ಟೆಲಿಕಾಂ ಕಂಪನಿಗಳಿಗೆ ಮೊಬೈಲ್ ಡೇಟಾ ದರಗಳನ್ನು (Mobile Data) ಹೆಚ್ಚಿಸುವುದು ಅನಿವಾರ್ಯ. ಈಗಾಗಲೇ ಜಿಯೋ, ಏರ್ಟೆಲ್, ವೊಡಾಫೋನ್ ಐಡಿಯಾ ಅನೇಕ ಪ್ಲಾನ್ಗಳನ್ನು ಅಪ್ಡೇಟ್ ಮಾಡಿ ದರ ಏರಿಕೆ ಮಾಡಿವೆ. ಬಿಎಸ್ಸೆನ್ನೆಲ್ ಕೂಡ ಪ್ಲಾನ್ ದರಗಳನ್ನು ಹೆಚ್ಚಿಸಿದೆ. ಈಗ ದುಬಾರಿಯಾಗಿರುವ ಪ್ಲಾನ್ಗಳನ್ನೇ ಹೆಚ್ಚು ಆಕರ್ಷಕವಾಗಿಸುವುದಕ್ಕೆ ಗಮನ ಕೊಡಲಾಗುತ್ತಿದೆ. ಇದೇ ವೇಳೆ ರಿಲಾಯನ್ಸ್ ಜಿಯೋ (Reliance Jio) ಎರಡು ಫ್ಯಾಮಿಲಿ ಪ್ಲಾನ್ಗಳನ್ನು ಬಿಡುಗಡೆ ಮಾಡಿದೆ. ಜಿಯೋ ಪ್ಲಸ್ ಪ್ಲಾನ್ಗಳು ರು 399 ಮತ್ತು ರು 699ರಿಂದ ಆರಂಭವಾಗುತ್ತವೆ. ಇವು ಫ್ಯಾಮಿಲಿ ಪ್ಲಾನ್ಗಳಿದ್ದು, ನಾಲ್ವರನ್ನು ಸೇರಿಸಿ ಪ್ಯಾಕೇಜ್ ಪಡೆಯಬಹುದು.
ಜಿಯೋ ಪ್ಲಸ್ ಪ್ಲಾನ್ಗಳು ಪೋಸ್ಟ್ಪೇಯ್ಡ್ ಸಿಮ್ಗಳಿಗೆಂದು ಮಾಡಿಸಿದ್ದು. ಪ್ರೀಪೇಡ್ ಗ್ರಾಹಕರಿಗಲ್ಲ ಎಂಬುದನ್ನು ಮೊದಲೇ ಸ್ಪಷ್ಟಪಡಿಸುತ್ತಿದ್ದೇವೆ. ಈ ಎರಡು ಪ್ಲಾನ್ಗಳು ಒಂದು ತಿಂಗಳ ಕಾಲ ಉಚಿತವಾಗಿ ಲಭ್ಯ ಇರುತ್ತವೆ. ನಿಮಗೆ ಸೂಕ್ತ ಎನಿಸದಿದ್ದಲ್ಲಿ ರದ್ದು ಮಾಡಬಹುದು.
ಜಿಯೋ ಪ್ಲಸ್ ಪ್ಲಾನ್ಗಳ ಬಗ್ಗೆ:
399 ರು ಪ್ಲಾನ್: ಇದರಲ್ಲಿ ಒಬ್ಬ ವ್ಯಕ್ತಿ 399 ರುಪಾಯಿಗೆ ಫ್ಯಾಮಿಲಿ ಪ್ಲಾನ್ ಖರೀದಿಸಬಹುದು. ಈ ಪ್ಲಾನ್ಗೆ ಇತರ 3 ಹೆಚ್ಚುವರಿ ಸಿಮ್ಗಳನ್ನು ಸೇರಿಸಬಹುದು. ಅಂದರೆ ನಿಮ್ಮ ಕುಟುಂಬ ಸದಸ್ಯರೋ ಅಥವಾ ಸ್ನೇಹಿತರೋ ಯಾರಾದರೂ ಆಗಬಹುದು. ಒಂದು ಹೆಚ್ಚುವರಿ ಸಿಮ್ಗೆ 99 ರೂ ಆಗುತ್ತದೆ. ಒಟ್ಟು ನಾಲ್ವರು ಸೇರಿದರೆ 699 ರುಪಾಯಿ ಆಗುತ್ತದೆ. ಒಬ್ಬರಿಗೆ 174 ರುಪಾಯಿ ಮಾತ್ರ ವೆಚ್ಚವಾದಂತಾಗುತ್ತದೆ. ಈ ಪ್ಲಾನ್ನಲ್ಲಿ ಮೂಲ ಸಬ್ಸ್ಕ್ರೈಬರ್ಗೆ ತಿಂಗಳಿಗೆ 75 ಜಿಬಿ ಡೇಟಾ, ದಿನಕ್ಕೆ 100 ಎಸ್ಸೆಮ್ಮೆಸ್ ಮತ್ತು ಅನ್ಲಿಮಿಟೆಡ್ ಕರೆಗಳ ಸೌಲಭ್ಯ ಇದೆ. ಆದರೆ ಹಿಂದಿನ 399 ರು ಪ್ಲಾನ್ನಲ್ಲಿ ಲಭ್ಯ ಇದ್ದ ನೆಟ್ಫ್ಲಿಕ್ಸ್ ಮತ್ತು ಅಮೇಜಾನ್ ಪ್ರೈಮ್ ವೀಕ್ಷಣೆ ಸೌಲಭ್ಯ ಈ ಹೊಸ ಅಪ್ಡೇಟ್ನಲ್ಲಿ ಸಿಗುವುದಿಲ್ಲ.
