RBI Rules: ಆಗಸ್ಟ್ 1ರಿಂದ ಭಾನುವಾರ, ಬ್ಯಾಂಕ್​ ರಜಾ ದಿನಗಳಲ್ಲೂ ಖಾತೆಗೆ ಜಮೆ ಆಗುತ್ತದೆ ವೇತನ, ಪೆನ್ಷನ್

| Updated By: Srinivas Mata

Updated on: Jun 04, 2021 | 7:06 PM

ಆಗಸ್ಟ್ 1, 2021ರಿಂದ ಅನ್ವಯ ಆಗುವಂತೆ ಭಾನುವಾರ, ಬ್ಯಾಂಕ್ ರಜಾ ದಿನಗಳಲ್ಲೂ ವೇತನ, ಪೆನ್ಷನ್ ಖಾತೆಗೆ ಬರುತ್ತದೆ. ಈ ಬಗ್ಗೆ ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಶುಕ್ರವಾರ ಘೋಷಣೆ ಮಾಡಿದ್ದಾರೆ.

RBI Rules: ಆಗಸ್ಟ್ 1ರಿಂದ ಭಾನುವಾರ, ಬ್ಯಾಂಕ್​ ರಜಾ ದಿನಗಳಲ್ಲೂ ಖಾತೆಗೆ ಜಮೆ ಆಗುತ್ತದೆ ವೇತನ, ಪೆನ್ಷನ್
ಸಾಂದರ್ಭಿಕ ಚಿತ್ರ
Follow us on

ಶೀಘ್ರದಲ್ಲೇ ವೇತನದಾರರಿಗೆ, ಪಿಂಚಣಿದಾರರಿಗೆ ತಮ್ಮ ಸಂಬಳ ಮತ್ತು ಪೆನ್ಷನ್ ಭಾನುವಾರಗಳಂದು ಅಥವಾ ಬ್ಯಾಂಕ್​ಗಳ ರಜಾ ದಿನಳಂದು ಸಹ ಬರಲಿದೆ. ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಶುಕ್ರವಾರ ಘೋಷಣೆ ಮಾಡಿರುವ ಪ್ರಕಾರ, ಈ ಸಾಧ್ಯತೆ ಬಹಳ ಇದೆ. ದ ನ್ಯಾಷನಲ್ ಆಟೋಮೆಟೆಡ್ ಕ್ಲಿಯರಿಂಗ್ ಹೌಸ್ (NACH) ಪಾವತಿ ವ್ಯವಸ್ಥೆ ವರ್ಷದ ಎಲ್ಲ ದಿನವೂ ದೊರೆಯಲಿದೆ. ಈ ಹಿಂದೆ ಈ ವ್ಯವಸ್ಥೆ ಬ್ಯಾಂಕ್​ಗಳ ಕಾರ್ಯ ನಿರ್ವಹಿಸುವ ದಿನಗಳಲ್ಲಿ ಮಾತ್ರ ಲಭ್ಯ ಇದ್ದವು. ಆರ್​ಬಿಐ ಗವರ್ನರ್ ಶಕ್ತಿಕಾಂತ ದಾಸ್ ಅವರು ದ್ವೈಮಾಸಿಕ ಹಣಕಾಸು ನೀತಿ ಘೋಷಿಸುವ ಸಂದರ್ಭದಲ್ಲಿ ಈ ವಿಚಾರ ಪ್ರಸ್ತಾಪಿಸಿದ್ದಾರೆ. “ಗ್ರಾಹಕರ ಹಿತಾಸಕ್ತಿಯ ಅನುಕೂಲದಿಂದ ಮತ್ತು ವರ್ಷದ ಎಲ್ಲ ದಿನವೂ ಆರ್​ಟಿಜಿಎಸ್ ಲಭ್ಯ ಇರುವುದರ ಲಾಭವನ್ನು ಪಡೆಯುವ ಉದ್ದೇಶದಿಂದ, ವರ್ಷದ ಎಲ್ಲ ದಿನವೂ NACH ದೊರೆಯುವ ಪ್ರಸ್ತಾವ ಮಾಡಲಾಗಿದೆ,” ಎಂದು ಶಕ್ತಿಕಾಂತ ದಾಸ್ ಹೇಳಿದ್ದಾರೆ.

