ಆಧಾರ್ ಕಾರ್ಡ್ ವಿಚಾರದಲ್ಲಿ ಯಾವುದಕ್ಕೆ ಹೆಚ್ಚು ಭಯಪಡಲಾಗುತ್ತಿತ್ತೋ ಅದೀಗ ದೊಡ್ಡ ಸ್ಕ್ಯಾಮ್ ಆಗಿ ಹೆಡೆ ಎತ್ತಿದೆ. ಆಧಾರ್ನ ಬಯೋಮೆಟ್ರಿಕ್ (biometric data) ಬಳಸಿ ಜನರ ಬ್ಯಾಂಕ್ ಖಾತೆಗಳಿಗೆ ಕಳ್ಳರು ಕನ್ನ ಹಾಕಿರುವ ಘಟನೆಗಳು ಬಹಳಷ್ಟು ಬೆಳಕಿಗೆ ಬರುತ್ತಿವೆ. ತಮಗೆ ಅರಿವಿಲ್ಲದೇ ಅಕೌಂಟ್ನಿಂದ ಹಣ ಮಾಯವಾಗುತ್ತಿರುವ ಬಗ್ಗೆ ಬಹಳ ಮಂದಿ ದೂರು ಕೊಟ್ಟಿದ್ದಾರೆ. ಆಧಾರ್ ಮೂಲಕ ಹಣ ಪಾವತಿ ಪಡೆಯುವ ವ್ಯವಸ್ಥೆಯನ್ನು ದುರುಪಯೋಗಿಸಿಕೊಂಡಿರುವುದು ತಿಳಿದುಬಂದಿದೆ. ಆತಂಕದ ಸಂಗತಿ ಎಂದರೆ, ಈ ರೀತಿ ಆಧಾರ್ ಶಕ್ತ ಪೇಮೆಂಟ್ ವ್ಯವಸ್ಥೆ (AePS- Aadhaar Enabled Payment System) ಮೂಲಕ ಹಣ ಪಡೆಯುವಾಗ ಮೊಬೈಲ್ ನಂಬರ್ಗೆ ಒಟಿಪಿ ಕೂಡ ಬಂದಿರುವುದಿಲ್ಲ. ಅಷ್ಟೇ ಅಲ್ಲ, ಹಣ ಕಡಿತಗೊಂಡ ಬಳಿಕವೂ ಎಸ್ಸೆಮ್ಮೆಸ್ ನೋಟಿಫಿಕೇಶನ್ ಬರುವುದಿಲ್ಲ. ಆಧಾರ್ಗೆ ನೀಡಲಾಗಿದ್ದ ಫಿಂಗರ್ ಪ್ರಿಂಟನ್ನು ನಕಲು ಮಾಡಿ ದುರುಳರು ಎಇಪಿಎಸ್ ಮೂಲಕ ಹಣ ಲಪಟಾಯಿಸುತ್ತಿದ್ದಾರೆ.
ಈ ರೀತಿ ಎಇಪಿಎಸ್ ಸಿಸ್ಟಂ ಅನ್ನು ದುರುಪಯೋಗಿಸಿಕೊಂಡಿರುವುದು ಕೆಲವೇ ಮಂದಿಗೆ ಸೀಮಿತವಾಗಿಲ್ಲ. ಸಾವಿರಾರು ಮಂದಿಗೆ ಈ ಅನುಭವವಾಗಿದೆ. ಒಮ್ಮೆಗೆ ಸಾವಿರಾರು ರೂಗಳಷ್ಟು ಹಣವನ್ನು ಅಪರಾಧಿಗಳು ಎಗರಿಸುತ್ತಿದ್ದಾರೆ. ಇದಕ್ಕೆ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂನಲ್ಲಿರುವ ಕೆಲ ತಾಂತ್ರಿಕ ದೋಷ ಕಾರಣ. ಸದ್ಯಕ್ಕೆ ನೀವು ಆಧಾರ್ನ ಬಯೋಮೆಟ್ರಿಕ್ ಡಾಟಾವನ್ನು ಲಾಕ್ ಮಾಡುವುದು ಉತ್ತಮ ಉಪಾಯ. ಎಇಪಿಎಸ್ ಅನ್ನು ಚಾಲೂಗೊಳಿಸಿದ್ದರೆ ಮೊದಲು ಅದನ್ನು ಬಂದ್ ಮಾಡಿ. ಈ ಕ್ರಮ ಹೇಗೆ ಎಂಬ ವಿವರ ಮುಂದಿದೆ.
