Sign In

By signing in or creating an account, you agree with Associated Broadcasting Company's Terms & Conditions and Privacy Policy.

Sugar: ಸಕ್ಕರೆ ರಫ್ತು ಮೇಲೆ ಅ. 31ರವರೆಗೂ ಇದ್ದ ನಿರ್ಬಂಧ ನೀತಿ ಅನಿರ್ದಿಷ್ಟಾವಧಿಯವರೆಗೆ ವಿಸ್ತರಣೆ

India Sugar Exports Restrictions: ಭಾರತದಲ್ಲಿ ಸಕ್ಕರೆ ಬೆಲೆ ಹೆಚ್ಚಿ ಹಣದುಬ್ಬರ ಏರದಂತೆ ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಸಕ್ಕರೆಯನ್ನು ರಫ್ತು ನಿರ್ಬಂಧಿತ ವಸ್ತುಗಳ ಪಟ್ಟಿಗೆ ಸೇರಿಸಿತ್ತು. 2023ರ ಅಕ್ಟೋಬರ್ 31ರವರೆಗೂ ಈ ನಿರ್ಬಂಧ ಇದೆ. ಈಗ ಇದನ್ನು ಇನ್ನಷ್ಟು ಕಾಲ ಮುಂದುವರಿಸಲಾಗುತ್ತಿದೆ. ಸಕ್ಕರೆ ಅಭಾವ ಆಗುವುದಿಲ್ಲ ಎಂದು ಖಾತ್ರಿ ಆಗುವವರೆಗೂ ಈ ರಫ್ತು ನಿರ್ಬಂಧ ಇರಲಿದೆ.

Sugar: ಸಕ್ಕರೆ ರಫ್ತು ಮೇಲೆ ಅ. 31ರವರೆಗೂ ಇದ್ದ ನಿರ್ಬಂಧ ನೀತಿ ಅನಿರ್ದಿಷ್ಟಾವಧಿಯವರೆಗೆ ವಿಸ್ತರಣೆ
ಸಕ್ಕರೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Oct 18, 2023 | 1:05 PM

ನವದೆಹಲಿ, ಅಕ್ಟೋಬರ್ 18: ಸಕ್ಕರೆ ರಫ್ತಿನ ಮೇಲಿನ ನಿರ್ಬಂಧವನ್ನು (sugar export restriction) ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸಲು ನಿರ್ಧರಿಸಲಾಗಿದೆ. ಎಲ್ಲಾ ತಳಿಯ ಸಕ್ಕರೆಯ ರಫ್ತಿಗೆ ಅಕ್ಟೋಬರ್ 31ರವರೆಗೆ ನಿರ್ಬಂಧ ಇದೆ. ಇದೀಗ ಅದನ್ನು ಅನಿರ್ದಿಷ್ಟಾವಧಿಯವರೆಗೆ ಮುಂದುವರಿಸುತ್ತಿರುವುದಾಗಿ ವಿದೇಶ ವ್ಯಾಪಾರ ಮಹಾ ನಿರ್ದೇಶನಾಲಯ (DGFT- Directorate General of Foreign Trade) ಬುಧವಾರ (ಅ. 18) ಅಧಿಸೂಚನೆಯಲ್ಲಿ ತಿಳಿಸಿದೆ. ಆದರೆ, ಕೆಲ ಸಕ್ಕರೆ ರಫ್ತುಗಳಿಗೆ ಈ ನಿರ್ಬಂಧದಿಂದ ವಿನಾಯಿತಿ ನೀಡಲಾಗಿದೆ.

