ಶೇ. 19ಕ್ಕೆ ಬಡ್ಡಿದರ ಹೆಚ್ಚಿಸಿದ ರಷ್ಯಾ ಸೆಂಟ್ರಲ್ ಬ್ಯಾಂಕ್; ಹಣದುಬ್ಬರ ನಿಯಂತ್ರಣಕ್ಕೆ ಕ್ರಮ

Russia's fight against inflation: ರಷ್ಯಾದ ಸೆಂಟ್ರಲ್ ಬ್ಯಾಂಕ್ ಹಣದುಬ್ಬರ ಏರಿಕೆಗೆ ಕಡಿವಾಣ ಹಾಕಲು ಬಡ್ಡಿದರವನ್ನು ಒಂದು ಪ್ರತಿಶತದಷ್ಟು ಏರಿಸಿದೆ. ಶೇ. 18ರಷ್ಟಿದ್ದ ಬಡ್ಡಿದರ ಶೇ. 19ಕ್ಕೆ ಏರಿಕೆ ಆಗಿದೆ. ಉಕ್ರೇನ್ ಯುದ್ಧ, ಸರಕು ಮತ್ತು ಸೇವೆಗಳ ಸರಬರಾಜು ಕುಂಠಿತಗೊಂಡಿದ್ದು ಅಲ್ಲಿ ಬೆಲೆ ಏರಿಕೆಗೆ ಕಾರಣವಾಗಿದೆ. ಹಣದುಬ್ಬರ ದರ ಶೇ. 9ಕ್ಕಿಂತಲೂ ಹೆಚ್ಚಿದೆ. ಆದಾಗ್ಯೂ ಆರ್ಥಿಕತೆ ಬೆಳವಣಿಗೆ ಹೊಂದುವುದು ಮಾತ್ರ ನಿಂತಿಲ್ಲ.

ಶೇ. 19ಕ್ಕೆ ಬಡ್ಡಿದರ ಹೆಚ್ಚಿಸಿದ ರಷ್ಯಾ ಸೆಂಟ್ರಲ್ ಬ್ಯಾಂಕ್; ಹಣದುಬ್ಬರ ನಿಯಂತ್ರಣಕ್ಕೆ ಕ್ರಮ
ರಷ್ಯಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Sep 15, 2024 | 10:01 AM

ಮಾಸ್ಕೋ, ಸೆಪ್ಟೆಂಬರ್ 15: ರಷ್ಯಾ ದೇಶದಲ್ಲಿ ಹಣದುಬ್ಬರ ಏರುತ್ತಿದ್ದು, ಈ ಬೆಲೆ ಏರಿಕೆ ನಿಯಂತ್ರಿಸಲು ಅಲ್ಲಿನ ಸೆಂಟ್ರಲ್ ಬ್ಯಾಂಕ್ ತನ್ನ ಬಡ್ಡಿದರಗಳನ್ನು ಹೆಚ್ಚಿಸಿದೆ. ಇದರಿಂದಾಗಿ ಬಡ್ಡಿದರ ಶೇ. 18 ರಿಂದ ಶೇ. 19ಕ್ಕೆ ಹೆಚ್ಚಳವಾಗಿದೆ. ಉಕ್ರೇನ್ ಮೇಲೆ ಯುದ್ಧಕ್ಕೆ ನಿಂತಾಗಿನಿಂದ ರಷ್ಯಾದಲ್ಲಿ ಬೆಲೆ ಏರಿಕೆ ತಲೆನೋವು ತೀವ್ರವಾಗಿ ಕಾಡತೊಡಗಿದೆ. ಮಿಲಿಟರಿಗಾಗಿ ಹೆಚ್ಚಿನ ಹಣ ವ್ಯಯವಾಗುತ್ತಿದೆ. ಸರಕು ಮತ್ತು ಸೇವೆಗಳ ಸರಬರಾಜು ವ್ಯವಸ್ಥೆ ಕುಂಠಿತಗೊಂಡಿವೆ. ಈ ಅಂಶಗಳು ಹಣದುಬ್ಬರ ಏರಿಕೆಗೆ ಪ್ರಮುಖ ಕಾರಣಗಳಾಗಿವೆ.

ಸದ್ಯ ರಷ್ಯಾದಲ್ಲಿ ಹಣದುಬ್ಬರ ದರ ಶೇ. 9.1ರಷ್ಟಿದೆ. 2025ರಷ್ಟರಲ್ಲಿ ಇದನ್ನು ಶೇ. 4ಕ್ಕೆ ಇಳಿಸಬೇಕೆಂಬುದು ಸೆಂಟ್ರಲ್ ಬ್ಯಾಂಕ್ ಗುರಿಯಾಗಿದೆ. ಒಂದೂವರೆ ವರ್ಷದಲ್ಲಿ ಈ ಗುರಿ ಸಾಧನೆಗೆ ಬಡ್ಡಿದರಗಳನ್ನು ಇನ್ನಷ್ಟು ಹೆಚ್ಚಿಸಲು ಸಿದ್ಧ ಇರುವುದಾಗಿ ಅದು ಹೇಳಿದೆ. ಇದರೊಂದಿಗೆ ರಷ್ಯಾದಲ್ಲಿ ಬ್ಯಾಂಕ್ ದರಗಳು ಶೇ. 23ರವರೆಗೆ ಹೋದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಇದನ್ನೂ ಓದಿ: ಫಾರೆಕ್ಸ್ ರಿಸರ್ವ್ಸ್ ಸಾರ್ವಕಾಲಿಕ ದಾಖಲೆಯಾದ 689 ಬಿಲಿಯನ್ ಡಾಲರ್ ಮಟ್ಟಕ್ಕೆ ಏರಿಕೆ

