ಬೆಳ್ಳಿ ಬೆಲೆ ಕುಸಿತ ಕಾಣಲಿದೆ: ರಾಬರ್ಟ್ ಕಿಯೋಸಾಕಿ ಎಚ್ಚರಿಕೆ
Robert Kiyosaki warns that Silver price may crash soon: ಕಳೆದ ಒಂದೆರಡು ವರ್ಷದಿಂದ ಯದ್ವಾತದ್ವಾ ಏರುತ್ತಿರುವ ಬೆಳ್ಳಿ ಬೆಲೆ ಸದ್ಯದಲ್ಲೇ ಕುಸಿಯಬಹುದು ರಾಬರ್ಟ್ ಕಿಯೋಸಾಕಿ ಭವಿಷ್ಯ ಹೇಳಿದ್ದಾರೆ. ಸ್ಪೆಕುಲೇಟರ್ಗಳು ಬೆಳ್ಳಿಯನ್ನು ಮಾರಾಟ ಮಾಡುವುದು ಹೆಚ್ಚುವುದರಿಂದ ಇದು ಪ್ರೈಸ್ ಕರೆಕ್ಷನ್ ಹೊಂದಬಹುದು ಎಂದಿದ್ದಾರೆ ಕಿಯೋಸಾಕಿ. ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಕರ್ತೃವಾದ ಕಿಯೋಸಾಕಿ ಅವರು ಚಿನ್ನ, ಬೆಳ್ಳಿ ಇತ್ಯಾದಿ ನೈಜ ವಸ್ತುಗಳಲ್ಲಿ ಹೂಡಿಕೆ ಮಾಡಲು ಶಿಫಾರಸು ಮಾಡುತ್ತಾರೆ.

ವಾಷಿಂಗ್ಟನ್, ಜನವರಿ 15: ಸಿಕ್ಕಾಪಟ್ಟೆ ಏರುತ್ತಿರುವ ಬೆಳ್ಳಿ ಬೆಲೆ ಮತ್ತೆ ಇಳಿಕೆ ಆಗುತ್ತಾ? ಬೆಳ್ಳಿಯ ಪ್ರೈಸ್ ಕರೆಕ್ಷನ್ ಆಗುತ್ತಾ ಎನ್ನುವ ಪ್ರಶ್ನೆ ಮತ್ತು ಆತಂಕ ಹಲವು ಭಾರತೀಯರಿಗೆ ಇದೆ. ‘ರಿಚ್ ಡ್ಯಾಡ್ ಪೂರ್ ಡ್ಯಾಡ್’ ಸರಣಿಯ ಪುಸ್ತಕಗಳ ಕರ್ತೃ ರಾಬರ್ಟ್ ಕಿಯೋಸಾಕಿ ಅವರ ಪ್ರಕಾರ ಬೆಳ್ಳಿ ಬೆಲೆ ಸದ್ಯದ ಮಟ್ಟಿಗೆ ಗರಿಷ್ಠ ಮಟ್ಟ ಮುಟ್ಟಿದ್ದು, ಯಾವಾಗ ಬೇಕಾದರೂ ಕುಸಿತ ಕಾಣಬಹುದು. ಬೆಲೆ ಕುಸಿತ ಕಂಡ ಬಳಿಕ ಬೆಳ್ಳಿಗೆ ಮತ್ತೆ ಬೇಡಿಕೆ ಶುರುವಾಗುತ್ತದೆ ಎಂದೂ ಕಿಯೋಸಾಕಿ ಭವಿಷ್ಯ ನುಡಿದಿದ್ದಾರೆ.
ಲಾಭಕ್ಕೆ ಬೆಳ್ಳಿ ಮಾರಾಟವಾಗುತ್ತಿರುವ ಪರಿಣಾಮ…
ಬೆಳ್ಳಿ ಬೆಲೆ ಸಿಕ್ಕಾಪಟ್ಟೆ ಏರಿರುವುದರಿಂದ ಲಾಭಕ್ಕೆ ಮಾರುವವರ ಸಂಖ್ಯೆ ಹೆಚ್ಚಬಹುದು. ಇದರಿಂದ ಬೆಳ್ಳಿ ಬೆಲೆ ಕುಸಿತ ಕಾಣಬಹುದು ಎಂದು ಹೇಳುವ ರಾಬರ್ಟ್ ಕಿಯೋಸಾಕಿ, ಬೆಲೆ ಕುಸಿತ ಕಂಡ ಬಳಿಕ ಬೆಳ್ಳಿ ಬೆಲೆ ಮತ್ತೆ ಏರಲು ತೊಡಗುತ್ತದೆ ಎನ್ನುತ್ತಾರೆ.
