Stock Market: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1300ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 375 ಪಾಯಿಂಟ್ಸ್ ಹೆಚ್ಚಳ

| Updated By: Srinivas Mata

Updated on: Mar 10, 2022 | 11:16 AM

ಭಾರತದ ಷೇರು ಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ 1300ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 375 ಪಾಯಿಂಟ್ಸ್ ಮಾರ್ಚ್ 10ನೇ ತಾರೀಕಿನ ಗುರುವಾರದಂದು ಏರಿಕೆ ಆಗಿದೆ.

Stock Market: ಷೇರುಪೇಟೆ ಸೂಚ್ಯಂಕ ಸೆನ್ಸೆಕ್ಸ್ 1300ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 375 ಪಾಯಿಂಟ್ಸ್ ಹೆಚ್ಚಳ
ಸಾಂದರ್ಭಿಕ ಚಿತ್ರ
Follow us on

ಭಾರತದ ಷೇರು ಮಾರುಕಟ್ಟೆ (Stock Market) ಸೂಚ್ಯಂಕಗಳಾದ ಸೆನ್ಸೆಕ್ಸ್, ನಿಫ್ಟಿ ಮಾರ್ಚ್ 10ನೇ ತಾರೀಕಿನ ಗುರುವಾರ ಬೆಳಗಿನ ವಹಿವಾಟಿನಲ್ಲಿ ಭಾರೀ ಏರಿಕೆಯನ್ನು ಕಂಡಿದೆ. ಬೆಳಗ್ಗೆ 10 ಗಂಟೆ ಹೊತ್ತಿಗೆ ಸೆನ್ಸೆಕ್ಸ್ ಸೂಚ್ಯಂಕವು  1240.98 ಪಾಯಿಂಟ್ಸ್ ಅಥವಾ ಶೇ 2.27ರಷ್ಟು ಮೇಲೇರಿ 55,888.31ರಲ್ಲಿ ವ್ಯವಹಾರ ನಡೆಸಿತು. ಇನ್ನು ನಿಫ್ಟಿ 354.80 ಪಾಯಿಂಟ್ಸ್ ಅಥವಾ ಶೇ 2.17ರಷ್ಟು ಹೆಚ್ಚಳವಾಗಿ 16,700.20 ಪಾಯಿಂಟ್ಸ್​ನಲ್ಲಿ ಇತ್ತು, 2534 ಕಂಪೆನಿಯ ಷೇರುಗಳು ಏರಿಕೆಯನ್ನು ದಾಖಲಿಸಿದರೆ, 359 ಕಂಪೆನಿಯ ಷೇರುಗಳು ಇಳಿಕೆ ದಾಖಲಿಸಿದ್ದು, 69 ಕಂಪೆನಿಯ ಷೇರುಗಳ ಬೆಲೆಯಲ್ಲಿ ಯಾವುದೇ ದರ ಬದಲಾವಣೆ ಆಗಿಲ್ಲ. ಎಲ್ಲ ವಲಯಗಳು ಏರಿಕೆಯನ್ನು ದಾಖಲಿಸಿದವು. ಬಿಎಸ್​ಇ ವಾಹನ ಸೂಚ್ಯಂಕ ಶೇ 3.17, ಬಿಎಸ್​ಇ ಕ್ಯಾಪಿಟಲ್​ ಗೂಡ್ಸ್ ಶೇ 2.17, ಬಿಎಸ್​ಇ ಎಫ್​ಎಂಸಿಜಿ ಶೇ 1.67, ವಿದ್ಯುತ್ ಶೇ 2.05, ರಿಯಾಲ್ಟಿ ಶೇ 3.29ರಷ್ಟು ಏರಿವೆ. ಇನ್ನು ಬಿಎಸ್​ಇ ಮಿಡ್​ಕ್ಯಾಪ್ ಶೇ 1.67 ಹಾಗೂ ಸ್ಮಾಲ್​ಕ್ಯಾಪ್ ಶೇ 2.07ರಷ್ಟು ಹೆಚ್ಚಳ ಆಗಿದ್ದವು.

