Layoffs: ನವೆಂಬರ್​ನಲ್ಲಿ ಶೇ. 20 ಈಗ ಶೇ. 30, ಒಟ್ಟು ಅರ್ಧದಷ್ಟು ಉದ್ಯೋಗಿಗಳ ಲೇ ಆಫ್ ಮಾಡಿದ ನೂರೋ

Delivery Robo Company Nuro Layoffs: ಡೆಲಿವರಿ ರೋಬೋ ಕಂಪನಿ ನ್ಯೂರೋ ಕಳೆದ ಏಳೆಂಟು ತಿಂಗಳಿಂದೀಚೆಗೆ ಅರ್ಧದಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿದೆ. ನವೆಂಬರ್​ನಲ್ಲಿ ಶೇ. 20ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ಕಿತ್ತುಹಾಕಿದ್ದು ಅದು ಈಗ ಶೇ. 30 ಮಂದಿಯನ್ನು ಮನೆಗೆ ಕಳುಹಿಸಲು ನಿರ್ಧರಿಸಿದೆ.

Layoffs: ನವೆಂಬರ್​ನಲ್ಲಿ ಶೇ. 20 ಈಗ ಶೇ. 30, ಒಟ್ಟು ಅರ್ಧದಷ್ಟು ಉದ್ಯೋಗಿಗಳ ಲೇ ಆಫ್ ಮಾಡಿದ ನೂರೋ
ಉದ್ಯೋಗಕಡಿತ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2023 | 3:25 PM

ಕ್ಯಾಲಿಫೋರ್ನಿಯಾ: ಅಮೆರಿಕದ ರೋಬೋ ವಾಹನ ಕಂಪನಿ ನ್ಯೂರೋ (Nuro) ತಾನು 340 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುತ್ತಿರುವುದಾಗಿ (Layoffs) ಹೇಳಿದೆ. 340 ಎಂದರೆ ನ್ಯೂರೋದ ಶೇ. 30ರಷ್ಟು ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಸಂಸ್ಥೆಯ ವೆಚ್ಚ ತಗ್ಗಿಸಲು ಮತ್ತು ಬಂಡವಾಳ ಹರಿವು ಹೆಚ್ಚು ಕಾಲದವರೆಗೂ ಉಳಿಯಲು ಅನುವಾಗುವಂತೆ ಲೇ ಆಫ್ ಕ್ರಮ ಕೈಗೊಳ್ಳುತ್ತಿದೆ ನ್ಯೂರೋ. ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಮುಖ್ಯಕಚೇರಿ ಹೊಂದಿರುವ ನ್ಯೂರೋ 2022ರ ನವೆಂಬರ್​ನಲ್ಲಿ ಶೇ. 20ರಷ್ಟು ಉದ್ಯೋಗಿಗಳನ್ನು ಲೇ ಆಫ್ ಮಾಡಿತ್ತು. ಒಟ್ಟು 300 ಮಂದಿ ಆಗ ಕೆಲಸ ಕಳೆದುಕೊಂಡಿದ್ದರು. ಈಗ ನಡೆಯುತ್ತಿರುವ ಲೇ ಆಫ್ ಸಂಖ್ಯೆ ಸೇರಿಸಿದರೆ ಶೇ 50ರಷ್ಟು ಉದ್ಯೋಗಿಗಳು ನ್ಯೂರೋದಲ್ಲಿ ಕೆಲಸ ಕಳೆದುಕೊಂಡಾಗುತ್ತದೆ. ನವೆಂಬರ್​ಗೆ ಮುಂಚೆ ನ್ಯೂರೋದಲ್ಲಿ 1,200ಕ್ಕೂ ಹೆಚ್ಚು ಉದ್ಯೋಗಿಗಳಿದ್ದರು. ಅವರ ಪೈಕಿ 650 ಮಂದಿಗೆ ಕೆಲಸ ಹೋಗಿದೆ.

