Reliance Jio Prepaid Plans: ಡಿಸ್ನಿ ಹಾಟ್​ಸ್ಟಾರ್​ನೊಂದಿಗೆ ಬರುವ ರಿಲಯನ್ಸ್ ಜಿಯೋ ಪ್ರೀಪೇಯ್ಡ್​ ಪ್ಲಾನ್​ಗಳು ಹೀಗಿವೆ

ರಿಲಯನ್ಸ್​ ಜಿಯೋದಿಂದ ಪ್ರಿಪೇಯ್ಡ್​ ಪ್ಲಾನ್​ನಲ್ಲಿ ಡಿಸ್ನಿ ಹಾಟ್​ಸ್ಟಾರ್​ನೊಂದಿಗೆ ಬರುತ್ತಿರುವ ಪ್ಲಾನ್​ಗಳ ಲಿಸ್ಟ್ ಇಲ್ಲಿದೆ. ಯಾವುದಕ್ಕೆ ಏನೇನು ಬರುತ್ತದೆ ಎಂಬ ವಿವರ ಇಲ್ಲಿದೆ.

Reliance Jio Prepaid Plans: ಡಿಸ್ನಿ ಹಾಟ್​ಸ್ಟಾರ್​ನೊಂದಿಗೆ ಬರುವ ರಿಲಯನ್ಸ್ ಜಿಯೋ ಪ್ರೀಪೇಯ್ಡ್​ ಪ್ಲಾನ್​ಗಳು ಹೀಗಿವೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Dec 07, 2021 | 12:22 PM

ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಪ್ಲಾನ್​ ದರಗಳನ್ನು ಡಿಸೆಂಬರ್ 1, 2021ರಿಂದ ಹೆಚ್ಚಿಸಿದೆ ಮತ್ತು ಕಂಪೆನಿಯು ಡಿಸ್ನಿ+ಹಾಟ್‌ಸ್ಟಾರ್ ಚಂದಾದಾರಿಕೆ ಒಳಗೊಂಡಿರುವ ಒಂದು ಪ್ರಿಪೇಯ್ಡ್ ಪ್ಲಾನ್​ ಮಾತ್ರ ಹೊಂದಿತ್ತು. ಜಿಯೋ ಈ ಹಿಂದೆ ಐದು ಇತರ ಪ್ರಿಪೇಯ್ಡ್ ಯೋಜನೆಗಳಲ್ಲಿ ಚಂದಾದಾರಿಕೆ ನೀಡಿತ್ತು, ಅದು ಪಟ್ಟಿಯಲ್ಲಿ ಕಂಡಿಲ್ಲ. ಇದೀಗ ತನ್ನ ವೆಬ್‌ಸೈಟ್‌ನಲ್ಲಿ ಕ್ರಿಕೆಟ್ ಪ್ಲಾನ್​ಗಳ ವಿಭಾಗದ ಅಡಿಯಲ್ಲಿ ಹೊಸ ಯೋಜನೆಗಳನ್ನು ಘೋಷಿಸಿದೆ. ಇದು 12 ತಿಂಗಳ ಕಾಲ Disney+Hotstar ಮೊಬೈಲ್ ಸದಸ್ಯತ್ವದೊಂದಿಗೆ ಬರುತ್ತದೆ. ಹೊಸ ಯೋಜನೆಗಳ ದರಗಳು ಸಹ ಹೆಚ್ಚಾಗಿವೆ. ನಿಯಮಗಳು ಮತ್ತು ನಿಬಂಧನೆಗಳ ಪ್ರಕಾರ, ಅರ್ಹ ಪ್ಲಾನ್ ರೀಚಾರ್ಜ್‌ನ ಮೊದಲ ಬಾರಿಗೆ ಬಳಕೆದಾರರು 12 ತಿಂಗಳ Disney+ Hotstar ಮೊಬೈಲ್ ಸದಸ್ಯತ್ವವನ್ನು ಪಡೆಯುತ್ತಾರೆ. ಆದ್ದರಿಂದ ಡಿಸೆಂಬರ್ 6, 2021 ರಂದು ರೀಚಾರ್ಜ್ ಮಾಡಿದರೆ, ಈ ಪ್ಲಾನ್ ಡಿಸೆಂಬರ್ 6, 2022ರ ವರೆಗೆ ಮಾನ್ಯವಾಗಿರುತ್ತದೆ. ವರ್ಷದ ಅವಧಿಯಲ್ಲಿ ಮತ್ತೊಮ್ಮೆ ಅರ್ಹ ಯೋಜನೆಯೊಂದಿಗೆ ರೀಚಾರ್ಜ್ ಮಾಡಿದರೂ ಸದಸ್ಯತ್ವವನ್ನು ವಿಸ್ತರಿಸಲು ಆಗುವುದಿಲ್ಲ. ಮೂಲ ರೀಚಾರ್ಜ್ ದಿನಾಂಕದ ಒಂದು ವರ್ಷದ ನಂತರ ಸದಸ್ಯತ್ವವು ಮುಕ್ತಾಯಗೊಳ್ಳುತ್ತದೆ.

