ಆದರೆ, ಇದಾಗ ಬೇಕಾದರೆ ಭಾರತದಲ್ಲಿ ಹೊಸ ಗೇಮಿಂಗ್ ನಿಯಮಗಳ ನಿಯಂತ್ರಕ ವ್ಯವಸ್ಥೆ (Gaming Regulatory Framework) ಜಾರಿಗೆ ಬರಬೇಕು.

ಗೂಗಲ್ ಪ್ಲೇಸ್ಟೋರ್​ನಲ್ಲಿ ಅವಕಾಶ ಸಿಗಲಿರುವುದು ಗೇಮಿಂಗ್ ಆ್ಯಪ್​ಗಳಿಗೆ ಸ್ವಾಗತಾರ್ಹ ಬೆಳವಣಿಗೆ ಎನಿಸುತ್ತದೆ. ಸರ್ಕಾರ ಈಗಾಗಲೇ ಶೇ. 28ರಷ್ಟು ಜಿಎಸ್​ಟಿ ವಿಧಿಸಿರುವ ಹಿನ್ನೆಲೆಯಲ್ಲಿ ಕಳೆಗುಂದಿರುವ ಗೇಮಿಂಗ್ ಉದ್ಯಮಕ್ಕೆ ಇದು ಹೊಸ ಭರವಸೆ ನೀಡಬಹುದು.

ಇದನ್ನೂ ಓದಿ: ಜಾಂಬಿಯಾ ದೇಶದ ತಾಮ್ರ ಗಣಿಗಾರಿಕೆ ಅಧಿಕಾರ ಮತ್ತೆ ಭಾರತದ ವೇದಾಂತ ಸಂಸ್ಥೆಯ ತೆಕ್ಕೆಗೆ; 4 ವರ್ಷಗಳ ಕಾನೂನು ಸಮರ ಸುಖಾಂತ್ಯ

ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಕೆಲ ತಿಂಗಳ ಹಿಂದೆ ಆನ್​ಲೈನ್ ಗೇಮಿಂಗ್ ನಿಯಮಗಳಲ್ಲಿ ಹೊಸ ಬದಲಾವಣೆಗಳನ್ನು ತರುವುದಾಗಿ ಅಧಿಸೂಚನೆ ಹೊರಡಿಸಿತ್ತು. ಅದರಂತೆ, ಆನ್ಲೈನ್ ಗೇಮಿಂಗ್ ಕ್ಷೇತ್ರದಲ್ಲಿ ವಿವಿಧ ಸ್ವಯಂ ನಿಯಂತ್ರಕ ಸಂಸ್ಥೆಗಳನ್ನು (ಸೆಲ್ಫ್ ರೆಗ್ಯುಲೇಟರಿ ಆರ್ಗನೈಸೇಶನ್ಸ್) ನಿಯೋಜಿಸುವ ಪ್ರಸ್ತಾಪ ಮಾಡಿದೆ. ಈ ವ್ಯವಸ್ಥೆ ಸದ್ಯದಲ್ಲೇ ಜಾರಿಗೆ ಬರುವ ಸಾಧ್ಯತೆ ಇದೆ.

ಆನ್​ಲೈನ್ ರಿಯಲ್ ಮನಿ ಗೇಮ್​ಗಳಿಂದ ದೇಶದ ಸಾರ್ವಭೌಮತೆಗೆ ಧಕ್ಕೆ ಆಗುತ್ತಿದೆಯಾ ಎಂಬಿತ್ಯಾದಿ ಅಂಶಗಳನ್ನು ಈ ಸ್ವಯಂ ನಿಯಂತ್ರಕ ಸಂಸ್ಥೆಗಳು ಪರಿಶೀಲಿಸಿ, ಅದಕ್ಕೆ ಅನುಗುಣವಾಗಿ ಕ್ರಮಗಳನ್ನು ಕೈಗೊಳ್ಳುತ್ತದೆ. ಆನ್​ಲೈನ್ ಗೇಮಿಂಗ್ ಕಂಪನಿಗಳು ಕಾರ್ಯಾಚರಿಸಲು ಇಂಥ ಸ್ವಯಂ ನಿಯಂತ್ರಕ ಸಂಸ್ಥೆಗಳ ಅನುಮೋದನೆ ಪಡೆಯಬೇಕೆನ್ನುವ ನಿಯಮವನ್ನು ಸರ್ಕಾರ ತರಲಿದೆ.

ಇದನ್ನೂ ಓದಿ: UPI ATM: ಭಾರತದಲ್ಲಿ ವಿಶ್ವದ ಮೊದಲ ಯುಪಿಐ ಎಟಿಎಂ; ಕಳ್ಳಕಾಕರ ಭಯ ದೂರ ಮಾಡುವ ವಿನೂತನ ಟೆಕ್ನಾಲಜಿ

ಡ್ರೀಮ್ ಇಲವೆನ್, ರಮ್ಮಿ ಇತ್ಯಾದಿ ಗೇಮಿಂಗ್​ಗಳು ರಿಯಲ್ ಮನಿ ಗೇಮ್​ಗಳೆನಿಸುತ್ತವೆ. ಇಲ್ಲಿ ಗೇಮ್​ನಲ್ಲಿ ಪಾಲ್ಗೊಳ್ಳುವ ಆಟಗಾರನಿಗೆ ಗೆಲುವಾದರೆ ನೈಜ ಹಣ ರವಾನೆಯಾದರೆ ಅದು ರಿಯಲ್ ಮನಿ ಗೇಮ್​ಗಳೆನಿಸುತ್ತವೆ. ಗೂಗಲ್ ಸಂಸ್ಥೆ ಕಳೆದ ಒಂದು ವರ್ಷದಿಂದ ಭಾರತದ ಫ್ಯಾಂಟಸಿ ಸ್ಪೋರ್ಟ್ಸ್ ಮತ್ತು ರಮ್ಮಿ ಆ್ಯಪ್​ಗಳನ್ನು ಪ್ರಾಯೋಗಿಕವಾಗಿ ತನ್ನ ಪ್ಲೇ ಸ್ಟೋರ್​ನಲ್ಲಿ ಒಳಗೊಂಡಿದೆ. ಈ ಪ್ರಯೋಗ ಒಂದು ವರ್ಷಕ್ಕೆ ಮಾತ್ರವಾದ್ದರಿಂದ ಈ ತಿಂಗಳೇ ಇದು ಅಂತ್ಯಗೋಳ್ಳುತ್ತದೆ. ಆದರೆ, 2024ರ ಜನವರಿ 15ರವರೆಗೂ ಆ ಆ್ಯಪ್​ಗಳಿಗೆ ಗ್ರೇಸ್ ಪೀರಿಯಡ್ ಕೊಡಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