AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rupee Value: ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, ಡಾಲರ್ ಎದುರು 82.95ಕ್ಕೆ ಇಳಿಕೆ

ಅಮೆರಿಕನ್ ಡಾಲರ್ ವಿರುದ್ಧ ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ ಕಂಡಿದೆ. ಬುಧವಾರದ ವಹಿವಾಟು ಮುಕ್ತಾಯದ ವೇಳೆಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 82.95ಕ್ಕೆ ಇಳಿಕೆಯಾಗಿದೆ.

Rupee Value: ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ, ಡಾಲರ್ ಎದುರು 82.95ಕ್ಕೆ ಇಳಿಕೆ
ಸಾಂದರ್ಭಿಕ ಚಿತ್ರImage Credit source: Reuters
TV9 Web
| Updated By: Ganapathi Sharma|

Updated on: Oct 19, 2022 | 4:10 PM

Share

ನವದೆಹಲಿ: ಅಮೆರಿಕನ್ ಡಾಲರ್ (US Dollar) ವಿರುದ್ಧ ರೂಪಾಯಿ ಮೌಲ್ಯ (Rupee Value) ಸಾರ್ವಕಾಲಿಕ ಕುಸಿತ ಕಂಡಿದೆ. ಬುಧವಾರದ ವಹಿವಾಟು ಮುಕ್ತಾಯದ ವೇಳೆಗೆ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 82.95ಕ್ಕೆ ಇಳಿಕೆಯಾಗಿದೆ. ಈ ಹಿಂದಿನ ಸೆಷನ್​ಗಳಲ್ಲಿ ತುಸು ಗಳಿಕೆ ಕಂಡುಬಂದಿದ್ದರೂ ಕೊನೆಯಲ್ಲಿ ಮೌಲ್ಯ ತೀವ್ರ ಕುಸಿತ ಕಂಡಿತು. ಪರಿಣಾಮವಾಗಿ ಹಣದುಬ್ಬರ (Inflation) ಇನ್ನಷ್ಟು ಏರಿಕೆ, ಕೇಂದ್ರೀಯ ಬ್ಯಾಂಕ್​ಗಳಿಂದ (Central Banks) ರೆಪೊ ದರ (Repo Rate) ಹೆಚ್ಚಳ ಸೇರಿದಂತೆ ಇತರ ಕಠಿಣ ಕ್ರಮಗಳನ್ನು ನಿರೀಕ್ಷಿಸಲಾಗಿದೆ.

82.3062ರಲ್ಲಿ ವಹಿವಾಟು ಆರಂಭಿಸಿದ್ದ ರೂಪಾಯಿ ಹಿಂದೆಂದಿಗಿಂತಲೂ ಹೆಚ್ಚಿನ ಕುಸಿತ ದಾಖಲಿಸಿದೆ. 82.36ಕ್ಕೆ ಇಳಿಕೆಯಾಗಿದ್ದು ರೂಪಾಯಿ ಮೌಲ್ಯದ ಈ ಹಿಂದಿನ ಗರಿಷ್ಠ ಕುಸಿತವಾಗಿತ್ತು.

ಇದನ್ನೂ ಓದಿ: Crude oil Price: ಬೇಡಿಕೆ ಕುಸಿತ, ಕಚ್ಚಾ ತೈಲ ಬೆಲೆ ಇಳಿಕೆ

ಇದನ್ನೂ ಓದಿ
Image
Nestle India Q3 Results: ನೆಸ್ಲೆ ಇಂಡಿಯಾ ನಿವ್ವಳ ಲಾಭದಲ್ಲಿ 8% ಏರಿಕೆ, ಮಾರಾಟದಲ್ಲಿ 5 ವರ್ಷಗಳ ಗರಿಷ್ಠ ಸಾಧನೆ
Image
ಅವಧಿಯೊಳಗೆ ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಮಾಡದಿದ್ದರೆ ಏನೆಲ್ಲ ತೊಂದರೆ? ಇಲ್ಲಿದೆ ಮಾಹಿತಿ
Image
IRCTC Tickets On EMI: ರೈಲ್ವೆಯಿಂದ ಹೊಸ ಕೊಡುಗೆ, ಈಗಲೇ ಪ್ರಯಾಣಿಸಿ, ನಂತರ ಪಾವತಿ ಮಾಡಿ
Image
Microsoft: ಆರ್ಥಿಕ ಸಂಕಷ್ಟ, ಸಾವಿರ ಉದ್ಯೋಗಿಗಳನ್ನು ವಜಾಗೊಳಿಸಿದ ಮೈಕ್ರೋಸಾಫ್ಟ್

‘ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಾಲರ್​ಗಳನ್ನು ಕರೆನ್ಸಿ ಫ್ಯೂಚರ್ಸ್ ಆಗಿ ಖರೀದಿಸುವ ಸಾಧ್ಯತೆಗಳೊಂದಿಗೆ ರೂಪಾಯಿ ಮೌಲ್ಯವನ್ನು 82.40ರಲ್ಲಿ ಕಾಯ್ದುಕೊಳ್ಳಬಹುದು ಎಂದು ಮಂಗಳವಾರ ನಿರೀಕ್ಷಿಸಲಾಗಿತ್ತು. ಆದರೆ ಸದ್ಯದ ಪರಿಸ್ಥಿತಿ ಗಮನಿಸಿದರೆ ಭಾರತದ ಕರೆನ್ಸಿ ಮೌಲ್ಯ 83.50ರ ವರೆಗೂ ಕುಸಿಯುವ ಸಾಧ್ಯತೆ ಇದ್ದು, 83ರ ಮೌಲ್ಯ ಕಾಯ್ದುಕೊಳ್ಳುವ ಗುರಿ ಹಾಕಿಕೊಳ್ಳಬಹುದು’ ಎಂದು ಫಿನ್​ರೆಕ್ಸ್ ಟ್ರಷರಿ ಅಡ್ವೈಸರ್ಸ್ ಮುಖ್ಯ ಖಜಾಂಚಿ ಅನಿಲ್ ಕುಮಾರ್ ಬನ್ಸಾಲಿ ಅಭಿಪ್ರಾಯಪಟ್ಟಿದ್ದಾರೆ.

