ಮುಂಬೈ: ಭಾರತದ ಅತಿದೊಡ್ಡ ಬ್ಯಾಂಕ್ ಎನಿಸಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಇದೀಗ ಬಾಂಡ್ಗಳ ಮೂಲಕ ಸಾವಿರಾರು ಕೋಟಿ ರೂ ಬಂಡವಾಳ ಸಂಗ್ರಹಿಸಲು ಮುಂದಾಗಿದೆ. ಎಸ್ಬಿಐ ಸುಮಾರು 750 ಮಿಲಿಯನ್ ಡಾಲರ್ ಮೊತ್ತದ ಬಾಂಡ್ಗಳನ್ನು (SBI Bonds) ವಿತರಿಸುತ್ತಿದೆ. ಅಂದರೆ ಈ ಬಾಂಡ್ಗಳ ಮಾರಾಟದಿಂದ ಎಸ್ಬಿಐಗೆ 6,000 ಕೋಟಿ ರೂ ಬಂಡವಾಳ ಹರಿದುಬರಲಿದೆ. ಈ ಐದು ವರ್ಷ ಅವಧಿಯ ಬಾಂಡ್ಗಳ ಕೂಪನ್ ರೇಟ್ ಶೇ. 4.875ಕ್ಕೆ ನಿಗದಿ ಮಾಡಲಾಗಿದೆ. ಅಂದರೆ, ಎಸ್ಬಿಐನ ಈ ಬಾಂಡ್ಗಳನ್ನು ಖರೀದಿಸುವ ಹೂಡಿಕೆದಾರರಿಗೆ ಒಂದು ವರ್ಷಕ್ಕೆ ಬಡ್ಡಿ ಶೇ 4.875 ಸಿಗಬಹುದು ಎಂದು ನಿರೀಕ್ಷಿಸಬಹುದು. ವರದಿಗಳ ಪ್ರಕಾರ ಎಸ್ಬಿಐನ ಈ ಬಾಂಡ್ಗಳಿಗೆ ಒಳ್ಳೆಯ ಬೇಡಿಕೆ ಕುದುರಿದೆಯಂತೆ. ಈ ಬಾಂಡ್ಗಳಿಗೆ ಬೇಡಿಕೆ ಹೆಚ್ಚಿದಷ್ಟೂ ಅದರ ಯೀಲ್ಡ್ ಅಥವಾ ರಿಟರ್ನ್ ಕಡಿಮೆ ಆಗುತ್ತಾ ಹೋಗುತ್ತದೆ.
‘2023 ಮೇ 5ರಂದು ನಮ್ಮ ಲಂಡನ್ ಶಾಖಾ ಕಚೇರಿಯಿಂದ ಬಾಂಡ್ಗಳನ್ನು ನೀಡಲಾಗುವುದು. ಇವು ಸಿಂಗಾಪುರ್ ಸ್ಟಾಕ್ ಎಕ್ಸ್ಚೇಂಜ್ ಹಾಗೂ ಇಂಡಿಯಾ ಇಂಟರ್ನ್ಯಾಷನಲ್ ಎಕ್ಸ್ಚೇಂಜ್ನಲ್ಲಿ ಲಿಸ್ಟ್ ಆಗಲಿವೆ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಏಪ್ರಿಲ್ 27ರಂದು ಸಲ್ಲಿಸಿದ ಎಕ್ಸ್ಚೇಂಜ್ ಫೈಲಿಂಗ್ನಲ್ಲಿ ತಿಳಿಸಿದೆ.
ಎಸ್ಬಿಐ ಬಾಂಡ್ಗಳ ಮಾರಾಟ ಮತ್ತು ನಿರ್ವಹಣೆಗೆ ಎಚ್ಎಸ್ಬಿಸಿ, ಸಿಟಿಗ್ರೂಪ್, ಜೆಪಿ ಮಾರ್ಗನ್, ಸ್ಟಾಂಡರ್ಡ್ ಚಾರ್ಟರ್ಡ್ ಬ್ಯಾಂಕ್, ಎಂಯುಎಫ್ಜಿ, ಎಮಿರೇಟ್ಸ್ ಎನ್ಬಿಡಿ ಸಂಸ್ಥೆಗಳನ್ನು ಗ್ಲೋಬಲ್ ಕೋ ಆರ್ಡಿನೇಟರ್ಗಳಾಗಿ ವಹಿಸಲಾಗಿದೆ.
