Rupee Value: ಮತ್ತೆ ಪಾತಾಳಕ್ಕೆ ಕುಸಿದ ರೂಪಾಯಿ, ಡಾಲರ್ ವಿರುದ್ಧ 83.06ಕ್ಕೆ ಇಳಿಕೆ

ದಿನೇದಿನೇ ಪಾತಾಳಕ್ಕೆ ಕುಸಿಯುತ್ತಿರುವ ರೂಪಾಯಿ ಮೌಲ್ಯ ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ ಸಾರ್ವಕಾಲಿಕ ಪತನ ಕಂಡಿದೆ.

Rupee Value: ಮತ್ತೆ ಪಾತಾಳಕ್ಕೆ ಕುಸಿದ ರೂಪಾಯಿ, ಡಾಲರ್ ವಿರುದ್ಧ 83.06ಕ್ಕೆ ಇಳಿಕೆ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Ganapathi Sharma

Updated on: Oct 20, 2022 | 10:34 AM

ನವದೆಹಲಿ: ದಿನೇದಿನೇ ಪಾತಾಳಕ್ಕೆ ಕುಸಿಯುತ್ತಿರುವ ರೂಪಾಯಿ ಮೌಲ್ಯ (Rupee Value) ಗುರುವಾರದ ಆರಂಭಿಕ ವಹಿವಾಟಿನಲ್ಲಿ ಮತ್ತೆ ಸಾರ್ವಕಾಲಿಕ ಪತನ ಕಂಡಿದೆ. ಬೆಳಗ್ಗೆ 10 ಗಂಟೆ ವೇಳೆಗೆ ಅಮೆರಿಕನ್ ಡಾಲರ್ (US Dollar) ವಿರುದ್ಧ ರೂಪಾಯಿ ಮೌಲ್ಯ 83.06ಕ್ಕೆ ತಲುಪಿದೆ. ಇದು ಈವರೆಗಿನ ಗರಿಷ್ಠ ಕುಸಿತವಾಗಿದೆ. ಬುಧವಾರದ ವಹಿವಾಟಿನ ಕೊನೆಯಲ್ಲಿಯೇ ರೂಪಾಯಿ ಮೌಲ್ಯ 83ಕ್ಕೆ ಬಂದು ನಿಂತಿತ್ತು. ಇಂದು ಮತ್ತೆ 6 ಪೈಸೆ ಇಳಿಕೆಯಾಗಿದೆ.

ದೇಶೀಯ ಷೇರುಗಳಲ್ಲಿನ ಮಾರಾಟ ಮತ್ತು ಸ್ಥಳೀಯ ಮಾರುಕಟ್ಟೆಯಲ್ಲಿನ ಆತಂಕದ ಪರಿಸ್ಥಿತಿ ಕೂಡ ಮೌಲ್ಯ ಕುಸಿಯಲು ಕಾರಣ ಎಂದು ಫಾರೆಕ್ಸ್ ಟ್ರೇಡರ್ಸ್ ತಿಳಿಸಿದ್ದಾರೆ.

ಇದನ್ನೂ ಓದಿ: ರೂಪಾಯಿ ಕುಸಿತವಲ್ಲ, ಡಾಲರ್​​ ಬಲಗೊಳ್ಳುತ್ತಿದೆ: ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

ಇದನ್ನೂ ಓದಿ
Image
Gold Price Today: ಮತ್ತೆ ಕುಸಿದ ಬೆಳ್ಳಿ ದರ, ದೇಶದ ಪ್ರಮುಖ ನಗರಗಳ ಚಿನ್ನದ ದರ ಇಲ್ಲಿದೆ ನೋಡಿ
Image
JioFiber: ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ ಬಂದಿದೆ! ವಿವರ ಇಲ್ಲಿದೆ
Image
Nestle India Q3 Results: ನೆಸ್ಲೆ ಇಂಡಿಯಾ ನಿವ್ವಳ ಲಾಭದಲ್ಲಿ 8% ಏರಿಕೆ, ಮಾರಾಟದಲ್ಲಿ 5 ವರ್ಷಗಳ ಗರಿಷ್ಠ ಸಾಧನೆ
Image
ಅವಧಿಯೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ಏನೆಲ್ಲ ತೊಂದರೆ? ಇಲ್ಲಿದೆ ಮಾಹಿತಿ