ಹಣದುಬ್ಬರ ಅಧಿಕ ಮಟ್ಟದಲ್ಲಿದ್ದರೂ ರಷ್ಯಾದ ಒಟ್ಟಾರೆ ಆರ್ಥಿಕತೆ ಇನ್ನೂ ಪತನದ ಹಾದಿ ಹಿಡಿದಿಲ್ಲ. ಅದರ ತೈಲ ಸರಬರಾಜು ಆರ್ಥಿಕತೆಯ ಕೈ ಹಿಡಿದಿದೆ. ಸಾಕಷ್ಟು ಆದಾಯವು ತೈಲ ಸರಬರಾಜು ಮೂಲಕ ಬರುತ್ತಿದೆ. ಹಾಗೆಯೇ, ಮಿಲಿಟರಿ ಸಂಬಂಧಿತ ಉತ್ಪನ್ನಗಳಿಗೆ ಸರ್ಕಾರ ಮಾಡುತ್ತಿರುವ ವೆಚ್ಚವೂ ಆರ್ಥಿಕತೆ ಕುಸಿಯದಂತೆ ನೋಡಿಕೊಳ್ಳುತ್ತಿದೆ ಎನ್ನಲಾಗುತ್ತಿದೆ.

ಆರ್ಥಿಕತೆ ಬೆಳವಣಿಗೆ ಹೊಂದುವುದು ನಿಂತಿಲ್ಲ ಕಾರಣಕ್ಕೆ ರಷ್ಯಾದ ಸೆಂಟ್ರಲ್ ಬ್ಯಾಂಕ್ ಬಡ್ಡಿದರ ಹೆಚ್ಚಳದ ಸಾಹಸಕ್ಕೆ ಕೈ ಹಾಕಿದೆ. ಜನರು ವೆಚ್ಚ ಮಾಡಲು ಹಿಂದೇಟು ಹಾಕಿದರೆ ಬೆಲೆ ಏರಿಕೆಗೆ ಕಡಿವಾಣ ಹಾಕಬಹುದು ಎಂಬುದು ಬಡ್ಡಿದರ ಏರಿಕೆಯ ಕ್ರಮದ ಹಿಂದಿರುವ ತಂತ್ರವಾಗಿದೆ.

ಇದನ್ನೂ ಓದಿ: ಲಂಡನ್​ನಲ್ಲಿ ಓದಲು ಹೋಗೋರು ಗಮನಿಸಿ, ಮಾಸಿಕ ಮೈಂಟೆನೆನ್ಸ್ ಫಂಡ್ 1.63 ಲಕ್ಷ ರೂಗೆ ಏರಿಕೆ

ಈ ತಂತ್ರವನ್ನೇ ಎಲ್ಲಾ ಸೆಂಟ್ರಲ್ ಬ್ಯಾಂಕುಗಳೂ ಉಪಯೋಗಿಸುತ್ತವೆ. ಭಾರತದಲ್ಲಿ 2022ರಲ್ಲಿ ಹಣದುಬ್ಬರ ಶೇ. 7ಕ್ಕಿಂತಲೂ ಹೆಚ್ಚಿನ ಮಟ್ಟದಲ್ಲಿತ್ತು. ಆರ್​ಬಿಐ ಸತತವಾಗಿ ಬಡ್ಡಿದರ ಹೆಚ್ಚಿಸುತ್ತಾ ಬಂದಿತು. ಶೇ. 6.5ರವರೆಗೂ ಬಡ್ಡಿದರ ಏರಿಕೆ ಆಯಿತು. ಹೆಚ್ಚೂಕಡಿಮೆ ಒಂದು ವರ್ಷದಿಂದಲೂ ಈ ಮಟ್ಟದಿಂದ ಬಡ್ಡಿದರ ಕೆಳಗೆ ಇಳಿದಿಲ್ಲ. ಹಣದುಬ್ಬರವು ನಿಗದಿತ ಗುರಿಯಾದ ಶೇ. 4ರ ಒಳಗೆ ಬಂದಿದೆ. ಮುಂದಿನ ದಿನಗಳಲ್ಲಿ ಆರ್​​ಬಿಐ ಬಡ್ಡಿದರ ಇಳಿಕೆ ಮಾಡುವ ಸಾಧ್ಯತೆ ದಟ್ಟವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು