Sign In

By signing in or creating an account, you agree with Associated Broadcasting Company's Terms & Conditions and Privacy Policy.

ಯುಎಸ್ ಡಾಲರ್​ ಎದುರು ದಾಖಲೆಯ ಮಟ್ಟಕ್ಕೆ ಕುಸಿದ ಭಾರತೀಯ ರೂಪಾಯಿ ಮೌಲ್ಯ

Rupee Value - ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿಯು ಮೌಲ್ಯವು ಯುಎಸ್ ಡಾಲರ್ ಎದುರು ನಿರ್ಣಾಯಕವಾದ 80ರ ಅಂಕವನ್ನು ದಾಟುವ ಮೂಲಕ ಸಾರ್ವಕಾಲಿಕ ಕನಿಷ್ಠವಾದ 80.11 ಅನ್ನು ತಲುಪಿತು.

ಯುಎಸ್ ಡಾಲರ್​ ಎದುರು ದಾಖಲೆಯ ಮಟ್ಟಕ್ಕೆ ಕುಸಿದ ಭಾರತೀಯ ರೂಪಾಯಿ ಮೌಲ್ಯ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Digi Tech Desk

Updated on:Aug 29, 2022 | 2:16 PM

ನವದೆಹಲಿ: ಸೋಮವಾರದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿಯು ಮೌಲ್ಯವು ಯುಎಸ್ ಡಾಲರ್ ಎದುರು ನಿರ್ಣಾಯಕವಾದ 80ರ ಅಂಕವನ್ನು ದಾಟಿ ಸಾರ್ವಕಾಲಿಕ ಕನಿಷ್ಠವಾದ 80.11 ಅನ್ನು ತಲುಪಿತು. ಶುಕ್ರವಾರ ಯುಎಸ್ ಡಾಲರ್ ಎದುರು 79.87ಕ್ಕೆ ತಲುಪಿದ್ದ ಭಾರತದ ರೂಪಾಯಿ ಮೌಲ್ಯವು ಸೋಮವಾರ ಬೆಳಿಗ್ಗೆ 10.43ಕ್ಕೆ ರೂಪಾಯಿಯು 80.020 ಕ್ಕೆ ವಹಿವಾಟು ನಡೆಸಿತು. ಅಮೆರಿಕನ್ ಡಾಲರ್ ಬಹುತೇಕ ಎಲ್ಲಾ ದೇಶಗಳ ಮೀಸಲು ಕರೆನ್ಸಿಯಾಗಿರುವುದರಿಂದ ಇತರ ಕರೆನ್ಸಿಗಳಿಗೆ ಹಾನಿಕಾರಕವಾಗಿದೆ, ವಿಶೇಷವಾಗಿ ಹಣಕಾಸು ಮಾರುಕಟ್ಟೆಗಳಲ್ಲಿ ತೀಕ್ಷ್ಣವಾದ ಚಂಚಲತೆಯ ಸಮಯದಲ್ಲಿ ಇದು ಪೀರ್ ಕರೆನ್ಸಿಗಳನ್ನು ದುರ್ಬಲಗೊಳಿಸುತ್ತದೆ. ಜುಲೈ ತಿಂಗಳ ಮಧ್ಯದಲ್ಲಿ ರೂಪಾಯಿ ಮೌಲ್ಯವು 80 ಕ್ಕಿಂತ ಕಡಿಮೆಯಿತ್ತು. “ಹಣದುಬ್ಬರದ ವಿರುದ್ಧದ ಹೋರಾಟವು ಭವಿಷ್ಯದಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ಅಲ್ಲದೆ ದರ ಏರಿಕೆಯು ರೂಪಾಯಿ ಮತ್ತು ಇತರ ಉದಯೋನ್ಮುಖ ಮಾರುಕಟ್ಟೆಗಳ ಕರೆನ್ಸಿಗಳ ಮೇಲೆ ಒತ್ತಡವನ್ನು ಉಂಟುಮಾಡುವ ನಿರೀಕ್ಷೆಯಿದೆ” ಎಂದು ಸ್ವಸ್ತಿಕ ಇನ್ವೆಸ್ಟ್‌ಮಾರ್ಟ್‌ನ ಸಂಶೋಧನಾ ಮುಖ್ಯಸ್ಥ ಸಂತೋಷ್ ಮೀನಾ ಹೇಳಿದರು.

ವ್ಯೋಮಿಂಗ್‌ನ ಜಾಕ್ಸನ್ ಹೋಲ್‌ನಲ್ಲಿ ನಡೆದ ಕೇಂದ್ರೀಯ ಬ್ಯಾಂಕಿಂಗ್ ಸಮ್ಮೇಳನದಲ್ಲಿ ಮಾತನಾಡಿದ ಫೆಡರಲ್ ರಿಸರ್ವ್ ಅಧ್ಯಕ್ಷ ಜೆರೋಮ್ ಪೊವೆಲ್, ಹಣದುಬ್ಬರ ನಿಯಂತ್ರಣಕ್ಕೆ ಬರುವ ಮೊದಲು ಯುಎಸ್ ಆರ್ಥಿಕತೆಗೆ ಬಿಗಿಯಾದ ವಿತ್ತೀಯ ನೀತಿಯ ಅಗತ್ಯವಿದೆ ಎಂದು ಹೇಳಿದರು. ಫೆಡರಲ್ ಓಪನ್ ಮಾರ್ಕೆಟ್ ಕಮಿಟಿಯ (FOMC) ಮುಖ್ಯ ಗಮನವು ಇದೀಗ ಹಣದುಬ್ಬರವನ್ನು 2 ಶೇಕಡಾ ಗುರಿಗೆ ತರುವುದಾಗಿದೆ. ನಾಲ್ಕು ದಶಕಗಳ ಅಧಿಕ ಹಣದುಬ್ಬರದ ಹಿನ್ನೆಲೆಯಲ್ಲಿ US ಫೆಡರಲ್ ಓಪನ್ ಮಾರ್ಕೆಟ್ ಕಮಿಟಿಯು ಜುಲೈ ಅಂತ್ಯದಲ್ಲಿ ತನ್ನ ಪ್ರಮುಖ ನೀತಿ ಬಡ್ಡಿ ದರವನ್ನು 75 ಬೇಸಿಸ್ ಪಾಯಿಂಟ್‌ಗಳಿಂದ 2.25-2.50 ಶೇಕಡಾಕ್ಕೆ ಏರಿಸಿತು. ಬಡ್ಡಿದರಗಳನ್ನು ಏರಿಸುವುದರಿಂದ ಸಾಮಾನ್ಯವಾಗಿ ಆರ್ಥಿಕತೆಯಲ್ಲಿ ಬೇಡಿಕೆಯನ್ನು ತಂಪಾಗಿಸುತ್ತದೆ, ಇದರಿಂದಾಗಿ ಹಣದುಬ್ಬರ ದರಕ್ಕೆ ಬ್ರೇಕ್ ಹಾಕಿದಂತಾಗುತ್ತದೆ.

