ನಾಳೆ ತಲಕಾವೇರಿಗೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಭೇಟಿ; ಸಾರ್ವಜನಿಕರಿಗೆ ಪ್ರವೇಶ ನಿಷೇಧ
ರಾಮ್ನಾಥ್ ಕೋವಿಂದ್ ಭೇಟಿ ಹಿನ್ನೆಲೆಯಲ್ಲಿ ತಲಕಾವೇರಿಯಲ್ಲಿ ಐದು ಅರ್ಚಕರಿಗೆ ಮಾತ್ರ ಪೂಜೆಗೆ ಅವಕಾಶವನ್ನು ನೀಡಲಾಗಿದೆ.

ಕೊಡಗು: ಜಿಲ್ಲೆಯ ತಲಕಾವೇರಿಗೆ ನಾಳೆ ರಾಷ್ಟ್ರಪತಿ ರಾಮ್ನಾಥ್ ಕೋವಿಂದ್ ಭೇಟಿ ಹಿನ್ನೆಲೆ ತಲಕಾವೇರಿ ಮತ್ತು ಭಾಗಮಂಡಲ ದೇಗುಲಕ್ಕೆ ಇಂದು ಮತ್ತು ನಾಳೆ ಸಾರ್ವಜನಿಕರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ.
ರಾಷ್ಟ್ರಪತಿ ಕೋವಿಂದ್ ನಾಳೆ ಕುಟುಂಬ ಸಮೇತರಾಗಿ ಮಡಿಕೇರಿಗೆ ಭೇಟಿ ನೀಡಲಿದ್ದು, ತಲಕಾವೇರಿ ಹಾಗು ಭಾಗಮಂಡಲ ದೇಗುಲಕ್ಕೆ ಸ್ಯಾನಿಟೈಸ್ ಮಾಡಲಾಗುತ್ತದೆ. ಈಗಾಗಲೇ ಅರ್ಚಕರು ಕೊರೊನಾ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಜೊತೆಗೆ ನಾಳೆ ತಲಕಾವೇರಿಯಲ್ಲಿ ಐದು ಅರ್ಚಕರಿಗೆ ಮಾತ್ರ ಪೂಜೆಗೆ ಅವಕಾಶವನ್ನು ನೀಡಲಾಗಿದೆ.
ಜನರಲ್ ತಿಮ್ಮಯ್ಯ ವಾರ್ ಮ್ಯೂಸಿಯಂ ಉದ್ಘಾಟನೆಗೆ ಆಗಮಿಸುತ್ತಿರುವ ರಾಷ್ಟ್ರಪತಿ, ನಾಳೆ ಬೆಳಗ್ಗೆ 11 ಗಂಟೆಗೆ ತಲಕಾವೇರಿಗೆ ಭೇಟಿ ನೀಡಲಿದ್ದಾರೆ. 3 ಗಂಟೆಗೆ ಸನ್ನಿ ಸೈಡ್ ಉದ್ಘಾಟನೆ ಮಾಡಿ 35 ನಿಮಿಷ ಕಾಲ ವೀಕ್ಷಣೆ ಮಾಡುತ್ತಾರೆ. ಆಯ್ದ ಕೆಲವು ಗಣ್ಯರಿಗೆ ಮಾತ್ರ ಅವಕಾಶ ನೀಡಲಾಗಿದೆ.