ಬರೋಬ್ಬರಿ 84,000 ಕೋಟಿ ರೂ ಮೌಲ್ಯದ ಆಸ್ತಿ ಒಬ್ಬ ಹಮಾಲಿಗೆ ಧಾರೆ ಎರೆಯುತ್ತಿರುವ ಶ್ರೀಮಂತ; ಏನು ಕಾರಣ?

|

Updated on: Dec 11, 2023 | 5:48 PM

Nicolas Puech To Give His Properties to Gardener: ಫ್ರಾನ್ಸ್ ಮೂಲದ ಹರ್ಮೆಸ್ ಕಂಪನಿಯ ಒಡೆಯ ನಿಕೋಲಾಸ್ ಪ್ಯೂಕ್ ತಮ್ಮ 84,000 ಕೋಟಿ ರೂ ಮೊತ್ತದ ಆಸ್ತಿಯನ್ನು ಹಮಾಲಿಗೆ ವರ್ಗಾಯಿಸಲಿದ್ದಾರೆ. ಫ್ಯಾಷನ್ ವಸ್ತುಗಳನ್ನು ಆನ್ಲೈನ್ ಪ್ಲಾಟ್​ಫಾರ್ಮ್​ನಲ್ಲಿ ಮಾರುವ ಸಂಸ್ಥೆ ಹರ್ಮೆಸ್ ಆಗಿದ್ದು, ಅದರಲ್ಲಿ ಪ್ಯೂಕ್ ಶೇ. 5-6ರಷ್ಟು ಪಾಲು ಹೊಂದಿದ್ದಾರೆ. 80 ವರ್ಷದ ಪ್ಯೂಕ್ ಅವರು 51 ವರ್ಷದ ಹಮಾಲಿಯನ್ನು ದತ್ತಕಕ್ಕೆ ಪಡೆದು ಕಾನೂನು ಪ್ರಕಾರ ಆಸ್ತಿ ವರ್ಗಾವಣೆ ಮಾಡುತ್ತಿದ್ದಾರೆ.

ಬರೋಬ್ಬರಿ 84,000 ಕೋಟಿ ರೂ ಮೌಲ್ಯದ ಆಸ್ತಿ ಒಬ್ಬ ಹಮಾಲಿಗೆ ಧಾರೆ ಎರೆಯುತ್ತಿರುವ ಶ್ರೀಮಂತ; ಏನು ಕಾರಣ?
ನಿಕೋಲಾಸ್ ಪ್ಯೂಕ್
Follow us on

ಹಣವಂತರು ಬಹುತೇಕ ತಮ್ಮ ಸಂಪತ್ತನ್ನು ಮಕ್ಕಳಿಗೋ ಅಥವಾ ಸಮೀಪದ ಬಂಧುಗಳಿಗೋ ಬರೆದಿಟ್ಟು ಹೋಗಬಹುದು. ಆದರೆ, ಫ್ರಾನ್ಸ್ ದೇಶದ ಶ್ರೀಮಂತ ನಿಕೋಲಾಸ್ ಪ್ಯೂಕ್ (nicolas puech) ಅವರು ತಮ್ಮೆಲ್ಲಾ ಸಂಪತ್ತನ್ನು ತೋಟದ ಹಮಾಲಿಗೆ (gardener) ಬರೆದಿಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. 80 ವರ್ಷದ ನಿಕೋಲಾಸ್ ಪ್ಯೂಕ್ ಅವರ ಆಸ್ತಿಯ ವಾರಸುದಾರ ಆಗುತ್ತಿರುವ ಹಮಾಲಿಯ ವಯಸ್ಸು 51 ವರ್ಷ. ಕೌಟುಂಬಿಕ ಜಗಳವು ನಿಕೋಲಾಸ್ ಅವರನ್ನು ಈ ನಿರ್ಧಾರಕ್ಕೆ ದೂಡಿರಬಹುದು ಎಂದು ವರದಿಗಳು ಹೇಳುತ್ತಿವೆ.

