AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nestle India Q3 Results: ನೆಸ್ಲೆ ಇಂಡಿಯಾ ನಿವ್ವಳ ಲಾಭದಲ್ಲಿ 8% ಏರಿಕೆ, ಮಾರಾಟದಲ್ಲಿ 5 ವರ್ಷಗಳ ಗರಿಷ್ಠ ಸಾಧನೆ

ನೆಸ್ಲೆ ಇಂಡಿಯಾ ಮೂರನೇ ತ್ರೈಮಾಸಿಕ ಫಲಿತಾಂಶ ಬುಧವಾರ ಪ್ರಕಟಗೊಂಡಿದೆ. ನಿವ್ವಳ ಲಾಭದಲ್ಲಿ ಶೇಕಡಾ 8.3ರಷ್ಟು ಹೆಚ್ಚಳವಾಗಿದ್ದು, ಲೆಕ್ಕಾಚಾರಗಳನ್ನು ಮೀರಿ 668 ಕೋಟಿ ರೂ. ಲಾಭ ಗಳಿಸಿದೆ.

Nestle India Q3 Results: ನೆಸ್ಲೆ ಇಂಡಿಯಾ ನಿವ್ವಳ ಲಾಭದಲ್ಲಿ 8% ಏರಿಕೆ, ಮಾರಾಟದಲ್ಲಿ 5 ವರ್ಷಗಳ ಗರಿಷ್ಠ ಸಾಧನೆ
ಸಾಂದರ್ಭಿಕ ಚಿತ್ರImage Credit source: PTI
TV9 Web
| Updated By: Ganapathi Sharma|

Updated on:Oct 19, 2022 | 1:19 PM

Share

ನವದೆಹಲಿ: ನೆಸ್ಲೆ ಇಂಡಿಯಾ (Nestle India) ಮೂರನೇ ತ್ರೈಮಾಸಿಕ ಫಲಿತಾಂಶ (Q3 Results) ಬುಧವಾರ ಪ್ರಕಟಗೊಂಡಿದೆ. ನಿವ್ವಳ ಲಾಭದಲ್ಲಿ (Net profit) ಶೇಕಡಾ 8.3ರಷ್ಟು ಹೆಚ್ಚಳವಾಗಿದ್ದು, ಲೆಕ್ಕಾಚಾರಗಳನ್ನು ಮೀರಿ 668 ಕೋಟಿ ರೂ. ಲಾಭ ಗಳಿಸಿದೆ. ತ್ರೈಮಾಸಿಕ ಅವಧಿಯ ಆದಾಯದಲ್ಲಿ ಶೇಕಡಾ 18.3 ಹೆಚ್ಚಳವಾಗಿದ್ದು, 4,591 ಕೋಟಿ ರೂ. ತಲುಪಿದೆ. ಕಂಪನಿಯ ಉತ್ಪನ್ನಗಳ ಮಾರಾಟದ ಒಟ್ಟು ಮೊತ್ತ 4,567 ಕೋಟಿ ರೂ. ಆಗಿದ್ದು, ಕಳೆದ ಐದು ವರ್ಷಗಳಲ್ಲಿ ಇದೇ ತ್ರೈಮಾಸಿಕ ಅವಧಿಗೆ ಹೋಲಸಿದರೆ ಗರಿಷ್ಠ ಮೊತ್ತವಾಗಿದೆ. ಒಟ್ಟಾರೆ ಮಾರಾಟ ಬೆಳವಣಿಗೆಯು ಶೇಕಡಾ 18.2 ಆಗಿದೆ. ದೇಶೀಯ ಮಾರಾಟ ಕೂಡ ಶೇಕಡಾ 18.3ಕ್ಕೆ ಹೆಚ್ಚಳಗೊಂಡಿದೆ.

ಕಂಪನಿಯು ಈ ತ್ರೈಮಾಸಿಕದಲ್ಲಿ ಐದು ವರ್ಷಗಳ ಗರಿಷ್ಠ ಮಾರಾಟ ದಾಖಲಿಸಿದೆ ಎಂದು ಕಂಪನಿಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಸುರೇಶ್ ನಾರಾಯಣನ್ ತಿಳಿಸಿದ್ದಾರೆ. ಮೆಟ್ರೊ ಮತ್ತು ದೊಡ್ಡ ನಗರಗಳಲ್ಲಿ ಕಂಪನಿಯ ಬೆಳವಣಿಗೆ ಬಲವಾಗಿದೆ. ಗ್ರಾಮೀಣ ಮಾರುಕಟ್ಟೆಗಳು ಹಾಗೂ ಸಣ್ಣ ನಗರಗಳಲ್ಲಿಯೂ ಕಂಪನಿ ಉತ್ತಮ ಸಾಧನೆ ತೋರಿದೆ ಎಂದು ಅವರು ಹೇಳಿದ್ದಾರೆ.

