ಮ್ಯುಚುವಲ್ ಫಂಡ್ ಕಂಪನಿಗಳು ಟ್ರಾನ್ಸಾಕ್ಷನ್ ಶುಲ್ಕ, ಕಮಿಷನ್ ಕೊಡಬೇಕಿಲ್ಲ: ಸೆಬಿ ಕ್ರಮ

SEBI cancels out transaction charges paid by AMCs to Mutual Fund distributors: ಬ್ರೋಕರೇಜ್ ಸಂಸ್ಥೆಗಳಂತಹ ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಿಗೆ ಫಂಡ್​ನ ಎಎಂಸಿಗಳು ಕಮಿಷನ್ ಕೊಡಬೇಕಿತ್ತು. ಸೆಬಿ ಈ ನಿಯಮವನ್ನು ಈಗ ರದ್ದು ಮಾಡಿದೆ. ಎಎಂಸಿಗಳು ಈಗ ಡಿಸ್ಟ್ರಿಬ್ಯೂಟರ್​ಗಳಿಗೆ ಯಾವ ಟ್ರಾನ್ಸಾಕ್ಷನ್ ಶುಲ್ಕ ಕೊಡಬೇಕಾಗುವುದಿಲ್ಲ. ಡಿಸ್ಟ್ರಿಬ್ಯೂಟರ್​ಗಳು ಟ್ರೇಲ್ ಕಮಿಷನ್ ಮೂಲಕ ಆದಾಯ ಗಳಿಸಬಹುದು.

ಮ್ಯುಚುವಲ್ ಫಂಡ್ ಕಂಪನಿಗಳು ಟ್ರಾನ್ಸಾಕ್ಷನ್ ಶುಲ್ಕ, ಕಮಿಷನ್ ಕೊಡಬೇಕಿಲ್ಲ: ಸೆಬಿ ಕ್ರಮ
ಮ್ಯೂಚುವಲ್ ಫಂಡ್

Updated on: Aug 10, 2025 | 5:41 PM

ನವದೆಹಲಿ, ಆಗಸ್ಟ್ 10: ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಿಗೆ ಎಎಂಸಿಗಳು ಟ್ರಾನ್ಸಾಕ್ಷನ್ ಚಾರ್ಜ್ ಅಥವಾ ಕಮಿಷನ್ ನೀಡಬೇಕೆನ್ನುವ ನಿಯಮವನ್ನು ಸೆಬಿ ತೆಗೆದುಹಾಕಿದೆ. ಸಾರ್ವಜನಿಕ ಸಮಾಲೋಚನೆ ಮತ್ತು ಉದ್ಯಮ ಮಟ್ಟದ ಅಭಿಪ್ರಾಯ ಪಡೆದ ಬಳಿಕ ಸೆಬಿ ಈ ನಿರ್ಧಾರ ತೆಗೆದುಕೊಂಡಿದೆ. ಇದರೊಂದಿಗೆ ಬ್ರೋಕರ್, ಏಜೆಂಟ್ಸ್ ಇತ್ಯಾದಿ ಮ್ಯುಚುವಲ್ ಫಂಡ್ ವಿತರಕ ಸಂಸ್ಥೆಗಳ (Mutual Fund Distributors) ಒಂದು ಆದಾಯ ಮೂಲ ಕಡಿಮೆಗೊಂಡಂತಾಗಿವೆ. ಮ್ಯೂಚುವಲ್ ಫಂಡ್ ಎಎಂಸಿ ಕಂಪನಿಗಳಿಗೆ ಅನುಕೂಲವಾಗಲಿದೆ. ಸೆಬಿಯ ಈ ಕ್ರಮ ತತ್​ಕ್ಷಣದಿಂದಲೇ ಜಾರಿಗೆ ಬರಲಿದೆ.

ಮುಂಚಿನ ನಿಯಮ ಏನಿತ್ತು?