ವಿಶ್ಲೇಷಕರು ಹೇಳುವಂತೆ, ಚಿನ್ನದ ಬೆಲೆಯು ಯಾವುದೇ ಸಂದರ್ಭದಲ್ಲಿ ಪ್ರತಿ 10 ಗ್ರಾಮ್​ಗೆ 55,000 ರೂಪಾಯಿ ಮಟ್ಟವನ್ನು ತಲುಪಬಹುದು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇಂದಿನ ವಹಿವಾಟಿನಲ್ಲಿ ಡಾಲರ್ ವಿರುದ್ಧ ರೂಪಾಯಿ ಮೌಲ್ಯ 28 ಪೈಸೆ ಗಳಿಕೆಯೊಂದಿಗೆ ಆರಂಭವಾಗಿದೆ. ಈ ಹಿಂದಿನ ದಿನದಲ್ಲಿ 76.56ರಲ್ಲಿ ಮುಕ್ತಾಯ ಆಗಿತ್ತು. ಗುರುವಾರ ಬೆಳಗ್ಗೆ  76.28ರಲ್ಲಿ ಆರಂಭವಾಯಿತು. ಕಚ್ಚಾ ತೈಲ ಬೆಲೆಯಲ್ಲಿನ ಇಳಿಕೆ ಹಾಗೂ ಡಾಲರ್​ ಮೌಲ್ಯ ಕಡಿಮೆ ಆದದ್ದು, ಜಾಗತಿಕ ಅಂಶಗಳು ಸಹ ರೂಪಾಯಿಗೆ ಬಲ ತುಂಬಲಿದೆ ಎಂಬ ನಿರೀಕ್ಷೆಯನ್ನು ತಂದಿದೆ.

ಈ ಲೇಖನವನ್ನು ಸಿದ್ಧಪಡಿಸುವ ಹೊತ್ತಿಗೆ ಸೆನ್ಸೆಕ್ಸ್ 1300ಕ್ಕೂ ಹೆಚ್ಚು ಪಾಯಿಂಟ್ಸ್, ನಿಫ್ಟಿ 375 ಪಾಯಿಂಟ್ಸ್ ಹೆಚ್ಚಳ ಆಗಿತ್ತು.

ನಿಫ್ಟಿಯಲ್ಲಿ ಏರಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಟಾಟಾ ಮೋಟಾರ್ಸ್ ಶೇ 6.55

ಆಕ್ಸಿಸ್ ಬ್ಯಾಂಕ್ ಶೇ 6.45

ಇಂಡಸ್​ಇಂಡ್​ ಬ್ಯಾಂಕ್ ಶೇ 5.27

ಗ್ರಾಸಿಮ್ ಶೇ 5.01

ಬಜಾಜ್ ಫಿನ್​ಸರ್ವ್ ಶೇ 4.96

ನಿಫ್ಟಿಯಲ್ಲಿ ಇಳಿಕೆ ಕಂಡ ಷೇರುಗಳು ಹಾಗೂ ಶೇಕಡಾವಾರು ಪ್ರಮಾಣ

ಕೋಲ್ ಇಂಡಿಯಾ ಶೇ -3.91

ಹಿಂಡಾಲ್ಕೊ ಶೇ -1.33

ಒಎನ್​ಜಿಸಿ ಶೇ -0.86

ಟೆಕ್​ ಮಹೀಂದ್ರಾ ಶೇ -0.71

ಎಚ್​ಸಿಎಲ್​ ಟೆಕ್ ಶೇ -0.33

ಇದನ್ನೂ ಓದಿ: Multibagger penny stocks: ಈ ಮಲ್ಟಿಬ್ಯಾಗರ್ ಪೆನ್ನಿ ಸ್ಟಾಕ್​ನಲ್ಲಿ ಹೂಡಿದ 1 ಲಕ್ಷ ರೂಪಾಯಿ 10 ವರ್ಷಗಳಲ್ಲಿ ರೂ. 4 ಕೋಟಿಗೆ