SEBI Notice: 14,000 ಕೋಟಿ ರೂ ಪಿಎನ್​ಬಿ ಹಗರಣದ ಆರೋಪಿ ಮೆಹುಲ್ ಚೋಕ್ಸಿಗೆ ಸೆಬಿ ನೋಟೀಸ್; ದಂಡ ಕಟ್ಟದಿದ್ದರೆ ಅರೆಸ್ಟ್; ಆತ ಇರುವುದಾದರೂ ಎಲ್ಲಿ?

|

Updated on: May 18, 2023 | 6:32 PM

Mehul Choksi: ಗೀತಾಂಜಲಿ ಜೆಮ್ಸ್ ಲಿ ಕಂಪನಿಯ ಷೇರುಗಳ ವಹಿವಾಟಿನಲ್ಲಿ ಅಕ್ರಮ ಎಸಗಿದ ಆರೋಪದ ಇರುವ ಈ ಪ್ರಕರಣದಲ್ಲಿ ಮೆಹುಲ್ ಚೋಕ್ಸಿಗೆ 5 ಕೋಟಿ ರೂ ದಂಡ ಹಾಕಲಾಗಿದೆ. ಈ ದಂಡ ಮೊತ್ತ ಮತ್ತು ಅದಕ್ಕೆ ಬಡ್ಡಿ ಎಲ್ಲವೂ ಸೇರಿ 5.35 ಕೋಟಿ ರೂ ಪಾವತಿಸುವಂತೆ ಸೆಬಿ ಡಿಮ್ಯಾಂಡ್ ನೋಟೀಸ್ ಅನ್ನು ಮೆಹುಲ್ ಚೋಕ್ಸಿಗೆ ನೀಡಿದೆ.

SEBI Notice: 14,000 ಕೋಟಿ ರೂ ಪಿಎನ್​ಬಿ ಹಗರಣದ ಆರೋಪಿ ಮೆಹುಲ್ ಚೋಕ್ಸಿಗೆ ಸೆಬಿ ನೋಟೀಸ್; ದಂಡ ಕಟ್ಟದಿದ್ದರೆ ಅರೆಸ್ಟ್; ಆತ ಇರುವುದಾದರೂ ಎಲ್ಲಿ?
ಮೆಹುಲ್ ಚೋಕ್ಸಿ
Follow us on

ನವದೆಹಲಿ: ಭಾರತದ ಕಾನೂನುಪಾಲಕರ ಕೈಯಿಂದ ತಪ್ಪಿಸಿಕೊಂಡು ದೇಶಬಿಟ್ಟು ಹೋಗಿರುವ ವಜ್ರೋದ್ಯಮಿ ಮೆಹುಲ್ ಚೋಕ್ಸಿಗೆ ಸೆಬಿ ನೋಟೀಸ್ (Sebi Notice To Mehul Choksi) ಜಾರಿ ಮಾಡಿದೆ. ಅಕ್ರಮ ಷೇರು ವಹಿವಾಟು ಪ್ರಕರಣವೊಂದರ ಸಂಬಂಧ ನೀಡಲಾದ ನೋಟೀಸ್. ಗೀತಾಂಜಲಿ ಜೆಮ್ಸ್ ಲಿ ಕಂಪನಿಯ ಷೇರುಗಳ ವಹಿವಾಟಿನಲ್ಲಿ ಅಕ್ರಮ ಎಸಗಿದ ಆರೋಪದ ಇರುವ ಈ ಪ್ರಕರಣದಲ್ಲಿ ಮೆಹುಲ್ ಚೋಕ್ಸಿಗೆ 5 ಕೋಟಿ ರೂ ದಂಡ ಹಾಕಲಾಗಿದೆ. ಈ ದಂಡ ಮೊತ್ತ ಮತ್ತು ಅದಕ್ಕೆ ಬಡ್ಡಿ ಎಲ್ಲವೂ ಸೇರಿ 5.35 ಕೋಟಿ ರೂ ಪಾವತಿಸುವಂತೆ ಸೆಬಿ ಡಿಮ್ಯಾಂಡ್ ನೋಟೀಸ್ ಅನ್ನು ಮೆಹುಲ್ ಚೋಕ್ಸಿಗೆ ನೀಡಿದೆ. 15 ದಿನದೊಳಗೆ ದಂಡ ಪಾವತಿಸದಿದ್ದರೆ ಬಂಧಿಸಲಾಗುವುದು. ಅವರ ಬ್ಯಾಂಕ್ ಖಾತೆಗಳು ಹಾಗೂ ಇತರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ನೋಟೀಸ್​ನಲ್ಲಿ ಎಚ್ಚರಿಕೆ ನೀಡಲಾಗಿದೆ.

ಗೀತಾಂಜಲಿ ಜೆಮ್ಸ್ ಕಂಪನಿಗೆ ಮೆಹುಲ್ ಚೋಕ್ಸಿ ಛೇರ್ಮನ್ ಆಗಿದ್ದಾಗ ಈ ಷೇರು ಅಕ್ರಮ ನಡೆದಿದೆ. ತನ್ನ 15 ಬೇನಾಮಿ ಕಂಪನಿಗಳ ಮೂಲಕ ಅಕ್ರಮವಾಗಿ ಕೋಟ್ಯಂತರ ರೂಗಳ ಫಂಡ್ ಟ್ರಾನ್ಸ್​ಫರ್ ಆಗಿದೆ. ಈಗ ದೇಶಬಿಟ್ಟು ಹೋಗಿರುವ ಮೆಹುಲ್ ಚೋಕ್ಸಿ ಎಲ್ಲಿದ್ದಾರೆಂದೇ ಗೊತ್ತಿಲ್ಲ. ಅಂದಾಜು ಪ್ರಕಾರ ಆಂಟಿಗುವಾ ಬರ್ಬುಡಾದಲ್ಲಿ ಇರಬಹುದು ಎಂದು ನಂಬಲಾಗಿದೆ.