‘ಸಿಎಕ್ಸ್​ಎಲ್ ಮತ್ತು ಟಿಆರ್​ಕ್ಯೂ ಕೋಟಾ ಅಡಿಯಲ್ಲಿ ಯೂರೋಪಿಯನ್ ಯೂನಿಯನ್ ಮತ್ತು ಅಮೆರಿಕಕ್ಕೆ ರಫ್ತು ಮಾಡಲಾಗುವ ಸಕ್ಕರೆ ಮೇಲೆ ಈ ನಿರ್ಬಂಧ ಅನ್ವಯ ಆಗುವುದಿಲ್ಲ’ ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ಸಕ್ಕರೆ ಬೆಲೆ ಹೆಚ್ಚಿ ಹಣದುಬ್ಬರ ಏರದಂತೆ ನಿಯಂತ್ರಿಸಲು ಮುನ್ನೆಚ್ಚರಿಕೆಯಾಗಿ ಕಳೆದ ವರ್ಷ ಕೇಂದ್ರ ಸರ್ಕಾರ ಸಕ್ಕರೆಯನ್ನು ರಫ್ತು ನಿರ್ಬಂಧಿತ ವಸ್ತುಗಳ ಪಟ್ಟಿಗೆ ಸೇರಿಸಿತ್ತು. 2023ರ ಅಕ್ಟೋಬರ್ 31ರವರೆಗೂ ಈ ನಿರ್ಬಂಧ ಇದೆ. ಈಗ ಇದನ್ನು ಇನ್ನಷ್ಟು ಕಾಲ ಮುಂದುವರಿಸಲಾಗುತ್ತಿದೆ. ಸಕ್ಕರೆ ಅಭಾವ ಆಗುವುದಿಲ್ಲ ಎಂದು ಖಾತ್ರಿ ಆಗುವವರೆಗೂ ಈ ರಫ್ತು ನಿರ್ಬಂಧ ಇರಲಿದೆ.

ಇದನ್ನೂ ಓದಿ: ಹೊಸ ಸ್ಕ್ಯಾಮ್..! ಒಟಿಪಿ ಬರದೆಯೇ ಆಧಾರ್ ಬಳಸಿ ಹಣ ಎಗರಿಸುತ್ತಾರೆ; ಈಗಲೇ ಬಯೋಮೆಟ್ರಿಕ್ ಲಾಕ್ ಮಾಡಿ; ಇದು ಹೇಗೆ?

ಸಕ್ಕರೆ ಉತ್ಪಾದನೆ ಮತ್ತು ರಫ್ತಿನಲ್ಲಿ ಭಾರತ ವಿಶ್ವದ ಎರಡನೇ ಅತಿದೊಡ್ಡ ದೇಶವಾಗಿದೆ. ಮಹಾರಾಷ್ಟ್ರ, ಕರ್ನಾಟಕ ಸಕ್ಕರೆ ಉತ್ಪಾದನೆಯಲ್ಲಿ ಭಾರತದ ಪ್ರಮುಖ ರಾಜ್ಯಗಳಾಗಿವೆ. ಭಾರತದ ಒಟ್ಟು ಸಕ್ಕರೆ ಉತ್ಪಾದನೆಯಲ್ಲಿ ಈ ಎರಡು ರಾಜ್ಯಗಳ ಪಾಲು ಅರ್ಧದಷ್ಟಿದೆ. ಆದರೆ, ಈ ವರ್ಷ ಸರಿಯಾದ ಮಳೆ ಇಲ್ಲದ ಕಾರಣ ಕಬ್ಬು ಬೆಳೆ ಇಳುವರಿ ಬಹಳಷ್ಟು ಕಡಿಮೆ ಆಗಿದೆ.

ಭಾರತೀಯ ಸಕ್ಕರೆ ಕಾರ್ಖಾನೆ ಸಂಸ್ಥೆ (ಐಎಸ್​ಎಂಎ) ಪ್ರಕಾರ 2023-24ರ ಸೀಸನ್​ನಲ್ಲಿ ಭಾರತದಲ್ಲಿ ಸಕ್ಕರೆ ಉತ್ಪಾದನೆ 31.7 ಮಿಲಿಯನ್ ಟನ್​ನಷ್ಟು ಮಾತ್ರವೇ ಸಕ್ಕರೆ ಉತ್ಪಾದನೆ ಆಗಬಹುದು ಎಂದು ಅಂದಾಜಿಸಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಸಕ್ಕರೆ ಉತ್ಪಾದನೆ ಶೇ. 3ಕ್ಕಿಂತಲೂ ಹೆಚ್ಚು ಇಳಿಕೆ ಆಗಬಹುದು ಎನ್ನಲಾಗಿದೆ.

