ಸೋಲಾರ್ ಶಕ್ತಿ: ಐತಿಹಾಸಿಕ ಸೆಂಚುರಿ ಭಾರಿಸಿದ ಭಾರತ; 100 ಗಿ.ವ್ಯಾ. ಸೋಲಾರ್ ಪಿವಿ ಮಾಡ್ಯೂಲ್ ತಯಾರಿಕಾ ಸಾಮರ್ಥ್ಯ
Solar PV Module manufacturing capacity raises to 100 GW: ಸೌರ ವಿದ್ಯುತ್ ತಯಾರಿಕೆಯಲ್ಲಿ ಭಾರತ ಬಹಳ ಕ್ಷಿಪ್ರವಾಗಿ ಪ್ರಗತಿ ಸಾಧಿಸುತ್ತಿದೆ. ಸೋಲಾರ್ ಪಿವಿ ಮಾಡ್ಯೂಲ್ಗಳ ತಯಾರಿಕೆ ಸಾಮರ್ಥ್ಯ 100 ಗಿ.ವ್ಯಾ. ಮುಟ್ಟಿದೆ. 2014ರಲ್ಲಿ 2.3 ಗಿ.ವ್ಯಾ. ಇದ್ದ ಸಾಮರ್ಥ್ಯ 10 ವರ್ಷದಲ್ಲಿ ಈ ಮೈಲಿಗಲ್ಲು ಮುಟ್ಟಿರುವುದು ಗಮನಾರ್ಹ. ಸೋಲಾರ್ ಪಿವಿ ಮಾಡ್ಯೂಲ್ ತಯಾರಕ ಸಂಖ್ಯೆ ಕೂಡ 100 ದಾಟಿದೆ.

ನವದೆಹಲಿ, ಆಗಸ್ಟ್ 17: ಭಾರತದ ಸೋಲಾರ್ ಪಿವಿ ಮಾಡ್ಯೂಲ್ ತಯಾರಿಕಾ ಸಾಮರ್ಥ್ಯವು (Solar PV Module Manufacturing capacity) 100 ಗಿಗಾ ವ್ಯಾಟ್ ಮೈಲಿಗಲ್ಲು ಮುಟ್ಟಿದೆ. ಇದು ಎಎಲ್ಎಂಎಂ ಅಥವಾ ಅನುಮೋದಿತ ಮಾಡಲ್ ಮತ್ತು ತಯಾರಕರ ಪಟ್ಟಿಯಲ್ಲಿ (ALMM- Approved List of Module Manufacturers) ನೊಂದಾಯಿತವಾಗಿರುವ ಮಾಡ್ಯೂಲ್ಗಳಾಗಿವೆ. ಭಾರತದ ನವೀಕರಣ ಇಂಧನ ಪ್ರಯತ್ನದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲು ಎನಿಸಿದೆ.
ಹತ್ತು ವರ್ಷದ ಹಿಂದೆ ಭಾರತದಲ್ಲಿ 2.3 ಗಿಗಾ ವ್ಯಾಟ್ ವಿದ್ಯುತ್ ತಯಾರಿಕಾ ಸಾಮರ್ಥ್ಯದ ಸೋಲಾರ್ ಪಿವಿ ಮಾಡ್ಯೂಲ್ಗಳಿದ್ದುವು. ಈಗ ಅದು 100 ಗಿ.ವ್ಯಾ.ಗೆ ಏರಿರುವುದು ಗಮನಾರ್ಹ. ಕೇಂದ್ರ ನವೀಕರಣ ಇಂಧನ ಸಚಿವ ಪ್ರಹ್ಲಾದ್ ಜೋಷಿ, ಇದೊಂದು ಐತಿಹಾಸಿಕ ಸಾಧನೆ ಎಂದು ಬಣ್ಣಿಸಿದ್ದಾರೆ. ಕೇಂದ್ರ ಸರ್ಕಾರ ಉನ್ನತ ಕ್ಷಮತೆಯ ಸೋಲಾರ್ ಮಾಡ್ಯೂಲ್ಗಳಿಗೆ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪಿಎಲ್ಐ ಸ್ಕೀಮ್ನಿಂದ ಈ ಕಾರ್ಯ ಸಾಧ್ಯವಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಡಿಜಿಟಲ್ ಕ್ಷೇತ್ರದಲ್ಲಿ ಭಾರತ ಎಷ್ಟು ಬೆಳವಣಿಗೆ ಸಾಧಿಸಿದೆ? ಇಲ್ಲಿದೆ ಕೆಲ ಹೈಲೈಟ್ಸ್
ಕಳೆದ ಹತ್ತು ವರ್ಷದಲ್ಲಿ ಸೋಲಾರ್ ಪಿವಿ ಮಾಡ್ಯೂಲ್ಗಳ ಸಾಮರ್ಥ್ಯ 40 ಪಟ್ಟು ಹೆಚ್ಚಾಗಿದೆ. ಮುಂದಿನ ಐದು ವರ್ಷದಲ್ಲಿ ಈಗಿರುವುದಕ್ಕಿಂತ ಕೆಲವು ಪಟ್ಟು ಹೆಚ್ಚಿಸುವ ಗುರಿ ಇದೆ. 2030ರೊಳಗೆ ಪಳೆಯುಳಿಕೆಯಲ್ಲದ ಇಂಧನ ತಯಾರಿಕಾ ಸಾಮರ್ಥ್ಯವನ್ನು 500 ಗಿಗಾ ವ್ಯಾಟ್ಗೆ ಹೆಚ್ಚಿಸುವುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ಸೌರಶಕ್ತಿ ಪ್ರಧಾನ ಪಾತ್ರ ವಹಿಸುತ್ತಿದೆ.
ಸರ್ಕಾರ ಅನುಮೋದಿತ ಮಾಡ್ಯೂಲ್ ತಯಾರಕ ಪಟ್ಟಿ ಸ್ಥಾಪಿಸಲು 2019ರ ಜನವರಿ 2ರಂದು ನಿರ್ದೇಶಿಸಿತ್ತು. 2021ರ ಮಾರ್ಚ್ 10ರಂದು ಮೊದಲ ಎಎಲ್ಎಂಎಂ ಪಟ್ಟಿ ಮಾಡಲಾಯಿತು. ಆಗ ಸ್ಥಾಪಿತ ಪಿವಿ ಮಾಡ್ಯೂಲ್ಗಳ ಸಾಮರ್ಥ್ಯ 8.2 ಗಿಗಾ ವ್ಯಾಟ್ ಇತ್ತು. ನಾಲ್ಕು ವರ್ಷದ ಬಳಿಕ ಅದು 100 ಗಿಗಾ ವ್ಯಾಟ್ಗೆ ಏರಿದೆ.
ಇದನ್ನೂ ಓದಿ: ಕೇವಲ 45 ಪೈಸೆಗೆ 10 ಲಕ್ಷ ರೂ ಇನ್ಷೂರೆನ್ಸ್; ಇದು ರೈಲು ಪ್ರಯಾಣಿಕರಿಗೆ ಸಿಗೋ ಅವಕಾಶ
ಇನ್ನು ಮಾಡ್ಯೂಲ್ ತಯಾರಕರ ಸಂಖ್ಯೆ 2021ರಲ್ಲಿ 21 ಇದ್ದದ್ದು ಈಗ 100ಕ್ಕೆ ಏರಿದೆ. ಈ ನೂರು ತಯಾರಕರು 123 ಮ್ಯಾನುಫ್ಯಾಕ್ಚರಿಂಗ್ ಘಕಟಗಳನ್ನು ಆಪರೇಟ್ ಮಾಡುತ್ತಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