ಇದನ್ನೂ ಓದಿEnvestnet Bengaluru: ಬೆಂಗಳೂರಿನ ಕಚೇರಿ ಮುಚ್ಚಿದ ಎನ್ವೆಸ್ಟ್​ನೆಟ್; ಟಿಸಿಎಸ್​ಗೆ ಹೊರಗುತ್ತಿಗೆ ಕೊಟ್ಟು ಕೈತೊಳೆದುಕೊಂಡ ಅಮೆರಿಕನ್ ಕಂಪನಿ

2018ರಲ್ಲಿ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ್ದ 14,000 ಕೋಟಿ ರೂ ಮೊತ್ತದ ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣ ನೆನಪಿರಬಹುದು. ವಜ್ರೋದ್ಯಮಿಗಳಾದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಅವರು ಈ ಹಗರಣದ ಪ್ರಮುಖ ಆರೋಪಿಗಳು. ಇಬ್ಬರೂ ಸಂಬಂಧಿಗಳೂ ಹೌದು. ಪಿಎನ್​ಬಿ ಬ್ಯಾಂಕಿಂದ ಸಾವಿರಾರು ಕೋಟಿ ರೂನಷ್ಟು ಅಕ್ರಮವಾಗಿ ಸಾಲ ಪಡೆದು ವಂಚಿಸಿರುವ ಆರೋಪ ಇದೆ. ಪ್ರಕರಣ ಬೆಳಕಿಗೆ ಬರುತ್ತಲೇ ಇಬ್ಬರೂ ಕೂಡ ದೇಶ ಬಿಟ್ಟು ಹೋಗಿದ್ದರು.

ನೀರವ್ ಮೋದಿ ಸದ್ಯ ಬ್ರಿಟನ್​ನ ಜೈಲೊಂದರಲ್ಲಿ ಸಿಕ್ಕಿಕೊಂಡಿದ್ದಾರೆ. ಅವರನ್ನು ಹಸ್ತಾಂತರಿಸುವಂತೆ ಭಾರತ ಕೇಳಿಕೊಂಡಿದೆ. ಆದರೆ, ಭಾರತಕ್ಕೆ ರವಾನೆಯಾಗಲು ನೀರವ್ ಮೋದಿ ಇಚ್ಛಿಸುತ್ತಿಲ್ಲ. ಅಲ್ಲಿನ ಕೋರ್ಟ್​ನಲ್ಲಿ ಮನವಿ ಮಾಡುತ್ತಲೇ ಇದ್ದಾರೆ. ಇನ್ನೊಂದೆಡೆ ಮೆಹುಲ್ ಚೋಕ್ಸಿ ಎಲ್ಲಿದ್ದಾರೆಂಬುದು ಸ್ಪಷ್ಟವಾಗಿ ಗೊತ್ತಾಗಿಲ್ಲ.

ಇದನ್ನೂ ಓದಿSuper Rich: ಭಾರತದಲ್ಲಿ ನೂರಕ್ಕೊಬ್ಬ ಶ್ರೀಮಂತರ ಗುಂಪಿಗೆ ಸೇರಬೇಕಾ? ನಿಮಗೆಷ್ಟು ಕೋಟಿ ಹಣವಿರಬೇಕು? ಇಲ್ಲಿದೆ ಡೀಟೇಲ್ಸ್

ಗೀತಾಂಜಲಿ ಕಂಪನಿಯ ಷೇರು ಪ್ರಕರಣದಲ್ಲಿ 2022 ಅಕ್ಟೋಬರ್​ನಲ್ಲಿ ಸೆಬಿ ಮೆಹುಲ್ ಚೋಕ್ಸಿಗೆ 5 ಕೋಟಿ ರೂ ದಂಡ ವಿಧಿಸಿತ್ತು. 10 ವರ್ಷ ಕಾಲ ಷೇರು ಮಾರುಕಟ್ಟೆಗಳಿಂದ ಅವರನ್ನು ನಿರ್ಬಂಧಿಸಿತ್ತು. ಆದರೆ, ಈ ನೋಟೀಸ್​ಗೆ ಚೋಕ್ಸಿಯಿಂದ ಯಾವ ಸ್ಪಂದನೆಯೂ ಬಂದಿಲ್ಲ. ಈ ಹಿನ್ನೆಲೆಯಲ್ಲಿ ಈಗ ಮತ್ತೊಮ್ಮೆ ಸೆಬಿ ನೋಟೀಸ್ ನೀಡಿದೆ. ಈ ಹಿಂದೆ ಮೆಹುಲ್ ಚೋಕ್ಸಿಯ ಬಂಧನಕ್ಕೆ ಇಂಟರ್ಪೋಲ್​ನಿಂದ ನೋಟೀಸ್ ಇತ್ತು. ಇದೇ ಮಾರ್ಚ್ ತಿಂಗಳಲ್ಲಿ ಇಂಟರ್ಪೋಲ್ ಪಟ್ಟಿಯಿಂದ ಅವರ ಹೆಸರನ್ನು ಕೈಬಿಡಲಾಗಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