Multibagger: 10,000 ರೂ ಹೂಡಿಕೆ, 10 ವರ್ಷದಲ್ಲಿ 4 ಲಕ್ಷ ರೂ ಆದಾಯ; ಮಲ್ಟಿಬ್ಯಾಗರ್ ಆದ ಸೊನಾಟ ಸಾಫ್ಟ್​ವೇರ್

|

Updated on: Aug 06, 2023 | 6:42 PM

Sonata Software Share: ಬೆಂಗಳೂರು ಮೂಲದ ಸೊನಾಟ ಸಾಫ್ಟ್​ವೇರ್ ಸಂಸ್ಥೆಯ ಷೇರುಮೌಲ್ಯ ಕಳೆದ 10 ವರ್ಷದಲ್ಲಿ ಅಗಾಧವಾಗಿ ವೃದ್ಧಿಸಿದೆ. 29 ರೂ ಇದ್ದ ಅದರ ಬೆಲೆ ಈಗ 1,000 ರೂಗೂ ಹೆಚ್ಚಾಗಿದೆ. ಈ ಮೂಲಕ ಹೂಡಿಕೆದಾರರ ಪಾಲಿಗೆ ಸೊನಾಟ ಸಾಫ್ಟ್​ವೇರ್ ಮಲ್ಟಿಬ್ಯಾಗರ್ ಆಗಿ ಪರಿಣಮಿಸಿದೆ.

Multibagger: 10,000 ರೂ ಹೂಡಿಕೆ, 10 ವರ್ಷದಲ್ಲಿ 4 ಲಕ್ಷ ರೂ ಆದಾಯ; ಮಲ್ಟಿಬ್ಯಾಗರ್ ಆದ ಸೊನಾಟ ಸಾಫ್ಟ್​ವೇರ್
ಷೇರುಪೇಟೆ
Follow us on

ಷೇರುಪೇಟೆಯಲ್ಲಿ ದೀರ್ಘಕಾಲೀನ ಹೂಡಿಕೆಯಲ್ಲಿ ನಷ್ಟದ ಸಾಧ್ಯತೆ ಕಡಿಮೆ. ಅದರಲ್ಲೂ ಉತ್ತಮ ಆದಾಯ ಮತ್ತು ಭವಿಷ್ಯ ಇರುವ ಮತ್ತು ಹಣಕಾಸು ಸ್ಥಿತಿ ಉತ್ತಮ ಇರುವ ಕಂಪನಿಯ ಷೇರಿನ ಮೇಲೆ ಹೂಡಿಕೆ ಮಾಡಿದರೆ ದೀರ್ಘಾವಧಿಯಲ್ಲಿ ಅದು ಮಲ್ಟಿಬ್ಯಾಗರ್ ಆಗಿ ಪರಿಣಮಿಸುವ ಸಾಧ್ಯತೆ ಹೆಚ್ಚಿರುತ್ತದೆ. ಅಂಥ ಕಂಪನಿಗಳಲ್ಲಿ ಸೊನಾಟ ಸಾಫ್ಟ್​ವೇರ್ (Sonata Software) ಒಂದು. ಕಳೆದ 10 ವರ್ಷದಲ್ಲಿ ಇದರ ಷೇರುಬೆಲೆ ಶೇ. 4,300ರಷ್ಟು ಬೆಳೆದಿದೆ. ಅಂದರೆ ಇದರ ಹೂಡಿಕೆದಾರರ ಹಣ 10 ವರ್ಷದಲ್ಲಿ 43 ಪಟ್ಟು ಲಾಭ ಮಾಡಿದೆ.

ನಿದರ್ಶನಕ್ಕೆ ತಿಳಿಸುವುದಾದರೆ, 10 ವರ್ಷದ ಹಿಂದೆ ಯಾರಾದರೂ ಹೂಡಿಕೆದಾರರು ಸೊನಾಟ ಸಾಫ್ಟ್​ವೇರ್​ನ ಷೇರುಗಳ ಮೇಲೆ 10,000 ರೂನಷ್ಟು ಹೂಡಿಕೆ ಮಾಡಿದ್ದೇ ಆಗಿದ್ದರೆ ಇವತ್ತು ಅವರ ಷೇರುಸಂಪತ್ತು 4 ಕ್ಷ ರೂ ಆಗುತ್ತಿತ್ತು. ಅಷ್ಟು ಅಗಾಧವಾಗಿ ಸೊನಾಟ ಸಾಫ್ಟ್​ವೇರ್ ಷೇರುಮೌಲ್ಯ ವೃದ್ಧಿಸಿದೆ.