ಏನಿದು NACH ವ್ಯವಸ್ಥೆ?
NACH ಅಂದರೆ ಭಾರೀ ಪಾವತಿ ವ್ಯವಸ್ಥೆ. ಇದನ್ನು ಎನ್​ಪಿಸಿಐ ಆಪರೇಟ್ ಮಾಡುತ್ತದೆ. NACH ಪಾವತಿ ವ್ಯವಸ್ಥೆಯು ಒಬ್ಬರಿಂದ ಹಲವಾರು ಮಂದಿಗೆ ಕ್ರೆಡಿಟ್ ವರ್ಗಾಗವಣೆ ಅನುಕೂಲ ಮಾಡಿಕೊಡುತ್ತದೆ. ಡಿವಿಡೆಂಡ್ ಪಾವತಿ, ಬಡ್ಡಿ, ವೇತನ, ಪೆನ್ಷನ್ ಇಂಥವುಗಳ ಪಾವತಿಗೆ ಈ ವ್ಯವಸ್ಥೆ ಬಳಸಲಾಗುತ್ತದೆ. ಇದನ್ನು ಹೊರತುಪಡಿಸಿದರೆ ವಿದ್ಯುಚ್ಛಕ್ತಿ ಬಿಲ್, ಅನಿಲ, ಟೆಲಿಫೋನ್, ನೀರು, ಸಾಲದ ಕಂತು, ಮ್ಯೂಚವಲ್ ಫಂಡ್​ಗಳು, ಇನ್ಷೂರೆನ್ಸ್ ಪ್ರೀಮಿಯಂ ಸಂಗ್ರಹ ಮುಂತಾದವುಗಳಲ್ಲಿ NACH ಪಾವತಿ ವ್ಯವಸ್ಥೆ ಬಳಸುಸಲಾಗುತ್ತದೆ.

ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್​ಫರ್​ (ಡಿಬಿಟಿ) ಮೂಲಕ ದೊಡ್ಡ ಸಂಖ್ಯೆಯ ಫಲಾನುಭವಿಗಳಿಗೆ ಡಿಜಿಟಲ್ ರೂಪದಲ್ಲಿ ವರ್ಗಾವಣೆ ಆಗುವುದರಲ್ಲೂ ಈ NACH ಬಹಳ ಪ್ರಮುಖವಾದದ್ದು. ಇದರಿಂದಾಗಿಯೇ ಕೊರೊನಾ ಸಂದರ್ಭದಲ್ಲಿ ಸರಿಯಾದ ಸಮಯಕ್ಕೆ ಹಾಗೂ ಪಾರದರ್ಶಕವಾಗಿ ಸರ್ಕಾರದಿಂದ ಸಬ್ಸಿಡಿಯನ್ನು ವರ್ಗಾವಣೆ ಮಾಡಲು ಸಾಧ್ಯವಾಯಿತು.

ಸದ್ಯಕ್ಕೆ ಬ್ಯಾಂಕ್​ಗಳು ಕಾರ್ಯ ನಿರ್ವಹಿಸುವ ದಿನಗಳಲ್ಲಿ ಮಾತ್ರ NACH ವ್ಯವಸ್ಥೆ ಕೆಲಸ ಮಾಡುತ್ತಿದೆ. ಆಗಸ್ಟ್ 1, 2021ರಿಂದ ವಾರದ ಎಲ್ಲ ದಿನ, ವರ್ಷ ಪೂರ್ತಿ ಕಾರ್ಯ ನಿರ್ವಹಿಸುತ್ತದೆ ಎಂದು ಆರ್​ಬಿಐ ಹೇಳಿಕೆಯಲ್ಲಿ ತಿಳಿಸಿದೆ. ಇದರ್ಥ ಏನೆಂದರೆ, ಆಗಸ್ಟ್ 1ನೇ ತಾರೀಕಿನಿಂದ ಅನ್ವಯ ಆಗುವಂತೆ, ವೇತನ ಮತ್ತು ಪೆನ್ಷನ್ ಭಾನುವಾರ ಹಾಗೂ ಬ್ಯಾಂಕ್​ಗಳ ರಜಾ ದಿನಗಳಂದೂ ಖಾತೆಗೆ ಜಮೆ ಆಗಿಬಿಡುತ್ತದೆ.

ಇದನ್ನೂ ಓದಿ: RBI MPC: ಆರ್​ಬಿಐ ರೆಪೋ ದರ ಶೇ 4ರಲ್ಲಿ ಯಥಾ ಸ್ಥಿತಿ; ಬ್ಯಾಂಕ್ ಸಾಲದ ಮೇಲಿನ ಬಡ್ಡಿಯಲ್ಲಿ ಬದಲಾವಣೆಯಿಲ್ಲ

(Effect from August 1, 2021 pension and salary will be credited on Sunday and other holiday according to Reserve Bank Of India

Published On - 7:05 pm, Fri, 4 June 21