ಆದರೆ, ಡಿಸ್ನಿ+ ಹಾಟ್‌ಸ್ಟಾರ್ ಮೊಬೈಲ್ ಸದಸ್ಯತ್ವದ 12 ತಿಂಗಳ ಮುಕ್ತಾಯದ ನಂತರ, ಗ್ರಾಹಕರು ಅರ್ಹ ಯೋಜನೆಯೊಂದಿಗೆ ರೀಚಾರ್ಜ್ ಮಾಡಬಹುದು ಮತ್ತು ಸದಸ್ಯತ್ವದ ಬೆನಿಫಿಟ್ ಇನ್ನೊಂದು 12 ತಿಂಗಳ ಲಾಭವನ್ನು ಪಡೆಯಬಹುದು. ಡಿಸ್ನಿ+ಹಾಟ್‌ಸ್ಟಾರ್‌ನ ಮೊಬೈಲ್ ಪ್ಲಾನ್‌ನ ಬೆಲೆ 499 ರೂಪಾಯಿ. ಇಲ್ಲದಿದ್ದರೆ ಒಂದು ಮೊಬೈಲ್ ಸಾಧನದಿಂದ ಮಾತ್ರ ವೆಬ್​ಸೈಟ್‌ಗೆ ಪ್ರವೇಶವನ್ನು ನೀಡುತ್ತದೆ. ಸದಸ್ಯತ್ವವು ನೇರ ಪ್ರಸಾರದ ಕ್ರೀಡೆಗಳು, ಚಲನಚಿತ್ರಗಳು ಇತ್ಯಾದಿ ಸೇರಿದಂತೆ ಎಲ್ಲ ವಿಷಯಗಳಿಗೆ ಪ್ರವೇಶ ನೀಡುತ್ತದೆ. ಆದರೆ ಇದು ಜಾಹೀರಾತು-ಮುಕ್ತವಾಗಿಲ್ಲ ಮತ್ತು ಗರಿಷ್ಠ ವೀಡಿಯೊ ಗುಣಮಟ್ಟ 720p ಆಗಿದೆ. ಅಲ್ಲದೆ, ಈ ಸದಸ್ಯತ್ವವು ಮೊಬೈಲ್ ಸಾಧನದಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತದೆ. ಅಂದರೆ ನಿಮ್ಮ ಟಿವಿ ಅಥವಾ ಲ್ಯಾಪ್‌ಟಾಪ್‌ನಿಂದ ಬಳಕೆ ಸಾಧ್ಯವಿಲ್ಲ.