ಇದನ್ನೂ ಓದಿ: Crorepati: ವರ್ಷಕ್ಕೆ ಶೇ. 15 ವೃದ್ಧಿ; 15 ವರ್ಷದಲ್ಲಿ 1.38 ಕೋಟಿ ಹಣ ನಿಮ್ಮದಾಗಿಸಿಕೊಳ್ಳಿ; ಇದು ಹೇಗೆ ಸಾಧ್ಯ?
699 ರು ಪ್ಲಾನ್: ಈ ಪ್ಲಾನ್ನಲ್ಲಿ ಒಟ್ಟು 100 ಜಿಬಿ ಡೇಟಾ ಸಿಗುತ್ತದೆ. ಅನ್ಲಿಮಿಟೆಡ್ ಕಾಲ್, ದಿನಕ್ಕೆ 100 ಎಸ್ಸೆಮ್ಮೆಸ್ ಸೌಲಭ್ಯ ಇರುತ್ತದೆ. ಹೆಚ್ಚುವರಿ ಮೂರು ನಂಬರ್ಗಳನ್ನೂ ಸೇರಿಸಬಹುದು. ಈ ಆಡ್ ಆನ್ ಸಿಮ್ಗಳಿಗೆ ತಿಂಗಳಿಗೆ 99 ರೂ ಕೊಡಬೇಕು.
ಈ ಎರಡು ಪ್ಲಾನ್ಗಳಲ್ಲಿ ಹೆಚ್ಚುವರಿ ಸಿಮ್ಗಳಿಗೆ ತಿಂಗಳಿಗೆ 99 ರೂ ಕೊಡಬೇಕು. ಅದಕ್ಕೆ ತಿಂಗಳಿಗೆ 5 ಜಿಬಿ ಡೇಟಾ ಸಿಗುತ್ತದೆ. ಆರಂಭದ ಒಂದು ತಿಂಗಳು ನೀವು ಉಚಿತವಾಗಿ ಈ ಸೌಲಭ್ಯವನ್ನು ಪಡೆಯಬಹುದು. ಸೂಕ್ತವಿದ್ದರೆ ಹಣ ಕೊಟ್ಟು ಪ್ಲಾನ್ ಮುಂದುವರಿಸಬಹುದು. ಇಲ್ಲದಿದ್ದರೆ ಯಾವಾಗ ಬೇಕಾದರೂ ಪ್ಲಾನ್ ರದ್ದು ಮಾಡಬಹುದು. ಈ ಪ್ಲಾನ್ಗಳು ಮಾರ್ಚ್ 22ರಿಂದ ಲಭ್ಯ ಇರಲಿದೆ.
ಇದನ್ನೂ ಓದಿ: PMVVY: ಪಿಎಂ ವಿವಿವೈ ಸ್ಕೀಮ್, ಮಾರ್ಚ್ 31ರವರೆಗೂ ಆಫರ್; ರಿಟರ್ನ್ಸ್, ಪಿಂಚಣಿ ಎಷ್ಟು? ವಿವರ ಇಲ್ಲಿದೆ
ಟೆಲಿಕಾಂ ಕ್ಷೇತ್ರದಲ್ಲಿ ರಿಲಾಯನ್ಸ್ ಜಿಯೋ ಪ್ರವೇಶ ಮಾಡಿದ ಮೇಲೆ ಬಹಳಷ್ಟು ಡೇಟಾ ಕ್ರಾಂತಿಯೇ ಆಗಿಹೋಗಿದೆ. ಡೇಟಾ ಇರಲಿ, ದೂರವಾಣಿ ಕರೆಗಳೇ ದುಬಾರಿಯಾಗಿದ್ದ ದಿನದಲ್ಲಿ ಜಿಯೋ ಅನ್ಲಿಮಿಟೆಡ್ ಕಾಲ್ ಮತ್ತು ಭರಪೂರ ಡೇಟಾಗಳನ್ನು ಕಡಿಮೆ ಬೆಲೆಗೆ ನೀಡಿ ಟೆಲಿಕಾಂ ಕ್ಷೇತ್ರದಲ್ಲಿ ಸಂಚಲನವನ್ನೇ ಸೃಷ್ಟಿಸಿತ್ತು. ಇದೀಗ 5ಜಿ ಬಂದ ಬಳಿಕ ಜಿಯೋ ಕೂಡ ಟೆಲಿಕಾಂ ದರಗಳನ್ನು ಏರಿಸುವುದು ಅನಿವಾರ್ಯವಾಗಿದೆ.
ಭಾರತದಲ್ಲಿ ನಂಬರ್ ಒನ್ ಟೆಲಿಕಾಂ ಕಂಪನಿಯಾಗಿ ಬೆಳೆದಿರುವ ಜಿಯೋ 2022-23ರ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ 4,638 ಕೋಟಿ ರು ನಿವ್ವಳ ಲಾಭ ತೋರಿಸಿದೆ. ಈ ಅವಧಿಯಲ್ಲಿ ಅದರ ಆದಾಯ 22,998 ಕೋಟಿ ರು ಇದೆ.