ಭಾರತದ ಜೊತೆ ಗಡಿತಂಟೆಗೆ ಬಂದು ಚೀನಾ ಅನುಭವಿಸಿದ ನಷ್ಟ ಎಷ್ಟು ಗೊತ್ತಾ? ಇಲ್ಲಿದೆ ಅದರ ಆಫ್ಟರ್ ಎಫೆಕ್ಟ್ಸ್

India vs China: 2020ರ ಬಳಿಕ ಚೀನಾವನ್ನು ಭಾರತ ಬಹಳಷ್ಟು ವಿಷಯಗಳಲ್ಲಿ ದೂರ ಇಡುತ್ತಾ ಬಂದಿದೆ. ಭಾರತದಲ್ಲಿ ಹೇರಳವಾದ ಹೂಡಿಕೆ ಅವಕಾಶ ಇದ್ದರೂ ಅದನ್ನು ಉಪಯೋಗಿಸಿಕೊಳ್ಳಲು ಚೀನಾಗೆ ಸಾಧ್ಯವಾಗುತ್ತಿಲ್ಲ. ದೂರಗಾಮಿಯಾಗಿ ಚೀನಾಗೆ ಇದರಿಂದ ನಷ್ಟ ಹೆಚ್ಚು.

ಭಾರತದ ಜೊತೆ ಗಡಿತಂಟೆಗೆ ಬಂದು ಚೀನಾ ಅನುಭವಿಸಿದ ನಷ್ಟ ಎಷ್ಟು ಗೊತ್ತಾ? ಇಲ್ಲಿದೆ ಅದರ ಆಫ್ಟರ್ ಎಫೆಕ್ಟ್ಸ್
ಚೀನಾ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 06, 2023 | 4:05 PM

ಚೀನಾ ಕೆಲವಾರು ದಶಕಗಳಿಂದ ಈಚೆಗೆ ಅದಮ್ಯವಾಗಿ ಬೆಳೆದಿದೆ. ಅಮೆರಿಕಕ್ಕೆ ಪರ್ಯಾಯವಾಗಿ ಸೂಪರ್ ಪವರ್ ರಾಷ್ಟ್ರ ಎನಿಸುವ ಮಟ್ಟದ ಎತ್ತರಕ್ಕೆ ಚೀನಾ ಹೋಗಿದೆ. ಬಹುತೇಕ ವಿಶ್ವದ ಫ್ಯಾಕ್ಟರಿ (World Factory) ಎನಿಸಿದೆ. ಸಣ್ಣ ಆಟಿಕೆಯಿಂದ ಹಿಡಿದು ಐಫೋನ್​ವರೆಗೂ ಹೆಚ್ಚಿನ ವಸ್ತುಗಳು ಮೇಡ್ ಇನ್ ಚೀನಾ ಎನ್ನುವಂತಾಗಿದೆ. ತಮ್ಮ ಬಹುತೇಕ ಉತ್ಪನ್ನಗಳ ತಯಾರಿಕೆಯನ್ನು ಚೀನಾ ಮಡಿಲಿಗೆ ಇತ್ತ ಜಾಗತಿಕ ಕಂಪನಿಗಳ ಕಣ್ಣುಗಳು ಈಗ ಭಾರತ, ಇಂಡೋನೇಷ್ಯಾ, ವಿಯೆಟ್ನಾಂ ಇತ್ಯಾದಿ ದೇಶಗಳತ್ತ ಹೊರಳುತ್ತಿವೆ. ಚೀನಾದ ಯುಗ ಮುಗಿಯಿತು, ಭಾರತದ ಯುಗ ಆರಂಭವಾಯಿತು ಎಂದು ತಜ್ಞರು ಹೇಳತೊಡಗಿದ್ದಾರೆ. ಮುಂದಿನ ವರ್ಷಗಳಲ್ಲಿ ಭಾರತದ ಆರ್ಥಿಕ ಬೆಳವಣಿಗೆ ಇನ್ನೂ ಅಪಾರವಾಗಿ ಆಗಲಿದೆ. ರಾಜಕೀಯವಾಗಿಯೂ ಭಾರತ ಬಲಿಷ್ಠವಾಗಲಿದೆ ಎಂಬ ಅನಿಸಿಕೆಗಳು ಬರತೊಡಗಿವೆ. ಕಾಕತಾಳೀಯವೋ ಎಂಬಂತೆ ಇವೆಲ್ಲಾ ಬೆಳವಣಿಗಳಿಗೂ ಕಳೆದ ಕೆಲ ವರ್ಷಗಳಿಂದ ಭಾರತದ ಜೊತೆ ಚೀನಾ ಗಡಿತಂಟೆ ನಡೆಸತೊಡಗಿದ್ದಕ್ಕೂ ಸಂಬಂಧ ಇರುವುದು ಕುತೂಹಲ.

