AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Stock Market Updates: ಹಬ್ಬದ ಉತ್ಸಾಹದಲ್ಲಿ ಷೇರುಪೇಟೆ, ನಾಲ್ಕನೇ ದಿನವೂ ಗಳಿಕೆಯ ಓಟ

ಹಬ್ಬದ ಉತ್ಸಾಹದಲ್ಲಿರುವ ಭಾರತೀಯ ಷೇರುಪೇಟೆ ಸತತ ನಾಲ್ಕನೇ ದಿನವೂ ಗಳಿಕೆಯ ಓಟ ಮುಂದುವರಿಸಿದೆ.

Stock Market Updates: ಹಬ್ಬದ ಉತ್ಸಾಹದಲ್ಲಿ ಷೇರುಪೇಟೆ, ನಾಲ್ಕನೇ ದಿನವೂ ಗಳಿಕೆಯ ಓಟ
ಸಾಂದರ್ಭಿಕ ಚಿತ್ರ
TV9 Web
| Updated By: Ganapathi Sharma|

Updated on:Oct 19, 2022 | 11:09 AM

Share

ನವದೆಹಲಿ: ಹಬ್ಬದ (Festival) ಉತ್ಸಾಹದಲ್ಲಿರುವ (Diwali) ಭಾರತೀಯ ಷೇರುಪೇಟೆ (Stock Market) ಸತತ ನಾಲ್ಕನೇ ದಿನವೂ ಗಳಿಕೆಯ ಓಟ ಮುಂದುವರಿಸಿದೆ. ಅಮೆರಿಕದ ಮಾರುಕಟ್ಟೆಯಲ್ಲಿನ ಬೆಳವಣಿಗೆಗಳು ಹಾಗೂ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಿಂದಾಗಿ ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ಕಂಡುಬಂದಿದೆ. ಬುಧವಾರ ಬೆಳಿಗ್ಗೆ 9.44ರ ವೇಳೆಗೆ ಸೆನ್ಸೆಕ್ಸ್ 313.17 ಅಂಶ ಚೇತರಿಸಿ 59,273.77 ರಲ್ಲಿ ವಹಿವಾಟು ನಡೆಸಿತು. ನಿಫ್ಟಿ 89.05 (ಶೇಕಡಾ 0.51) ರ ಏರಿಕೆ ಕಂಡು 17,576.00ರಲ್ಲಿ ವಹಿವಾಟು ನಡೆಸಿತು.

‘ಅಮೆರಿಕದ ಮಾರುಕಟ್ಟೆಯಲ್ಲಿ ನಿನ್ನೆಯ ವಹಿವಾಟು ಸಕಾರಾತ್ಮಕವಾಗಿ ಕೊನೆಗೊಂಡಿತ್ತು. ಕಾರ್ಪೊರೇಟ್ ಗಳಿಕೆಯು ಈ ವಾರದ ವಹಿವಾಟಿಗೆ ಪೂರಕವಾಗಿ ಪರಿಣಮಿಸಿದೆ. ಏಷ್ಯಾದ ಮಾರುಕಟ್ಟೆಗಳಲ್ಲಿ ಸಕಾರಾತ್ಮಕ ವಹಿವಾಟು ನಡೆಯುತ್ತಿದೆ’ ಎಂದು ಹೆಮ್ ಸೆಕ್ಯೂರಿಟೀಸ್​ನ ಮುಖ್ಯಸ್ಥ, ಫಂಡ್ ಮ್ಯಾನೇಜರ್ ಮೋಹಿತ್ ನಿಗಮಗ ಹೇಳಿದ್ದಾರೆ.

ಇದನ್ನೂ ಓದಿ: Stock Market Today: ಸೆನ್ಸೆಕ್ಸ್ 550 ಅಂಶ ಚೇತರಿಕೆ, 17,486ರಲ್ಲಿ ವಹಿವಾಟು ಮುಗಿಸಿದ ನಿಫ್ಟಿ

ಇದನ್ನೂ ಓದಿ
Image
Petrol Price on October 19: ನಿಮ್ಮ ನಗರದಲ್ಲಿ ಇಂದು ಪೆಟ್ರೋಲ್, ಡೀಸೆಲ್ ಬೆಲೆ ಎಷ್ಟಿದೆ?; ಇಲ್ಲಿದೆ ಮಾಹಿತಿ
Image
Gold Price Today: ಚಿನ್ನದ ದರ 40 ರೂಪಾಯಿ ಇಳಿಕೆ, ಬೆಳ್ಳಿ ದರವೂ ಕುಸಿತ
Image
Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್
Image
SBI Interest Rate Hike: ಉಳಿತಾಯ ಖಾತೆ ಬಡ್ಡಿ ದರ ಹೆಚ್ಚಿಸಿದ ಎಸ್​ಬಿಐ