ಇದನ್ನೂ ಓದಿ: Forex: ಭಾರತದ ವಿದೇಶ ವಿನಿಮಯ ಮೀಸಲು ನಿಧಿ ಎಷ್ಟು ಉಪಯುಕ್ತ? ಭವಿಷ್ಯದ ದಿನಗಳು ಹೇಗಿವೆ?

ಬಿಎಸ್​ಇ500 ಲಿಸ್ಟ್​ನಲ್ಲಿರುವ ಸೊನಾಟ ಸಾಫ್ಟ್​ವೇರ್​ನ ಷೇರುಮೌಲ್ಯ ಕಳೆದ 5 ವರ್ಷದಿಂದೀಚೆ ಶೇ. 488ರಷ್ಟು ವೃದ್ಧಿಸಿದೆ. ಕಳೆದ 3 ವರ್ಷದಲ್ಲಿ ಶೇ. 250ರಷ್ಟು ಬೆಳೆದಿದೆ.

ಬೆಂಗಳೂರಿನಲ್ಲಿ ಮುಖ್ಯ ಕಚೇರಿ ಹೊಂದಿರುವ ಸೊನಾಟ ಸಾಫ್ಟ್​ವೇರ್ 1999ರ ಜುಲೈನಲ್ಲಿ ಷೇರುಪೇಟೆಗೆ ಪದಾರ್ಪಣೆ ಮಾಡಿದಾಗ 29.35 ರೂ ಷೇರುಬೆಲೆ ಹೊಂದಿತ್ತು. 2014ರವರೆಗೂ ಇದರ ಮೌಲ್ಯ ಹೆಚ್ಚೂಕಡಿಮೆ ಅಷ್ಟೇ ಇತ್ತು. 2014ರ ಬಳಿಕ ಸೊನಾಟ ಸಾಫ್ಟ್​ವೇರ್​ನ ಷೇರುಬೆಲೆ ಬಹಳ ವೇಗದಲ್ಲಿ ಬೆಳೆದಿದೆ. ಅದರಲ್ಲೂ 2020ರ ಏಪ್ರಿಲ್ ನಂತರ ಇದರ ಬೆಲೆ ರಾಕೆಟ್​ನಂತೆ ಮಿಂಚಿನಂತೆ ಮೇಲೇರಿದೆ.

ಇದನ್ನೂ ಓದಿ: Semiconductor: ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್​ನ ಗ್ಲೋಬಲ್ ಸಪ್ಲಯರ್ ಕಂಪನಿಗಳು ಭಾರತಕ್ಕೆ ಬರಲು ಸಜ್ಜು

ಟೆಕ್ನಾಲಜಿ ವಲಯಕ್ಕೆ ಸಾಫ್ಟ್​ವೇರ್ ಪರಿಹಾರ ಸೇವೆ ಒದಗಿಸುವ ಸೊನಾಟ ಸಾಫ್ಟ್​ವೇರ್ ಸಂಸ್ಥೆ ಬೆಂಗಳೂರು ಮೂಲದ್ದು. ಇದರ ಒಟ್ಟು ಷೇರುಸಂಪತ್ತು 14,500 ಕೋಟಿ ರೂನಷ್ಟಿದೆ. ಈ ಷೇರುಸಂಪತ್ತಿನಲ್ಲಿ ಮಾಲೀಕರು ಮತ್ತು ಪ್ರೊಮೋಟರ್ಸ್ ಪಾಲು ಶೇ. 26.37ರಷ್ಟಿದೆ. ಉಳಿದದ್ದು ಸಾರ್ವಜನಿಕ ಷೇರುದಾರರಿಗೆ ಸೇರಿದ್ದು. ಸಾರ್ವಜನಿಕ ಹೂಡಿಕೆಗಳಲ್ಲಿ ರೀಟೇಲ್ ಹೂಡಿಕೆದಾರರ ಪ್ರಮಾಣ ಶೇ. 22.63ರಷ್ಟಿದೆ. ಮ್ಯೂಚುವಲ್ ಫಂಡ್ ಮತ್ತು ವಿದೇಶೀ ಹೂಡಿಕೆದಾರರು ತಲಾ ಶೇ 13ರಷ್ಟು ಷೇರುಪಾಲು ಹೊಂದಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