2017ರ ಡೋಕ್ಲಾಮ್ ಸಂಘರ್ಷದ ಬಳಿಕ ಭಾರತ ತನ್ನ ಚೀನಾ ಅವಲಂಬನೆ ಕಡಿಮೆ ಮಾಡುವ ನಿಟ್ಟಿನಲ್ಲಿ ಆಲೋಚಿಸಿತು. ಆದರೆ, ಟರ್ನಿಂಗ್ ಪಾಯಿಂಟ್ ಸಿಕ್ಕಿದ್ದು 2020ರಲ್ಲಿ. ಕೋವಿಡ್ ಸಾಂಕ್ರಾಮಿಕ ರೋಗ ಅಡಿ ಇಟ್ಟ ಸಂದರ್ಭದಲ್ಲಿ 2020ರಲ್ಲಿ ಚೀನಾ ಲಡಾಖ್ ಗಡಿಭಾಗದ ವಿವಿಧೆಡೆ ಭಾರತದ ಭಾಗವನ್ನು ಆಕ್ರಮಿಸಲು ಯತ್ನಿಸಿತ್ತು. ಗಾಲ್ವನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 24ಕ್ಕೂ ಹೆಚ್ಚು ಭಾರತೀಯ ಯೋಧರನ್ನು ಚೀನೀಯರು ಬಲಿತೆಗೆದುಕೊಂಡಿದ್ದರು. ಆ ಘಟನೆ ಬಳಿಕ ಭಾರತ ಚೀನಾದ ಅನೇಕ ಆ್ಯಪ್​ಗಳನ್ನು ನಿಷೇಧಿಸಿದ್ದು ನೆನಪಿರಬಹುದು.

ಇದನ್ನೂ ಓದಿ: API: ಚೀನಾ ಅವಲಂಬನೆ ತಗ್ಗಿಸಲು ಭಾರತದಲ್ಲೇ ತಯಾರಾಗುತ್ತಿವೆ 38 APIಗಳು; ಏನಿವುಗಳ ವಿಶೇಷತೆ?

2020ರ ಬಳಿಕ ಭಾರತ ತನ್ನ ಬೆಳವಣಿಗೆಯ ಹಾದಿಯಿಂದ ಚೀನಾವನ್ನು ಬಹುತೇಕ ಹೊರಗಿಡುತ್ತಾ ಬಂದಿದೆ. ಮೊನ್ನೆಮೊನ್ನೆ, ಲ್ಯಾಪ್​ಟಾಪ್, ಕಂಪ್ಯೂಟರ್ ಮತ್ತು ಟ್ಯಾಬ್ಲೆಟ್​ಗಳ ಆಮದನ್ನು ಭಾರತ ನಿರ್ಬಂಧಿಸಿದ್ದು ಇದೇ ಆಲೋಚನೆಯಲ್ಲಿ ಎಂಬ ಮಾತು ಕೇಳಿಬರುತ್ತಿದೆ. ಆದರೆ, ಅಂತಿಮವಾಗಿ ಈ ಎಲೆಕ್ಟ್ರಾನಿಕ್ ಉತ್ಪನ್ನಗಳ ಆಮದಿನ ಮೇಲೆ ನಿರ್ಬಂಧ ಇಲ್ಲ ಎಂದು ಭಾರತ ಸ್ಪಷ್ಟಪಡಿಸಿತಾದರೂ, ಚೀನಾ ವಿರುದ್ಧ ದಿಟ್ಟವಾಗಿ ನಿಷೇಧ, ನಿರ್ಬಂಧ ಇತ್ಯಾದಿ ಕ್ರಮಗಳನ್ನು ಭಾರತ ಈ ಹಿಂದೆ ಹಲವು ಬಾರಿ ಕೈಗೊಂಡಿದ್ದಿದೆ. ಗಾಲ್ವನ್ ಕಣಿವೆಯಲ್ಲಿ ಗಲಾಟೆ ಮಾಡಿದ ಪರಿಣಾಮವಾಗಿ ಚೀನಾ ಭಾರತದ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ. ಜೊತೆಗೆ ಸಾಕಷ್ಟು ವ್ಯಾವಹಾರಿಕ ಸಾಧ್ಯತೆಗಳನ್ನೂ ಕಳೆದುಕೊಂಡಿದೆ.

