Sensex: ದಾಖಲೆಯ ದಾರಿಯಲ್ಲಿ ಷೇರು ಮಾರುಕಟ್ಟೆ, 51 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್​.. ಕಾರಣವೇನು?

Sensex Gains: ಆರ್ಥಿಕ ತಜ್ಞರು ಹೇಳುವಂತೆ ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮೇಲೆ ಮಾರುಕಟ್ಟೆಯನ್ನು ಅಳೆಯುವುದೇ ದೊಡ್ಡ ತಪ್ಪು. ಮಾರುಕಟ್ಟೆಯ ಬೆಳವಣಿಗೆಯನ್ನು ನಿರ್ಧರಿಸುವುದೇ ಭವಿಷ್ಯದ ಆರ್ಥಿಕತೆ

Sensex: ದಾಖಲೆಯ ದಾರಿಯಲ್ಲಿ ಷೇರು ಮಾರುಕಟ್ಟೆ, 51 ಸಾವಿರದ ಗಡಿ ದಾಟಿದ ಸೆನ್ಸೆಕ್ಸ್​.. ಕಾರಣವೇನು?
ಪ್ರಾತಿನಿಧಿಕ ಚಿತ್ರ
Follow us
Skanda
|

Updated on:Feb 05, 2021 | 11:52 AM

ಭಾರತದ ಷೇರು ಮಾರುಕಟ್ಟೆ ಕಂಡುಕೇಳರಿಯದ ದಾಖಲೆಗೆ ಸಾಕ್ಷಿಯಾಗಿದೆ. ಷೇರು ಮಾರುಕಟ್ಟೆ ಸೂಚ್ಯಂಕ ನಿಫ್ಟಿ 15,000ದ ಗಡಿ ದಾಟಿದ್ದು, ಸೆನ್ಸೆಕ್ಸ್​ 51,000ದ ಆಸುಪಾಸಿಗೆ ಹೋಗಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದೆ. ಒಂದೆಡೆ ಕೊರೊನಾದಿಂದ ಆರ್ಥಿಕತೆ ಮುಳುಗಿದೆ, ರೈತರ ಹೋರಾಟದಿಂದ ಪರಿಸ್ಥಿತಿ ಹದಗೆಡುತ್ತಿದೆ ಎಂಬ ಹತ್ತು ಹಲವು ವಾದಗಳ ನಡುವೆಯೂ ಷೇರುಪೇಟೆ ಈ ತೆರನಾದ ಅದ್ಭುತ ಬೆಳವಣಿಗೆ ಕಾಣಲು ಕಾರಣವೇನು ಎನ್ನುವ ಕುರಿತಾದ ಸಂಕ್ಷಿಪ್ತ ಮಾಹಿತಿ ಇಲ್ಲಿದೆ. ಆರ್ಥಿಕ ತಜ್ಞರು ಹೇಳುವಂತೆ ದೇಶದ ಪ್ರಸ್ತುತ ಆರ್ಥಿಕ ಪರಿಸ್ಥಿತಿ ಮೇಲೆ ಮಾರುಕಟ್ಟೆಯನ್ನು ಅಳೆಯುವುದೇ ದೊಡ್ಡ ತಪ್ಪು. ಮಾರುಕಟ್ಟೆಯ ಬೆಳವಣಿಗೆಯನ್ನು ನಿರ್ಧರಿಸುವುದೇ ಭವಿಷ್ಯದ ಆರ್ಥಿಕತೆ ಎನ್ನುವುದನ್ನು ಅರಿತುಕೊಳ್ಳಬೇಕಿದೆ. ಅಂದರೆ ಇಂದು ಷೇರು ಮಾರುಕಟ್ಟೆ ಅತ್ಯುತ್ತಮ ಪ್ರಗತಿ ತೋರಿಸುತ್ತಿದೆ ಎಂದರೆ ಮುಂದಿನ ದಿನಗಳಲ್ಲಿ ಭಾರತದ ಆರ್ಥಿಕತೆ ಪುಟಿದೇಳಲಿದೆ ಎಂಬ ಸೂಚನೆ.