ಇದನ್ನೂ ಓದಿ: Axis Bank: ಆ್ಯಕ್ಸಿಸ್ಗೆ ಮುಳುವಾದ ಸಿಟಿ ಡೀಲ್; ದಾಖಲೆ ಲಾಭ ಕಾಣಬೇಕಿದ್ದ ಬ್ಯಾಂಕ್ಗೆ ಬರೋಬ್ಬರಿ 5,728.4 ಕೋಟಿ ರೂ ನಷ್ಟ
ವಿದೇಶೀ ಮಾರುಕಟ್ಟೆಯಲ್ಲಿ ಎಸ್ಬಿಐಗೆ ಒಳ್ಳೆಯ ಬೆಲೆ ಇದೆ. ಬಹಳಷ್ಟು ಹೂಡಿಕೆದಾರರು ಎಸ್ಬಿಐ ಬಗ್ಗೆ ಒಲವು ಹೊಂದಿರುವವರೇ ಹೆಚ್ಚು. ಇವತ್ತಿನ ಅನಿಶ್ಚಿತ ಸ್ಥಿತಿಯಲ್ಲಿ ಎಸ್ಬಿಐಗೆ ಬಂಡವಾಳ ಸಂಗ್ರಹಿಸುವ ಗುರಿ ಈಡೇರಬಹುದು. ವಿಶ್ವದ ಪ್ರಮುಖ ನಿಶ್ಚಿತ ಆದಾಯ ಹೂಡಿಕೆದಾರರು ಎಸ್ಬಿಐ ಪರ ನಿಲ್ಲಬಹುದು ಎಂದು ಎಸ್ಬಿಐ ಛೇರ್ಮನ್ ದಿನೇಶ್ ಖರ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಸ್ಬಿಐನ ನಿರ್ದೇಶಕರ ಮಂಡಳಿ ಕೆಲ ವಾರಗಳ ಹಿಂದಷ್ಟೇ ಈ ಹಣಕಾಸು ವರ್ಷದಲ್ಲಿ 2 ಬಿಲಿಯನ್ ಡಾಲರ್ವರೆಗೂ (ಸುಮಾರು 16,000 ಕೋಟಿ ರೂ) ಬಂಡವಾಳ ಸಂಗ್ರಹಿಸುವ ದೀರ್ಘಾವಧಿ ಯೋಜನೆಗೆ ಅನುಮೋದನೆ ನೀಡಿತ್ತು. ಇದೀಗ ಬಾಂಡ್ಗಳನ್ನು ವಿತರಿಸಿರುವ ಮಾರ್ಗದಿಂದಲೇ ಅಗತ್ಯ ಬಿದ್ದರೆ ಈ ಹೂಡಿಕೆ ಪಡೆಯಬಹುದು.
ಸ್ಟೇಟ್ ಬ್ಯಾಂಕ್ ಇಂಡಿಯಾ ಸಂಸ್ಥೆಯ ಆರ್ಥಿಕ ಸ್ಥಿತಿ ಚೆನ್ನಾಗಿದೆ. ಅದರ ಕೆಟ್ಟ ಸಾಲಗಳ ಅಥವಾ ಎನ್ಪಿಎ ಪ್ರಮಾಣ ಬಹಳ ಕಡಿಮೆ ಇದೆ. ಅದರ ಬಡ್ಡಿ ಆದಾಯ, ಬಡ್ಡಿಯ ಲಾಭ ಅಂತರ ಇವೆಲ್ಲವೂ ಉತ್ತಮ ಎನ್ನಬಹುದಾದ ಪ್ರಮಾಣದಲ್ಲಿವೆ. ಹೀಗಾಗಿ, ಎಸ್ಬಿಐ ಷೇರುಗಳ ಮೇಲೆ ಬಹಳ ಮಂದಿ ಕಣ್ಣು ಬಿದ್ದಿದೆ.
ಇದನ್ನೂ ಓದಿ: Higher Pension: ಅಧಿಕ ಇಪಿಎಫ್ ಪಿಂಚಣಿ; ಗಡುವು, ಅರ್ಹತೆ, ಅರ್ಜಿ ಸಲ್ಲಿಕೆ ವಿಧಾನ, ಬಡ್ಡಿ ದರ ಇತ್ಯಾದಿ ಮಾಹಿತಿ
ಷೇರು ಮಾರುಕಟ್ಟೆಯಲ್ಲಿ ಎಸ್ಬಿಐನ ಷೇರು ಸಂಪತ್ತು 5 ಲಕ್ಷ ಕೋಟಿ ರೂಗಿಂತ ಹೆಚ್ಚಿದೆ. ಸದ್ಯ ಇದರ ಷೇರು ಬೆಲೆ 570 ರೂ ಇದೆ. ಬ್ರೋಕರೇಜ್ ಕಂಪನಿಗಳ ಅಂದಾಜಿನ ಪ್ರಕಾರ ಎಸ್ಬಿಐ ಷೇರು ಬೆಲೆ 700ರೂಗೂ ಹೆಚ್ಚು ಮೊತ್ತಕ್ಕೆ ಏರಬಹುದು. ಈ ನಿರೀಕ್ಷೆಗೂ ಒಂದಿಷ್ಟು ಕಾರಣಗಳಿವೆ. ಅವೇನು ಎಂದು ನೋಡುವುದಾದರೆ…