ಈರುಳ್ಳಿ ರಫ್ತು ನಿಷೇಧದಿಂದ ಕೆಲ ವರ್ತಕರಿಗೆ ತೊಂದರೆ, ಸಾಮಾನ್ಯರಿಗೆ ಲಾಭ: ಐಎಎಸ್ ಅಧಿಕಾರಿ
Onion Prices: ಈರುಳ್ಳಿ ರಫ್ತು ನಿಷೇಧಿಸಿರುವುದರಿಂದ ಬೆಳೆಗಾರರಿಗೆ ತೊಂದರೆ ಇಲ್ಲ. ಆದರೆ, ಕೆಲವೇ ವರ್ತಕರ ಲಾಭಕ್ಕೆ ಸಂಚಕಾರ ಆಗಬಹುದು. ರಫ್ತು ನಿಷೇಧದಿಂದ ಹೆಚ್ಚಿನ ಲಾಭ ಆಗುವುದು ಸಾಮಾನ್ಯ ಜನರಿಗೆ ಎಂದು ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಹೇಳಿದ್ದಾರೆ. ಸದ್ಯ ರಾಷ್ಟ್ರೀಯ ಸರಾಸರಿ ಈರುಳ್ಳಿ ಬೆಲೆ 57 ರೂ ಇದ್ದು ಜನವರಿಯೊಳಗೆ ಅದು 40 ರೂಗೆ ಇಳಿಯಲಿದೆ ಎಂಬುದು ಸರ್ಕಾರದ ನಿರೀಕ್ಷೆ.
ನವದೆಹಲಿ, ಡಿಸೆಂಬರ್ 11: ಏರುಗತಿಯಲ್ಲಿರುವ ಈರುಳ್ಳಿ ಬೆಲೆಯನ್ನು ಕಡಿಮೆ ಮಾಡಲು ಸರ್ಕಾರ ವಿವಿಧ ಕ್ರಮಗಳನ್ನು (Measures to control onion prices) ಕೈಗೊಳ್ಳುತ್ತಿದೆ. ಇನ್ನೆರಡು ತಿಂಗಳಲ್ಲಿ ಅದರ ಬೆಲೆ ಕಿಲೋಗೆ ಬಹಳಷ್ಟು ಕಡಿಮೆ ಆಗುವ ನಿರೀಕ್ಷೆ ಇದೆ. ಕೇಂದ್ರ ಗ್ರಾಹಕ ವ್ಯವಹಾರಗಳ ಇಲಾಖೆಯ (consumer affairs dept) ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ನೀಡಿರುವ ಮಾಹಿತಿ ಪ್ರಕಾರ ಜನವರಿ ತಿಂಗಳಿನೊಳಗೆ ಈರುಳ್ಳಿ ಬೆಲೆ ಕಿಲೋಗೆ 40 ರೂಗಿಂತ ಕೆಳಗೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಸದ್ಯ ಈರುಳ್ಳಿ ಬೆಲೆ 80 ರೂ ಆಸುಪಾಸಿನಲ್ಲಿ ಇದೆ.
ಎರಡು ತಿಂಗಳ ಹಿಂದೆ ಟೊಮೆಟೋ ಬೆಲೆ ಕೈಮೀರಿ ಹೋಗಿದ್ದ ಹಿನ್ನೆಲೆಯಲ್ಲಿ ಸರ್ಕಾರ ಈರುಳ್ಳಿ ವಿಚಾರದಲ್ಲಿ ಮುಂಚಿತವಾಗಿ ಎಚ್ಚೆತ್ತುಕೊಂಡಿದೆ. ಈರುಳ್ಳಿ ಮೇಲಿದ್ದ ಕನಿಷ್ಠ ರಫ್ತು ಬೆಲೆಯ ನಿರ್ಬಂಧದ ಬದಲು ಇಡೀ ಈರುಳ್ಳಿ ರಫ್ತನ್ನೇ ನಿಷೇಧಿಸಿದೆ. 2024ರ ಮಾರ್ಚ್ ತಿಂಗಳವರೆಗೂ ಈರುಳ್ಳಿ ರಫ್ತು ಬ್ಯಾನ್ ಆಗಿದೆ.
