ಅಪಘಾತಗೊಂಡರೆ ಆಸ್ಪತ್ರೆಯಲ್ಲಿ ಕ್ಯಾಷ್​ಲೆಸ್ ಚಿಕಿತ್ಸೆ; ರಾಷ್ಟ್ರಾದ್ಯಂತ ಯೋಜನೆ ಜಾರಿ: ನಿತಿನ್ ಗಡ್ಕರಿ

|

Updated on: Jan 09, 2025 | 8:37 PM

Nitin Gadkari announces initiative of cashless treatment for road accident victims: ಯಾವುದೇ ರೀತಿಯ ರಸ್ತೆ ಅಪಘಾತವಾಗಿ ಗಾಯಗೊಂಡವರೆಗೆ ಆಸ್ಪತ್ರೆಗಳಲ್ಲಿ ಉಚಿತವಾಗಿ ಕ್ಯಾಷ್​ಲೆಸ್ ಚಿಕಿತ್ಸೆ ನೀಡುವ ವ್ಯವಸ್ಥೆ ಸದ್ಯದಲ್ಲೇ ದೇಶಾದ್ಯಂತ ಜಾರಿಯಾಗಲಿದೆ. ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಈ ಮಹತ್ವದ ಉಪಕ್ರಮವನ್ನು ಘೋಷಿಸಿದ್ದಾರೆ. ಅಪಘಾತವಾಗಿ ಒಂದು ವಾರದವರೆಗೂ ಚಿಕಿತ್ಸಾ ವೆಚ್ಚವನ್ನು ಸರ್ಕಾರ ಭರಿಸುತ್ತದೆ. ಒಂದೂವರೆ ಲಕ್ಷ ರೂವರೆಗಿನ ವೆಚ್ಚವನ್ನು ಭರಿಸಲಾಗುತ್ತದೆ.

ಅಪಘಾತಗೊಂಡರೆ ಆಸ್ಪತ್ರೆಯಲ್ಲಿ ಕ್ಯಾಷ್​ಲೆಸ್ ಚಿಕಿತ್ಸೆ; ರಾಷ್ಟ್ರಾದ್ಯಂತ ಯೋಜನೆ ಜಾರಿ: ನಿತಿನ್ ಗಡ್ಕರಿ
ಅಪಘಾತ
Follow us on

ನವದೆಹಲಿ, ಜನವರಿ 9: ಅಪಘಾತಗೊಂಡವರಿಗೆ ಕ್ಯಾಷ್​ಲೆಸ್ ಚಿಕಿತ್ಸೆ ನೀಡುವ ಯೋಜನೆಯನ್ನು ದೇಶಾದ್ಯಂತ ಜಾರಿಗೊಳಿಸಲಾಗುತ್ತಿದೆ. ಕೇಂದ್ರ ಹೆದ್ದಾರಿ ಮತ್ತು ರಸ್ತೆ ಸಾರಿಗೆ ಸಚಿವ ನಿತಿನ್ ಗಡ್ಕರಿ ಇತ್ತೀಚೆಗೆ ಈ ಮಹತ್ವದ ಉಪಕ್ರಮವನ್ನು ಅನಾವರಣಗೊಳಿಸಿದ್ದಾರೆ. ಈ ಯೋಜನೆಯನ್ನು 2024ರ ಮಾರ್ಚ್ 14ರಂದು ಚಂಡೀಗಡದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಗಿತ್ತು. ಬಳಿಕ ಅಸ್ಸಾಮ್, ಪಂಜಾಬ್, ಹರ್ಯಾಣ ಮತ್ತು ಪುದುಚೇರಿಯಲ್ಲೂ ಇದನ್ನು ವಿಸ್ತರಿಸಲಾಯಿತು. ಈಗ ದೇಶಾದ್ಯಂತ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಹೆದ್ದಾರಿ ಮಾತ್ರವಲ್ಲ, ಯಾವುದೇ ರಸ್ತೆಯಲ್ಲೂ ಅಪಘಾತವಾದರೂ ಆಸ್ಪತ್ರೆಗಳಲ್ಲಿ ಉಚಿತವಾಗಿ ಕ್ಯಾಷ್​ಲೆಸ್ ಚಿಕಿತ್ಸೆ ಲಭ್ಯ ಇರುತ್ತದೆ. ಪ್ರಸಕ್ತ ಹಣಕಾಸು ವರ್ಷ ಮುಗಿಯುವುದರೊಳಗೆ ಈ ಉಪಕ್ರಮ ಜಾರಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿ: ಎಷ್ಟು ಹೊತ್ತು ಹೆಂಡ್ತಿ ಮುಖ ನೋಡ್ಕೊಂಡ್ ಇರ್ತೀರಾ? 90 ಗಂಟೆ ಕೆಲಸ ಮಾಡಿ ಎಂದ ಎಲ್ ಅಂಡ್ ಟಿ ಮುಖ್ಯಸ್ಥ

