ಹತ್ತು ವರ್ಷದಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್ ನಿಷ್ಕ್ರಿಯವಾಗುತ್ತಾ? ಯುಐಡಿಎಐ ಕೊಟ್ಟ ಮಾಹಿತಿ ಇದು

|

Updated on: May 23, 2024 | 12:56 PM

Aadhaar card not updated for 10 years: ಹತ್ತು ವರ್ಷದಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್​ಗಳು ಜೂನ್ 14 ರ ಬಳಿಕ ನಿಷ್ಕ್ರಿಯಗೊಳ್ಳಲಿವೆ ಎನ್ನುವಂತಹ ವದಂತಿಯೊಂದು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಆದರೆ ಯುಐಡಿಎಐ ಇದು ಸುಳ್ಳು ಸುದ್ದಿ ಎಂದು ಹೇಳಿ ಸ್ಪಷ್ಟಪಡಿಸಿದೆ. ಜೂನ್ 14ರ ಬಳಿಕ ಆನ್ಲೈನ್​ನಲ್ಲಿ ಆಧಾರ್ ಕಾರ್ಡ್ ವಿವರವನ್ನು ಉಚಿತವಾಗಿ ಅಪ್​ಡೇಟ್ ಮಾಡಲು ಆಗುವುದಿಲ್ಲ. ಅದನ್ನೇ ತಿರುಚಿ ಸುಳ್ಳು ಹಬ್ಬಿಸಲಾಗುತ್ತಿದೆ.

ಹತ್ತು ವರ್ಷದಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್ ನಿಷ್ಕ್ರಿಯವಾಗುತ್ತಾ? ಯುಐಡಿಎಐ ಕೊಟ್ಟ ಮಾಹಿತಿ ಇದು
ಆಧಾರ್ ಕಾರ್ಡ್
Follow us on

ಹತ್ತಕ್ಕೂ ಹೆಚ್ಚು ವರ್ಷಗಳ ಹಿಂದಿನ ಆಧಾರ್ ಕಾರ್ಡ್ ಅನ್ನು ಅಪ್​ಡೇಟ್ ಮಾಡಿಸಿ ಎಂದು ಸರ್ಕಾರ ಸಾಕಷ್ಟು ಬಾರಿ ಕೇಳುತ್ತಿದೆ. ಕಳೆದ 10 ವರ್ಷದಿಂದ ಆಧಾರ್ ಕಾರ್ಡ್ ಅಪ್​ಡೇಟ್ ಮಾಡದವರಿಗೆ (Aadhaar card update) ಇದು ಅನ್ವಯ ಆಗುತ್ತದೆ. ಒಂದು ವೇಳೆ ಹತ್ತು ವರ್ಷದಿಂದ ಅಪ್​ಡೇಟ್ ಆಗದಿದ್ದರೆ ಅಂಥ ಆಧಾರ್ ಕಾರ್ಡ್ ಏನಾಗುತ್ತದೆ? ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಇಂಥದ್ದೊಂದು ಪೋಸ್ಟ್ ವೈರಲ್ ಆಗಿದೆ. ಜೂನ್ 14ರ ಬಳಿಕ ಇಂತಹ ಆಧಾರ್ ಕಾರ್ಡ್​ಗಳು ನಿಷ್ಕ್ರಿಯಗೊಳ್ಳಲಿವೆ ಎಂದು ಈ ವೈರಲ್ ಪೋಸ್ಟ್​ನಲ್ಲಿ ಬರೆಯಲಾಗಿದೆ. ಆದರೆ, ಆಧಾರ್ ಕಾರ್ಡ್ ರೂಪಿಸಿರುವ ಯುಐಡಿಎಐ ಸಂಸ್ಥೆ ಈ ಅಂಶವನ್ನು ಅಲ್ಲಗಳೆದಿದೆ. ಹತ್ತು ವರ್ಷದಿಂದ ಅಪ್ಡೇಟ್ ಆಗದ ಆಧಾರ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ ಎನ್ನುವ ಸುದ್ದಿ ಸತ್ಯಕ್ಕೆ ದೂರವಾದುದು ಎಂದು ಯುಐಡಿಎಐ ಹೇಳಿದೆ.

ಹತ್ತು ವರ್ಷವಾದರೂ ಅಪ್​ಡೇಟ್ ಆಗದ ಆಧಾರ್ ಕಾರ್ಡ್​ಗೆ ಏನೂ ಆಗುವುದಿಲ್ಲ. ಅದು ಚಾಲನೆಯಲ್ಲಿ ಇರುತ್ತದೆ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ.

ಜೂನ್ 14 ರ ಡೆಡ್​ಲೈನ್ ಸುದ್ದಿ ಹಿಂದಿನ ಮರ್ಮವೇನು?

