Crude oil Price: ಬೇಡಿಕೆ ಕುಸಿತ, ಕಚ್ಚಾ ತೈಲ ಬೆಲೆ ಇಳಿಕೆ

ಬೇಡಿಕೆ ಕುಸಿತದ ಕಾರಣ ಕಚ್ಚಾ ತೈಲದ ಬೆಲೆ ಬುಧವಾರ ಶೇಕಡಾ 0.25ರಷ್ಟು ಇಳಿಕೆಯಾಗಿದೆ.

Crude oil Price: ಬೇಡಿಕೆ ಕುಸಿತ, ಕಚ್ಚಾ ತೈಲ ಬೆಲೆ ಇಳಿಕೆ
ಸಾಂದರ್ಭಿಕ ಚಿತ್ರImage Credit source: PTI
Follow us
TV9 Web
| Updated By: Ganapathi Sharma

Updated on: Oct 19, 2022 | 2:35 PM

ನವದೆಹಲಿ: ಬೇಡಿಕೆ ಕುಸಿತದ ಕಾರಣ ಕಚ್ಚಾ ತೈಲ(Crude oil futures) ಬೆಲೆ ಬುಧವಾರ ಶೇಕಡಾ 0.25ರಷ್ಟು ಇಳಿಕೆಯಾಗಿದೆ. ಸದ್ಯ ಬ್ಯಾರೆಲ್ ಕಚ್ಚಾ ತೈಲದ ದರ 6,846 ರೂ. ಆಗಿದೆ. ಮಲ್ಟಿ ಕಮಾಡಿಟಿ ಎಕ್ಸ್​ಚೇಂಜ್​ನಲ್ಲಿ (Multi Commodity Exchange) ನವೆಂಬರ್​ನಲ್ಲಿ ಪೂರೈಕೆಯಾಗಬೇಕಿರುವ ಕಚ್ಚಾ ತೈಲದ ಬೆಲೆ 17 ರೂ. ಇಳಿಕೆಯಾಗಿದೆ. 5,621 ಬ್ಯಾರೆಲ್ ಕಚ್ಚಾ ತೈಲಕ್ಕೆ ಪ್ರತಿ ಬ್ಯಾರೆಲ್​ಗೆ 6,846 ರೂ.ನಂತೆ ನಿಗದಿಯಾಗಿದೆ. ಜಾಗತಿಕವಾಗಿ, ವೆಸ್ಟ್ ಟೆಕ್ಸಾಸ್ ಇಂಟರ್​ಮೀಡಿಯೇಟ್ ಕಚ್ಚಾ ತೈಲ ಶೇಕಡಾ 1.26ರಷ್ಟು ಹೆಚ್ಚುವರಿ ದರಕ್ಕೆ, ಅಂದರೆ ಪ್ರತಿ ಬ್ಯಾರೆಲ್​ಗೆ 83.86 ಡಾಲರ್​ನಂತೆ ಮಾರಾಟವಾಗುತ್ತಿದೆ. ನ್ಯೂಯಾರ್ಕ್​ನಲ್ಲಿ ಬ್ರೆಂಟ್ ಕಚ್ಚಾ ತೈಲದ ದರ ಶೇಕಡಾ 0.68ರಷ್ಟು ಹೆಚ್ಚಾಗಿ ಪ್ರತಿ ಬ್ಯಾರೆಲ್​ಗೆ 90.64 ಡಾಲರ್​ನಂತೆ ಮಾರಾಟವಾಗುತ್ತಿದೆ.

