ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವಾಗಿ ಇದೆ: ವಿಪಕ್ಷ ನಾಯಕ ಸಿದ್ದರಾಮಯ್ಯ
ಆಡಳಿತ ಮಂಡಳಿಯವರು ಅಷ್ಟು ಸುಲಭವಾಗಿ ಬಗ್ಗುವುದಿಲ್ಲ. ಅಸೆಂಬ್ಲಿಯಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ. ಸರ್ಕಾರದ ಗಮನವನ್ನು ಸೆಳೆಯುತ್ತೇನೆ. ಸಿಎಂ ಹಾಗೂ ಕಾರ್ಮಿಕ ಸಚಿವರ ಮೇಲೆ ಒತ್ತಡ ಹಾಕುತ್ತೇನೆ. ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವಾಗಿ ಇದೆ ಎಂದು ಸಿದ್ದರಾಮಯ್ಯ ತಿಳಿಸಿದರು.

ರಾಮನಗರ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಳೆದ 80 ದಿನಗಳಿಂದ ಮುಷ್ಕರ ನಡೆಸುತ್ತಿರುವ ಟೊಯೋಟಾ ಕಾರ್ಖಾನೆಯ ಬಿಡದಿ ಘಟಕದ ಕಾರ್ಮಿಕರು ಮತ್ತವರ ಕುಟುಂಬದವರನ್ನು ಇಂದು ಸಿದ್ದರಾಮಯ್ಯ ಭೇಟಿ ಮಾಡಿ, ಅಹವಾಲು ಆಲಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾರ್ಮಿಕರು, ಬಿಡದಿಗೆ ಆಗಮಿಸಿದ ಸಿದ್ದರಾಮಯ್ಯ ಅವರನ್ನು ಬೈಕ್ ಮೆರವಣಿಗೆಯ ಮೂಲಕ ಬರ ಮಾಡಿಕೊಂಡಿದ್ದು, ಈ ಸಂದರ್ಭದಲ್ಲಿ ಶಾಸಕರಾದ ರವಿ, ಸಿ.ಎಂ. ಲಿಂಗಪ್ಪ, ಮಾಜಿ ಶಾಸಕರಾದ ಮಾಗಡಿಯ ಬಾಲಕೃಷ್ಣ ಮತ್ತಿರರು ಹಾಜರಿದ್ದರು.
ಇದೇ ವೇಳೆ ದೂರವಾಣಿ ಮೂಲಕ ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಅವರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಆಡಳಿತ ಮಂಡಳಿ ಹಾಗೂ ಕಾರ್ಮಿಕ ನಾಯಕರ ಸಭೆ ಕರೆದು ಸಮಸ್ಯೆ ಬಗೆಹರಿಸುವಂತೆ ಒತ್ತಾಯಿಸಿದರು.

ಬಿಡದಿ ಘಟಕದ ಕಾರ್ಮಿಕರು ಮತ್ತವರ ಕುಟುಂಬದವರ ಜೊತೆ ಸಿದ್ದರಾಮಯ್ಯ ಸಂವಾದ
ಈ ಸಂದರ್ಭದಲ್ಲಿ ಟೊಯೋಟಾ ಕಾರ್ಮಿಕರನ್ನ ಉದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಾರ್ಮಿಕರ ಜೊತೆ ಕುಳಿತು ಮಾತನಾಡುವಂತೆ ಆಡಳಿತ ಮಂಡಳಿಗೆ ಸೂಚಿಸಿದ್ದೆ. ಆದರೆ ಆಡಳಿತ ಮಂಡಳಿ ಇದುವರೆಗೂ ಸಮಸ್ಯೆ ಬಗೆಹರಿಸಿಲ್ಲ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ಗೂ ಕೂಡ ಸೂಚಿಸಿದ್ದೆ. ನಾವು ಈ ಕಂಪನಿಗೆ ಜಮೀನು, ನೀರು, ವಿದ್ಯುತ್ ನೀಡಿದ್ದೇವೆ. ಕಂಪನಿ ಆಡಳಿತ ಮಂಡಳಿ ಕೂಡ ಕಾರ್ಮಿಕರನ್ನ ಜವಾಬ್ದಾರಿಯುತವಾಗಿ ನೋಡಿಕೊಳ್ಳಬೇಕು ಎಂದು ಹೇಳಿದರು.

ಮೆರವಣಿಗೆಯ ಮೂಲಕ ಸಿದ್ದರಾಮಯ್ಯ ಅವರನ್ನು ಬರ ಮಾಡಿಕೊಂಡ ದೃಶ್ಯ
ಕಂಪನಿ ಜಪಾನ್ನ ಕಾನೂನುನನ್ನು ಇಲ್ಲಿ ಜಾರಿ ಮಾಡುತ್ತಿದೆ. ಆದರೆ ಇಲ್ಲಿ ಈ ದೇಶದ ಕಾನೂನು ಅವರು ಅನುಸರಿಸಬೇಕು. ಜಪಾನ್ ಕಾನೂನುಗಳನ್ನ ಇಲ್ಲಿ ಅಳವಡಿಸಲು ಸಾಧ್ಯವಿಲ್ಲ. ನಾವು ಟಯೋಟಾ ಕಂಪನಿಗೆ ಸಾಕಷ್ಟು ಸೌಲಭ್ಯಗಳನ್ನ ನೀಡಿದ್ದೇವೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಸಭೆ ಕರೆದು ಸಮಸ್ಯೆ ಬಗೆಹರಿಸಬೇಕು. ಅದನ್ನು ಬಿಟ್ಟು ನನಗೂ ಇದಕ್ಕು ಸಂಬಂಧವಿಲ್ಲ ಎಂದು ಹೇಳುವುದಲ್ಲ. ಜಿಲ್ಲಾ ಉಸ್ತುವಾರಿ ಸಚಿವರ ಪಾತ್ರ ಕೂಡ ಇದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಪ್ರತಿಭಟನಾಕಾರರ ಜೊತೆ ಸಂವಾದದಲ್ಲಿ ಸಿದ್ದರಾಮಯ್ಯ
ಆಡಳಿತ ಮಂಡಳಿಯವರು ಅಷ್ಟು ಸುಲಭವಾಗಿ ಬಗ್ಗುವುದಿಲ್ಲ. ಅಸೆಂಬ್ಲಿಯಲ್ಲಿ ಈ ವಿಚಾರ ಪ್ರಸ್ತಾಪ ಮಾಡುತ್ತೇನೆ. ಸರ್ಕಾರದ ಗಮನವನ್ನು ಸೆಳೆಯುತ್ತೇನೆ. ಸಿಎಂ ಹಾಗೂ ಕಾರ್ಮಿಕ ಸಚಿವರ ಮೇಲೆ ಒತ್ತಡ ಹಾಕುತ್ತೇನೆ. ಕಾಂಗ್ರೆಸ್ ಪಕ್ಷ ಕಾರ್ಮಿಕರ ಪರವಾಗಿ ಇದೆ ಎಂದು ತಿಳಿಸಿದರು.
ಛತ್ರಿ ಹಿಡಿದು ಕುಳಿತ ಟೊಯೋಟಾ ಕಾರ್ಮಿಕರು.. ಟ್ವಿಟರ್ನಲ್ಲಿ ಸದ್ದು ಮಾಡಿದ ಪ್ರತಿಭಟನೆ