ಏತನ್ಮಧ್ಯೆ, ಇಂದು ಬೆಳಿಗ್ಗೆ ಭಾರತೀಯ ಷೇರುಗಳು ತೀವ್ರವಾಗಿ ಕುಸಿತುಗೊಂಡವು. ಆರಂಭಿಕ ವಹಿವಾಟಿನ ಕೆಲವು ನಷ್ಟಗಳನ್ನು ಪರಿಷ್ಕರಿಸಿ ಸೆನ್ಸೆಕ್ಸ್ ಮತ್ತು ನಿಫ್ಟಿ ಪ್ರಸ್ತುತ ಶುಕ್ರವಾರದ ಮುಕ್ತಾಯದಿಂದ ಶೇಕಡಾ 1.5 ರಷ್ಟು ಕಡಿಮೆ ವಹಿವಾಟು ನಡೆಸುತ್ತಿವೆ. ಸೋಮವಾರದಂದು ದೇಶೀಯ ಚಿನ್ನವು ದುರ್ಬಲವಾಗಿ ವ್ಯಾಪಾರ ಮಾಡಿತು, ಬಲವಾದ ಯುಎಸ್ ಡಾಲರ್ ಮತ್ತು ಹಾಕಿಶ್ ಯುಎಸ್​ ಫೆಡ್​ನ ವಿತ್ತೀಯ ನೀತಿಯ ನಿಲುವಿನಿಂದ ಒತ್ತಡಕ್ಕೆ ಒಳಗಾಯಿತು.

ಮತ್ತಷ್ಟು ವಾಣಿಜ್ಯ ಸುದ್ದಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:14 pm, Mon, 29 August 22

ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಪಹಲ್ಗಾಮ್​ ಭೂಲೋಕದ ಸ್ವರ್ಗ ಎನ್ನುವುದ್ಹೇಕೆ? ಈ ವಿಡಿಯೋ ನೋಡಿ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಮಂಜುನಾಥ್ ಪಾರ್ಥೀವ ಶರೀರ ಬೆಳಗಿನ ಜಾವ 3 ಗಂಟೆಗೆ ಬೆಂಗಳೂರು ಬರುವ ನಿರೀಕ್ಷೆ
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಉಗ್ರರ ಅಟ್ಟಹಾಸದಿಂದ ರಕ್ತಪಾತವಾದ ಪಹಲ್ಗಾಮ್ ಈಗ ಹೇಗಿದೆ ನೋಡಿ...
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಕಾಶ್ಮೀರದ ಉಗ್ರರ ದಾಳಿ ಬಗ್ಗೆ ಅಮೆರಿಕ ಉಪಾಧ್ಯಕ್ಷ ವ್ಯಾನ್ಸ್ ಹೇಳಿದ್ದೇನು?
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಬಿಜೆಪಿಯಿಂದ ಹೊರಬಿದ್ದ ಬಳಿಕ ಜನಪ್ರಿಯತೆ ಹೆಚ್ಚುತ್ತಾ ಸಾಗಿದೆ: ಯತ್ನಾಳ್
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಉಗ್ರರಿಗೆ ಪಾಕಿಸ್ತಾನ ತರಬೇತಿ ನೀಡುತ್ತಿರೋದನ್ನು ಖಂಡಿಸಬೇಕು: ಹರಿಪ್ರಸಾದ್​​
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್ ದಾಳಿ: ಹುಟ್ಟುಹಬ್ಬ ಆಚರಣೆ ರದ್ದು ಮಾಡಿದ ಯುವ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಪಹಲ್ಗಾಮ್‌ ಉಗ್ರರ ದಾಳಿಯಿಂದ ಗ್ರೇಟ್​ ಎಸ್ಕೆಪ್​ ಆದ ಬಾಗಲಕೋಟೆಯ 13 ಮಂದಿ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಉಗ್ರರ ದಾಳಿಗೆ ಬಲಿಯಾದ ಲೆ. ವಿನಯ್ ನರ್ವಾಲ್​ಗೆ ಪತ್ನಿಯಿಂದ ಭಾವುಕ ವಿದಾಯ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ
ಈಗ ಮತಾಂತರ ಮಾಡಲಾಗಲ್ಲ, ಹಾಗಾಗೇ ಮುಸ್ಲಿಮೇತರರನ್ನು ಕೊಲ್ಲೋದು: ರವಿ