ಕ್ರೂಡ್ ಆಯಿಲ್ ಫ್ಯೂಚರ್ಸ್​ ಎಂದರೆ…:

ಒಂದು ನಿಗದಿತ ಮೊತ್ತಕ್ಕೆ ನಿರ್ದಿಷ್ಟ ದಿನದಂದು ಕಚ್ಚಾ ತೈಲ ಖರೀದಿಸುವ ಬಗ್ಗೆ ಮುಂಚಿತವಾಗಿಯೇ ಕರಾರು ಏರ್ಪಟ್ಟಿರುತ್ತದೆ. ಈ ರೀತಿಯ ಕರಾರಿಗೆ ಒಳಪಟ್ಟ ಕಚ್ಚಾ ತೈಲದವನ್ನು ‘ಕ್ರೂಡ್ ಆಯಿಲ್ ಫ್ಯೂಚರ್ಸ್’ ಎಂದು ಕರೆಯುತ್ತಾರೆ. ಇಂಥ ಕಚ್ಚಾ ತೈಲವನ್ನು ವಿನಿಮಯ ಕೇಂದ್ರಗಳಲ್ಲಿ ವ್ಯಾಪಾರ ಮಾಡಲಾಗುತ್ತದೆ. ಇದು ವಿವಿಧ ರೀತಿಯ ತೈಲಗಳ ಬೇಡಿಕೆಯನ್ನು ಪ್ರತಿಬಿಂಬಿಸಿರುತ್ತದೆ. ತೈಲ ಖರೀದಿ ಮತ್ತು ಮಾರಾಟದ ಒಂದು ಸಾಮಾನ್ಯ ವಿಧವಾಗಿ ‘ಆಯಿಲ್ ಫ್ಯೂಚರ್ಸ್’ ಅನ್ನು ಪರಿಗಣಿಸಲಾಗಿದೆ.

ಇದನ್ನೂ ಓದಿ
Image
Nestle India Q3 Results: ನೆಸ್ಲೆ ಇಂಡಿಯಾ ನಿವ್ವಳ ಲಾಭದಲ್ಲಿ 8% ಏರಿಕೆ, ಮಾರಾಟದಲ್ಲಿ 5 ವರ್ಷಗಳ ಗರಿಷ್ಠ ಸಾಧನೆ
Image
ಅವಧಿಯೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ಏನೆಲ್ಲ ತೊಂದರೆ? ಇಲ್ಲಿದೆ ಮಾಹಿತಿ
Image
IRCTC Tickets On EMI: ರೈಲ್ವೆಯಿಂದ ಹೊಸ ಕೊಡುಗೆ, ಈಗಲೇ ಪ್ರಯಾಣಿಸಿ, ನಂತರ ಪಾವತಿ ಮಾಡಿ
Image
Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್

ಇದನ್ನೂ ಓದಿ: Petrol Price on October 19: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?; ಇಲ್ಲಿದೆ ಮಾಹಿತಿ

ಬೇಡಿಕೆ ಕುಸಿದಿರುವ ಕಾರಣ ಒಪೆಕ್ ರಾಷ್ಟ್ರಗಳು ಇತ್ತೀಚೆಗೆ ಉತ್ಪಾದನೆಯನ್ನು ಕಡಿತಗೊಳಿಸಿದ್ದವು. ಕಳೆದ ಒಂದು ವಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಶೇಕಡಾ 4ರಷ್ಟು ಇಳಿಕೆ ಕಂಡಿತ್ತು. ಇಂದು (ಅಕ್ಟೋಬರ್ 19) ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ 96.72 ರೂ. ಇದ್ದು, ಡೀಸೆಲ್ ದರ ಲೀಟರ್‌ಗೆ 89.62 ರೂ. ಇದೆ. ಬೆಂಗಳೂರಿನಲ್ಲಿ ಪೆಟ್ರೋಲ್ ದರ 1 ಲೀಟರ್​ಗೆ 101.94 ರೂ, ಡೀಸೆಲ್​ಗೆ 87.89 ರೂ. ಇದೆ. ಕಳೆದ 5 ತಿಂಗಳುಗಳಿಂದ ರಾಷ್ಟ್ರ ರಾಜಧಾನಿ ದೆಹಲಿ, ಬೆಂಗಳೂರು, ಚೆನ್ನೈ, ಮುಂಬೈ, ಕೋಲ್ಕತ್ತಾ ಸೇರಿ ಹಲವು ಪ್ರಮುಖ ನಗರಗಳಲ್ಲಿ ಇಂಧನದ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