Sandesara Brothers: ಭಾರತದಲ್ಲಿ ವಂಚಕರು, ನೈಜೀರಿಯಾದಲ್ಲಿ ಹೀರೋಗಳು… 14,000 ಕೋಟಿ ಪಂಗನಾಮಿ ಹಾಕಿ ಪರಾರಿಯಾದ ಸಂದೇಸರ ಸಹೋದರರ ಕರ್ಮಕಾಂಡ

Story Of Indian Businessmen In Nigeria: ಗುಜರಾತ್ ಮೂಲದ ಸಂದೇಸರ ಸಹೋದರರು ಭಾರತದ ಬ್ಯಾಂಕುಗಳಿಂದ ಅಕ್ರಮವಾಗಿ 14,000 ಕೋಟಿ ರೂ ಸಾಲ ಪಡೆದು ತೀರಿಸದೇ ನೈಜೀರಿಯಾಗೆ ಹೋಗಿ ದೊಡ್ಡ ಉದ್ಯಮಿಗಳಾಗಿ ಬೆಳೆದಿದ್ದಾರೆ. ಈ ಬಗ್ಗೆ ಒಂದು ವರದಿ....

Sandesara Brothers: ಭಾರತದಲ್ಲಿ ವಂಚಕರು, ನೈಜೀರಿಯಾದಲ್ಲಿ ಹೀರೋಗಳು... 14,000 ಕೋಟಿ ಪಂಗನಾಮಿ ಹಾಕಿ ಪರಾರಿಯಾದ ಸಂದೇಸರ ಸಹೋದರರ ಕರ್ಮಕಾಂಡ
ಕೊಸೋವೋ ಪ್ರಧಾನಿ ಜೊತೆ ಚೇತನ್ ಸಂದೇಸರ (ಎಡಗಡೆ)
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2023 | 1:51 PM

ನವದೆಹಲಿ: ಇವರ ಹೆಸರು ನಿತಿನ್ ಸಂದೇಸರ ಮತ್ತು ಚೇತನ್ ಸಂದೇಸರ (Sandesara Brothers). ನೈಜೀರಿಯಾದ ಅತಿದೊಡ್ಡ ಸ್ವತಂತ್ರ ತೈಲ ಉತ್ಪಾದಕ (Oil Producing Company) ಸಂಸ್ಥೆಯ ಒಡೆಯರು. ಹೆಚ್ಚಿನ ಮಂದಿಗೆ ಇವರ ಹೆಸರು ಗೊತ್ತಿರುವುದಿಲ್ಲ. ಸದ್ದಿಲ್ಲದೇ ಭಾರತ ಬಿಟ್ಟು ಪರಾರಿಯಾದವರ ಪೈಕಿ ಈ ಸಹೋದರರೂ ಇದ್ದಾರೆ. ನೈಜೀರಿಯಾದಲ್ಲಿ ಇವರ ಅದ್ಧೂರಿ ಪಾರ್ಟಿಗಳು ಎಲ್ಲರ ಕಣ್ಮನ ಸೆಳೆಯುತ್ತವೆ. ದೀಪಾವಳಿ ಹಬ್ಬವನ್ನು ಇವರು ಪ್ರತೀ ವರ್ಷ ಧಾಂ ಧೂಂ ಎಂದು ಆಚರಿಸುತ್ತಾರೆ. ಇವರು ಆಯೋಜಿಸುವ ಪಾರ್ಟಿಗಳಿಗೆ ಭಾರತದಿಂದ ಬಾಲಿವುಡ್ ಸಿಂಗರ್​ಗಳು ಹೋಗಿ ಹಾಡುವುದುಂಟು. ಇದೆಲ್ಲಕ್ಕಿಂತ ಹೆಚ್ಚಾಗಿ ನೈಜೀರಿಯಾದ ಆರ್ಥಿಕ ದುಸ್ಥಿತಿಯಲ್ಲಿ ಆ ದೇಶಕ್ಕೆ ಸಂದೇಸರ ಸಹೋದರರು ಪುಷ್ಟಿ ಕೊಡುವ ಆಪದ್ಬಾಂಧವರಂತೆ ಕಾಣುತ್ತಾರೆ. ಭಾರತದಲ್ಲಿ ಇವರ ವಿರುದ್ಧ 14,000 ಕೋಟಿ ರೂ ವಂಚನೆಯ ಹಗರಣ ಇದೆಯಾದರೂ ನೈಜೀರಿಯಾಗೆ ಇವರು ಹೀರೋಗಳಾಗಿ ಹೋಗಿದ್ದಾರೆ.

