World Bank: ಈ ಹಣಕಾಸು ವರ್ಷವೂ ಅಗ್ರಪಂಕ್ತಿಯಲ್ಲಿ ಭಾರತದ ಆರ್ಥಿಕತೆ: ವಿಶ್ವಬ್ಯಾಂಕ್ ಅಂದಾಜು

India GDP vs Global GDP: ಈ ವರ್ಷ ಜಾಗತಿಕವಾಗಿ ಸರಾಸರಿ ಆರ್ಥಿಕ ಬೆಳವಣಿಗೆ ಶೇ. 2.1ರಷ್ಟು ಇರಬಹುದು, ಭಾರತದ ಬೆಳವಣಿಗೆ ಶೇ. 6.3ರಷ್ಟು ಆಗಬಹುದು ಎಂದು ವರ್ಲ್ಡ್ ಬ್ಯಾಂಕ್ ಅಂದಾಜು ಮಾಡಿದೆ.

World Bank: ಈ ಹಣಕಾಸು ವರ್ಷವೂ ಅಗ್ರಪಂಕ್ತಿಯಲ್ಲಿ ಭಾರತದ ಆರ್ಥಿಕತೆ: ವಿಶ್ವಬ್ಯಾಂಕ್ ಅಂದಾಜು
ಆರ್ಥಿಕ ಬೆಳವಣಿಗೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 07, 2023 | 12:58 PM

ನವದೆಹಲಿ: ವಿಶ್ವಬ್ಯಾಂಕ್ ಮಾಡಿರುವ ಜಾಗತಿಕ ಆರ್ಥಿಕ ಲೆಕ್ಕಾಚಾರಗಳ ವರದಿಯಲ್ಲಿ ಭಾರತಕ್ಕೆ ಮಿಶ್ರ ಅನುಭವ ಕೊಡುವ ಅಂಶಗಳಿವೆ. 2022-23ರಂತೆ 2023-24ರ ಹಣಕಾಸು ವರ್ಷದಲ್ಲೂ ಭಾರತದ ಜಿಡಿಪಿ ಬೆಳವಣಿಗೆಯು ಜಾಗತಿಕ ಆರ್ಥಿಕತೆಗೆ (Global Economy) ಹೋಲಿಸಿದರೆ ಬಹಳ ಉತ್ತಮವಾಗಿರಲಿದೆ ಎಂದು ವಿಶ್ವ ಬ್ಯಾಂಕ್ (World Bank) ಖುಷಿ ಸುದ್ದಿ ಕೊಟ್ಟಿದೆ. ತುಸು ನಿರಾಸೆಗೊಳಿಸುವ ಅಂಶ ಎಂದರೆ 2022-23ಕ್ಕೆ ಹೋಲಿಸಿದರೆ 2023-24ರ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆ (India GDP) ತುಸು ಕಡಿಮೆ ಆಗಲಿದೆ. ಅದೇ ವೇಳೆ ಜಾಗತಿಕ ಆರ್ಥಿಕತೆ ನಿರೀಕ್ಷೆಗಿಂತ ತುಸು ಮೇಲ್ಮಟ್ಟಕ್ಕೆ ಬರಲಿದೆಯಂತೆ.

2022-23ರ ಹಣಕಾಸು ವರ್ಷದಲ್ಲಿ ಭಾರತದ ಜಿಡಿಪಿ ಶೇ. 7.1ರ ದರದಲ್ಲಿ ಬೆಳೆದಿತ್ತು. ಆದರೆ, 2023-24ರ ವರ್ಷದಲ್ಲಿ ಭಾರತದ ಜಿಡಿಪಿ ಶೇ. 6.6ರಷ್ಟು ಬೆಳೆಯಬಹುದು ಎಂದು ವಿಶ್ವಬ್ಯಾಂಕ್ ಜನವರಿಯಲ್ಲಿ ಅಂದಾಜು ಮಾಡಿತ್ತು. ಆದರೆ, ಈಗ ಅದು ಮತ್ತೆ ಅಂದಾಜು ಮಾಡಿರುವ ಪ್ರಕಾರ ಈ ಹಣಕಾಸು ವರ್ಷದಲ್ಲಿ ಭಾರತದ ಅರ್ಥಿಕತೆ ಶೇ. 6.3ರಷ್ಟು ಮಾತ್ರ ಬೆಳೆಯಬಹುದು ಎಂದಿದೆ.

ಇದನ್ನೂ ಓದಿRBI: ಆರ್​ಬಿಐ ಸುದ್ದಿಗೋಷ್ಠಿಗೆ ಮುನ್ನ ಇಲ್ಲಿ ಹೂಡಿಕೆ ಮಾಡಿದರೆ ಸಿಗುತ್ತೆ ಭರ್ಜರಿ ಲಾಭ? ಕಾರಣ ಇಂಟರೆಸ್ಟಿಂಗ್

ಜಾಗತಿಕ ಆರ್ಥಿಕತೆಯ ಸ್ಥಿತಿ ಹೇಗೆ?

