SBI Alert: ಮನೆಯಲ್ಲಿ ಕುಳಿತೇ ಎಸ್​ಬಿಐ ಎಟಿಎಂ ಕಾರ್ಡ್​ಗೆ ಅಪ್ಲೈ ಮಾಡುವುದು ಹೇಗೆ; ಇಲ್ಲಿದೆ ಹಂತಹಂತವಾದ ವಿವರಣೆ

| Updated By: Srinivas Mata

Updated on: Jun 11, 2021 | 1:27 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರು ಈಗ ಆನ್​ಲೈನ್​ನಲ್ಲಿ ಎಟಿಎಂ/ಡೆಬಿಟ್ ಕಾರ್ಡ್ ಅಪ್ಲೈ ಮಾಡಬಹುದು. ಅದು ಹೇಗೆ ಎಂಬುದರ ಹಂತಹಂತವಾದ ವಿವರಣೆ ಇಲ್ಲಿದೆ.

SBI Alert: ಮನೆಯಲ್ಲಿ ಕುಳಿತೇ ಎಸ್​ಬಿಐ ಎಟಿಎಂ ಕಾರ್ಡ್​ಗೆ ಅಪ್ಲೈ ಮಾಡುವುದು ಹೇಗೆ; ಇಲ್ಲಿದೆ ಹಂತಹಂತವಾದ ವಿವರಣೆ
ಸಾಂದರ್ಭಿಕ ಚಿತ್ರ
Follow us on

ಕೊರೊನಾ ಬಿಕ್ಕಟ್ಟಿನ ಮಧ್ಯೆ ಹಲವು ಬ್ಯಾಂಕಿಂಗ್ ಸಂಸ್ಥೆಗಳು ತಮ್ಮ ಸೇವೆಗಳನ್ನು ಆನ್​ಲೈನ್​ಗೆ ಬದಲಾಯಿಸಿಕೊಂಡಿವೆ. ಭಾರತದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ನಿಧಾನವಾಗಿ ಮನೆ ಬಾಗಿಲಿಗೆ ಮತ್ತು ಆನ್​ಲೈನ್ ಬ್ಯಾಂಕಿಂಗ್ ವ್ಯವಸ್ಥೆಯನ್ನು ಒದಗಿಸುತ್ತಿದೆ. ತನ್ನ ಗ್ರಾಹಕರ ಸುರಕ್ಷತೆ ಹಾಗೂ ಸಂತೋಷಕ್ಕೆ ಆದ್ಯತೆ ನೀಡುತ್ತಿದೆ. ಒಂದು ವೇಳೆ ನೀವು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಗ್ರಾಹಕರಾಗಿದ್ದಲ್ಲಿ, ಎಟಿಎಂ ಕಾರ್ಡ್ ಕಳೆದುಕೊಂಡಿದ್ದಲ್ಲಿ ಅಥವಾ ಅದರ ಅವಧಿ ಮುಗಿದಿದ್ದಲ್ಲಿ ಅಥವಾ ಹಾನಿಗೊಳಗಾಗಿದ್ದಲ್ಲಿ ಇನ್ನು ಬ್ಯಾಂಕ್​ ಶಾಖೆಗೆ ಹೋಗಬೇಕು ಅಂತೇನೂ ಇಲ್ಲ. ಎಟಿಎಂ ಕಾರ್ಡ್​ಗೆ ಆನ್​ಲೈನ್​ನಲ್ಲೇ ಅಪ್ಲೈ ಮಾಡಬಹುದು. ಮುಖ್ಯವಾಗಿ ತಿಳಿದುಕೊಳ್ಳಬೇಕಾದದ್ದು ಏನೆಂದರೆ, ಮೊಬೈಲ್ ನಂಬರ್ ಬ್ಯಾಂಕ್​ ಖಾತೆ ಜತೆಗೆ ನೋಂದಣಿ ಆಗಬೇಕು. ಅದಕ್ಕೆ ಒಟಿಪಿ ಬರುತ್ತದೆ.