ಕೊರೊನಾ ಬಂದ ನಂತರ ಕಳೆದ 2020-21ನೇ ಸಾಲಿನ ದೇಶದ ಜಿಡಿಪಿ ಶೇ.9.5ರಿಂದ ಶೇ.10ರಷ್ಟು ಕುಸಿತ ಕಾಣಬಹುದು ಎಂದೇ ಎಲ್ಲರೂ ನಿರೀಕ್ಷಿಸಿದ್ದರು. ಆದರೆ, ಎಲ್ಲಾ ಸಂಕಷ್ಟಗಳ ನಡುವೆಯೂ ಮಾರುಕಟ್ಟೆ ಜಿಡಿಪಿ ಕೇವಲ ಶೇ.6ರಿಂದ ಶೇ.6.5ರಷ್ಟು ಮಾತ್ರ ಕುಸಿತ ಕಂಡಿದೆ. ಇಷ್ಟಾದ ನಂತರವೂ ಜನ ಶೇ.6.5ರಷ್ಟು ಕುಸಿತ ಕಂಡರೂ ಮಾರುಕಟ್ಟೆ ಏರುತ್ತಿದೆಯಲ್ಲಾ ಎಂದು ಯೋಚಿಸುತ್ತಿದ್ದಾರೆಯೇ ವಿನಃ ನಿರೀಕ್ಷೆಗಿಂತಲೂ ಕಡಿಮೆ ಕುಸಿತ ಕಂಡಿರುವುದು ಆಶಾದಾಯಕ ಬೆಳವಣಿಗೆ ಎನ್ನುವುದನ್ನು ಯೋಚಿಸುವುದಿಲ್ಲ. ಈ ನಡುವೆ 2021-22ನೇ ಸಾಲಿನ ಜಿಡಿಪಿ ಶೇ.3ರಿಂದ ಶೇ.4ರಷ್ಟು ಏರಿಕೆ ಕಾಣಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಈಗ ಬರುತ್ತಿರುವ ಸೂಚನೆಯ ಪ್ರಕಾರ ಜಿಡಿಪಿ ಶೇ.11ರಿಂದ ಶೇ.11.5ರಷ್ಟು ಏರಿಕೆ ಕಾಣಲಿದೆ ಎನ್ನಲಾಗುತ್ತಿದೆ. ಈ ಬೆಳವಣಿಗೆಯ ಪ್ರತಿಫಲನವೇ ಷೇರು ಮಾರುಕಟ್ಟೆಯ ಅಭೂತಪೂರ್ವ ದಾಖಲೆ.

ಇನ್ನೊಂದೆಡೆ ಕೇಂದ್ರ ಬಜೆಟ್​ 2021 ಷೇರು ಮಾರುಕಟ್ಟೆಗೆ ವರದಾನವಾಗಿದೆ. ಬಜೆಟ್​ ಪೂರ್ವದಲ್ಲಿ ಎಲ್ಲರ ಲೆಕ್ಕಾಚಾರವೂ ಸರ್ಕಾರ ಆದಾಯ ಕ್ರೋಢೀಕರಿಸಲು ತೆರಿಗೆ ಹೆಚ್ಚಳ ಮಾಡಬಹುದು, ಕೊವಿಡ್​ ಸೆಸ್​ ವಿಧಿಸಬಹುದು, ಶ್ರೀಮಂತರ ಸಂಪತ್ತಿನ ಮೇಲೆ ಕಣ್ಣು ಹಾಕಬಹುದು ಎಂದಿತ್ತು. Security Transactional Tax (STT) Long Term Capital Gain Tax (LTCG) ಏರಿಸಬಹುದು ಎನ್ನುವ ಊಹೆಯಿತ್ತು. ಆದರೆ, ಈ ನಿರೀಕ್ಷೆಗಳನ್ನು ಹುಸಿಗೊಳಿಸಿ ಬಜೆಟ್​ನಲ್ಲಿ ಕೃಷಿ ಸೆಸ್​ ವಿಧಿಸಿದ್ದನ್ನು ಹೊರತುಪಡಿಸಿದರೆ ತೆರಿಗೆಯಲ್ಲಿ ಯಾವುದೇ ಬದಲಾವಣೆ ತರಲಿಲ್ಲ. ಜೊತೆಗೆ, ಆದಾಯವನ್ನು ಹೆಚ್ಚಿಸಲಿಕ್ಕಾಗಿ ತೆರಿಗೆ ಸೋರಿಕೆಯನ್ನು ತಡೆಗಟ್ಟುತ್ತೀವಿ ಎಂಬ ಜಾಣ ನಡೆಯನ್ನಿಟ್ಟಿತು. ದೇಶದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.3ರಿಂದ ಶೇ.4ರಷ್ಟು ಮಂದಿ ತೆರಿಗೆ ಕಟ್ಟುತ್ತಿದ್ದಾರೆ. ಇವರ ಮೇಲೆ ಪದೇಪದೇ ಬರೆ ಹಾಕುವ ಬದಲು ತೆರಿಗೆ ವ್ಯಾಪ್ತಿಗೆ ಹೆಚ್ಚು ಜನರನ್ನು ತರುವ ಯೋಚನೆಯನ್ನು ಮಾಡಲಾಗಿದೆ. ಇದೆಲ್ಲದರ ಪರಿಣಾಮವಾಗಿ ಷೇರುಮಾರುಕಟ್ಟೆಯಲ್ಲಿ ಬಜೆಟ್​ ನಂತರ ಮೇಲ್ಮುಖವಾಗಿ ಚಲಿಸುತ್ತಿದೆ.

ಮಾಹಿತಿ: ರುದ್ರಮೂರ್ತಿ, ಆರ್ಥಿಕ ತಜ್ಞ

50 ಸಾವಿರ ಗಡಿ ದಾಟಿಯೇ ಬಿಟ್ಟಿತು ಭಾರತೀಯ ಷೇರು ಮಾರುಕಟ್ಟೆ ಸೂಚ್ಯಂಕ..! ರಿಲಯನ್ಸ್​, ಇನ್ಪೋಸಿಸ್​ ಷೇರುಗಳಿಗೆ ಹೆಚ್ಚು ಲಾಭ

Published On - 11:44 am, Fri, 5 February 21

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್