ಡಾಲರ್​ಗೆ ಬೇಡಿಕೆ ರೂಪಾಯಿ ಕುಸಿತಕ್ಕೆ ಕಾರಣ:

ಎರಡು ಸರ್ಕಾರಿ ಸ್ವಾಮ್ಯದ ಉದ್ಯಮಗಳು ಡಾಲರ್​ಗೆ ಗಮನಾರ್ಹ ಬೇಡಿಕೆ ಇಟ್ಟಿದ್ದು ಕೂಡ ರೂಪಾಯಿ ಮೌಲ್ಯ ಸಾರ್ವಕಾಲಿಕ ಮಟ್ಟಕ್ಕೆ ಕುಸಿಯಲು ಕಾರಣ ಎಂದು ಎರಡು ಖಾಸಗಿ ಬ್ಯಾಂಕ್​ಗಳ ಟ್ರೇಡರ್​ಗಳು ಅಭಿಪ್ರಾಯಪಟ್ಟಿದ್ದಾರೆ.

ಮಂಗಳವಾರ 82.36ರ ಮೌಲ್ಯ ಹೊಂದಿದ್ದ ರೂಪಾಯಿ 82ರ ಸನಿಹಕ್ಕೆ ಬರುವ ಆಶಾವಾದ ಮೂಡಿಸಿತ್ತು. ಆದರೆ, ಮತ್ತೆ ನಿರಾಸೆ ಮೂಡಿಸಿದೆ. ಮಂಗಳವಾರದ ವಹಿವಾಟಿನಲ್ಲೇ ರೂಪಾಯಿ ಕುಸಿಯುವ ಸುಳಿವು ಕಂಡುಬಂದಿತ್ತು ಎಂದು ಮುಂಬೈ ಮೂಲದ ಬ್ಯಾಂಕ್​ನ ಟ್ರೇಡರ್ ಒಬ್ಬರು ‘ರಾಯಿಟರ್ಸ್’ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ತೈಲ ನಿಗಮಗಳಂಥ ಆಮದುದಾರರು ಡಾಲರ್​ಗೆ ಬೇಡಿಕೆ ಇಟ್ಟಿದ್ದೇ ರೂಪಾಯಿ ಕುಸಿತಕ್ಕೆ ಕಾರಣ ಎಂದು ಇನ್ನೂ ಕೆಲವು ಮಂದಿ ಟ್ರೇಡರ್​ಗಳು ಹೇಳಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಹಾಲು ಹಾಕುವ ಮುನ್ನ ಹಾಲಿನ ಪಾತ್ರೆಗೆ ಎಂಜಲು ಉಗುಳಿದ ವ್ಯಾಪಾರಿ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭಾರತದ ಪ್ರಧಾನಿ ಮೋದಿಯನ್ನು ತಬ್ಬಿ ಸ್ವಾಗತಿಸಿದ ಅರ್ಜೆಂಟಿನಾ ಅಧ್ಯಕ್ಷ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಭತ್ತದ ಗಿಡ ನೆಟ್ಟು ಗಮನಸೆಳೆದ ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮದುವೆಯಾಗದೆ ಗರ್ಭಿಣಿ, ಭಾವನ ರಾಮಣ್ಣ ತಂದೆ ಪ್ರತಿಕ್ರಿಯೆ ಏನಿತ್ತು?
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಮತ್ತೊಮ್ಮೆ ಬ್ಯಾಟ್ ಕೈಬಿಟ್ಟ ರಿಷಭ್ ಪಂತ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ಹತ್ತು ನಿಮಿಷಗಳಲ್ಲಿ ಅನುಮತಿ ತರುತ್ತೇನೆಂದವರು ಯಾಕೆ ಸುಮ್ಮನಿದ್ದಾರೆ?ಸುರೇಶ್
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ನನ್ನದು ಶಿಸ್ತು ಬದ್ಧ ಬದುಕು, ಊಟದಲ್ಲಿ ಬಹಳ ಕಟ್ಟುನಿಟ್ಟು: ಭಾವನಾ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಕುಸಿತ
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ಕುಮಾರಸ್ವಾಮಿ ಕುರಿತ ಪ್ರಶ್ನೆಯನ್ನು ಶಿವಕುಮಾರ್ ಅಸಡ್ಡೆ ಮಾಡಿದರು!
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ
ವಿಡಿಯೋ: ಪೊಲೀಸರೆದುರೇ ಗಾಳಿಯಲ್ಲಿ ಗುಂಡು ಹಾರಿಸಿದ ರಮೇಶ್ ಜಾರಕಿಹೊಳಿ ಪುತ್ರ