ತ್ರೈಮಾಸಿಕ ಫಲಿತಾಂಶದ ಮುಖ್ಯಾಂಶಗಳು:

ಇದನ್ನೂ ಓದಿ
Image
Petrol Price on October 19: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?; ಇಲ್ಲಿದೆ ಮಾಹಿತಿ
Image
Gold Price Today: ಚಿನ್ನದ ದರ 40 ರೂಪಾಯಿ ಇಳಿಕೆ, ಬೆಳ್ಳಿ ದರವೂ ಕುಸಿತ
Image
Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್
Image
SBI Interest Rate Hike: ಉಳಿತಾಯ ಖಾತೆ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ

ಒಟ್ಟು ಮಾರಾಟ – 4,567 ಕೋಟಿ ರೂ.

ಮಾರಾಟ ಬೆಳವಣಿಗೆ ಪ್ರಮಾಣ – 18.2%

ದೇಶೀಯ ಮಾರಾಟ ಬೆಳವಣಿಗೆ ಪ್ರಮಾಣ – 18.3%.

ಮಾರಾಟ ಕಾರ್ಯಾಚರಣೆಗಳಿಂದ ಗಳಿಸಿದ ಲಾಭದ ಪ್ರಮಾಣ – 20.3%

ನಿವ್ವಳ ಲಾಭ – 668 ಕೋಟಿ ರೂ.

ಪ್ರತಿ ಷೇರಿನ ಮೇಲಿನ ಗಳಿಕೆ – 69.3 ರೂ.

ನೆಸ್ಲೆ ಡಿವಿಡೆಂಡ್ 2022:

ಕಂಪನಿಯು 2022ನೇ ಸಾಲಿನ ಎರಡನೇ ಮಧ್ಯಂತರ ಡಿವಿಡೆಂಡ್ ಅನ್ನು ಘೊಷಿಸಿದ್ದು, ಇದು ಪ್ರತಿ ಈಕ್ವಿಟಿ ಷೇರಿಗೆ 120 ರೂ.ನಂತೆ ಇದೆ. ಒಟ್ಟು 1157 ಕೋಟಿ ರೂ. ಮೊತ್ತದ ಡಿವಿಡೆಂಡ್ ಬಿಡುಗಡೆ ಮಾಡಲಾಗಿದ್ದು, ಇದನ್ನು ನವೆಂಬರ್ 16 ಅಥವಾ ಅದಕ್ಕಿಂತ ಮೊದಲು ನೀಡಲಿದೆ. ಮೊದಲ ಮಧ್ಯಂತರ ಡಿವಿಡೆಂಡ್​ಗೆ ಹೆಚ್ಚುವರಿಯಾಗಿ ಇದನ್ನು ನೀಡಲಾಗುತ್ತಿದೆ. ಮೇ 6ರಂದು ಪ್ರತಿ ಈಕ್ವಿಟಿ ಷೇರಿಗೆ 25 ರೂ.ನಂತೆ ಮೊದಲ ಮಧ್ಯಂತರ ಡಿವಿಡೆಂಡ್ ನೀಡಲಾಗಿತ್ತು.

ಇದನ್ನೂ ಓದಿ: Stock Market Updates: ಹಬ್ಬದ ಉತ್ಸಾಹದಲ್ಲಿ ಷೇರುಪೇಟೆ, ನಾಲ್ಕನೇ ದಿನವೂ ಗಳಿಕೆಯ ಓಟ

ಎನ್​ಎಸ್​ಇಯಲ್ಲಿ ಬುಧವಾರ ಮಧ್ಯಾಹ್ನ 11.55ರ ಸುಮಾರಿಗೆ ನೆಸ್ಲೆ ಇಂಡಿಯಾದ ಷೇರಿನ ಬೆಲೆ ಸುಮಾರು ಶೇಕಡಾ 1.50ರಷ್ಟು ಹೆಚ್ಚಾಗಿ 19669 ರೂ.ಗೆ ತಲುಪಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:15 pm, Wed, 19 October 22

20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಆರ್​ಸಿಬಿಯಲ್ಲಿ ಅವಕಾಶ ಸಿಗಲಿಲ್ಲ; 56 ಎಸೆತಗಳಲ್ಲಿ ಶತಕ ಸಿಡಿಸಿದ ಸೀಫರ್ಟ್
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ
ಸಂಸತ್ತಿಗೆ ಸೈಕಲ್​​ನಲ್ಲಿ ಬಂದ ಸಂಸದ