ಇದನ್ನೂ ಓದಿ: Deepavali Bonus: ಕೇಂದ್ರ ಸರ್ಕಾರದಿಂದ ಉದ್ಯೋಗಿಗಳಿಗೆ ದೀಪಾವಳಿ ಗಿಫ್ಟ್; ಹಬ್ಬಕ್ಕೆ ಮುಂಚೆ 7,000 ರೂವರೆಗೆ ಬೋನಸ್ ಪ್ರಕಟ

ಈ ಕಾರಣಕ್ಕೆ ಸರ್ಕಾರ ಸಕ್ಕರೆ ರಫ್ತಿಗೆ ನಿರ್ಬಂಧ ಹಾಕಿದೆ. ಸೆಪ್ಟೆಂಬರ್ 30ಕ್ಕೆ ಅಂತ್ಯಗೊಂಡ ಋತುವಿನಲ್ಲಿ ಸಕ್ಕರೆ ಕಾರ್ಖಾನೆಗಳು 6.1 ಮಿಲಿಯನ್ ಟನ್​ನಷ್ಟು ಮಾತ್ರ ಸಕ್ಕರೆ ರಫ್ತಿಗೆ ಅವಕಾಶ ಕೊಡಲಾಗಿತ್ತು. ಹಿಂದಿನ ಸೀಸನ್​ನಲ್ಲಿ 11.1 ಮಿಲಿಯನ್ ಟನ್​ನಷ್ಟು ಸಕ್ಕರೆ ರಫ್ತಿಗೆ ಅವಕಾಶ ಕೊಡಲಾಗಿತ್ತು. ಈ ಸೀಸನ್​ನಲ್ಲಿ ರಫ್ತು ಮಿತಿಯನ್ನು ಅರ್ಧದಷ್ಟು ಇಳಿಸಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
ಫ್ಯಾನ್ಸ್ ಪ್ರಕಾರ ಆರ್​ಸಿಬಿ- ಸಿಎಸ್​ಕೆ ಕಾಳಗದ ಸ್ಮರಣೀಯ ಕ್ಷಣ ಇದೆ
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
‘ಮನದ ಕಡಲು’ ನಟ-ನಟಿಯರಿಗೆ ಶಾಪ ಹಾಕಿದ ರಂಗಾಯಣ ರಘು
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಹನಿ ಟ್ರ್ಯಾಪ್ ಪ್ರಕರಣ ಸಿಐಡಿ ತನಿಖೆಗೆ ಒಪ್ಪಿಸಿದನ್ನು ಸ್ವಾಗತಿಸಿದ ರಾಜಣ್ಣ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ಒಡಿಶಾದಲ್ಲಿ ಪೊಲೀಸರಿಂದ ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಜಲಫಿರಂಗಿ ಬಳಕೆ
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ರೈತರಿಗೆ ಡಬಲ್​ ಗುಡ್​ನ್ಯೂಸ್ ನೀಡಿದ ಕೃಷಿ ಸಚಿವ ಚಲುವರಾಯಸ್ವಾಮಿ..!
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ಯತ್ನಾಳ್ ಕಾಂಗ್ರೆಸ್​ಗೆ ಬರುತ್ತೇನೆಂದರೆ ಸ್ವಾಗತಿಸಲು ನಾನ್ಯಾರೂ ಅಲ್ಲ: ಶಾಸಕ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ನನ್ನ ಜಾತ್ರೆ ನಿಲ್ಸಿದ್ದೀರಿ.. 3 ದಿನದಲ್ಲಿ ಮೂರು ಹೆಣ ಬೀಳುತ್ತೆ ಎಂದ ಮಹಿಳೆ
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಉಚ್ಚಾಟನೆ ನಿರ್ಧಾರವನ್ನು ಪುನರ್​ಪರಿಶೀಲಿಸುವಂತೆ ಕೋರುವೆ: ಶ್ರೀರಾಮುಲು
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
ಗೆಸ್ಟ್​ ಹೌಸ್​​ನಲ್ಲೇ ತಮ್ಮ ಮಗನನ್ನು ಭೇಟಿಯಾದ ಬಸನಗೌಡ ಯತ್ನಾಳ್
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ
VIDEO: ಕೆಎಲ್ ರಾಹುಲ್​ ಮಿಮಿಕ್​ಗೆ ಬಿದ್ದು ಬಿದ್ದು ನಕ್ಕ DC ಫ್ಯಾಮಿಲಿ