ಮ್ಯುಚುವಲ್ ಫಂಡ್ ವಿತರಕರ ಮೂಲಕ ಕನಿಷ್ಠ 10,000 ರೂನಷ್ಟು ಸಬ್​ಸ್ಕ್ರಿಪ್ಷನ್ ಬಂದಿದ್ದರೆ ಎಎಂಸಿಗಳು ಡಿಸ್ಟ್ರಿಬ್ಯೂಟರ್ ಟ್ರಾನ್ಸಾಕ್ಷನ್ ಶುಲ್ಕವನ್ನು ಅವರಿಗೆ ಪಾವತಿಸಬೇಕು ಎಂದು 2024ರ ಜೂನ್ 27ರಂದು ಸೆಬಿ ಹೊರಡಿಸಿದ ಮುಖ್ಯ ಸುತ್ತೋಲೆಯಲ್ಲಿ ಸೂಚಿಸಲಾಗಿತ್ತು. ಅಂದರೆ, 10,000 ರೂಗೂ ಅಧಿಕ ಮೊತ್ತದ ಹೂಡಿಕೆಯನ್ನು ಗ್ರೋ, ಝೆರೋಧ ಇತ್ಯಾದಿ ಬ್ರೋಕರ್ ಸಂಸ್ಥೆಗಳ ಮೂಲಕ ಮ್ಯೂಚುವಲ್ ಫಂಡ್​ನಲ್ಲಿ ಯಾರಾದರೂ ಮಾಡಿದ್ದರೆ, ಆಗ ಆ ಫಂಡ್​ನ ಎಎಂಸಿಗಳು ಕಮಿಷನ್ ಕೊಡಬೇಕಿತ್ತು. ಈಗ ಆ ನಿಯಮವನ್ನು ಸೆಬಿ ಹಿಂಪಡೆದುಕೊಂಡಿದೆ.

ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್​ನಲ್ಲಿ ಮಿನಿಮಮ್ ಬ್ಯಾಲನ್ಸ್ 50,000 ರೂ ಕಡ್ಡಾಯ; ಇಲ್ಲಿದೆ ಇತರೆಲ್ಲಾ ಶುಲ್ಕಗಳ ವಿವರ

ಯಾರು ಎಎಂಸಿಗಳು, ಫಂಡ್ ಡಿಸ್ಟ್ರಿಬ್ಯೂಟರ್​ಗಳು?

ಎಎಂಸಿ ಅಂದರೆ ಅಸೆಟ್ ಮ್ಯಾನೇಜ್ಮೆಂಟ್ ಕಂಪನಿ. ಮ್ಯೂಚುವಲ್ ಫಂಡ್ ಸ್ಕೀಮ್ ಅನ್ನು ಎಎಂಸಿಗಳು ನಿಭಾಯಸುತ್ತವೆ. ಒಂದು ಎಎಂಸಿಯಿಂದ ಹಲವು ಮ್ಯೂಚುವಲ್ ಫಂಡ್​ಗಳನ್ನು ನಿರ್ವಹಿಸಲಾಗಬಹುದು. ಉದಾಹರಣೆಗೆ, ಎಸ್​ಬಿಐ ಮ್ಯೂಚುವಲ್ ಫಂಡ್, ಎಕ್ಸಿಸ್ ಮ್ಯುಚುವಲ್ ಫಂಡ್, ಮಿರಾಯ್ ಅಸೆಟ್ಸ್, ಐಸಿಐಸಿಐ ಪ್ರುಡೆನ್ಷಿಯಲ್ ಮ್ಯುಚುವಲ್ ಫಂಡ್, ಎಚ್​ಡಿಎಫ್​ಸಿ ಮ್ಯುಚುವಲ್ ಫಂಡ್, ಜಿಯೋಬ್ಲ್ಯಾಕ್​ರಾಕ್ ಇತ್ಯಾದಿ.