ಇದನ್ನೂ ಓದಿ: Deepavali Bonus: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ
ಯುಐಡಿಎಐ ಮತ್ತು ಆರ್ಬಿಐ ನಿರ್ದೇಶನಪಡಿಸಿದ ಮಾರ್ಗಸೂಚಿಗಳಿಗೆ ಅನುಸಾರವಾಗಿ ರಾಷ್ಟ್ರೀಯ ಪಾವತಿ ನಿಗಮವು (ಎನ್ಪಿಸಿಐ) ಇತ್ತೀಚೆಗಷ್ಟೇ ಆಧಾರ್ ಎನೇಬಲ್ಡ್ ಪೇಮೆಂಟ್ ಸಿಸ್ಟಂ ಅನ್ನು ರೂಪಿಸಿ ಚಾಲನೆಗೊಳಿಸಿತ್ತು. ಇದರಲ್ಲಿ ಎಟಿಎಂ ಅಥವಾ ಯುಪಿಐ ಇಲ್ಲದೇ ಆಧಾರ್ ಕಾರ್ಡ್ ಮೂಲಕ ಹಣ ವಹಿವಾಟು ನಡೆಸಬಹುದು. ಎಇಪಿಎಸ್ ಬಳಸಿ ದಿನಕ್ಕೆ 50,000 ರೂವರೆಗೆ ಹಣ ಹಿಂಪಡೆಯಬಹುದು. ಬ್ಯಾಂಕ್ ಹೆಸರು, ಆಧಾರ್ ನಂಬರ್ ಮತ್ತು ಬಯೋಮೆಟ್ರಿಕ್ ದೃಢೀಕರಣ, ಈ ಮೂರು ಇದ್ದರೆ ಸಾಕು ಆಧಾರ್ ಮೂಲಕ ಹಣ ವರ್ಗಾವಣೆ ಮಾಡಬಹುದು.
ಮೊಬೈಲ್ ಸಿಮ್ ಪಡೆಯಲೋ, ರೇಷನ್ ಪಡೆಯಲೋ ಇನ್ನೂ ಹಲವು ಕಾರ್ಯಗಳಿಗೆ ಆಧಾರ್ ಬಯೋಮೆಟ್ರಿಕ್ ದೃಢೀಕರಣ ನೀಡುತ್ತೇವೆ. ಕಳ್ಳರು ಇಂಥ ಸ್ಥಳಗಳನ್ನು ಟಾರ್ಗೆಟ್ ಮಾಡಿ ಬಯೋಮೆಟ್ರಿಕ್ ವಿವರ ಪಡೆಯುತ್ತಾರೆ. ಹಾಗೆಯೇ, ಜೆರಾಕ್ಸ್ ಇತ್ಯಾದಿ ಕಡೆ ನಾವು ನೀಡುವ ಆಧಾರ್ ಕಾಪಿಗಳಲ್ಲಿರುವ ಆಧಾರ್ ನಂಬರ್, ಹೆಸರು ಇತ್ಯಾದಿ ವಿವರಗಳನ್ನೂ ಕದಿಯುತ್ತಾರೆ. ಬಯೋಮೆಟ್ರಿಕ್ ದತ್ತಾಂಶದಿಂದ ಫಿಂಗರ್ ಪ್ರಿಂಟ್ ಅನ್ನು ನಕಲು ಮಾಡಿ ಎಇಪಿಎಸ್ ಮೂಲಕ ಹಣ ಲಪಟಾಯಿಸುತ್ತಾರೆ.
ಇದನ್ನೂ ಓದಿ: Blue Aadhaar Card: ನೀಲಿ ಆಧಾರ್ ಕಾರ್ಡ್ ಯಾಕೆ? ಇದನ್ನು ಯಾರು ಮತ್ತು ಹೇಗೆ ಮಾಡಿಸಬಹುದು? ಇಲ್ಲಿದೆ ಡೀಟೇಲ್ಸ್
ನೀವು ಬಯೋಮೆಟ್ರಿಕ್ ಅನ್ನು ಮತ್ತೊಮ್ಮೆ ಅನ್ಲಾಕ್ ಮಾಡಲೂ ಅವಕಾಶ ಇರುತ್ತದೆ. ಇದೇ ಮೊಬೈಲ್ ಆ್ಯಪ್ನಲ್ಲಾದರೂ ಮಾಡಬಹುದು, ಅಥವಾ ಡೆಸ್ಕ್ಟಾಪ್ನಲ್ಲಾದರೂ ಮಾಡಬಹುದು.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