Reliance Jio 5G: 5ಜಿ ಆಧಾರಿತ ಸಾರ್ವಜನಿಕ ವೈಫೈ ಸೇವೆ ಆರಂಭಿಸಿದ ರಿಲಯನ್ಸ್ ಜಿಯೋ

5ಜಿ ಆಧಾರಿತ ಸಾರ್ವಜನಿಕ ವೈಫೈ ಸೇವೆಯನ್ನು ರಿಲಯನ್ಸ್ ಜಿಯೋ ಆರಂಭಿಸಿದೆ.

Reliance Jio 5G: 5ಜಿ ಆಧಾರಿತ ಸಾರ್ವಜನಿಕ ವೈಫೈ ಸೇವೆ ಆರಂಭಿಸಿದ ರಿಲಯನ್ಸ್ ಜಿಯೋ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Oct 22, 2022 | 3:43 PM

ನವದೆಹಲಿ: 5ಜಿ (5G) ಆಧಾರಿತ ಸಾರ್ವಜನಿಕ ವೈಫೈ ಸೇವೆಯನ್ನು ರಿಲಯನ್ಸ್ ಜಿಯೋ (Reliance Jio) ಆರಂಭಿಸಿದೆ. ರಾಜಸ್ಥಾನದ ದೇಗುಲ ನಗರಿ ನಾಥ್​ದ್ವಾರಾದಲ್ಲಿ ಸಾರ್ವಜನಿಕ ವೈಫೈ ಸೇವೆ ಆರಂಭಿಸಲಾಗಿದೆ. ಮುಂಬರುವ ದಿನಗಳಲ್ಲಿ ರೈಲು ನಿಲ್ದಾಣ, ಶೈಕ್ಷಣಿಕ ಸಂಸ್ಥೆಗಳು ಮತ್ತಿತರ ಕಡೆಗಳಲ್ಲಿ ಸೇವೆ ಲಭ್ಯವಾಗಲಿದೆ ಎಂದು ಕಂಪನಿ ಶನಿವಾರ ತಿಳಿಸಿದೆ.

ಚೆನ್ನೈ ನಗರದಲ್ಲಿ ಕೂಡ ಜಿಯೋ 5ಜಿ ಸೇವೆ (JioTrue5G) ಆರಂಭಿಸಿದೆ. ಜಿಯೋ ವೆಲ್​ಕಮ್ ಆಫರ್​ ಅನ್ನು ನಗರದಲ್ಲಿ ಪರಿಚಯಿಸಲಾಗಿದೆ. ಈ ಆಫರ್ ಮೂಲಕ ಗ್ರಾಹಕರು ಬೆಟಾ ಟ್ರಯಲ್ ಸಂದರ್ಭದಲ್ಲಿ 5ಜಿ ಸೇವೆ ಪಡೆಯಬಹುದಾಗಿದ್ದು, ಸೆಕಂಡ್​ಗೆ 1 ಗಿಗಾಬೈಟ್ ವೇಗದಲ್ಲಿ ಇಂಟರ್​ನೆಟ್ ಸಿಗಲಿದೆ.

‘ಶ್ರೀನಾಥ್ ದೇಗುಲ ನಗರವಾದ ನಾಥ್​ದ್ವಾರದಲ್ಲಿ ನಾವಿಂದು 5ಜಿ ಆಧಾರಿತ ವೈಫೈ ಸೇವೆ ಆರಂಭಿಸಿದ್ದೇವೆ. ಇದರೊಂದಿಗೆ, ಇನ್ನೂ ಅನೇಕ ಪ್ರದೇಶಗಳಿಗೆ ನಮ್ಮ ಸೇವೆಯನ್ನು ವಿಸ್ತರಿಸಲಿದ್ದೇವೆ. ಚೆನ್ನೈ ನಗರದಲ್ಲಿ ಕೂಡ ಜಿಯೋ ಟ್ರೂ5ಜಿ ವೆಲ್​ಕಮ್ ಆಫರ್ ನೀಡಲಾಗಿದೆ’ ಎಂದು ರಿಲಯನ್ಸ್ ಜಿಯೋ ಅಧ್ಯಕ್ಷ ಆಕಾಶ್ ಎಂ ಅಂಬಾನಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: 5G Service: 5ಜಿ ಸೇವೆ ಒದಗಿಸಲು ರಿಲಯನ್ಸ್ ಜಿಯೊ ಜತೆ ಎರಿಕ್ಸನ್ ಒಪ್ಪಂದ

ರೈಲು ನಿಲ್ದಾಣ, ಧಾರ್ಮಿಕ ಸ್ಥಳಗಳು, ಬಸ್ಸು ನಿಲ್ದಾಣ, ವಾಣಿಜ್ಯ ಹಬ್​ಗಳು ಹಾಗೂ ಇತರ ಪ್ರದೇಶಗಳಲ್ಲಿ ಟ್ರೂ5ಜಿ ವೈಫೈ ಸೇವೆಯನ್ನು ಜಿಯೋ ಪರಿಚಯಿಸುತ್ತಿದೆ.

‘5ಜಿ ಕೆಲವೊಬ್ಬರಿಗೆ ಮಾತ್ರ ಅಥವಾ ದೊಡ್ಡ ನಗರಗಳ ಜನರಿಗೆ ಮಾತ್ರ ಸಿಗುವ ಸೇವೆಯಾಗಿ ಪರಿಣಮಿಸಬಾರದು. ಅದು ಪ್ರತಿಯೊಬ್ಬ ನಾಗರಿಕನಿಗೂ, ಪ್ರತಿ ಮನೆಗೂ ಹಾಗೂ ದೇಶದಾದ್ಯಂತ ಎಲ್ಲ ಉದ್ಯಮಗಳಿಗೂ ದೊರೆಯುಂತಾಗಬೇಕು’ ಎಂದು ಅಂಬಾನಿ ಹೇಳಿದ್ದಾರೆ.

ದೇಶದಲ್ಲಿ 5ಜಿ ಸೇವೆ ಒದಗಿಸಲು ರಿಲಯನ್ಸ್ ಜಿಯೋ ಹಾಗೂ ಎರಿಕ್ಸನ್ ಇತ್ತೀಚೆಗೆ ಒಪ್ಪಂದ ಮಾಡಿಕೊಂಡಿದ್ದವು. 5ಜಿ ಸೇವೆಗಾಗಿ ಎರಿಕ್ಸನ್ ಜತೆ ಸಹಭಾಗಿತ್ವ ಹೊಂದಿರುವುದು ಸಂತಸದ ವಿಚಾರ. ಎಲ್​ಟಿಇ ಸೇವೆ ಆರಂಭಿಸುವ ಮೂಲಕ 2016ರಲ್ಲಿ ಭಾರತದಲ್ಲಿ ಜಿಯೊ ಡಿಜಿಟಲ್​ ಕ್ರಾಂತಿಗೆ ಹೊಸ ಆಯಾಮ ನೀಡಿತ್ತು. 5ಜಿ ಸೇವೆಯು ಭಾರತದ ಡಿಜಿಟಲೀಕರಣ ಪ್ರಕ್ರಿಯೆಗೆ ಮತ್ತಷ್ಟು ವೇಗ ನೀಡಲಿದೆ. ಡಿಜಿಟಲ್ ಇಂಡಿಯಾ ದೃಷ್ಟಿಕೋನಕ್ಕೆ ಪೂರಕವಾಗಲಿದೆ ಎಂಬ ಭರವಸೆ ನಮಗಿದೆ ಎಂದು ಆಕಾಶ್ ಅಂಬಾನಿ ಹೇಳಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್