JioFiber: ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ ಬಂದಿದೆ! ವಿವರ ಇಲ್ಲಿದೆ

ಈ ಹೊಸ ಯೋಜನೆಗಳು ಹೊಸ ಸಂಪರ್ಕಗಳನ್ನು ಬುಕ್ ಮಾಡಿದಾಗ ಬಳಕೆದಾರರಿಗೆ ರೂ 6,500 ಮೌಲ್ಯದ ಪ್ರಯೋಜನಗಳನ್ನು ನೀಡುತ್ತಿದೆ. ಈ ಕೊಡುಗೆಯು ಆಯ್ದ ಯೋಜನೆಗಳ ಖರೀದಿಗೆ ಅನ್ವಯಿಸುತ್ತದೆ.

JioFiber: ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ ಬಂದಿದೆ! ವಿವರ ಇಲ್ಲಿದೆ
ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ ಬಂದಿದೆ! ವಿವರ ಇಲ್ಲಿದೆ
Follow us
TV9 Web
| Updated By: ಸಾಧು ಶ್ರೀನಾಥ್​

Updated on: Oct 19, 2022 | 3:08 PM

ಭಾರತದ ಅತಿದೊಡ್ಡ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಪೂರೈಕೆದಾರರಾದ ರಿಲಯನ್ಸ್ ಜಿಯೋ, ತನ್ನ ಗ್ರಾಹಕರಿಗೆ ಹೊಸ ಆಫರ್ ಗಳನ್ನು ನೀಡುತ್ತಿದೆ. ಅಕ್ಟೋಬರ್ 18 ಮತ್ತು ಅಕ್ಟೋಬರ್ 28, 2022 ರ ನಡುವೆ ಜಿಯೋಫೈಬರ್ ಡಬಲ್ ಫೆಸ್ಟಿವಲ್ ಬೋನಾಂಜಾ ಆಫರ್ (JioFiber Double Festival Bonanza) ಅನ್ನು ಲಾಂಚ್ ಮಾಡಿದೆ. ಈ ಆಫರ್ ಸೀಮಿತ ಅವಧಿಗೆ ಮಾತ್ರ ಲಭ್ಯವಿರುತ್ತದೆ. ಕೊಡುಗೆಯ ಪ್ರಯೋಜನಗಳನ್ನು ಪಡೆಯಲು ಬಳಕೆದಾರರು ಹೊಸ ಸಂಪರ್ಕವನ್ನು ಖರೀದಿಸಬೇಕು ಮತ್ತು ಈಗ ಲಾಂಚ್ ಆಗಿರುವ ಯೋಜನೆಗಳಲ್ಲಿ ಒಂದಕ್ಕೆ ಚಂದಾದಾರರಾಗಬೇಕು.

ಜಿಯೋ ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ ನಲ್ಲಿ ಎರಡು ಯೋಜನೆಗಳನ್ನು ಪರಿಚಯ ಮಾಡಿದೆ. ರೂ 599 ಪ್ಲಾನ್‌ನ 6 ತಿಂಗಳ ರೀಚಾರ್ಜ್ ಮತ್ತು ರೂ 899 ಪ್ಲಾನ್‌ನ 6 ತಿಂಗಳ ರೀಚಾರ್ಜ್. ಈ ಎರಡು ಯೋಜನೆಗಳ ಜೊತೆಗೆ ರೂ. 899 x 3 ತಿಂಗಳ ಯೋಜನೆಯು 100 % ಮೌಲ್ಯದ ಬ್ಯಾಕ್ ಆಫರ್‌ಗೆ ಅರ್ಹವಾಗಿದೆ. ಆದರೆ 15 ದಿನಗಳ ಹೆಚ್ಚುವರಿ ಮಾನ್ಯತೆ ಇದರಲ್ಲಿ ದೊರೆಯುವುದಿಲ್ಲ.

ಈ ಹೊಸ ಯೋಜನೆಗಳು ಹೊಸ ಸಂಪರ್ಕಗಳನ್ನು ಬುಕ್ ಮಾಡಿದಾಗ ಬಳಕೆದಾರರಿಗೆ ರೂ 6,500 ಮೌಲ್ಯದ ಪ್ರಯೋಜನಗಳನ್ನು ನೀಡುತ್ತಿದೆ. ಈ ಕೊಡುಗೆಯು ಆಯ್ದ ಯೋಜನೆಗಳ ಖರೀದಿಗೆ ಅನ್ವಯಿಸುತ್ತದೆ.

ರೂ. 599 x 6 ತಿಂಗಳುಗಳು & ರೂ. 899 x 6 ತಿಂಗಳುಗಳು. ಈ ಎರಡು ಯೋಜನೆಗಳು, ಡಬಲ್ ಫೆಸ್ಟಿವಲ್ ಬೊನಾಂಜಾ ಆಫರ್‌ನೊಂದಿಗೆ ಬರಲಿದ್ದು, ತಿಂಗಳಿಗೆ 599 ಮತ್ತು 899 ರೂ. ಈ ಎರಡೂ ಯೋಜನೆಗಳು ಹೊಸದಾಗಿದ್ದು ಅಕ್ಟೋಬರ್ 18 ರಿಂದ ಅಕ್ಟೋಬರ್ 28, 2022 ರವರೆಗೆ ಮಾತ್ರ ಇರುತ್ತವೆ.