ನೈಜೀರಿಯಾದ ಮರುಭೂಮಿಯಲ್ಲಿ 1 ಬಿಲಿಯನ್ ಬ್ಯಾರಲ್​ಗಳಿಷ್ಟಿರುವ ತೈಲನಿಕ್ಷೇಪ ಸಿಕ್ಕಿರುವುದು ಸಂದೇಸರ ಸಹೋದರರಿಗೆ ಸುಗ್ಗಿ ತಂದಿದೆ. ಶೆಲ್ ಮತ್ತು ಎಕ್ಸಾನ್ ಮೋಬಿಲ್ ಸಂಸ್ಥೆಗಳು ನೈಜೀರಿಯಾ ಬಿಟ್ಟು ಹೋಗುತ್ತಿರುವ ಹಿನ್ನೆಲೆಯಲ್ಲಿ ಸಂದೇಸರರ ಪ್ರಾಮುಖ್ಯತೆ ನೈಜೀರಿಯಾಗೆ ಇನ್ನಿಲ್ಲದಷ್ಟು ಹೆಚ್ಚಾಗಿದೆ.

ಇದನ್ನೂ ಓದಿWorld Bank: ಈ ಹಣಕಾಸು ವರ್ಷವೂ ಅಗ್ರಪಂಕ್ತಿಯಲ್ಲಿ ಭಾರತದ ಆರ್ಥಿಕತೆ: ವಿಶ್ವಬ್ಯಾಂಕ್ ಅಂದಾಜು

ಚೇತನ್ ಮತ್ತು ನಿತಿನ್ ಸಂದೇಸರ ಅವರಿಬ್ಬರನ್ನು ಬಂಧಿಸಿ ಅಥವಾ ತಮಗೆ ಒಪ್ಪಿಸಿ ಎಂದು ಭಾರತ ಸರ್ಕಾರ ಮಾಡಿಕೊಂಡ ಮನವಿಯನ್ನು ನೈಜೀರಿಯಾ ಸಾರಾಸಗಟಾಗಿ ತಿರಸ್ಕರಿಸಿದೆ. ಸಂದೇಸರರ ವಿರುದ್ಧ ಭಾರತ ಮಾಡುತ್ತಿರುವ ಆರೋಪದಲ್ಲಿ ಪ್ರಾಮಾಣಿಕತೆ ಇಲ್ಲ ಎಂಬುದು ನೈಜೀರಿಯಾದ ವಾದ. ಅಷ್ಟರಮಟ್ಟಿಗೆ ಸಂದೇಸರರು ನೈಜೀರಿಯಾದಲ್ಲಿ ಛಾಪು ಮೂಡಿಸಿದ್ದಾರೆ. ನೈಜೀರಿಯಾ ಸರ್ಕಾರಕ್ಕೆ ಬರುವ ಆದಾಯದಲ್ಲಿ ಶೇ. 2ರಷ್ಟು ಮೊತ್ತವು ಸಂದೇಸರರ ಕಂಪನಿ ಕಟ್ಟುವ ತೆರಿಗೆಯೇ ಸೇರಿದೆ. ಅಂದರೆ ನೈಜೀರಿಯಾ ಬೊಕ್ಕಸ ತುಂಬಲು ಸಂದೇಸರರ ಪಾತ್ರ ಮಹತ್ವದ್ದು. ಹೀಗಾಗಿ, ಚಿನ್ನದ ಮೊಟ್ಟೆಯನ್ನು ಯಾರು ತಾನೇ ಕಳೆದುಕೊಳ್ಳಲು ಸಾಧ್ಯ?

ಸಂದೇಸರ ಬ್ರದರ್ಸ್ ಭಾರತದಲ್ಲಿ ಮಾಡಿದ ಕರ್ಮಕಾಂಡಗಳೇನು?