2020ರ ಬಳಿಕ ಭಾರತದೊಂದಿಗೆ ಚೀನಾಗೆ ಆಗಿರುವ ವ್ಯವಹಾರ ನಷ್ಟ ಎಂಥದ್ದು?

ಬಿವೈಡಿ ಹೂಡಿಕೆ ಯೋಜನೆ ಮೊಟಕು

ಚೀನಾದ ಎಲೆಕ್ಟ್ರಿಕ್ ಕಾರು ತಯಾರಕ ಬಿವೈಡಿ ಭಾರತದಲ್ಲಿ ಎಲೆಕ್ಟ್ರಿಕ್ ಕಾರು ಘಟಕಗಳನ್ನು ಆರಂಭಿಸಲು 1 ಬಿಲಿಯನ್ ಡಾಲರ್ ಹೂಡಿಕೆ ಪ್ರಸ್ತಾವವನ್ನು ಭಾರತ ಸರ್ಕಾರದ ಮುಂದಿಟ್ಟಿತ್ತು. ಆದರೆ, ಇದಕ್ಕೆ ಸರ್ಕಾರದಿಂದ ಅನುಮೋದನೆ ದೊರೆಯದ ಕಾರಣ, ಬಿವೈಡಿ ತನ್ನ ಯೋಜನೆಯನ್ನು ನಿಲ್ಲಿಸಿತು.

ಇದನ್ನೂ ಓದಿ: Rupee: ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲಿ ವ್ಯವಹಾರ ನಡೆಸುವ 22 ದೇಶಗಳು; ಇಲ್ಲಿದೆ ಇವುಗಳ ಪಟ್ಟಿ

ಗ್ರೇಟ್ ವಾಲ್ ಮೋಟಾರ್ ಯೋಜನೆ

ಚೀನಾದ ಮತ್ತೊಂದು ಆಟೊಮೊಬೈಲ್ ಕಂಪನಿ ಗ್ರೇಟ್ ವಾಲ್ ಮೋಟಾರ್ ಕೂಡ 1 ಬಿಲಿಯನ್ ಡಾಲರ್ ಹಣದ ಹೂಡಿಕೆಯನ್ನು ಭಾರತದಲ್ಲಿ ಮಾಡಲು ಯೋಜಿಸಿತ್ತು. ಇದಕ್ಕೂ ಕೂಡ ಭಾರತ ಸರ್ಕಾರ ಅಥವಾ ಪ್ರಾಧಿಕಾರದಿಂದ ಅನುಮೋದನೆ ದೊರಕಲಿಲ್ಲ.

