AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

API: ಚೀನಾ ಅವಲಂಬನೆ ತಗ್ಗಿಸಲು ಭಾರತದಲ್ಲೇ ತಯಾರಾಗುತ್ತಿವೆ 38 APIಗಳು; ಏನಿವುಗಳ ವಿಶೇಷತೆ?

Indian Pharmaceutical Industry: ಔಷಧ ತಯಾರಿಕೆಗೆ ಬೇಕಾದ ಎಪಿಐ ಅಥವಾ ಕಚ್ಛಾ ವಸ್ತುಗಳಿಗೆ ಚೀನಾ ಮೇಲಿನ ಅವಲಂಬನೆ ತಪ್ಪಿಸಲು ಸರ್ಕಾರ ಯೋಜಿಸಿದೆ. 54 ಪ್ರಮುಖ ಎಪಿಐಗಳನ್ನು ಗುರುತಿಸಿ ಅದನ್ನು ಭಾರತದಲ್ಲಿ ತಯಾರಿಸಲು ಗಮನ ಕೊಟ್ಟಿದೆ. ಒಂದೂವರೆ ವರ್ಷದಲ್ಲಿ 38 ಎಪಿಐಗಳ ಉತ್ಪಾದನೆ ಶುರುವಾಗಿದೆ ಎಂಬ ಸಂಗತಿಯನ್ನು ಕೇಂದ್ರ ತಿಳಿಸಿದೆ.

API: ಚೀನಾ ಅವಲಂಬನೆ ತಗ್ಗಿಸಲು ಭಾರತದಲ್ಲೇ ತಯಾರಾಗುತ್ತಿವೆ 38 APIಗಳು; ಏನಿವುಗಳ ವಿಶೇಷತೆ?
ಔಷಧ
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 06, 2023 | 10:29 AM

Share

ನವದೆಹಲಿ, ಆಗಸ್ಟ್ 7: ಆರು ವರ್ಷಗಳ ಹಿಂದೆ ಡೋಕ್ಲಾಮ್​ನಲ್ಲಿ ಚೀನಾ ಜೊತೆ ನಡೆದ ಗಡಿಜಟಾಪಟಿಯಲ್ಲಿ (Dokla Standoff) ಭಾರತಕ್ಕೆ ಒಂದು ಎಚ್ಚರಿಕೆ ಸಂದೇಶ ರವಾನೆಯಾಗಿತ್ತು. ಚೀನಾ ಯಾವತ್ತಿದ್ದರೂ ಭಾರತಕ್ಕೆ ಮಗ್ಗುಲಮುಳ್ಳಾಗಿ ನಿಲ್ಲುವ ದೇಶ. ಅದರ ಮೇಲಿನ ಅವಲಂಬನೆ ಆದಷ್ಟೂ ಕಡಿಮೆ ಮಾಡಬೇಕು ಎಂಬ ಅರಿವು ಭಾರತಕ್ಕೆ ಆಗಿತ್ತು. ಅದಾದ ಬಳಿಕ ಭಾರತ ತಯಾರಿಕಾ ವಲಯಕ್ಕೆ (Manufacturing Sector) ಹೆಚ್ಚು ಗಮನ ಕೊಡಲು ಆರಂಭಿಸಿತ್ತು. ಇದೀಗ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ (Mansukh Mandaviya) ಅವರು ಈ ಅಭಿಪ್ರಾಯವನ್ನು ಅನುಮೋದಿಸಿದ್ದಾರೆ. ಅವರು ನೀಡಿರುವ ಮಾಹಿತಿ ಪ್ರಕಾರ ಭಾರತದಲ್ಲಿ 38 ಎಪಿಐಗಳನ್ನು ತಯಾರಿಸುವ ಕಾರ್ಯವಾಗುತ್ತಿದೆ. ಎಪಿಐ ಎಂದರೆ ಆ್ಯಕ್ಟಿವ್ ಫಾರ್ಮಸ್ಯೂಟಿಕಲ್ ಇಂಗ್ರೆಡಿಯೆಂಟ್ (API), ಅಥವಾ ಸಕ್ರಿಯ ಔಷಧೀಯ ವಸ್ತು. ಸರಳವಾಗಿ ಹೇಳುವುದಾದರೆ, ಔಷಧ ತಯಾರಿಕೆಗೆ ಬಳಸುವ ಕಚ್ಛಾ ವಸ್ತುಗಳು ಈ ಎಪಿಐಗಳು. ಒಂದೂವರೆ ವರ್ಷದಿಂದ ಭಾರತದಲ್ಲಿ 38 ಎಪಿಐಗಳನ್ನು ತಯಾರಿಸಲಾಗುತ್ತಿದೆ ಎಂದು ಕೇಂದ್ರ ಸಚಿವರು ಮಾಹಿತಿ ನೀಡಿದ್ದಾರೆ.

ಭಾರತದಲ್ಲಿ ಯಾಕೆ ಎಪಿಐಗಳ ತಯಾರಿಕೆ?

