UPI: ಪೇಟಿಎಂ, ಫೋನ್​ಪೇ ಇತ್ಯಾದಿ ಬಳಸಿ ಜನರು ಮೇ ತಿಂಗಳಲ್ಲಿ ನಡೆಸಿದ ವಹಿವಾಟು 14 ಲಕ್ಷ ಕೋಟಿ ರೂ

941 Crore UPI Transactions In 2023 May: ವ್ಯವಸ್ಥೆಯಲ್ಲಿ (Digital Payment System) ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದಲ್ಲಿ ಅತೀವ ಜನಪ್ರಿಯತೆ ಗಳಿಸುತ್ತಿದೆ. ಪೇಟಿಎಂ, ಫೋನ್​ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಪ್ಲಾಟ್​ಫಾರ್ಮ್​ಗಳ ಜನಬಳಕೆ ಅತಿ ಹೆಚ್ಚಾಗಿದೆ. ಯುಪಿಐ ವ್ಯವಸ್ಥೆಯ ರೂವಾರಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (NPCI) ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ 2023ರ ಮೇ ತಿಂಗಳಲ್ಲಿ 940 ಕೋಟಿಗೂ ಹೆಚ್ಚು ವಹಿವಾಟುಗಳು ಯುಪಿಐ ಮೂಲಕ ನಡೆದಿವೆ.

UPI: ಪೇಟಿಎಂ, ಫೋನ್​ಪೇ ಇತ್ಯಾದಿ ಬಳಸಿ ಜನರು ಮೇ ತಿಂಗಳಲ್ಲಿ ನಡೆಸಿದ ವಹಿವಾಟು 14 ಲಕ್ಷ ಕೋಟಿ ರೂ
ಯುಪಿಐ ವಹಿವಾಟು
Edited By:

Updated on: Oct 08, 2026 | 12:15 PM

ನವದೆಹಲಿ: ಡಿಜಿಟಲ್ ಪಾವತಿ ವ್ಯವಸ್ಥೆಯಲ್ಲಿ (Digital Payment System) ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (UPI) ಭಾರತದಲ್ಲಿ ಅತೀವ ಜನಪ್ರಿಯತೆ ಗಳಿಸುತ್ತಿದೆ. ಪೇಟಿಎಂ, ಫೋನ್​ಪೇ, ಗೂಗಲ್ ಪೇ ಇತ್ಯಾದಿ ಯುಪಿಐ ಪ್ಲಾಟ್​ಫಾರ್ಮ್​ಗಳ ಜನಬಳಕೆ ಅತಿ ಹೆಚ್ಚಾಗಿದೆ. ಯುಪಿಐ ವ್ಯವಸ್ಥೆಯ ರೂವಾರಿ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (NPCI) ನೀಡಿರುವ ಮಾಹಿತಿ ಪ್ರಕಾರ, ಭಾರತದಲ್ಲಿ 2023ರ ಮೇ ತಿಂಗಳಲ್ಲಿ 940 ಕೋಟಿಗೂ ಹೆಚ್ಚು ವಹಿವಾಟುಗಳು ಯುಪಿಐ ಮೂಲಕ ನಡೆದಿವೆ. ಇಷ್ಟು ವಹಿವಾಟುಗಳಿಂದ ಸೇರಿ 14 ಲಕ್ಷ ಕೋಟಿ ರುಪಾಯಿಗೂ ಹೆಚ್ಚು ಹಣದ ವರ್ಗಾವಣೆಗಳಾಗಿವೆ.

2023ರ ವಿವಿಧ ತಿಂಗಳಲ್ಲಿ ಯುಪಿಐ ಮೂಲಕ ನಡೆದಿರುವ ವಹಿವಾಟು ಸಂಖ್ಯೆ

  • ಜನವರಿ: 800 ಕೋಟಿ
  • ಫೆಬ್ರುವರಿ: 750 ಕೋಟಿ
  • ಮಾರ್ಚ್: 870 ಕೋಟಿ
  • ಏಪ್ರಿಲ್: 889 ಕೋಟಿ
  • ಮೇ: 941 ಕೋಟಿ

 

2022-23ರ ಹಣಕಾಸು ವರ್ಷದಲ್ಲಿ, ಅಂದರೆ 2022ರ ಏಪ್ರಿಲ್​ನಿಂದ ಹಿಡಿದು 2023ರ ಮಾರ್ಚ್​ವರೆಗಿನ ಅವಧಿಯಲ್ಲಿ ಯುಪಿಐ ಪ್ಲಾಟ್​ಫಾರ್ಮ್​ಗಳಲ್ಲಿ ಆದ ವಹಿವಾಟು ಸಂಖ್ಯೆ 8,300 ಕೋಟಿ. ಈ ವಹಿವಾಟುಗಳಲ್ಲಿ ಒಟ್ಟು 139 ಲಕ್ಷ ಕೋಟಿ ರೂನಷ್ಟು ಹಣದ ಪಾವತಿಗಳಾಗಿವೆ.