ಬೆಳಿಗ್ಗೆ ವಹಿವಾಟು ಆರಂಭವಾಗುತ್ತಿದ್ದಂತೆ 83.05 ಇದ್ದ ರೂಪಾಯಿ ಕೆಲವೇ ನಿಮಿಷಗಳಲ್ಲಿ ಮತ್ತೆ ಕುಸಿತ ಕಂಡಿದೆ. ಒಂದು ಹಂತದಲ್ಲಿ 83.07ಕ್ಕೆ ಕುಸಿದಿತ್ತು. ಬಳಿಕ 83.06ಕ್ಕೆ ಬಂದಿದೆ. ಈ ಮಧ್ಯೆ, ಡಾಲರ್ ಮೌಲ್ಯ ಇತರ ಆರು ಕರೆನ್ಸಿಗಳ ವಿರುದ್ಧ ವೃದ್ಧಿಯಾಗಿದೆ. ಶೇಕಡಾ 0.07ರಷ್ಟು ವೃದ್ಧಿಯಾಗಿ 113.06 ಆಗಿದೆ.

ಕಚ್ಚಾ ತೈಲ ಬೆಲೆ ಇಳಿಕೆ:

ಬ್ರೆಂಟ್ ಕಚ್ಚಾ ತೈಲದ ಬೆಲೆ ಶೇಕಡಾ 0.17 ಇಳಿಕೆಯಾಗಿ ಬ್ಯಾರಲ್​ಗೆ 92.25 ಡಾಲರ್ ಆಗಿದೆ. ಬೇಡಿಕೆ ಕುಸಿತದ ಕಾರಣ ಕಚ್ಚಾ ತೈಲದ (Crude oil futures) ಬೆಲೆ ಬುಧವಾರ ಶೇಕಡಾ 0.25ರಷ್ಟು ಇಳಿಕೆಯಾಗಿ, ಬ್ಯಾರೆಲ್​ಗೆ 6,846 ರೂ. ಆಗಿತ್ತು.

ಇದನ್ನೂ ಓದಿ: Crude oil Price: ಬೇಡಿಕೆ ಕುಸಿತ, ಕಚ್ಚಾ ತೈಲ ಬೆಲೆ ಇಳಿಕೆ

ಈ ಮಧ್ಯೆ, ದೇಶೀಯ ಮಾರುಕಟ್ಟೆಯಲ್ಲಿ ಸತತ ನಾಲ್ಕು ದಿನಗಳ ಗಳಿಕೆಯ ಬಳಿಕ ಇಂದು ವಹಿವಾಟು ಕುಸಿದಿದೆ. ಬೆಳಗ್ಗೆ 10 ಗಂಟೆಯ ಲೆಕ್ಕಾಚಾರದ ಪ್ರಕಾರ, ಬಿಎಸ್​ಇ ಸೆನ್ಸೆಕ್ಸ್ 140.09 ಅಥವಾ ಶೇಕಡಾ 0.24 ಕುಸಿತ ಕಂಡು 58,967.10 ರಲ್ಲಿ ವಹಿವಾಟು ನಡೆಸುತ್ತಿದೆ. ಅದೇ ರೀತಿ ನಿಫ್ಟಿ ಕೂಡ ಶೇಕಡಾ 0.25ರಷ್ಟು ಇಳಿಕೆಯಾಗಿದ್ದು, 17,468.30 ರಲ್ಲಿ ಟ್ರೇಡಿಂಗ್ ನಡೆಯುತ್ತಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (FIIs) ಷೇರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟ ಮಾಡುತ್ತಿರುವುದು ಮಾರುಕಟ್ಟೆಯಲ್ಲಿನ ಕುಸಿತಕ್ಕೆ ಕಾರಣವಾಗಿದೆ. ವಿದೇಶಿ ಸಾಂಸ್ಥಿಕ ಹೂಡಿಕೆದಾರರು 453.91 ಕೋಟಿ ಮೌಲ್ಯದ ಷೇರುಗಳನ್ನು ಬುಧವಾರ ಮಾರಾಟ ಮಾಡಿದ್ದರು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