2022ರ ಕ್ಯಾಲೆಂಡರ್ ವರ್ಷದಲ್ಲಿ ಜಾಗತಿಕವಾಗಿ ಆದ ಸರಾಸರಿ ಆರ್ಥಿಕ ಬೆಳವಣಿಗೆ ಶೇ. 3.1ರಷ್ಟಿತ್ತು. ಈ ವರ್ಷದಲ್ಲಿ ನೈಜ ಜಾಗತಿಕ ಜಿಡಿಪಿ ಶೇ. 1.7ರಷ್ಟು ಮಾತ್ರ ಆಗಬಹುದು ಎಂದು ಜನವರಿಯಲ್ಲಿ ವರ್ಲ್ಡ್ ಬ್ಯಾಂಕ್ ಅಂದಾಜು ಮಾಡಿತ್ತು. ಈಗ ಗ್ಲೋಬಲ್ ಜಿಡಿಪಿ ಈ ವರ್ಷ ಶೇ. 2.1ರಷ್ಟು ಬೆಳೆಯಬಹುದು ಎಂದು ಹೊಸ ಅಂದಾಜು ಮಾಡಿದೆ.

ವರ್ಲ್ ಬ್ಯಾಂಕ್ ಪ್ರಕಾರ 2023ರಲ್ಲಿ ಪ್ರಮುಖ ದೇಶಗಳ ಆರ್ಥಿಕ ಬೆಳವಣಿಗೆ ಎಷ್ಟಿರಲಿದೆ?

  • ಭಾರತ: ಶೇ. 6.3
  • ಚೀನಾ: ಶೇ. 5.6
  • ಅಮೆರಿಕ: ಶೇ. 1.1
  • ಯೂರೋಪ್: ಶೇ. 0.4

ಇದನ್ನೂ ಓದಿUPI Transaction Limit: ಯುಪಿಐ ಲಿಮಿಟ್​!; ಪೇಟಿಎಂ, ಫೋನ್​ಪೇ ಇತ್ಯಾದಿಯಲ್ಲಿ ದಿನಕ್ಕೆ ಎಷ್ಟು ವಹಿವಾಟು ನಡೆಸಬಹುದು? ಬ್ಯಾಂಕುಗಳಿಂದಲೂ ಮಿತಿ ಹೇರಿಕೆ

ಅಮೆರಿಕದಲ್ಲಾಗುತ್ತಿರುವ ಆರ್ಥಿಕ ಬೆಳವಣಿಗೆ ನಿರೀಕ್ಷೆಮೀರಿದ್ದಾಗಿದೆ. ಶೇ. 1ಕ್ಕಿಂತ ಕಡಿಮೆ ದರದಲ್ಲಿ ಜಿಡಿಪಿ ಬೆಳೆಯಬಹುದು ಎಂದು ಈ ಹಿಂದೆ ಅಂದಾಜು ಮಾಡಲಾಗಿತ್ತು. ಈಗ ಹಣದುಬ್ಬರ ನಿಯಂತ್ರಣಕ್ಕೆ ಬಂದಿರುವುದು, ಬಡ್ಡಿ ದರ ಏರಿಕೆ ನಿಂತಿರುವುದು ಇವೆಲ್ಲವೂ ಅಮೆರಿಕದ ಆರ್ಥಿಕತೆಯ ಚೇತರಿಕೆಗೆ ಕಾರಣವಾಗಬಹುದು. 2023ರಲ್ಲಿ ಇದರ ಜಿಡಿಪಿ ಶೇ. 1.1ರಷ್ಟು ಆಗಬಹುದು ಎಂದು ವಿಶ್ವಬ್ಯಾಂಕ್ ಅಭಿಪ್ರಾಯಪಟ್ಟಿದೆ.

ಭಾರತದಲ್ಲಿ ಅಂದುಕೊಂಡಷ್ಟು ವೇಗದಲ್ಲಿ ಆರ್ಥಿಕತೆ ಯಾಕೆ ಬೆಳೆಯುತ್ತಿಲ್ಲ?

2023ರಲ್ಲಿ ಭಾರತದ ಬೆಳವಣಿಗೆಗೆ ಪುಷ್ಟಿ ಕೊಡಲಿರುವುದು ಸರ್ವಿಸ್ ಸೆಕ್ಟರ್ ಮತ್ತು ಹೂಡಿಕೆಗಳಂತೆ. ಆದರೆ, ಹಿನ್ನಡೆ ತಂದುಕೊಡುವುದು ಜನಸಾಮಾನ್ಯರ ವೆಚ್ಚಕಡಿತ ಎಂಬ ಅಭಿಪ್ರಾಯ ಇದೆ. ಬೆಲೆ ಏರಿಕೆ, ದುಬಾರಿ ಜೀವನವು ಖಾಸಗಿ ಅನುಭೋಗದ ಪ್ರಮಾಣವನ್ನು ಬಹಳಷ್ಟು ಕಡಿಮೆ ಮಾಡಬಹುದು. ಇದರಿಂದ ಆರ್ಥಿಕ ಬೆಳವಣಿಗೆ ನಿರೀಕ್ಷಿತ ಮಟ್ಟದಲ್ಲಿ ಬೆಳೆಯದೇ ಹೋಗಬಹುದು ಎನ್ನುವುದು ವರ್ಲ್ಡ್ ಬ್ಯಾಂಕ್ ನಿಲುವು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್