ಕೆಲಸ ಕಳೆದುಕೊಂಡವರಿಗೆ 3-4 ತಿಂಗಳು ಪೇಮೆಂಟ್

ಈಗ ಎರಡನೇ ಸುತ್ತಿನಲ್ಲಿ ಕೆಲಸ ಕಳೆದುಕೊಳ್ಳಲಿರುವ ಉದ್ಯೋಗಿಗಳಿಗೆ ನುರೋ ಕಂಪನಿ 12 ವಾರಗಳ ಸಂಬಳ ಮೊತ್ತದಷ್ಟು ಪರಿಹಾರ ನೀಡಲಿದೆ. 2 ವರ್ಷಕ್ಕಿಂತ ಹೆಚ್ಚು ಅನುಭವಿ ಉದ್ಯೋಗಿಗಳಿಗೆ 2 ಹೆಚ್ಚುವರಿ ವಾರಗಳ ಸಂಬಳ ಸಿಗಲಿದೆಯಂತೆ. ಜೊತೆಗೆ ಟಾರ್ಗೆಟ್ ಬೋನಸ್​ನ ಶೇ. 62.5ರಷ್ಟು ಮೊತ್ತವನ್ನೂ ಕೊಡಲಾಗುವುದು ಎಂದು ಕಂಪನಿ ಹೇಳಿದೆ.

ಇದನ್ನೂ ಓದಿSandesara Brothers: ಭಾರತದಲ್ಲಿ ವಂಚಕರು, ನೈಜೀರಿಯಾದಲ್ಲಿ ಹೀರೋಗಳು… 14,000 ಕೋಟಿ ಪಂಗನಾಮಿ ಹಾಕಿ ಪರಾರಿಯಾದ ಸಂದೇಸರ ಸಹೋದರರ ಕರ್ಮಕಾಂಡ

ಯಾವುದಿದು ನ್ಯೂರೋ ಕಂಪನಿ?

ಡೇವ್ ಫರ್ಗುಸನ್ ಮತ್ತು ಜಿಯಾಜುನ್ ಝು ಎಂಬಿಬ್ಬರು ಸೇರಿ ಸ್ಥಾಪಿಸಿದ ಕಂಪನಿ ನ್ಯೂರೋ. ಚಾಲಕರಹಿತವಾಗಿ ಸ್ವಯಂಚಾಲಿತವಾಗಿ ಚಲಿಸುವ ವಾಹನಗಳನ್ನು ಈ ಕಂಪನಿ ತಯಾರಿಸುತ್ತದೆ. ಆರ್3 ಎಂಬ ಅತ್ಯಾಧುನಿಕ ಮತ್ತು ಮೂರನೇ ತಲೆಮಾರಿನ ಡೆಲಿವರಿ ರೋಬೋದ ತಯಾರಿಕೆಯಲ್ಲಿ ಇದು ತೊಡಗಿಸಿಕೊಂಡಿದೆ. ಸದ್ಯಕ್ಕೆ ಅದರ ತಯಾರಿಕೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಸಾಕಷ್ಟು ಫಂಡಿಂಗ್ ಪಡೆದಿರುವ ಸಂಸ್ಥೆ ಈ ಹಣವನ್ನು ಅಧ್ಯಯನ ಮತ್ತು ಸಂಶೋಧನೆಗೆ ವಿನಿಯೋಗಿಸಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಆರ್3 ತಯಾರಿಕೆ ವಿಳಂಬಗೊಂಡಿದೆ. ಈಗ ಉದ್ಯೋಗಕಡಿತದಿಂದ ಇನ್ನಷ್ಟು ವೆಚ್ಚ ಉಳಿತಾಯವಾಗಲಿದ್ದು, ಅದರಿಂದ ಸಂಸ್ಥೆ ಹೆಚ್ಚು ಶಕ್ತಿಯುತಗೊಳ್ಳಬಹುದು ಎಂದು ಅದು ನಿರೀಕ್ಷಿಸಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