ಈ ಯೋಜನೆಗಳನ್ನು ಖರೀದಿಸುವ ಗ್ರಾಹಕರು ಯಾವುದೇ ಹೆಚ್ಚುವರಿ ಶುಲ್ಕವಿಲ್ಲದೆ ರೂ. 6,000 ಮೌಲ್ಯದ 4K JioFiber ಸೆಟ್ ಟಾಪ್ ಬಾಕ್ಸ್ ಅನ್ನು ಸಹ ಪಡೆಯುತ್ತಾರೆ.

ರೂ. 599 X 6 ತಿಂಗಳ ಯೋಜನೆ:

ರೂ. 599 X 6 ತಿಂಗಳ ಯೋಜನೆಯಲ್ಲಿ 30 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿದೆ. ಒಟ್ಟು ರೂ.4,241 ಆಗಲಿದೆ. (ರೂ. 3,594 + ರೂ. 647 ಜಿಎಸ್‌ಟಿ), ಈ ಯೋಜನೆಯಲ್ಲಿ ಹೊಸ ಗ್ರಾಹಕರು ರೂ. 4,500 ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು: ರೂ. AJIO ನ 1,000 ವೋಚರ್, ರಿಲಯನ್ಸ್ ಡಿಜಿಟಲ್‌ನ ರೂ. 1,000 ವೋಚರ್, ನೆಟ್‌ಮೆಡ್ಸ್‌ನ ರೂ. 1,000 ವೋಚರ್ ಮತ್ತು IXIGO ನ ರೂ. 1,500 ವೋಚರ್ ದೊರೆಯಲಿದೆ. ಹೆಚ್ಚುವರಿಯಾಗಿ, ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

ರೂ. 899 X 6 ತಿಂಗಳ ಯೋಜನೆ:

ರೂ. 899 X 6 ತಿಂಗಳ ಯೋಜನೆಯಲ್ಲಿ 100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು ದೊರೆಯಲಿದೆ. ಒಟ್ಟು ರೂ 6,365 ಆಗಲಿದೆ. (ರೂ. 5,394 + ರೂ. 971 ಜಿಎಸ್‌ಟಿ). ಈ ಯೋಜನೆಯಲ್ಲಿ ಹೊಸ ಗ್ರಾಹಕರು ರೂ.6,500. ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು: AJIO ನ ರೂ.2,000 ವೋಚರ್, ರಿಲಯನ್ಸ್ ಡಿಜಿಟಲ್‌ನ ರೂ. 1,000 ವೋಚರ್, NetMeds ನ ರೂ.500 ವೋಚರ್ & IXIGO ನ ರೂ. 3,000 ವೋಚರ್. ಹೆಚ್ಚುವರಿಯಾಗಿ, ಈ ಎಲ್ಲಾ ಗ್ರಾಹಕರು ಯೋಜನೆಯ ಭಾಗವಾಗಿರುವ 6 ತಿಂಗಳ ಮಾನ್ಯತೆಯ ಜೊತೆಗೆ 15 ದಿನಗಳ ಹೆಚ್ಚುವರಿ ಮಾನ್ಯತೆಯನ್ನು ಪಡೆಯುತ್ತಾರೆ.

ರೂ. 899 X 3 ತಿಂಗಳ ಯೋಜನೆ:

ರೂ. 899 X 3 ತಿಂಗಳ ಯೋಜನೆ: (100 Mbps, 14+ OTT ಅಪ್ಲಿಕೇಶನ್‌ಗಳು ಮತ್ತು 550+ ಬೇಡಿಕೆಯ ಚಾನೆಲ್‌ಗಳು): ಒಟ್ಟು ರೂ.2,697. ಈ ಯೋಜನೆಯಲ್ಲಿ ಹೊಸ ಗ್ರಾಹಕರು ರೂ.3,500 ಮೌಲ್ಯದ ವೋಚರ್‌ಗಳನ್ನು ಪಡೆಯುತ್ತಾರೆ. ವೋಚರ್‌ಗಳು 4 ವಿಭಿನ್ನ ಬ್ರಾಂಡ್‌ಗಳಾಗಿದ್ದು: AJIO ನ ರೂ.1,000 ವೋಚರ್, ರಿಲಯನ್ಸ್ ಡಿಜಿಟಲ್‌ನ ರೂ. 500 ವೋಚರ್, NetMeds ನ ರೂ.500 ವೋಚರ್ & IXIGO ನ ರೂ. 1,500 ವೋಚರ್. ಆದರೆ, ಈ ಯೋಜನೆಯಲ್ಲಿ ಹೆಚ್ಚುವರಿ ವ್ಯಾಲಿಡಿಟಿ ದೊರೆಯುವುದಿಲ್ಲ.

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್