ಶಿಯೋಮಿ ಆಸ್ತಿ ಜಫ್ತಿ

ಭಾರತದ ಸ್ಮಾರ್ಟ್​ಫೋನ್ ಮಾರುಕಟ್ಟೆಯಲ್ಲಿ ಪ್ರಾಬಲ್ಯ ಹೊಂದಿರುವ ಚೀನೀ ಕಂಪನಿ ಶಿಯೋಮಿ ಭಾರತದಲ್ಲಿ ಕಾನೂನು ಕ್ರಮ ಎದುರಿಸುತ್ತಿದೆ. ರಾಯಲ್ಟಿ ಅಥವಾ ರಾಯಧನದ ಹೆಸರಿನಲ್ಲಿ ವಿದೇಶೀ ಸಂಸ್ಥೆಗಳಿಗೆ ಅಕ್ರಮವಾಗಿ ಹಣ ವರ್ಗಾವಣೆ ಮಾಡಿದ ಆರೋಪ ಶಿಯೋಮಿ ಮೇಲಿದೆ. ಭಾರತದ ಕಾನೂನು ಪಾಲನಾ ಸಂಸ್ಥೆಯೊಂದು ಶಿಯೋಮಿಯ 670 ಮಿಲಿಯನ್ ಡಾಲರ್ ಮೊತ್ತದ ಹಣವನ್ನು ಬ್ಯಾಂಕಿನಲ್ಲಿ ಫ್ರೀಜ್ ಮಾಡಿಟ್ಟಿದೆ.

ಇದನ್ನೂ ಓದಿ: Semiconductor: ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್​ನ ಗ್ಲೋಬಲ್ ಸಪ್ಲಯರ್ ಕಂಪನಿಗಳು ಭಾರತಕ್ಕೆ ಬರಲು ಸಜ್ಜು

ಮೊಬೈಲ್ ಆ್ಯಪ್​ಗಳ ನಿಷೇಧ

2020ರ ಬಳಿಕ ಚೀನಾದ 300ಕ್ಕೂ ಹೆಚ್ಚು ಮೊಬೈಲ್ ಆ್ಯಪ್​ಗಳನ್ನು ಭಾರತ ನಿಷೇಧಿಸಿದೆ. ಇದರಲ್ಲಿ ಟಿಕ್ ಟಾಕ್ ಮೊದಲಾದ ಜನಪ್ರಿಯ ಆ್ಯಪ್​ಗಳೂ ಸೇರಿವೆ. ಟಿಕ್ ಟಾಕ್ ನಿಷೇಧವಾಗಿದ್ದು ಚೀನಾಗೆ ತುಸು ಘಾಸಿಯನ್ನೂ ಮಾಡಿದೆ.

ಚೀನಾ ಹೂಡಿಕೆಗಳತ್ತ ಗಮನ

ಅಂತಾರಾಷ್ಟ್ರೀಯ ಹೂಡಿಕೆಯಲ್ಲಿ ಭಾರತ ಒಂದು ನಿಯಮ ಬದಲಿಸಿದೆ. ಅದು ನೆರೆಯ ದೇಶಗಳ ಕಂಪನಿಗಳಿಂದ ಭಾರತದಲ್ಲಿ ಮಾಡಲಾಗುವ ಹೂಡಿಕೆಗಳಿಗೆ ಪ್ರಾಧಿಕಾರದ ಅನುಮೋದನೆ ಬೇಕೆಂಬ ನಿಯಮ. ಚೀನಾವನ್ನು ಗಮನದಲ್ಲಿಟ್ಟುಕೊಂಡು ಈ ನಿಯಮ ಮಾಡಲಾಗಿದೆ. ಹೂಡಿಕೆಗಳನ್ನು ಮಾಡಿ ಆ ಮೂಲಕ ದೇಶದ ಮೇಲೆ ಹಿಡಿತ ಸಾಧಿಸುವ ಚೀನಾದ ಹುನ್ನಾರವನ್ನು ಹತ್ತಿಕ್ಕುವುದು ಭಾರತದ ಪ್ರಯತ್ನವಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆಯಲ್ಲಿ ಇಬ್ಬರೂ ಮಾಜಿ ಮುಖ್ಯಮಂತ್ರಿಗಳ ಮಕ್ಕಳಿಗೆ ಸೋಲು
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಉಪ ಚುನಾವಣೆ ಫಲಿತಾಂಶ 2028ರ ವಿಧಾನಸಭೆ ಚುನಾವಣೆಗೆ ದಿಕ್ಸೂಚಿ: ಡಿಕೆಶಿ
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್
ಡಿಕೆ ಶಿವಕುಮಾರ್ ಒಕ್ಕಲಿಗ ಸಮುದಾಯದ ಪರಮೋಚ್ಛ ನಾಯಕ: ಪ್ರದೀಪ್ ಈಶ್ವರ್