ಮನೆಯಲ್ಲಿ ಕುಳಿತೇ ಆನ್​ಲೈನ್​ನಲ್ಲಿ ಅಪ್ಲೈ ಮಾಡುವುದು ಹೇಗೆ ಹಂತ ಹಂತವಾದ ವಿವರ ಇಲ್ಲಿದೆ:
ಹಂತ 1: ಇಂಟರ್​ನೆಟ್​ ಬ್ಯಾಂಕಿಂಗ್​ ಮೂಲಕ ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್​ಸೈಟ್ ಲಾಗ್ ಇನ್ ಆಗಬೇಕು.

ಹಂತ 2: ಇ ಸರ್ವೀಸಸ್ ಆಯ್ಕೆ ಮಾಡಿಕೊಳ್ಳಬೇಕು

ಹಂತ 3: ಆ ನಂತರ ಎಟಿಎಂ ಕಾರ್ಡ್ ಸರ್ವೀಸಸ್ ಆರಿಸಿಕೊಳ್ಳಬೇಕು

ಹಂತ 4: ರಿಕ್ವೆಸ್ಟ್ ಎಟಿಎಂ/ಡೆಬಿಟ್ ಕಾರ್ಡ್ ಆಯ್ಕೆಯನ್ನು ಆರಿಸಿಕೊಳ್ಳಬೇಕು.

ಹಂತ 5: ಒಟಿಪಿ ಆಧಾರಿತ ಮತ್ತು ಪ್ರೊಫೈಲ್ಸ್ ಪಾಸ್​ವರ್ಡ್ ಆಧಾರಿತ ಎರಡು ಆಯ್ಕೆಗಳನ್ನು ತೋರಿಸುತ್ತದೆ. ಅದರಲ್ಲಿ ಒಟಿಪಿಯನ್ನು ಆರಿಸಿಕೊಳ್ಳಬೇಕು.

ಹಂತ 6: ಹೊಸ ಪುಟ ತೆರೆದುಕೊಳ್ಳುತ್ತದೆ. ಖಾತೆ ಆರಿಸಿದ ಮೇಲೆ ಕಾರ್ಡ್ ಹೆಸರು ಮತ್ತು ಕಾರ್ಡ್ ಬಗೆಯನ್ನು ಆಯ್ಕೆ ಮಾಡಿಕೊಳ್ಳಬೇಕು.

ಹಂತ 7: ಎಲ್ಲ ಮಾಹಿತಿ ಭರ್ತಿ ಮಾಡಿ, ವೆರಿಫೈ ಮಾಡಿ ಹಾಗೂ ಸಲ್ಲಿಸಬೇಕು.

ಹಂತ 8: ಸಲ್ಲಿಕೆಯ ನಂತರ, ಇನ್ನು ಏಳರಿಂದ ಎಂಟು ಕಾರ್ಯ ನಿರ್ವಹಣೆ ದಿನಗಳಲ್ಲಿ (ವರ್ಕಿಂಗ್ ಡೇಸ್) ಡೆಬಿಟ್ ಕಾರ್ಡ್ ಬರುತ್ತದೆ ಎಂಬ ಒಂದು ಸಂದೇಶ ಬರುತ್ತದೆ.

ಹಂತ 9: ಬ್ಯಾಂಕ್​ನಲ್ಲಿ ನೋಂದಣಿಯಾದ ವಿಳಾಸಕ್ಕೆ ಡೆಬಿಟ್ ಕಾರ್ಡ್ ಬರುತ್ತದೆ.

ಹಂತ 10: ಒಂದು ವೇಳೆ ಬೇರೆ ವಿಳಾಸಕ್ಕೆ ಎಟಿಎಂ ಕಾರ್ಡ್​ ಪಡೆಯಲು ಬಯಸಿದಲ್ಲಿ ಆಗ ಎಸ್​ಬಿಐ ಶಾಖೆಗೆ ಭೇಟಿ ನೀಡಬೇಕು.