ಗುಜರಾತ್ ಮೂಲದ ಚೇತನ್ ಮತ್ತು ನಿತಿನ್ ಸಂದೇಸರರು ಎಂಬತ್ತರ ದಶಕದಲ್ಲಿ ಚಹಾ ವ್ಯವಹಾರ ಮಾಡಿಕೊಂಡಿದ್ದರು. ನಂತರ ತೈಲ ಮತ್ತು ಅನಿಲ, ಆರೋಗ್ಯ, ನಿರ್ಮಾಣ ಕ್ಷೇತ್ರಗಳಲ್ಲಿ ಉದ್ಯಮ ಬೆಳೆಸಿದರು. 2010ರಷ್ಟರಲ್ಲಿ ಇವರ ಗ್ರೂಪ್​ನ ಮೌಲ್ಯ 7 ಬಿಲಿಯನ್ ಡಾಲರ್ ಆಗಿತ್ತು. ಆದರೆ, ಇಷ್ಟು ಬ್ರಹ್ಮಾಂಡ ಬೆಳವಣಿಗೆಯಲ್ಲಿ ಅಕ್ರಮಗಳು ಮಡುಗಟ್ಟಿದ್ದವು ಎಂಬ ಆರೋಪ ಇದೆ. ಅಂದರೆ, ಸಂದೇಶರ ಸಹೋದರರು ಭಾರತದಲ್ಲಿ ತಮ್ಮ ಉದ್ಯಮ ವಿಸ್ತರಣೆಗೆ ಮನಬಂದತೆ ಸಾಲ ಮಾಡಿದ್ದರು. ಎಸ್​ಬಿಐ, ಬ್ಯಾಂಕ್ ಆಫ್ ಬರೋಡ ಮತ್ತು ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಬ್ಯಾಂಕುಗಳಿಂದ ಇವರು 14,000 ಕೋಟಿ ರೂ ಸಾಲ ಪಡೆದಿದ್ದರು. ಅದಾಗಿದ್ದರೆ ವ್ಯವಹಾರ ನಿಮಿತ್ತ ಎನ್ನಬಹುದು. ಆದರೆ, ಇವರು ಸುಳ್ಳು ದಾಖಲೆ ಸೃಷ್ಟಿಸಿ ಬ್ಯಾಂಕುಗಳಲ್ಲಿ ಸಾಲ ಪಡೆದು ವಂಚಿಸಿದ್ದು ಬೆಳಕಿಗೆ ಬಂದಿತ್ತು. ಈ ಸಾಲದಲ್ಲಿ ಒಂದಷ್ಟು ಹಣವನ್ನು ವಿದೇಶಗಳಿಗೆ ಸಾಗಿಸಿದ್ದರು.

ಇದನ್ನೂ ಓದಿByju’s vs Lenders: ಸಾಲಗಾರರಿಂದ ಹಿಂಸೆ; ಅಮೆರಿಕದ ಕೋರ್ಟ್ ಮೆಟ್ಟಿಲೇರಿದ ಬೆಂಗಳೂರಿನ ಬೈಜೂಸ್

ಇವರ ಅಕ್ರಮ ಬೆಳಕಿಗೆ ಬರುತ್ತಲೇ ಇಡಿ, ಸಿಬಿಐ ತನಿಖೆ ಕೈಗೊಂಡವು. 2017ರಲ್ಲಿ ಇವರು ದೇಶಬಿಟ್ಟು ಓಡಿಹೋಗಿ ನೈಜೀರಿಯಾ ಸೇರಿಕೊಂಡರು. 20 ವರ್ಷದ ಹಿಂದೆಯೇ ಇವರು ನೈಜೀರಿಯಾದಲ್ಲಿ ತೈಲ ವ್ಯವಹಾರ ಆರಂಭಿಸಿದ್ದರು. ಅದೇ ವ್ಯವಹಾರ ಸಂದೇಸರರ ಕೈಹಿಡಿಯಿತು. ಭಾರತದ ಕಾನೂನು ಕೈಗಳಿಂದ ತಪ್ಪಿಸಿಕೊಳ್ಳಲು ಇದೇ ಉದ್ಯಮವು ಸಂದೇಸರರಿಗೆ ಸಹಾಯವಾಗಿದೆ. ಚೇತನ್ ಮತ್ತು ನಿತಿನ್ ಸಂದೇಸರರು ಭಾರತ ಸರ್ಕಾರಕ್ಕೆ ವಿಲನ್ ಆದರೆ, ನೈಜೀರಿಯಾ ಪಾಲಿಗೆ ಹೀರೋಗಳಾಗಿ ಹೋಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್