AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ

US immigrant visa freeze on 75 countries from 2026 January 21st: ಅಮೆರಿಕ ಸರ್ಕಾರ 75 ದೇಶಗಳ ಜನರ ವಲಸೆ ವೀಸಾ ಅರ್ಜಿಗಳನ್ನು ಅನಿರ್ದಿಷ್ಟಾವಧಿವರೆಗೆ ಸ್ಥಗಿತಗೊಳಿಸಲು ನಿರ್ಧರಿಸಿದೆ. ವಲಸಿಗರಿಗೆ ಕಡಿವಾಣ ಹಾಕುವ ನೀತಿಯ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಜನವರಿ 21ರಿಂದ ಈ ಕ್ರಮ ಜಾರಿಗೆ ಬರುತ್ತಿದೆ. ವಲಸಿಗರಿಂದ ಅಮೆರಿಕದ ಸಮಾಜ ಹಾಗೂ ದೇಶದ ಭದ್ರತೆಗೆ ಅಪಾಯವಾಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ.

ಪಾಕಿಸ್ತಾನ, ಬಾಂಗ್ಲಾ ಸೇರಿ 75 ದೇಶಗಳ ಜನರಿಗೆ ಇಲ್ಲ ಅಮೆರಿಕದ ವಲಸೆ ವೀಸಾ; ಇಲ್ಲಿದೆ ಪಟ್ಟಿ
ಅಮೆರಿಕ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jan 15, 2026 | 1:02 PM

Share

ವಾಷಿಂಗ್ಟನ್, ಜನವರಿ 15: ದೇಶದೊಳಗೆ ಸಾಮಾಜಿಕ ಮತ್ತು ಕಾನೂನಾತ್ಮಕವಾಗಿ ಸಮಸ್ಯೆಗಳನ್ನು ತರಬಲ್ಲಂತಹ ವಿದೇಶೀಯರನ್ನು ನಿರ್ಬಂಧಿಸುವ ಸಲುವಾಗಿ ಅಮೆರಿಕ ಸರ್ಕಾರ ಕೆಲ ದೇಶಗಳ ನಿವಾಸಿಗಳಿಗೆ ವೀಸಾ ನೀಡುವಿಕೆಯನ್ನು (US Immigration Visa) ಸ್ಥಗಿತಗೊಳಿಸಿದೆ. ಒಟ್ಟು 75 ದೇಶಗಳಿಗೆ ಅಮೆರಿಕದ ವೀಸಾ ಪ್ರಕ್ರಿಯೆಯನ್ನು ಅನಿರ್ದಿಷ್ಟಾವಧಿವರೆಗೆ ಫ್ರೀಜ್ ಮಾಡಲಾಗಿದೆ. ಈ 75 ದೇಶಗಳ ಪೈಕಿ ಪಾಕಿಸ್ತಾನ, ಬಾಂಗ್ಲಾದೇಶ ಮೊದಲಾದವರು ಸೇರಿವೆ. ಪಾಕಿಸ್ತಾನದೊಂದಿಗೆ ಅಮೆರಿಕದ ಸಂಬಂಧಕ್ಕೆ ಹೊಸ ಪುಷ್ಟಿ ಸಿಕ್ಕಿರುವ ಹೊತ್ತಲ್ಲೇ ಈ ಬೆಳವಣಿಗೆ ನಡೆದಿದೆ.

ಗಮನಿಸಬೇಕಾದ ಸಂಗತಿ ಎಂದರೆ ಮೇಲಿನ ವೀಸಾ ನಿರ್ಬಂಧವು ವಲಸಿಗರಿಗೆ ಮಾತ್ರವೇ ಅನ್ವಯ ಆಗುವುದು. ಇಮ್ಮೈಗ್ರೇಶನ್ ವೀಸಾ ಅರ್ಜಿ ಸಲ್ಲಿಸಿರುವವರ ಪೈಕಿ ಆಯ್ದ 75 ದೇಶಗಳ ಜನರ ಅರ್ಜಿ ಪ್ರಕ್ರಿಯೆ ಮುಂದುವರಿಯುವುದಿಲ್ಲ. ಆದರೆ, ಪ್ರವಾಸ, ಬ್ಯುಸಿನೆಸ್ ಇತ್ಯಾದಿ ತಾತ್ಕಾಲಿಕವಾಗಿ ಬಂದು ಹೋಗುವವರಿಗೆ ತಡೆ ಇರುವುದಿಲ್ಲ, ವೀಸಾ ನಿರಾಕರಿಸಲಾಗುವುದಿಲ್ಲ.

ಇದನ್ನೂ ಓದಿ: 2025ರಲ್ಲಿ ಚೀನಾಗೆ ವ್ಯಾಪಾರ ಸುಗ್ಗಿ; ಭಾರತದ ರಫ್ತಿನಲ್ಲೂ 5.5 ಬಿಲಿಯನ್ ಡಾಲರ್​ನಷ್ಟು ಹೆಚ್ಚಳ

