SBI Loan: ಕೊವಿಡ್​- 19 ಚಿಕಿತ್ಸೆಗೆ ಎಸ್​ಬಿಐನಿಂದ ಕೊಲಾಟರಲ್ ಇಲ್ಲದಂತೆ ಶೇ 8.5 ಬಡ್ಡಿ ದರದಲ್ಲಿ 5 ಲಕ್ಷದ ತನಕ ಸಾಲ

| Updated By: Srinivas Mata

Updated on: Jun 11, 2021 | 5:25 PM

ಸ್ಟೇಟ್​ ಬ್ಯಾಂಕ್ ಆಫ್ ಇಂಡಿಯಾದಿಂದ ಕೊವಿಡ್ 19 ಚಿಕಿತ್ಸೆಗೆ ಕೊಲಾಟರಲ್ ಇಲ್ಲದಂತೆ 5 ಲಕ್ಷ ರೂಪಾಯಿ ತನಕ ಸಾಲ ನೀಡುವ ಯೋಜನೆ ಘೋಷಿಸಲಾಗಿದೆ. 5 ವರ್ಷಗಳ ಅವಧಿಗೆ ಶೇ 8.5ರ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.

SBI Loan: ಕೊವಿಡ್​- 19 ಚಿಕಿತ್ಸೆಗೆ ಎಸ್​ಬಿಐನಿಂದ ಕೊಲಾಟರಲ್ ಇಲ್ಲದಂತೆ ಶೇ 8.5 ಬಡ್ಡಿ ದರದಲ್ಲಿ 5 ಲಕ್ಷದ ತನಕ ಸಾಲ
ಸಾಂದರ್ಭಿಕ ಚಿತ್ರ
Follow us on

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ (ಎಸ್​ಬಿಐ) ಜೂನ್ 11ನೇ ತಾರೀಕಿನಂದು ಕೊವಿಡ್- 19 ರೋಗಿಗಳಿಗಾಗಿ ‘ಕವಚ್ ಪರ್ಸನಲ್ ಲೋನ್’ ಯೋಜನೆಯನ್ನು ಆರಂಭಿಸಲಾಗಿದೆ. ಈ ಯೋಜನೆಯ ಪ್ರಕಾರ, ಕೊಲಾಟರಲ್ (ಅಡಮಾನ ಅಥವಾ ಆಧಾರ ಇಲ್ಲದಂತೆ) ಪಡೆದುಕೊಳ್ಳದೆ ಬ್ಯಾಂಕ್​ನಿಂದ ವಾರ್ಷಿಕ ಶೇಕಡಾ 8.5ರ ಬಡ್ಡಿ ದರದಲ್ಲಿ 5 ಲಕ್ಷ ರೂಪಾಯಿ ತನಕ ಸಾಲ ನೀಡಲಾಗುತ್ತದೆ. ಸ್ವಂತ ಮತ್ತು ಕುಟುಂಬಸ್ಥರ ಕೊವಿಡ್- 19 ವೈದ್ಯಕೀಯ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಕ್ಕೆ ಅನುಕೂಲ ಆಗಲಿ ಎಂಬ ಕಾರಣಕ್ಕೆ ಗ್ರಾಹಕರಿಗೆ ಈ ಸಾಲವನ್ನು ನೀಡಲಾಗುತ್ತಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಹೇಳಿದೆ.