ದಿನಕ್ಕೆ 100 ಕೋಟಿ ವಹಿವಾಟು ಮಟ್ಟ ಮುಟ್ಟಬಲ್ಲುದು ಯುಪಿಐ

ಪಿಡಬ್ಲ್ಯೂಸಿ ಇಂಡಿಯಾ ಸಂಸ್ಥೆಯ ವರದಿಯೊಂದರ ಪ್ರಕಾರ 2026-27ರಲ್ಲಿ ಭಾರತದಲ್ಲಿ ಯುಪಿಐ ವಹಿವಾಟುಗಳ ಸಂಖ್ಯೆ ದಿನಕ್ಕೆ 100 ಕೋಟಿಯಂತೆ ಆಗಬಹುದು. ಭಾರತದಲ್ಲಿರುವ ಒಟ್ಟಾರೆ ಡಿಜಿಟಲ್ ಪೇಮೆಂಟ್ ಸೇವೆಯಲ್ಲಿ ಯುಪಿಐ ಪಾಲು ಶೇ 90ರಷ್ಟಾಗುತ್ತದೆ ಎಂದು ಅಂದಾಜು ಮಾಡಲಾಗಿದೆ.

ಸದ್ಯ 2022-23ರ ಹಣಕಾಸು ವರ್ಷದಲ್ಲಿ ಭಾರತದಲ್ಲಿ ಆಗಿರುವ ಒಟ್ಟು ಹಣಕಾಸು ವಹಿವಾಟಿನಲ್ಲಿ ಯುಪಿಐ ಪೇಮೆಂಟ್ ಶೇ 75ರಷ್ಟಿದೆ.

ಯುಪಿಐ ಬಿಟ್ಟರೆ ಬೇರೆ ಯಾವುದಿವೆ ಡಿಜಿಟಲ್ ಪೇಮೆಂಟ್ ವ್ಯವಸ್ಥೆ

ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಇಂಟರ್ನೆಟ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಮೈಕ್ರೋ ಎಟಿಎಂ, ಪಿಒಎಸ್, ಬ್ಯಾಂಕ್ ಪ್ರೀಪೇಯ್ಡ್ ಕಾರ್ಡ್, ಯುಎಸ್​ಎಸ್​ಡಿ, ಎಇಪಿಎಸ್.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:34 am, Fri, 2 June 23

ಸುಗ್ಗನಹಳ್ಳಿ ವಿಜಯಸಾರಥಿ

ಹುಟ್ಟೂರು ಹಾಸನ ಜಿಲ್ಲೆಯ ಶ್ರವಣಬೆಳಗೊಳ ಸಮೀಪದ ಒಂದು ಪುಟ್ಟ ಹಳ್ಳಿ. ಬೆಳದದ್ದು ಬೆಂಗಳೂರು ನಗರದಲ್ಲಿ. ಹಲವು ವರ್ಷಗಳಿಂದ ಪತ್ರಿಕಾ ರಂಗದಲ್ಲಿ ನೆಲೆ. ಬರವಣಿಗೆಯ ಆಸಕ್ತಿ ಮತ್ತು ಪರಿಣಿತಿಯ ಕ್ಷೇತ್ರಗಳು ಆರ್ಥಿಕತೆ, ಹಣಕಾಸು, ಅಂತರರಾಷ್ಟ್ರೀಯ ವಿದ್ಯಮಾನ, ಜನಕ್ರಾಂತಿ, ರಾಷ್ಟ್ರೀಯತೆ, ಸಂಸ್ಕೃತಿ, ಮಾನವ ಸಂಬಂಧ, ಕ್ರೀಡೆ ಮೊದಲಾದವು ಇವೆ. ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ಸಾಧ್ಯವಾದಷ್ಟೂ ಸ್ಫುಟವಾಗಿ, ಸರಳವಾಗಿ ಬರೆಯುವ ಇಚ್ಛೆ.

Read More
Loading...
Unable to load recommendations.
Follow Us