ಇನ್ನು, ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳು ವಿವಿಧ ಎಎಂಸಿಗಳ ಮ್ಯುಚುವಲ್ ಫಂಡ್​ಗಳನ್ನು ತಮ್ಮ ಪ್ಲಾಟ್​ಫಾರ್ಮ್​ಗಳಲ್ಲಿ ಮಾರುತ್ತವೆ. ಗ್ರೋ, ಝೆರೋಧ ಇತ್ಯಾದಿ ಬ್ರೋಕರ್ ಸಂಸ್ಥೆಗಳು, ಏಜೆಂಟ್​ಗಳು, ಫೈನಾನ್ಷಿಯಲ್ ಅಡ್ವೈಸರಿ ಸಂಸ್ಥೆಗಳು ಇತ್ಯಾದಿ ಇರಬಹುದು.

ಸೆಬಿ ಕ್ರಮದಿಂದ ಹೂಡಿಕೆದಾರರಿಗೆ ಏನು ಪರಿಣಾಮ?

ಮ್ಯೂಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಿಗೆ ಎಎಂಸಿಗಳು ಕಮಿಷನ್ ಕೊಡುವ ನಿಯಮವನ್ನು ಸೆಬಿ ಹಿಂಪಡೆದುಕೊಂಡಿರುವುದು ಹೂಡಿಕೆದಾರರಿಗೆ ಯಾವ ಪರಿಣಾಮ ಮಾಡದು. ಅದು ವಿತರಕರು ಮತ್ತು ಎಎಂಸಿಗಳ ನಡುವಿನ ವ್ಯವಹಾರವಾಗಿತ್ತು.

ಇದನ್ನೂ ಓದಿ: 1 ಲಕ್ಷ ರೂ, 30 ವರ್ಷ ಹೂಡಿಕೆ, ಕೋಟಿ ರೂಗೂ ಅಧಿಕ ರಿಟರ್ನ್; ಇದು ಈ ಐದು ಫಂಡ್​ಗಳ ಮ್ಯಾಜಿಕ್

ಮ್ಯುಚುವಲ್ ಫಂಡ್ ವಿತರಕರಿಗೆ ಬೇರೆ ಆದಾಯವೇನು?

ಮ್ಯುಚುವಲ್ ಫಂಡ್ ಡಿಸ್ಟ್ರಿಬ್ಯೂಟರ್​ಗಳಿಗೆ ಎಎಂಸಿಗಳಿಂದ ಸಿಗುತ್ತಿದ್ದ ಕಮಿಷನ್ ಆದಾಯ ನಿಂತು ಹೋಗಿದೆಯಾದರೂ ಎರಡು ಪರ್ಯಾಯ ಆದಾಯ ಮೂಲಗಳನ್ನು ಅವು ಬಳಸಿಕೊಳ್ಳಬಹುದು. ಅದರಲ್ಲಿ ಪ್ರಮುಖವಾದುದು ಟ್ರೇಲ್ ಕಮಿಷನ್.

ನೀವು ಬ್ರೋಕರ್ ಪ್ಲಾಟ್​ಫಾರ್ಮ್​ನಲ್ಲಿ ಮ್ಯುಚುವಲ್ ಪಂಡ್​ನಲ್ಲಿ ನೀವು ಎಷ್ಟು ಅವಧಿ ಹೂಡಿಕೆ ಮಾಡಿರುತ್ತೀರೋ ಆ ಬ್ರೋಕರ್​ಗಳಿಗೆ ವಾರ್ಷಿಕವಾಗಿ ನಿರ್ದಿಷ್ಟ ಟ್ರೇಲ್ ಕಮಿಷನ್ (Trail Commission) ಸಿಗುತ್ತಿರುತ್ತದೆ. ಈ ಕಮಿಷನ್ ಪ್ರತಿಶತ ಲೆಕ್ಕದಲ್ಲಿ ಇರುತ್ತದೆ. ನಿಮ್ಮ ಹೂಡಿಕೆಯ ಮೌಲ್ಯ ಹೆಚ್ಚಿದಷ್ಟೂ ಈ ಕಮಿಷನ್ ಪ್ರಮಾಣ ಹೆಚ್ಚುತ್ತದೆ. ಫಂಡ್ ವಿತರಕರಿಗೆ ಈ ಟ್ರೇಲ್ ಕಮಿಷನ್ ಪ್ರಮುಖ ಆದಾಯ ಮೂಲವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