ಈ ಯೋಜನೆಗೆ ಎಸ್​ಬಿಐ ಅಧ್ಯಕ್ಷ ದಿನೇಶ್ ಖರ ಚಾಲನೆ ನೀಡಿದರು. ಗ್ರಾಹಕರು ಐದು ವರ್ಷಗಳ ಅವಧಿಗೆ, ವಾರ್ಷಿಕ ಶೇ 8.5ರ ಬಡ್ಡಿ ದರದಲ್ಲಿ ಈ ಮೂಲಕ 5 ಲಕ್ಷ ರೂಪಾಯಿ ತನಕ ಸಾಲ ಪಡೆಯುವುದಕ್ಕೆ ಇದರಿಂದ ಅವಕಾಶ ಇದೆ. ಮೂರು ತಿಂಗಳ ವಿನಾಯಿತಿ (ಮೊರಟೋರಿಯಂ) ಸಹ ಇದರಲ್ಲಿ ಒಳಗೊಂಡಿದೆ ಎಂದು ಹೇಳಿರುವುದಾಗಿ ಬ್ಯಾಂಕ್​ನಿಂದ ನೀಡಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಕವಚ್ ಯೋಜನೆ ಅಡಿಯಲ್ಲಿ ವಿತರಿಸುವ ಸಾಲವು ಕೊಲಾಟರಲ್​ನಿಂದ ಮುಕ್ತವಾದ ಪರ್ಸನಲ್ ಲೋನ್ ಕೆಟಗಿರಿಗೆ ಬರುತ್ತದೆ. ಈ ಸೆಗ್ಮೆಂಟ್​ನಲ್ಲಿ ಅತ್ಯಂತ ಅಗ್ಗದ ಬಡ್ಡಿ ದರದ ಸಾಲವು ಇದಾಗಿದೆ ಎಂದು ಎಸ್​ಬಿಐ ಮಾಹಿತಿ ನೀಡಿದೆ. ಇನ್ನು ಕೊವಿಡ್-19ಗೆ ಸಂಬಂಧಿಸಿದ ವೈದ್ಯಕೀಯ ವೆಚ್ಚಗಳನ್ನು ಈಗಾಗಲೇ ಭರಿಸಿದ್ದಲ್ಲಿ ಅದನ್ನು ಕೂಡ ಈ ಯೋಜನೆ ಅಡಿಯಲ್ಲಿ ಅದನ್ನು ಕೂಡ ಒದಗಿಸಲಾಗುವುದು ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ.

ಈ ಸಾಲದ ಮೂಲಕವಾಗಿ ಈಗಿನ ಸನ್ನಿವೇಶಕ್ಕೆ ಹಣಕಾಸು ನೆರವು ಒದಗಿಸುವುದು ನಮ್ಮ ಗುರಿ. ಅದರಲ್ಲೂ ಕೊವಿಡ್ 19 ಕಷ್ಟದ ಸನ್ನಿವೇಶದಲ್ಲಿ ಯಾರಿಗೆ ಸಮಸ್ಯೆ ಆಗಿದೆ ಅವರಿಗೆ ನೆರವಾಗುವು ಉದ್ದೇಶ ನಮ್ಮದು. ಗ್ರಾಹಕರು ಸೂಕ್ತವಾಗುವ ಹಣಕಾಸು ಪರಿಹಾರ ಸೃಷ್ಟಿಸುವ ಕಡೆಗೆ ನಾವು ಕೆಲಸ ಮಾಡುತ್ತಿದ್ದೇವೆ ಎಂದು ಖರ ಹೇಳಿದ್ದಾರೆ. ಆರ್​ಬಿಐ ಘೋಷಣೆ ಮಾಡಿದ ಕೊರೊನಾ ಪರಿಹಾರ ಪ್ಯಾಕೇಜ್​ ಕ್ರಮದಂತೆ ಈಗಿನ ಸಾಲ ಯೋಜನೆ ಘೋಷಿಸಲಾಗಿದೆ ಎಂದು ಎಸ್​ಬಿಐ ಹೇಳಿದೆ.

ಇದನ್ನೂ ಓದಿ: Covid 19 loan: ಕೆನರಾ ಬ್ಯಾಂಕ್​ನಿಂದ ರೂ. 25 ಸಾವಿರದಿಂದ 2 ಕೋಟಿಯ ತನಕ 3 ಬಗೆಯ ಸಾಲ ಯೋಜನೆ ಘೋಷಣೆ

ಇದನ್ನೂ ಓದಿ: SBI Alert: ಮನೆಯಲ್ಲಿ ಕುಳಿತೇ ಎಸ್​ಬಿಐ ಎಟಿಎಂ ಕಾರ್ಡ್​ಗೆ ಅಪ್ಲೈ ಮಾಡುವುದು ಹೇಗೆ; ಇಲ್ಲಿದೆ ಹಂತಹಂತವಾದ ವಿವರಣೆ

(State Bank Of India June 11th announced Kavach personal loan of up to Rs 5 lakh for covid 19 treatment)