ಗೋಧಿ ಸೇರಿದಂತೆ ಆರು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಿದ ಕೇಂದ್ರ ಸರ್ಕಾರದ ನಿರ್ಧಾರದಿಂದ ಕೃಷಿ ಕ್ಷೇತ್ರಕ್ಕೆ ಉತ್ತೇಜನ ದೊರೆಯಲಿದೆ. ಇದೂ ಸಹ ಮಾರುಕಟ್ಟೆ ಮೇಲೆ ಪರಿಣಾಮ ಬೀರಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

2023-24 ರ ಹಣಕಾಸು ವರ್ಷದಲ್ಲಿ ಎಲ್ಲಾ ರಾಬಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸುವ ಪ್ರಸ್ತಾವನೆಗೆ ಕೇಂದ್ರ ಸಂಪುಟ ಮಂಗಳವಾರ ಅನುಮೋದನೆ ನೀಡಿತ್ತು. ಪ್ರತಿ ಕ್ವಿಂಟಾಲ್‌ಗೆ 500 ರೂ.ವರೆಗೆ ಗರಿಷ್ಠ ಹೆಚ್ಚಳವನ್ನು ಅನುಮೋದಿಸಲಾಗಿದೆ ಎಂದು ಕೇಂದ್ರ ಸಚಿವ ಅನುರಾಗ್ ಠಾಕೂರ್ ಮಾಹಿತಿ ನೀಡಿದ್ದರು.

ದೀಪಾವಳಿ ಸೀಸನ್​ನಲ್ಲಿ ಅಪೋಲೊ ಹಾಸ್ಪಿಟಲ್, ಅವೆನ್ಯೂ ಸೂಪರ್​ಮಾರ್ಟ್, ಭಾರ್ತಿ ಏರ್​ಟೆಲ್, ಐಸಿಐಸಿಐ ಬ್ಯಾಂಕ್, ಮಹೀಂದ್ರಾ & ಮಹೀಂದ್ರಾ ಲಾರ್ಜ್ ಕ್ಯಾಪ್ ಷೇರುಗಳನ್ನು ಖರೀದಿಸಬಹುದು ಎಂದು ಪ್ರಭುದಾಸ್ ಲಿಲ್ಲಾಧರ್ ಬ್ರೋಕರೇಜ್ ಸಂಸ್ಥೆ ಶಿಫಾರಸು ಮಾಡಿದೆ. ಮಿಡ್​​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ವಿಭಾಗದಲ್ಲಿ ಅಶೋಕ್ ಲೇಲ್ಯಾಂಡ್, ಚಂಬಲ್ ಫರ್ಟಿಲೈಸರ್ಸ್ ಆ್ಯಂಡ್ ಕೆಮಿಕಲ್ಸ್, ಫೆಡರಲ್ ಬ್ಯಾಂಕ್, ಜುಬಿಲಿಯೆಂಟ್ ಇನ್​ಗ್ರೇವಿಯಾ, ವಿಐಪಿ ಇಂಡಸ್ಟ್ರೀಸ್, ವೆಸ್ಟ್​ಲೈಫ್ ಡೆವಲಪ್​ಮೆಂಟ್ ಷೇರುಗಳನ್ನು ಸಂಸ್ಥೆ ಶಿಫಾರಸು ಮಾಡಿದೆ.

ಮಂಗಳವಾರದ ವಹಿವಾಟಿನ ಅಂತ್ಯದಲ್ಲಿ ಬಿಎಸ್​ಇ 549.62 ಅಂಶ ಚೇತರಿಕೆಯೊಂದಿಗೆ 58,960.60ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ ಸತತ ಮೂರನೇ ದಿನ ಉತ್ತಮ ವಹಿವಾಟು ದಾಖಲಿಸಿ ಶೇಕಡಾ 1ರ ಚೇತರಿಕೆ ಕಂಡಿತ್ತು. 175.15 ಅಂಶ ಚೇತರಿಕೆಯೊಂದಿಗೆ 17,486.95ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:08 am, Wed, 19 October 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