ನಿಕೋಲಾಸ್ ಪ್ಯೂಕ್ ಅವರು ಫ್ಯಾಷನ್ ವಸ್ತುಗಳ ದೈತ್ಯ ಕಂಪನಿ ಹೆರ್ಮೆಸ್​ನ ಮುಖ್ಯಸ್ಥ. ಈ ಸಂಸ್ಥೆಯ ಸಂಸ್ಥಾಪಕ ಥಿಯೆರಿ ಹರ್ಮೆಸ್ ಅವರ ಮೊಮ್ಮಗ. ನಿಕೋಲಾಸ್ ಅವರ ಬಳಿ ಸುಮಾರು 10 ಬಿಲಿಯನ್ ಸ್ವಿಸ್ ಫ್ರಾಂಕ್ ಮೌಲ್ಯದಷ್ಟು ಆಸ್ತಿ ಇರಬಹುದು. ಅಂದರೆ ಸುಮಾರು 84,000 ಕೋಟಿ ರೂನಷ್ಟು ಆಸ್ತಿಯ ಒಡೆಯರಾಗಿದ್ದಾರೆ. ಇದರಲ್ಲಿ ಬಹುಭಾಗದ ಆಸ್ತಿಯನ್ನು 51 ವರ್ಷದ ಹಮಾಲಿಗೆ ವರ್ಗಾಯಿಸಲಿದ್ದಾರೆ. ಈ ನಿಟ್ಟಿನಲ್ಲಿ ಆ ವ್ಯಕ್ತಿಯನ್ನು ದತ್ತಕಕ್ಕೆ ಪಡೆದುಕೊಂಡು ಕಾನೂನು ಪ್ರಕಾರ ಮುಂದುವರಿಯುತ್ತಿದ್ದಾರೆ.

ಇದನ್ನೂ ಓದಿ: Inspiration: ಕರ್ನಾಟಕದ ಪುಟ್ಟ ಹಳ್ಳಿಯಲ್ಲಿ ಹುಟ್ಟಿ ಮನೆಗೆಲಸ ಮಾಡುತ್ತಿದ್ದ ವ್ಯಕ್ತಿ ಇವತ್ತು 40 ಕೋಟಿ ರೂ ಕಂಪನಿಯ ಒಡೆಯ

ನಿಕೋಲಾಸ್ ಪ್ಯೂಕ್ ಅವರಿಗೆ ಮದುವೆ ಆಗಿಲ್ಲ, ಮಗು ಇಲ್ಲ. 220 ಬಿಲಿಯನ್ ಡಾಲರ್ ಮೌಲ್ಯದ ಹರ್ಮೆಸ್ ಸಂಸ್ಥೆಯಲ್ಲಿ ಪ್ಯೂಕ್ ಅವರು ಶೇ. 5ರಿಂದ 6ರಷ್ಟು ಪಾಲು ಹೊಂದಿರಬಹುದು. ಈ ಆಸ್ತಿಯನ್ನೇ ಪ್ಯೂಕ್ ಅವರು ಧಾರೆ ಎರೆಯಹೊರಟಿರುವುದು.

ಆದರೆ, ಆ ವಾರಸುದಾರನಾಗಲಿರುವ ಹಮಾಲಿ ಯಾರು ಎಂಬುದು ಮಾತ್ರ ಬಹಿರಂಗವಾಗಿಲ್ಲ. ನಿಕೋಲಾಸ್ ಅವರ ಮನೆಯಲ್ಲಿ ಈ ಹಿಂದೆ ಹಮಾಲಿಯಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಇರಬಹುದು ಎನ್ನಲಾಗಿದೆ. ಇನ್ನೊಂದು ವರದಿ ಪ್ರಕಾರ, ಆ ಹಮಾಲಿಯು ಸ್ಪ್ಯಾನಿಷ್ ಮಹಿಳೆಯನ್ನು ವಿವಾಹವಾಗಿದ್ದು ಇಬ್ಬರು ಮಕ್ಕಳನ್ನು ಹೊಂದಿದ್ದಾರೆ.

ಇದನ್ನೂ ಓದಿ: Success Story: ಹೋಟೆಲ್​ನಲ್ಲಿ ವೈಟರ್ ಆಗಿದ್ದ ಜಯಗಣೇಶ್ ಐಎಎಸ್ ಅಧಿಕಾರಿಯಾದ ಕತೆಯಿದು

ವರದಿ ಪ್ರಕಾರ, ಮೊರಾಕ್ಕೋದ ಮರಕೇಶ್ ಮತ್ತು ಸ್ವಿಟ್ಜರ್​ಲ್ಯಾಂಡ್​ನ ಮಾಂಟ್ರೂಕ್ಸ್ ನಗರದಲ್ಲಿರುವ ತಮ್ಮ ಆಸ್ತಿಗಳನ್ನು ಅವರು ಹಮಾಲಿ ಸುಪರ್ದಿಗೆ ಒಪ್ಪಿಸಿರುವುದೂ ಬೆಳಕಿಗೆ ಬಂದಿದೆ. ಇಷ್ಟಾದರೂ ಆ ಹಮಾಲಿ ಹೆಸರು ಮಾತ್ರ ಇನ್ನೂ ನಿಗೂಢವಾಗಿ ಉಳಿದಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