Stock Market News: ಸೆನ್ಸೆಕ್ಸ್ 303 ಪಾಯಿಂಟ್ಸ್, ನಿಫ್ಟಿ 88 ಪಾಯಿಂಟ್ಸ್ ಏರಿಕೆ; ಎಲ್​ ಅಂಡ್​ ಟಿ ಷೇರು 76 ರೂಪಾಯಿ ಗಳಿಕೆ

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಜುಲೈ 8ನೇ ತಾರೀಕಿನ ಶುಕ್ರವಾರದಂದು ಏರಿಕೆ ಕಂಡಿವೆ. ಪ್ರಮುಖವಾಗಿ ಏರಿಕೆ, ಇಳಿಕೆ ಕಂಡ ಷೇರುಗಳ ವಿವರ ಇಲ್ಲಿದೆ.

Stock Market News: ಸೆನ್ಸೆಕ್ಸ್ 303 ಪಾಯಿಂಟ್ಸ್, ನಿಫ್ಟಿ 88 ಪಾಯಿಂಟ್ಸ್ ಏರಿಕೆ; ಎಲ್​ ಅಂಡ್​ ಟಿ ಷೇರು 76 ರೂಪಾಯಿ ಗಳಿಕೆ
ಸಾಂದರ್ಭಿಕ ಚಿತ್ರ
Updated By: Srinivas Mata

Updated on: Jul 08, 2022 | 4:27 PM

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್ ಹಾಗೂ ನಿಫ್ಟಿ ಜುಲೈ 8ನೇ ತಾರೀಕಿನ ಶುಕ್ರವಾರದಂದು ಏರಿಕೆಯಲ್ಲೇ ಮುಕ್ತಾಯ ಕಂಡಿವೆ. ದಿನಾಂತ್ಯಕ್ಕೆ ಬಿಎಸ್​ಇ ಸೆನ್ಸೆಕ್ಸ್ ಸೂಚ್ಯಂಕವು 303.38 ಪಾಯಿಂಟ್ಸ್ ಅಥವಾ ಶೇ 0.56ರಷ್ಟು ಮೇಲೇರಿ 54,481.84 ಪಾಯಿಂಟ್ಸ್​ನಲ್ಲಿ ಮುಕ್ತಾಯ ಕಂಡಿದ್ದರೆ, ನಿಫ್ಟಿ ಸೂಚ್ಯಂಕವು 87.70 ಪಾಯಿಂಟ್ಸ್ ಅಥವಾ ಶೇ 0.54ರಷ್ಟು ಏರಿಕೆ ಕಂಡು, 16,220.60 ಪಾಯಿಂಟ್ಸ್​ನಲ್ಲಿ ವಹಿವಾಟು ಚುಕ್ತಾ ಮಾಡಿದೆ. ಇಂದಿನ ವಹಿವಾಟಿನಲ್ಲಿ 1859 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 1352 ಕಂಪೆನಿಯ ಷೇರುಗಳು ಇಳಿಕೆ ಕಂಡವು. ಇನ್ನು 146 ಕಂಪೆನಿ ಷೇರುಗಳ ಬೆಲೆಯಲ್ಲಿ ಯಾವ ಬದಲಾವಣೆಯೂ ಆಗಲಿಲ್ಲ.

ಇನ್ನು ವಲಯವಾರು ಗಮನಿಸುವುದಾದರೆ ಲೋಹವೊಂದನ್ನು ಹೊರತುಪಡಿಸಿದಂತೆ ಎಲ್ಲವೂ ಏರಿಕೆಯಲ್ಲೇ ಮುಕ್ತಾಯ ಕಂಡಿವೆ. ಕ್ಯಾಪಿಟಲ್ ಗೂಡ್ಸ್ ಮತ್ತು ವಿದ್ಯುತ್ ಸೂಚ್ಯಂಕಗಳು ಶೇ 1ರಿಂದ 2ರಷ್ಟು ಹೆಚ್ಚಳವಾದವು. ಬಿಎಸ್​ಇ ಮಿಡ್​ಕ್ಯಾಪ್ ಮತ್ತು ಸ್ಮಾಲ್​ಕ್ಯಾಪ್ ಅಲ್ಪ ಪ್ರಮಾಣದ ಗಳಿಕೆಯನ್ನು ಕಂಡವು.

ಅಮೆರಿಕ ಡಾಲರ್​ ವಿರುದ್ಧ ರೂಪಾಯಿ ಮೌಲ್ಯ 79.25ರಂತೆ ಇಳಿಕೆಯಲ್ಲೇ ದಿನಾಂತ್ಯವಾಯಿತು. ಗುರುವಾರದ ವಹಿವಾಟಿನ ಕೊನೆಗೆ ರೂಪಾಯಿ ಮೌಲ್ಯ 79.17 ಇತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಲಾರ್ಸನ್ ಶೇ 4.74

ಪವರ್​ ಗ್ರಿಡ್ ಕಾರ್ಪೊರೇಷನ್ ಶೇ 2.94

ಟಾಟಾ ಮೋಟಾರ್ಸ್ ಶೇ 2.48

ಎನ್​ಟಿಪಿಸಿ ಶೇ 2.31

ಕೋಲ್ ಇಂಡಿಯಾ ಶೇ 2.04

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಎಚ್​ಡಿಎಫ್​ಸಿ ಲೈಫ್ ಶೇ -1.67

ಒಎನ್​​ಜಿಸಿ ಶೇ -1.62

ಟಾಟಾ ಸ್ಟೀಲ್ ಶೇ -1.57

ಮಾರುತಿ ಸುಜುಕಿ ಶೇ -1.52

ಜೆಎಸ್​ಡಬ್ಲ್ಯು ಸ್ಟೀಲ್ ಶೇ -1.46

Published On - 4:27 pm, Fri, 8 July 22