ಕ್ಯಾಷ್​ಲೆಸ್ ಟ್ರೀಟ್ಮೆಂಟ್ ಪಡೆಯಲು ನಿಯಮಗಳು…

ರಸ್ತೆ ಅಪಘಾತ ಸಂತ್ರಸ್ತರಿಗೆ 1.5 ಲಕ್ಷ ರೂವರೆಗೆ ಇನ್ಷೂರೆನ್ಸ್ ಕವರೇಜ್ ಇರುತ್ತದೆ. ಯಾವುದೇ ರಸ್ತೆಯಲ್ಲಿ ಯಾವುದೇ ರೀತಿಯಲ್ಲಿ ಅಪಘಾತವಾದರೂ ಇದು ಅನ್ವಯ ಆಗುತ್ತದೆ. ಅಪಘಾತವಾಗಿ 24 ಗಂಟೆಯೊಳಗೆ ಪೊಲೀಸರಿಗೆ ಇದರ ಮಾಹಿತಿ ದಾಖಲಾಗಿರಬೇಕು. ಅಪಘಾತ ನಡೆದುಏಳು ದಿನದವರೆಗೆ ಚಿಕಿತ್ಸೆಯನ್ನು ಸರ್ಕಾರವೇ ಭರಿಸುತ್ತದೆ.

ಆಯುಷ್ಮಾನ್ ಭಾರತ್ ಪಿಎಂ ಜನ್ ಆರೋಗ್ಯ ಯೋಜನೆ ಅಡಿ ಲಿಸ್ಟ್ ಆಗಿರುವ ಯಾವುದೇ ಆಸ್ಪತ್ರೆಗಳಲ್ಲಿ ಈ ಸೌಲಭ್ಯ ಇರುತ್ತದೆ. ಪೊಲೀಸ್, ಆಸ್ಪತ್ರೆ ಮತ್ತು ರಾಜ್ಯ ಆರೋಗ್ಯ ಪ್ರಾಧಿಕಾರಗಳು ಈ ಯೋಜನೆಯನ್ನು ಜಾರಿಗೊಳಿಸುತ್ತವೆ. ಅಪಘಾತವಾದ ಬಳಿಕ ಡಿಎಆರ್ ಫಾರ್ಮ್ ಭರ್ತಿ ಮಾಡಬೇಕು. ಆಗ ಈ ಸೌಲಭ್ಯ ಪಡೆಯಬಹುದು.

ಇದನ್ನೂ ಓದಿ: ಮುಂದಿನ ನಾಲ್ಕೈದು ವರ್ಷದಲ್ಲಿ ಮನುಷ್ಯರ ಎರಡು ಲಕ್ಷ ಬ್ಯಾಂಕ್ ಉದ್ಯೋಗಗಳನ್ನು ಕಿತ್ತುಕೊಳ್ಳಲಿದೆ ಎಐ

ಅಪಘಾತಕ್ಕೊಳಗಾದ ವ್ಯಕ್ತಿಗಳು ವಾಹನ ಚಾಲನಾ ಪರವಾನಗಿ ಇತ್ಯಾದಿ ಹೊಂದಿರಬೇಕು ಎಂಬುದು ಸೇರಿದಂತೆ ಕೆಲ ನಿಯಮಗಳಿವೆ. ಒಂದು ವೇಳೆ ಅಪಘಾತದಲ್ಲಿ ವಾಹನ ಸವಾರ ಮೃತಪಟ್ಟರೆ ಆತನ ಕುಟುಂಬದವರಿಗೆ 2 ಲಕ್ಷ ರೂ ಪರಿಹಾರ ಸಿಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