ಇದನ್ನೂ ಓದಿ: ಚಿನ್ನದ ಬೆಲೆ ಇಳಿಕೆ; ಬೆಳ್ಳಿ ಹೊಸ ದಾಖಲೆ
ರಾಬರ್ಟ್ ಕಿಯೋಸಾಕಿ ಏನು ಮಾಡುತ್ತಾರೆ?
ರಿಚ್ ಡ್ಯಾಡ್ ಪೂರ್ ಡ್ಯಾಡ್ ಪುಸ್ತಕದ ಬರಹಗಾರರಾದ ಕಿಯೋಸಾಕಿ ಅವರು ಬೆಳ್ಳಿ ಬೆಲೆ ಔನ್ಸ್ಗೆ 100 ಡಾಲರ್ ಆಗುವವರೆಗೂ ಆ ಲೋಹದ ಖರೀದಿ ಮಾಡುತ್ತಾರಂತೆ. ಆ ಬಳಿಕ ಸೂಕ್ತ ಸಮಯಕ್ಕೆ ಕಾಯುತ್ತಾರಂತೆ.
ಸದ್ಯ ಬೆಳ್ಳಿ ಬೆಲೆ ಒಂದು ಔನ್ಸ್ಗೆ ಸುಮಾರು 89-90 ಡಾಲರ್ ಇದೆ. ಕಿಯೋಸಾಕಿ ಪ್ರಕಾರ ಬೆಳ್ಳಿ ಇನ್ನೂ ಶೇ. 10ರಷ್ಟು ಬೆಳೆದ ಬಳಿಕ ಕುಸಿಯುವ ಸಾಧ್ಯತೆ ಇದೆ. ಬೆಳ್ಳಿಯನ್ನು ಮಾರಿ ಡಾಲರ್ ಪಡೆಯುವುದು ಮೂರ್ಖತನ ಎನ್ನುವ ಅವರು, ಬೆಳ್ಳಿ ಮಾರಿದರೆ ಅದನ್ನು ಚಿನ್ನದ ಮೇಲೆ ಹೂಡಿಕೆ ಮಾಡುವುದಾಗಿ ಹೇಳುತ್ತಾರೆ.
ಬೆಳ್ಳಿ ಬೆಲೆ ಕುಸಿತ ಮುಗಿದು ಮತ್ತೆ ಏರಿಕೆಯ ಹಾದಿಗೆ ಬಂದಾಗ ರಾಬರ್ಟ್ ಕಿಯೋಸಾಕಿ ಮತ್ತೆ ಬೆಳ್ಳಿಗೆ ಹೂಡಿಕೆ ಮಾಡುವುದಾಗಿ ಸುಳಿವು ಕೊಟ್ಟಿದ್ದಾರೆ. ರಾಬರ್ಟ್ ಕಿಯೋಸಾಕಿ ಅವರ ಈ ಸೋಷಿಯಲ್ ಮೀಡಿಯಾ ಪೋಸ್ಟ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕಿಯೋಸಾಕಿ ಅವರು ಮಾರುಕಟ್ಟೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಅಥವಾ ಜನರ ದಾರಿ ತಪ್ಪಿಸುತ್ತಿದ್ದಾರೆ ಎಂದು ಹಲವು ಕಾಮೆಂಟ್ ಮಾಡಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ
ರಾಬರ್ಟ್ ಕಿಯೋಸಾಕಿ ಅವರು ಬಹಳ ವರ್ಷಗಳಿಂದಲೂ ಷೇರು ಮಾರುಕಟ್ಟೆ ಮತ್ತು ಕರೆನ್ಸಿ ಹಣದ ವಿರುದ್ಧ ಜನರನ್ನು ಎಚ್ಚರಿಸುತ್ತಲೇ ಇದ್ದಾರೆ. ಸದ್ಯ ಷೇರು ಮಾರುಕಟ್ಟೆ ಅತ್ಯಂತ ಉಬ್ಬರದ ಸ್ಥಿತಿಯಲ್ಲಿದ್ದು, ಇದು ಬಲೂನಿನಂತೆ ಠುಸ್ ಎನ್ನಲಿದೆ ಎಂದು ಕಳೆದ ಒಂದೆರಡು ವರ್ಷದಿಂದಲೂ ವಾದಿಸುತ್ತಲೇ ಇದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