ಬ್ಯಾಂಕ್​ ಖಾತೆಯಲ್ಲಿ ಮೊಬೈಲ್ ಸಂಖ್ಯೆ ಅಪ್​ಡೇಟ್ ಮಾಡುವುದು ಹೇಗೆ?
ಗ್ರಾಹಕರು ತಮ್ಮ ಮೊಬೈಲ್ ಸಂಖ್ಯೆಯನ್ನು ಸುಲಭವಾಗಿ ಅಪ್​ಡೇಟ್ ಮಾಡಲು ಎಸ್​ಬಿಐ ಅವಕಾಶ ಮಾಡಿಕೊಟ್ಟಿದೆ. ನೆಟ್​ ಬ್ಯಾಂಕಿಂಗ್​ ಮೂಲಕವೇ ಇದನ್ನೂ ಮಾಡಬಹುದು.

ಹಂತ 1: ಮೈ ಅಕೌಂಟ್ ಮತ್ತು ಪ್ರೊಫೈಲ್ ಆಯ್ಕೆಗೆ ತೆರಳಬೇಕು ಮತ್ತು ಪ್ರೊಫೈಲ್ ಆರಿಸಿಕೊಳ್ಳಬೇಕು.

ಹಂತ 2: ಹೊಸದಾಗಿ ತೆರೆದುಕೊಳ್ಳುವ ಪುಟದಲ್ಲಿ ಪರ್ಸನಲ್ ಡೀಟೇಲ್ಸ್/ಮೊಬೈಲ್ ಆಯ್ಕೆ ಮೇಲೆ ಕ್ಲಿಕ್ ಮಾಡಬೇಕು. ಪ್ರೊಫೈಲ್ ಪಾಸ್​ವರ್ಡ್​ ಮೂಲಕ ಮುಂದುವರಿಯಬೇಕು.

ಹಂತ 3: ಹೊಸ ಪುಟದಲ್ಲಿ ಹೆಸರು, ಮೊಬೈಲ್ ಸಂಖ್ಯೆ, ಇಮೇಲ್ ಐಡಿ ಮಾಹಿತಿ ನೀಡಲಾಗುತ್ತದೆ ಮತ್ತು ಅದರ ಜತೆಗೆ ಬದಲಾವಣೆಯ ಆಯ್ಕೆಯನ್ನು ಸಹ ನೀಡಲಾಗುತ್ತದೆ.

ಹಂತ 4: ಮೊಬೈಲ್ ನಂಬರ್​ನೊಂದಿಗೆ ಎಂಬ ಆಯ್ಕೆಯನ್ನು ಮಾಡಿಕೊಳ್ಳಬೇಕು ಮತ್ತು ಒಟಿಪಿ ಪ್ರಕ್ರಿಯೆ ನಂತರ ಮೊಬೈಲ್ ಸಂಖ್ಯೆ ಅಪ್​ಡೇಟ್ ಮಾಡಬಹುದು.

ಇದನ್ನೂ ಓದಿ: SBI KYC: ಆನ್​ಲೈನ್​ನಲ್ಲಿ ಎಸ್​ಬಿಐ ಕೆವೈಸಿ ಅಪ್​ಡೇಟ್​ ಮಾಡಲು ಆಗದಿದ್ದಲ್ಲಿ ದೂರು ಸಲ್ಲಿಸುವುದು ಹೇಗೆ?

ಇದನ್ನೂ ಓದಿ: SBIದಿಂದ ಎಟಿಎಂ ನಗದು ವಿಥ್​ಡ್ರಾ, ಚೆಕ್​ ಬುಕ್ ನಿಯಮಾವಳಿ, ಶುಲ್ಕಗಳ ಬದಲಾವಣೆ ಮುಂದಿನ ತಿಂಗಳಿಂದ

(State Bank Of India customers can apply for ATM cum debit card. Know how? Here is an explainer)

Published On - 1:25 pm, Fri, 11 June 21