ಇದನ್ನೂ ಓದಿ: ಚಿನ್ನದ ಬೆಲೆ ಹೆಚ್ಚಾದರೆ ಸಾಲದ ದರ ಹೆಚ್ಚುತ್ತದಾ, ಕಡಿಮೆ ಆಗುತ್ತದಾ? ಇಲ್ಲಿದೆ ಡೀಟೇಲ್ಸ್
ಕನ್ಸೂಮರ್ ಅಫೇರ್ಸ್ ಇಲಾಖೆಯ ಕಾರ್ಯದರ್ಶಿ ರೋಹಿತ್ ಕುಮಾರ್, ಈರುಳ್ಳಿ ಬೆಲೆ ಯಾವಾಗ ತಗ್ಗುತ್ತದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ, ‘ಬಹಳ ಶೀಘ್ರದಲ್ಲಿ… ಜನರಿಯಲ್ಲಿ ಬೆಲೆ ಇಳಿಯಲಿದೆ,’ ಎಂದು ಮಾಹಿತಿ ನೀಡಿದ್ದಾರೆ.
‘ಕೆಲವರು ಈರುಳ್ಳಿ ಕಿಲೋಗೆ 100 ರೂ ಮುಟ್ಟುತ್ತದೆ ಎಂದಿದ್ದರು. ಅದು 60 ರೂ ಬೆಲೆ ದಾಟುವುದಿಲ್ಲ ಎಂದು ನಾವು ಹೇಳಿದ್ದೆವು. ಈಗ ದೇಶದಲ್ಲಿ ಸರಾಸರಿ ಬೆಲೆ 57.02 ರೂ ಇದೆ. ಬೆಲೆ 60 ರೂ ದಾಟುವುದಿಲ್ಲ,’ ಎಂದು ರೋಹಿತ್ ಕುಮಾರ್ ಸಿಂಗ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Coca Cola: ಭಾರತದಲ್ಲಿ ಮದ್ಯ ಮಾರಾಟಕ್ಕಿಳಿದ ಕೋಕ ಕೋಲ; ರೆಡಿ ಟು ಡ್ರಿಂಕ್ ಲೆಮನ್ ಡೋ ಬಿಡುಗಡೆ
ಈರುಳ್ಳಿ ರಫ್ತು ನಿಷೇಧದಿಂದ ರೈತರಿಗೆ ಮೋಸವಾಗುತ್ತದಾ?
ತಜ್ಞರ ಪ್ರಕಾರ ಈರುಳ್ಳಿ ರಫ್ತನ್ನು ಸರ್ಕಾರ ನಿಷೇಧ ಮಾಡಿದ್ದರಿಂದ ಬೆಳೆಗಾರರಿಗೆ ಯಾವ ಪರಿಣಾಮ ಆಗದು. ಕೆಲವೇ ವರ್ತಕರು ಈರುಳ್ಳಿ ಸಂಗ್ರಹ ಇಟ್ಟುಕೊಂಡು ರಫ್ತಿನ ಮೂಲಕ ಲಾಭ ಮಾಡಿಕೊಳ್ಳುತ್ತಿದ್ದಾರೆ. ರಫ್ತು ನಿಷೇಧದಿಂದ ಈ ವರ್ತಕರ ಅತಿಲಾಭಕ್ಕೆ ಸಂಚಕಾರ ತರಬಹದು.
ಅದಕ್ಕಿಂತ ಹೆಚ್ಚಾಗಿ ರಫ್ತು ನಿಷೇಧದಿಂದ ಈರುಳ್ಳಿ ಬೆಲೆ ಕಡಿಮೆ ಆಗಿ, ಸಾಮಾನ್ಯ ಗ್ರಾಹಕರಿಗೆ ಲಾಭ ಆಗಲಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 4:22 pm, Mon, 11 December 23