ವಾಸ್ತವದಲ್ಲಿ ಆಧಾರ್ ವಿವರವನ್ನು ಆನ್​ಲೈನ್​ನಲ್ಲಿ ಉಚಿತವಾಗಿ ಮಾಡುವ ಅವಕಾಶವನ್ನು ಸರ್ಕಾರ ಕಲ್ಪಿಸಿದೆ. ಇದಕ್ಕೆ ಗಡುವನ್ನು ಹಲವು ಬಾರಿ ವಿಸ್ತರಿಸಲಾಗಿದೆ. ಹೊಸ ಗಡುವು ಇರುವುದು 2024ರ ಜೂನ್ 14ಕ್ಕೆ. ಅಲ್ಲಿಯವರೆಗೆ ಆನ್​ಲೈನ್​ನಲ್ಲಿ ಶುಲ್ಕ ಇಲ್ಲದೇ ಉಚಿತವಾಗಿ ಆಧಾರ್ ವಿವರವನ್ನು ಅಪ್​ಡೇಟ್ ಮಾಡಬಹುದು. ಕೆಲವರು ಇದನ್ನೇ ತಿರುಚಿ, ಹತ್ತು ವರ್ಷದಿಂದ ಅಪ್​ಡೇಟ್ ಆಗದ ಆಧಾರ್ ಕಾರ್ಡ್ ಜೂನ್ 14ರ ಬಳಿಕ ನಿಷ್ಕ್ರಿಯಗೊಳ್ಳುತ್ತದೆ ಎನ್ನುವಂತಹ ವದಂತೆ ಹಬ್ಬಿಸಿರಬಹುದು ಎನ್ನಲಾಗಿದೆ.

ಇದನ್ನೂ ಓದಿ: ಆಧಾರ್ ದುರ್ಬಳಕೆ; ಕಾದಿದೆ ಕಠಿಣ ಶಿಕ್ಷೆ; ಯಾವ್ಯಾವ ಅಪರಾಧಕ್ಕೆ ಯಾವ ಶಿಕ್ಷೆ, ಇಲ್ಲಿದೆ ಪಟ್ಟಿ

ಈಗ ಆನ್​ಲೈನ್​ನಲ್ಲಿ ಆಧಾರ್ ವಿವರನ್ನು ಉಚಿತವಾಗಿ ಅಪ್​ಡೇಟ್ ಮಾಡಬಹುದು. ಆಧಾರ್ ಸೆಂಟರ್​ಗೆ ಹೋಗಿಯೂ ಅಪ್​ಡೇಟ್ ಮಾಡಿಸಬಹುದು. ಆದರೆ, ಅಲ್ಪಮೊತ್ತದ ಶುಲ್ಕ ಕೊಡಬೇಕು. ಜೂನ್ 14ರ ಬಳಿಕವೂ ಆನ್​ಲೈನ್​ನಲ್ಲಿ ಆಧಾರ್ ಅಪ್​ಡೇಟ್ ಮಾಡಬಹುದು. ಆದರೆ ಉಚಿತ ಇರುವುದಿಲ್ಲ. 50 ರೂ ಅಥವಾ ಅದರ ಆಸುಪಾಸಿನ ಮೊತ್ತದ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

ಆನ್​ಲೈನ್​ನಲ್ಲಿ ಆಧಾರ್ ವಿವರ ಅಪ್​ಡೇಟ್ ಮಾಡುವುದು ಹೇಗೆ?

  • ಯುಐಡಿಎಐನ ಸೆಲ್ಫ್ ಸರ್ವಿಸ್ ಪೋರ್ಟಲ್ ssup.uidai.gov.in/ssup/ ಗೆ ಹೋಗಿ.
  • ಆಧಾರ್ ನಂಬರ್, ಒಟಿಪಿ ಬಳಸಿ ಲಾಗಿನ್ ಆಗಿ
  • ಲಾಗಿನ್ ಆದ ಬಳಿಕ ‘ಸರ್ವಿಸಸ್’ ಟ್ಯಾಬ್ ಅಡಿಯಲ್ಲಿ ‘ಅಪ್​ಡೇಟ್ ಆಧಾರ್ ಆನ್ಲೈನ್’ ಅನ್ನು ಆಯ್ಕೆ ಮಾಡಿ.
  • ‘ಪ್ರೊಸೀಡ್ ಟು ಅಪ್ಡೇಟ್ ಆಧಾರ್’ ಅನ್ನು ಕ್ಲಿಕ್ ಮಾಡಿ.
  • ಬಳಿಕ ನಿಮಗೆ ಯಾವ ವಿವರ ಬದಲಿಸಬೇಕೋ ಅದನ್ನು ಆಯ್ದುಕೊಳ್ಳಿ.
  • ಆಧಾರ್ ಕಾರ್ಡ್​ನಲ್ಲಿರುವ ನಿಮ್ಮ ಹೆಸರು ಕಾಣುತ್ತದೆ.
  • ನೀವು ಬೇಕಾದ ವಿವರವನ್ನು ಬದಲಿಸಬಹುದು. ಅದಕ್ಕೆ ಪೂರಕವಾದ ದಾಖಲೆಗಳನ್ನು ಅಪ್​ಲೋಡ್ ಮಾಡಬೇಕಾಗುತ್ತದೆ.
  • ವಿವರ ಬದಲಾವಣೆಯನ್ನು ಖಚಿತಪಡಿಸಿದರೆ ಅದು ಅಪ್​ಡೇಟ್ ಆಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