ಡಿಸ್ನಿ+ಹಾಟ್‌ಸ್ಟಾರ್ ಮೊಬೈಲ್‌ನೊಂದಿಗೆ ಜಿಯೋದ ಹೊಸ ಪ್ರಿಪೇಯ್ಡ್ ಪ್ಲಾನ್​ಗಳು ಹೀಗಿವೆ: – ಲಿಸ್ಟ್​ ಮಾಡಲಾದ ಯೋಜನೆಗಳು 28 ದಿನಗಳ ಮಾನ್ಯತೆಯೊಂದಿಗೆ ರೂ. 601ರ ಪ್ಲಾನ್​ನಲ್ಲಿ , ದಿನಕ್ಕೆ 3GB ಡೇಟಾ, ಮತ್ತು ಅನಿಯಮಿತ ಕರೆಗಳು ಹಾಗೂ ದಿನಕ್ಕೆ 100 SMS ಜೊತೆಗೆ ಮತ್ತೊಂದು 6GB ಹೆಚ್ಚುವರಿ ಡೇಟಾ. – 365 ದಿನಗಳ ವ್ಯಾಲಿಡಿಟಿ, ದಿನಕ್ಕೆ 2GB ಡೇಟಾ ಮತ್ತು 10GB ಹೆಚ್ಚುವರಿ ಡೇಟಾದೊಂದಿಗೆ ರೂ. 3119 ದರದ ಯೋಜನೆಯು ಅತ್ಯಂತ ದುಬಾರಿಯಾಗಿದೆ. ಇದರಲ್ಲಿ ಅನಿಯಮಿತ ಧ್ವನಿ ಕರೆ ಮತ್ತು ದಿನಕ್ಕೆ 100 SMS ಉಚಿತವಾಗಿದೆ. – 1066 ರೂಪಾಯಿ ದರ ಮತ್ತು 84 ದಿನಗಳ ಮಾನ್ಯತೆಯೊಂದಿಗೆ ಯೋಜನೆ ಇದೆ. ಇದು ದಿನಕ್ಕೆ 2GB ಡೇಟಾವನ್ನು ಹೊಂದಿದೆ. ಜೊತೆಗೆ 5GB ಹೆಚ್ಚುವರಿ ಡೇಟಾ ಮತ್ತು ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ದೊರೆಯುತ್ತದೆ. – ಅನಿಯಮಿತ ಧ್ವನಿ ಕರೆಗಳು ಮತ್ತು ದಿನಕ್ಕೆ 100 SMS ಜೊತೆಗೆ 56 ದಿನಗಳ ಮಾನ್ಯತೆ ಹಾಗೂ ದಿನಕ್ಕೆ 2GB ಡೇಟಾದೊಂದಿಗೆ ಮತ್ತೊಂದು ಯೋಜನೆಯು 799 ರೂಪಾಯಿಗೆ ಇದೆ. – 56 ದಿನಗಳ ವ್ಯಾಲಿಡಿಟಿ, 1.5GB ದೈನಂದಿನ ಡೇಟಾ ಮತ್ತು ಅನಿಯಮಿತ ಕರೆಗಳೊಂದಿಗೆ ದಿನಕ್ಕೆ 100 SMS ಜೊತೆಗೆ ರೂ. 659ರ ಯೋಜನೆಯನ್ನು ಹೊಂದಿದೆ.

