Stock Market: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1000ಕ್ಕೂ ಹೆಚ್ಚು, ನಿಫ್ಟಿ 300ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ

ಫೆಬ್ರವರಿ 7ನೇ ತಾರೀಕಿನ ಸೋಮವಾರದಂದು ಸೆನ್ಸೆಕ್ಸ್ 1200 ಪಾಯಿಂಟ್ಸ್ ಮತ್ತು ನಿಫ್ಟಿ 300ಕ್ಕೂ ಹೆಚ್ಚು ಪಾಯಿಂಟ್ಸ್ ಇಳಿಕೆ ಕಂಡಿದೆ. ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.

Stock Market: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1000ಕ್ಕೂ ಹೆಚ್ಚು, ನಿಫ್ಟಿ 300ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿತ
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Feb 07, 2022 | 3:07 PM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಫೆಬ್ರವರಿ 7ನೇ ತಾರೀಕಿನ ಸೋಮವಾರದಂದು 1200 ಪಾಯಿಂಟ್ಸ್​​ನಷ್ಟು ಇಳಿಕೆ ಕಂಡಿತ್ತು. ಇನ್ನು ನಿಫ್ಟಿ ಸೂಚ್ಯಂಕವು 300ಕ್ಕೂ ಹೆಚ್ಚು ಪಾಯಿಂಟ್ಸ್ ಕುಸಿದಿದೆ. ಕ್ಯಾಪಿಟಲ್​ ಗೂಡ್ಸ್, ಎಫ್​ಎಂಸಿಜಿ, ವಾಹನ ಸೂಚ್ಯಂಕಗಳು ಮಾರುಕಟ್ಟೆ ಇಳಿಕೆಗೆ ಪ್ರಮುಖ ಕಾರಣವಾಗಿದ್ದರೆ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು ಗಳಿಕೆ ಕಂಡಿತ್ತು. ವಲಯವಾರು ನೋಡುವುದಾದರೆ, ತೈಲ ಮತ್ತು ಅನಿಲ, ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್​ಗಳು, ಲೋಹ ಮತ್ತು ವಿದ್ಯುತ್ ಹೊರತುಪಡಿಸಿ ಎಲ್ಲ ಇತರ ವಲಯಗಳಾದ ವಾಹನ, ಎಫ್​ಎಂಸಿಜಿ, ಮಾಹಿತಿ ತಂತ್ರಜ್ಞಾನ, ಬ್ಯಾಂಕ್, ಹೆಲ್ತ್​ಕೇರ್​, ರಿಯಾಲ್ಟಿ, ಕ್ಯಾಪಿಟಲ್​ ಗೂಡ್ಸ್ ಶೇ 1ರಿಂದ ಶೇ 2ರಷ್ಟು ಇಳಿಕೆ ಆಗಿತ್ತು.

ಈ ವರದಿ ಸಿದ್ಧವಾಗುವ ಹೊತ್ತಿಗೆ ಸೆನ್ಸೆಕ್ಸ್ 1,103.82 ಪಾಯಿಂಟ್ಸ್ ಅಥವಾ ಶೇ 1.88ರಷ್ಟು ಇಳಿಕೆ ಆಗಿ, 57,541 ಪಾಯಿಂಟ್ಸ್​ನಲ್ಲಿ ವಹಿವಾಟು ನಡೆಸುತ್ತಿತ್ತು. ಇನ್ನು ನಿಫ್ಟಿ 320.50 ಪಾಯಿಂಟ್ಸ್ ಅಥವಾ ಶೇ 1.83ರಷ್ಟು ಕುಸಿದು, 17,195.80 ಪಾಯಿಂಟ್ಸ್​ನಲ್ಲಿ ವ್ಯವಹಾರ ಆಗುತ್ತಿತ್ತು. ನಿಫ್ಟಿ ಬ್ಯಾಂಕ್ 827.20 ಪಾಯಿಂಟ್ಸ್ ಅಥವಾ ಶೇ 2.13ರಷ್ಟು ಇಳಿದು, 37,962.15 ಪಾಯಿಂಟ್ಸ್​ನಲ್ಲಿತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಪವರ್​ ಗ್ರಿಡ್ ಕಾರ್ಪೊರೇಷನ್ ಶೇ 1.57

ಒಎನ್​ಜಿಸಿ ಶೇ 1.44

ಎನ್​ಟಿಪಿಸಿ ಶೇ 0.52

ಟಾಟಾ ಸ್ಟೀಲ್ ಶೇ 0.34

ಎಸ್​ಬಿಐ ಶೇ 0.17

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಎಚ್​ಡಿಎಫ್​ಸಿ ಬ್ಯಾಂಕ್​ ಶೇ -4.14

ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಶೇ -3.87

ಬಜಾಜ್ ಫೈನಾನ್ಸ್ ಶೇ -3.40

ಎಚ್​ಡಿಎಫ್​ಸಿ ಲೈಫ್ ಶೇ-3.36

ಬಜಾಜ್ ಫಿನ್​ಸರ್ವ್​ ಶೇ -3.28

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