
ಬೆಂಗಳೂರು, ಫೆಬ್ರುವರಿ 10: ಭಾರತೀಯ ಭಾಷೆಗಳಲ್ಲಿ ಎಐ ಸೇವೆ ಒದಗಿಸಬೇಕು ಮತ್ತು ಜಾಗತಿಕ ಎಐ ಮಾಡಲ್ಗಳಿಗೆ ಯಾವುದರಲ್ಲೂ ಕಡಿಮೆ ಇರಬಾರದು, ಎನ್ನುವ ಸರ್ಕಾರದ ಆಶಯದಂತೆ ಸರ್ವಮ್ ಎಐ (Sarvam AI) ರೂಪುಗೊಳ್ಳುತ್ತಿದೆ. 2023ರಲ್ಲಿ ಶುರುವಾದ ಸರ್ವಮ್ ಎಐ ತನ್ನ ವಿವಿಧ ಲ್ಯಾಂಗ್ವೇಜ್ ಸೇವೆಗಳಿಂದ ಗಮನ ಸೆಳೆಯತೊಡಗಿದೆ. ವರ್ಷದ ಹಿಂದೆ ಎಐ ಮಾಡಲ್ಗಳನ್ನು ಬಿಡುಗಡೆ ಮಾಡಿದ್ದ ಸರ್ವಮ್ ಇದೀಗ ಎರಡು ಹೊಸ ಪ್ರಾಡಕ್ಟ್ಸ್ ಲಾಂಚ್ ಮಾಡಿದೆ. ಸರ್ವಮ್ ವಿಷನ್ ಮತ್ತು ಬುಲ್ಬುಲ್ ವಿ3 ಮಾಡಲ್ಗಳು ಬಿಡುಗಡೆ ಆಗಿವೆ.
ಈ ಎರಡೂ ಮಾಡಲ್ಗಳು ಚ್ಯಾಟ್ಜಿಪಿಟಿ ಮತ್ತು ಜೆಮಿನಿಯ ಅಡ್ವಾನ್ಸ್ಡ್ ವರ್ಷನ್ಗಳಿಗೆ ಪೈಪೋಟಿ ನೀಡುವಷ್ಟು ಉತ್ತಮ ಪ್ರದರ್ಶನ ತೋರುತ್ತಿವೆ. ಸರ್ವಮ್ ವಿಷನ್ ಮಾಡಲ್ ಭಾರತೀಯ ಭಾಷೆಗಳ ಡಾಕ್ಯುಮೆಂಟ್ಗಳನ್ನು ಸಂಸ್ಕರಿಸಬಲ್ಲುದು. ಬುಲ್ಬುಲ್ ವಿ3 ಮಾಡಲ್ ಪಠ್ಯವನ್ನು ಮಾತಿಗೆ ಪರಿವರ್ತಿಸಬಲ್ಲುದು. ಕನ್ನಡವೂ ಸೇರಿದಂತೆ ಹಲವು ಭಾರತೀಯ ಭಾಷೆಗಳಲ್ಲಿ ಇದರ ಸೇವೆ ಇದೆ. ಇದರ ಕನ್ನಡ ಸೇವೆ ಪರಿಶೀಲಿಸಿದಾಗ, ಅಪ್ಪಟ ಕನ್ನಡಿಗರ ಶೈಲಿಯಲ್ಲಿ ಓದಿದ ರೀತಿ ಭಾಸವಾಗಿದ್ದು ಹೌದು. ಈ ವಿಚಾರದಲ್ಲಿ ಚ್ಯಾಟ್ಜಿಟಿಪಿ, ಗೂಗಲ್ ಜೆಮಿನಿ, ಡೀಪ್ಸೀಕ್ ಇತ್ಯಾದಿ ಯಾವ ಮಾಡಲ್ಗಳು ಸಾಟಿ ಇಲ್ಲ ಎನ್ನಲಾಗತ್ತಿದೆ.
ಇದನ್ನೂ ಓದಿ: ಸರ್ವಮ್ ಎಐನಿಂದ ಹೊಸ ಮಾಡಲ್; ಡಾಕ್ಯುಮೆಂಟ್ ಇಂಟೆಲಿಜೆನ್ಸ್ನಲ್ಲಿ ವಿಶ್ವಲ್ಲೇ ಬೆಸ್ಟ್; ಕಟು ಟೀಕಾಕಾರರಿಗೂ ಅಚ್ಚರಿ
ಐಐಟಿ ಎಂಜಿನಿಯರುಗಳಾದ ವಿವೇಕ್ ರಾಘವನ್ ಮತ್ತು ಪ್ರತ್ಯುಶ್ ಕುಮಾರ್ ಅವರು 2023ರ ಆಗಸ್ಟ್ ತಿಂಗಳಲ್ಲಿ ಸರ್ವಮ್ ಎಐ ಅನ್ನು ಸ್ಥಾಪಿಸಿದ್ದಾರೆ. ಬೆಂಗಳೂರಿನಲ್ಲಿ ಇದರ ಕಚೇರಿ ಇರುವುದು. ಐಐಟಿ ಡೆಲ್ಲಿಯಲ್ಲಿ ಬಿಟೆಕ್, ಅಮೆರಿಕದ ಕಾರ್ನೇಜೀ ಮೆಲ್ಲೋನ್ ಯೂನಿವರ್ಸಿಟಿಯಲ್ಲಿ ಪಿಎಚ್ಡಿ ಮಾಡಿದ್ದಾರೆ.
ವಿವೇಕ್ ರಾಘವನ್ ಅವರು ಆಧಾರ್ ಪ್ರಾಜೆಕ್ಟ್ನಲ್ಲೂ ಭಾಗಿಯಾಗಿದ್ದಾರೆ. 2010ರಲ್ಲಿ ಆಧಾರ್ ಪ್ರೋಗ್ರಾಮ್ನಲ್ಲಿ ಚೀಫ್ ಬಯೋಮೆಟ್ರಿಕ್ ಆರ್ಕಿಟೆಕ್ಟ್ ಆಗಿ ಕೆಲಸ ಮಾಡಿದ್ದಾರೆ. ಆಧಾರ್ನ ಬಯೋಮೆಟ್ರಿಕ್ ಸಿಸ್ಟಂಗಳನ್ನು ಸಮರ್ಪಕವಾಗಿ ರೂಪಿಸುವುದರ ಹಿಂದೆ ಅವರ ಶ್ರಮ ಇದೆ.
ಇದನ್ನೂ ಓದಿ: ಹೊಸ ಇಪಿಎಫ್ಒ ಆ್ಯಪ್ನಲ್ಲಿ ಯುಪಿಐ ಮೂಲಕ ಹಣ ವಿತ್ಡ್ರಾಗೆ ಅವಕಾಶ?
2014ರಲ್ಲಿ ಪಿಎಚ್ಡಿ ಮಾಡಿರುವ ಪ್ರತ್ಯುಶ್ ಕುಮಾರ್ ಅವರು ಐಬಿಎಂನಲ್ಲಿ ಕೆಲಸ ಮಾಡಿದ್ದಾರೆ. ಒನ್ ಫೋರ್ತ್ ಲ್ಯಾಬ್ಸ್, ಎಐ4ಭಾರತ್ ಕಂಪನಿಗಳ ಸಹ-ಸಂಸ್ಥಾಪಕರಾಗಿದ್ದಾರೆ. ಆನ್ಲೈನ್ ಶಿಕ್ಷಣ ಒದಗಿಸುವ ಪಧ್ಎಐ ಅನ್ನೂ ಆರಂಭಿಸಿದ ಅನುಭವ ಅವರಿಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