ಅಮೆರಿಕದ ವಲಸೆ ವೀಸಾ ಸ್ಥಗಿತಗೊಂಡಿರುವ 75 ದೇಶಗಳ ಪಟ್ಟಿ

  1. ಅಫ್ಗಾನಿಸ್ತಾನ
  2. ಆಲ್ಬೇನಿಯಾ
  3. ಆಲ್ಜೀರಿಯಾ
  4. ಆಂಟಿಗುವಾ ಬರ್ಬುಡಾ
  5. ಆರ್ಮೇನಿಯಾ
  6. ಅಜರ್ಬೈಜಾನ್
  7. ಬಹಾಮಸ್
  8. ಬಾಂಗ್ಲಾದೇಶ
  9. ಬಾರ್ಬಡಾಸ್
  10. ಬೆಲಾರಸ್
  11. ಬೆಲಿಜೆ
  12. ಭೂತಾನ್
  13. ಬೋಸ್ನಿಯಾ ಹರ್ಜೆಗೋವಿನಾ
  14. ಬ್ರೆಜಿಲ್
  15. ಕಾಂಬೋಡಿಯಾ
  16. ಕ್ಯಾಮರೂನ್
  17. ಕೇಪ್ ವೆರ್ಡೆ
  18. ಕೊಲಂಬಿಯಾ
  19. ಕೋಟೆ ಡೀ ಐವೋರೆ (ಐವರಿ ಕೋಸ್ಟ್)
  20. ಕ್ಯೂಬಾ
  21. ಕಾಂಗೊ ಡೆಮಾಕ್ರಟಿಕ್ ರಿಪಬ್ಲಿಕ್
  22. ಡಾಮಿನಿಕಾ
  23. ಈಜಿಪ್ಟ್
  24. ಎರಿಟ್ರಿಯಾ
  25. ಇಥಿಯೋಪಿಯಾ
  26. ಫಿಜಿ
  27. ಗಾಂಬಿಯಾ
  28. ಜಾರ್ಜಿಯಾ
  29. ಘಾನಾ
  30. ಗ್ರೆನಾಡಾ
  31. ಗಾಟಿಮಾಲ
  32. ಗಿನಿಯಾ
  33. ಹೈಟಿ
  34. ಇರಾನ್
  35. ಇರಾಕ್
  36. ಜಮೈಕಾ
  37. ಜಾರ್ಡಾನ್
  38. ಕಜಕಸ್ತಾನ್
  39. ಕೊಸೋವೋ
  40. ಕುವೇತ್
  41. ಕಿರ್ಗಿಸ್ತಾನ್
  42. ಲಾವೋಸ್
  43. ಲೆಬನಾನ್
  44. ಲೈಬೀರಿಯಾ
  45. ಲಿಬಿಯಾ
  46. ನಾರ್ತ್ ಮೆಸಿಡೋನಿಯಾ
  47. ಮಾಲ್ಡೋವಾ
  48. ಮಂಗೋಲಿಯಾ
  49. ಮಾಂಟೆನೀಗ್ರೋ
  50. ಮೊರಾಕ್ಕೋ
  51. ಮಯನ್ಮಾರ್
  52. ನೇಪಾಳ್
  53. ನಿಕಾರಾಗುವಾ
  54. ನೈಜೀರಿಯಾ
  55. ಪಾಕಿಸ್ತಾನ್
  56. ಕಾಂಗೋ ರಿಪಬ್ಲಿಕ್
  57. ರಷ್ಯಾ
  58. ರುವಾಂಡ
  59. ಸೇಂಟ್ ಕಿಟ್ಸ್ ಅಂಡ್ ನೆವಿಸ್
  60. ಸೇಂಟ್ ಲೂಸಿಯಾ
  61. ಸೇಂಟ್ ವಿನ್ಸೆಂಟ್ ಅಂಡ್ ಗ್ರಿನಾಡಿನ್ಸ್
  62. ಸೆನೆಗಲ್
  63. ಸಿಯೆರಾ ಲಿಯೋನೆ
  64. ಸೊಮಾಲಿಯಾ
  65. ಸೌತ್ ಸುಡಾನ್
  66. ಸುಡಾನ್
  67. ಸಿರಿಯಾ
  68. ತಾಂಜಾನಿಯಾ
  69. ಥಾಯ್ಲೆಂಡ್
  70. ಟೋಗೋ
  71. ಟುನಿಶಿಯಾ
  72. ಉಗಾಂಡ
  73. ಉರುಗ್ವೆ
  74. ಉಜ್ಬೆಕಿಸ್ತಾನ್
  75. ಯೆಮೆನ್

ಅಕ್ರಮ ವಲಸಿಗರ ಹಾವಳಿ ತಪ್ಪಿಸಲು ಈ ಕ್ರಮ

ಅಮೆರಿಕದಲ್ಲಿ ಸಾಮಾಜಿಕ ಭದ್ರತಾ ಸೌಲಭ್ಯಗಳು ಉತ್ತಮವಾಗಿವೆ. ವಲಸಿಗರು ಈ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಂಡು ಸೌಲಭ್ಯಗಳನ್ನು ಪಡೆದು, ಡ್ರಗ್ಸ್, ಅಪರಾಧ, ಭಯೋತ್ಪಾದನೆ ಇತ್ಯಾದಿ ಕೃತ್ಯಗಳ ಮೂಲಕ ಸಮಾಜ ಹಾಗೂ ದೇಶದ ಭದ್ರತೆಗೆ ಅಪಾಯ ತರಬಹುದು. ಇದನ್ನು ನಿಯಂತ್ರಿಸಲು ಟ್ರಂಪ್ ಸರ್ಕಾರ ಈ ಕ್ರಮ ಕೈಗೊಂಡಿದೆ. ಜನವರಿ 21ರಿಂದ ಮೇಲೆ ತಿಳಿಸಿದ 75 ದೇಶಗಳ ಜನರ ವಲಸೆ ಅರ್ಜಿಗಳನ್ನು ಪ್ರೋಸಸ್ ಮಾಡಲಾಗುವುದಿಲ್ಲ ಎನ್ನಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