Sensex crosses 50,000 points: ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಏರಿಕೆ- ಇಳಿಕೆ ಹೊಯ್ದಾಟ

|

Updated on: Apr 29, 2021 | 1:19 PM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಇಂದು (ಏಪ್ರಿಲ್ 29, 2021) ಏರಿಕೆ ಹಾಗೂ ಇಳಿಕೆ ಮಧ್ಯೆ ಭಾರೀ ಹೊಯ್ದಾಟ ನಡೆಸುತ್ತಿದೆ.

Sensex crosses 50,000 points: ಷೇರು ಮಾರುಕಟ್ಟೆ ಸೂಚ್ಯಂಕ ಸೆನ್ಸೆಕ್ಸ್ ಏರಿಕೆ- ಇಳಿಕೆ ಹೊಯ್ದಾಟ
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕವಾದ ಸೆನ್ಸೆಕ್ಸ್ ಗುರುವಾರ (ಏಪ್ರಿಲ್ 29, 2021) ಲಾಭ- ನಷ್ಟದ ಮಧ್ಯೆ ಹೊಯ್ದಾಡುತ್ತಿದೆ. ಈ ವರದಿ ಆಗುವ ಹೊತ್ತಿಗೆ ಸೆನ್ಸೆಕ್ಸ್ 209 ಪಾಯಿಂಟ್​ಗಳು ಮೇಲೇರಿ, 49,942ರಲ್ಲಿ ವಹಿವಾಟು ನಡೆಸುತ್ತಿದೆ. ಹಿಂದಿನ ದಿನದ ವ್ಯವಹಾರ ಮುಗಿಸಿದಾಗ 49.733.84ರಲ್ಲಿ ಕೊನೆಯಾಗಿತ್ತು. ಇನ್ನು ಈ ದಿನದ ಆರಂಭದಲ್ಲೇ 50 ಸಾವಿರ ಪಾಯಿಂಟ್​ಗಳ ಗಡಿ ದಾಟಿ, 50,093.86ರಲ್ಲಿ ವ್ಯವಹಾರ ಆರಂಭಿಸಿದ್ದು, ಒಂದು ಹಂತದಲ್ಲಿ ಸೂಚ್ಯಂಕವು 50,375.77 ಪಾಯಿಂಟ್​ಗಳಲ್ಲಿ ವ್ಯವಹಾರ ನಡೆಸಿ, ಹೂಡಿಕೆದಾರರಲ್ಲಿ ಉತ್ಸಾಹ ತುಂಬಿತು. ಆದರೆ ಏಪ್ರಿಲ್ ತಿಂಗಳ ಫ್ಯೂಚರ್ ಅಂಡ್ ಆಪ್ಷನ್​ನ ವ್ಯವಹಾರ ಚುಕ್ತಾ ಇರುವುದರಿಂದ ಭಾರೀ ಏರಿಳಿಯ ಕಂಡು ಬರುತ್ತಿದ್ದು, ಅದರ ಪರಿಣಾಮ ಷೇರಿನ ಬೆಲೆಗಳ ಮೇಲೆ ಆಗಿದೆ.

ಇನ್ನು ನಿಫ್ಟಿ 70.75 ಪಾಯಿಂಟ್ ಮೇಲೇರಿ, 14,935.30 ಪಾಯಿಂಟ್​ನಲ್ಲಿ ವಹಿವಾಟು ನಡೆಸಿತು. ದಿನದ ಆರಂಭದ ವ್ಯವಹಾರವನ್ನು 14,979 ಪಾಯಿಂಟ್​ನೊಂದಿಗೆ ಶುರು ಮಾಡಿದ ನಿಫ್ಟಿ, ಹಿಂದಿನ ಸೆಷನ್ ಅನ್ನು 14,864.55 ಪಾಯಿಂಟ್​ನೊಂದಿಗೆ ಮುಗಿಸಿತ್ತು. ಇಂದಿನ ವಹಿವಾಟಿನಲ್ಲಿ 15,044.35 ಪಾಯಿಂಟ್​ಗಳ ಗರಿಷ್ಠ ಮಟ್ಟವನ್ನು ನಿಫ್ಟಿ ಮುಟ್ಟಿತು. ಇಂದಿನ ವ್ಯವಹಾರದಲ್ಲಿ ಲೋಹದ ಷೇರುಗಳು ಭಾರೀ ಗಳಿಕೆಯನ್ನು ಕಂಡಿವೆ.

ನಿಫ್ಟಿಯಲ್ಲಿ ಗಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಜೆಎಸ್​ಡಬ್ಲ್ಯು ಸ್ಟೀಲ್ ಶೇ 6.76
ಟಾಟಾ ಸ್ಟೀಲ್ ಶೇ 5.52
ಬಜಾಜ್ ಫಿನ್​ಸರ್ವ್ ಶೇ 5.15
ಬಜಾಜ್ ಫೈನಾನ್ಸ್ ಶೇ 3.68
ಹಿಂಡಾಲ್ಕೊ ಶೇ 2.10

ನಿಫ್ಟಿಯಲ್ಲಿ ಇಳಿಕೆ ಕಂಡ ಪ್ರಮುಖ ಷೇರುಗಳು ಮತ್ತು ಪರ್ಸೆಂಟ್
ಹೀರೋ ಮೋಟೋಕಾರ್ಪ್ ಶೇ -1.57
ಐಷರ್ ಮೋಟಾರ್ಸ್ ಶೇ -1.44
ಎಚ್​ಸಿಎಲ್ ಟೆಕ್ ಶೇ -1.36
ಮಹೀಂದ್ರಾ ಅಂಡ್ ಮಹೀಂದ್ರಾ ಶೇ -1.21
ಲಾರ್ಸನ್ ಶೇ -1.04

ಇದನ್ನೂ ಓದಿ: ಷೇರುಪೇಟೆಯಲ್ಲಿ ಹೂಡಿಕೆದಾರರ ಸಂಪತ್ತು 3 ದಿನದಲ್ಲಿ 6.39 ಲಕ್ಷ ಕೋಟಿ ರೂಪಾಯಿ ಹೆಚ್ಚಳ

(Indian stock market index sensex crosses 50,000 point mark. Index swung between gain and loss)