ಈ ಯೋಜನೆಗಳಲ್ಲಿ ಒದಗಿಸಿದ ಡೇಟಾ ಖಾಲಿಯಾದ ನಂತರ, ಇಂಟರ್​ನೆಟ್ ವೇಗವನ್ನು 64Kbps ವೇಗಕ್ಕೆ ಇಳಿಸಲಾಗುತ್ತದೆ ಎಂಬುದನ್ನು ಗಮನಿಸಬೇಕು. ಎಲ್ಲ ಜಿಯೋ ಪ್ರಿಪೇಯ್ಡ್ ಯೋಜನೆಗಳಂತೆ ಜಿಯೋಟಿವಿ, ಜಿಯೋ ಸೆಕ್ಯೂರಿಟಿ, ಜಿಯೋಕ್ಲೌಡ್ ಮತ್ತು ಜಿಯೋಸಿನಿಮಾ ಸೇರಿದಂತೆ ಎಲ್ಲ ರಿಲಯನ್ಸ್ ಜಿಯೋ ಅಪ್ಲಿಕೇಷನ್‌ಗಳಿಗೆ ಬಳಕೆದಾರರು ಉಚಿತ ಸಂಪರ್ಕ ಪಡೆಯುತ್ತಾರೆ. ಈ ಹಿಂದೆ ಜಿಯೋ ರೂ. 499, ರೂ. 888 ಪ್ರಿಪೇಯ್ಡ್ ಯೋಜನೆಯೊಂದಿಗೆ ಡಿಸ್ನಿ + ಹಾಟ್‌ಸ್ಟಾರ್ ಅನ್ನು ನೀಡಿತ್ತು.

ಇದನ್ನೂ ಓದಿ: Jio Cashback Offer: ಬೆಲೆ ಏರಿಕೆ ಬೆನ್ನಲ್ಲೇ ಆಫರ್​ಗಳ ಸುರಿಮಳೆ: ಏರ್ಟೆಲ್ ಬಳಿಕ ಜಿಯೋದಿಂದ ಬಂಪರ್ ಆಫರ್ ಘೋಷಣೆ

ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ನಾಸಿಕ್‌ನಲ್ಲಿ 11 ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ದಾಳಿ; ವಿಡಿಯೋ ಇಲ್ಲಿದೆ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ಕಷ್ಟ ಬಂದರೆ ಪ್ರಸಾದ ತಿಂದು ಬದುಕ್ತೀನಿ, ಯಾರ ಜತೆಗೂ ಹೋಗಿ ಇರಲ್ಲ: ರಚಿತಾ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ದಲಿತ ಸಮುದಾಯದ ಸಮಸ್ಯೆಗಳ ಚರ್ಚೆಗೆ ಮೀಟಿಂಗ್ ಕರೆದಿದ್ದಾರೆ: ಮಹಾದೇವಪ್ಪ
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಕಾಂಗ್ರೆಸ್ 135 ಸ್ಥಾನ ಪಡೆಯುವಲ್ಲಿ ಶಿವಕುಮಾರ್ ಪಾತ್ರ ದೊಡ್ಡದು: ವಿಶ್ವನಾಥ್
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಚುನಾಯಿತ ಪ್ರತಿನಿಧಿಗಳ ಅನುಪಸ್ಥಿತಿಯಲ್ಲಿ ಪಾಲಿಕೆ ಅಧಿಕಾರಿಗಳದ್ದೇ ಪಾರಮ್ಯ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ಧಾರ್ಮಿಕ ಕೇಂದ್ರಗಳಲ್ಲಿ ಎಲ್ಲರೂ ಸರಿಸಮಾನರು : ಉಪರಾಷ್ಟ್ರಪತಿ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ನಾನೇ ಸಿಎಂ ಕನಿಷ್ಠ ಸಾವಿರ ಸಲ ಸಿದ್ದರಾಮಯ್ಯ ಹೇಳಿದ್ದಾರೆ: ಅರ್ ಅಶೋಕ
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ವಿಷಯ ಗೊತ್ತಾಗುತ್ತಿದ್ದಂತೆಯೇ ಯಶ್ ಸೂರಣಗಿಗೆ ಧಾವಿಸಿ ಬಂದಿದ್ದರು
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
ಜೈಲಿಂದ ಬಂದ ಬಳಿಕ ದರ್ಶನ್ ಜೊತೆ ಮಾತನಾಡಿದರಾ ರಚಿತಾ ರಾಮ್?
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ
‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಕೋರ್ಟ್ ಕೇಸ್: ವಿಚಾರಣೆಗೆ ಬಂದ ರಮ್ಯಾ