ಐಫೋನ್ ತಯಾರಿಕೆಗೆ ವಿವಿಧ ಬಿಡಿಭಾಗಗಳು ಬೇಕಿರುವಂತೆ ಔಷಧ ತಯಾರಿಕೆಗೆ ಎಪಿಐಗಳು ಬೇಕೇ ಬೇಕು. ವಿಶ್ವದ ಹೆಚ್ಚಿನ ಎಪಿಐಗಳು ಚೀನಾದಲ್ಲೇ ತಯಾರಾಗುತ್ತವೆ. ಒಂದು ಅಂದಾಜು ಪ್ರಕಾರ ಚೀನಾದಲ್ಲಿ 2,000ಕ್ಕೂ ಹೆಚ್ಚು ಎಪಿಐಗಳು ಸಿದ್ಧವಾಗಿ ವಿಶ್ವಕ್ಕೆ ರಫ್ತಾಗುತ್ತವೆ. ಭಾರತದ ಫಾರ್ಮಾ ಉದ್ಯಮದ ಉತ್ಪಾದನೆಗೆ ಬೇಕಾದ ಶೇ. 90ಕ್ಕಿಂತಲೂ ಹೆಚ್ಚು ಕಚ್ಛಾ ವಸ್ತುಗಳು ಅಥವಾ ಎಪಿಐಗಳು ಚೀನಾದಿಂದಲೇ ಆಮದಾಗುತ್ತವೆ. ಈ ಎಪಿಐಗಳನ್ನು ತಯಾರಿಸಲು ಆಗುವ ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಚೀನಾದಿಂದ ಆಮದು ಮಾಡಿಕೊಳ್ಳಬಹುದು. ಈ ಕಾರಣಕ್ಕೆ ಭಾರತದಲ್ಲಿ ಇವುಗಳ ಮ್ಯಾನುಫ್ಯಾಕ್ಚರಿಂಗ್ ಆಗುತ್ತಿರಲಿಲ್ಲ ಎನ್ನಬಹುದು.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ಪಿ ಅಂಡ್ ಪಿ ಡಬಲ್ ಡೆಕರ್ ರೈಲು; ಕೆಳಗೆ ಸರಕು, ಮೇಲೆ ಜನರು

ಈಗ ಚೀನಾ ಜೊತೆಗಿನ ಗಡಿ ತಿಕ್ಕಾಟವು ಭಾರತಕ್ಕೆ ಚೀನಾ ಮೇಲಿನ ಅವಲಂಬನೆಯ ಪರಿಣಾಮದ ಅರಿವಾಗಿದೆ. ಈ ಬಗ್ಗೆ ಐಐಎಂಎನಲ್ಲಿ (ಇಂಡಿಯನ್ ಇನ್ಸ್​ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಅಹ್ಮದಾಬಾದ್) ಆಗಸ್ಟ್ 5ರಂದು ಮಾತನಾಡುತ್ತಿದ್ದ ಕೇಂದ್ರ ಆರೋಗ್ಯ ಸಚಿವ ಮನಸುಖ್ ಮಾಂಡವೀಯ, ಪಿಎಲ್​ಐ ಸ್ಕೀಮ್ ಅಡಿಯಲ್ಲಿ ಭಾರತದಲ್ಲಿ ಎಪಿಐಗಳನ್ನು ತಯಾರಿಕೆಗೆ ಉತ್ತೇಜನ ನೀಡಲಾಗುತ್ತಿದೆ ಎಂದಿದ್ದಾರೆ.

‘ವಿದೇಶದಿಂದ 54 ಎಪಿಐಗಳನ್ನು ಆಮದು ಮಾಡಿಕೊಳ್ಳುವ ಅವಶ್ಯಕತೆ ಇಲ್ಲದೇ, ದೇಶೀಯವಾಗಿ ಇವು ಲಭ್ಯ ಇರುವಂತೆ ನಾವು ಪಿಎಲ್​ಐ ಸ್ಕೀಮ್ ಮೂಲಕ ಪ್ರಯತ್ನಿಸಿದ್ದೇವೆ. ಒಂದೂವರೆಗೆ ವರ್ಷದಲ್ಲಿ ಭಾರ 38 ಎಪಿಐಗಳನ್ನು ತಯಾರಿಸುವ ಕಾರ್ಯ ಆರಂಭಿಸಿದೆ. ಇದು ಸ್ವಾವಲಂಬನೆಯ ಭಾರತಕ್ಕೆ ಉದಾಹರಣೆ’ ಎಂದು ಮನಸುಖ್ ಮಾಂಡವೀಯ ಹೇಳಿದ್ದಾರೆ.

ಇದನ್ನೂ ಓದಿ: ಇನ್ಫೋಸಿಸ್​ನ ಮಾಜಿ ಹಿರಿಯ ಉದ್ಯೋಗಿ ಈಗ ಕೆನಡಾ ಮೂಲದ ಕಂಪನಿಗೆ ಸಿಇಒ

ಕೇಂದ್ರ ಸರ್ಕಾರ ಫಾರ್ಮಾ ವಲಯಕ್ಕೆ ಸುಮಾರು 15,000 ಕೊಟಿ ರೂ ಮೊತ್ತದ ಪಿಎಲ್​ಐ ಸ್ಕೀಮ್ ಅನ್ನು ಜಾರಿಗೆ ತಂದಿದೆ. ಪಿಎಲ್​ಐ ಎಂಬುದು ಉತ್ಪಾದನಾ ಜೋಡಿತ ಉತ್ತೇಜಕ ಸ್ಕೀಮ್. ಉತ್ಪಾದನೆಗೆ ಸರ್ಕಾರ ಧನ ಸಹಾಯ ಕೊಡುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಸೇತುವೆಯಿಂದ ಕೆಳಗೆ ಬಿದ್ದರೂ ಯುವಕನ ಜೀವ ಉಳಿಸಿತು ಲೈಟ್ ಕಂಬ!
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಗಿಲ್ಲಿ ಮೇಲೆ ರಕ್ಷಿತಾ ಶೆಟ್ಟಿಗೆ ಲವ್ ಇದ್ಯಾ? ಅಸಲಿ ವಿಷಯ ತೆರೆದಿಟ್ಟ ರಜತ್
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಜಿನ್ನಾ ಕಾಂಗ್ರೆಸ್‌ ಬಿಟ್ಟ ತಕ್ಷಣ 'ವಂದೇ ಮಾತರಂ' ಹಾಡಿನಲ್ಲಿ ಬದಲಾವಣೆ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