ಇನ್ಫೋಸಿಸ್​ನ ಮಾಜಿ ಹಿರಿಯ ಉದ್ಯೋಗಿ ಈಗ ಕೆನಡಾ ಮೂಲದ ಕಂಪನಿಗೆ ಸಿಇಒ

Infosys To Sangoma: ಇನ್ಫೋಸಿಸ್​ನ ಅಕೌಂಟ್ ಎಕ್ಸ್​ಪ್ಯಾನ್ಷನ್ ವಿಭಾಗದ ಜಾಗತಿಕ ಮುಖ್ಯಸ್ಥರಾಗಿದ್ದ ಚಾರ್ಲ್ಸ್ ಸಲಾಮೆಹ್ ಅವರು ಇದೀಗ ಕೆನಡಾ ಮೂಲದ ಸಂಗೋಮ ಟೆಕ್ನಾಲಜೀಸ್ ಸಂಸ್ಥೆಗೆ ಸಿಇಒ ಆಗಿದ್ದಾರೆ.

ಇನ್ಫೋಸಿಸ್​ನ ಮಾಜಿ ಹಿರಿಯ ಉದ್ಯೋಗಿ ಈಗ ಕೆನಡಾ ಮೂಲದ ಕಂಪನಿಗೆ ಸಿಇಒ
ಇನ್ಫೋಸಿಸ್
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Aug 04, 2023 | 6:43 PM

ನವದೆಹಲಿ, ಆಗಸ್ಟ್ 4: ಭಾರತದ ಐಟಿ ಕಂಪನಿಗಳಲ್ಲಿ ಕೆಲಸ ಮಾಡಿ ಅನುಭವ ಗಳಿಸಿದ ಹಲವು ಹಿರಿಯರು ಬೇರೆ ಸಂಸ್ಥೆಗಳನ್ನು ಸೇರಿ ಸಿಇಒಗಳಾಗಿರುವುದು ಇದು. ಈಗ ಈ ಪಟ್ಟಿಗೆ ಇನ್ಫೋಸಿಸ್​ನ ಮಾಜಿ ಹಿರಿಯ ಉದ್ಯೋಗಿಯೊಬ್ಬರು ಸೇರಿದ್ದಾರೆ. ಇನ್ಫೋಸಿಸ್​ನ ಮಾಜಿ ಹಿರಿಯ ಉಪಾಧ್ಯಕ್ಷ ಚಾರ್ಲ್ಸ್ ಸಲಾಮೆಹ್ (Charles Salameh) ಅವರು ಕೆನಡಾ ಮೂಲದ ಸಂಗೋಮ ಟೆಕ್ನಾಲಜೀಸ್ ಕಾರ್ಪೊರೇಶನ್ (Sangoma Technologies Corporation) ಸಂಸ್ಥೆಗೆ ಸಿಇಒ ಆಗಿದ್ದಾರೆ. ಚಾರ್ಲ್ಸ್ ಸಲಾಮೆಹ್ ಸೆಪ್ಟೆಂಬರ್ 1ರಂದು ನೂತನ ಸಿಇಒ ಆಗುವುದನ್ನು ಸಂಗೋಮ ಟೆಕ್ನಾಲಜೀಸ್ ಸಂಸ್ಥೆ ಅಮೆರಿಕದ ಷೇರು ಮತ್ತು ವಿನಿಮಯ ಪ್ರಾಧಿಕಾರಕ್ಕೆ ಸಲ್ಲಿಸಿದ ಫೈಲಿಂಗ್​ನಲ್ಲಿ ತಿಳಿಸಿದೆ. ಮಾಜಿ ಇನ್ಫೋಸಿಸ್ ಉದ್ಯೋಗಿಯು ಆ ಕಂಪನಿಯ ನಿರ್ದೇಶಕರ ಮಂಡಳಿಯ ಸದಸ್ಯರೂ ಆಗಲಿದ್ದಾರೆ.

ಚಾರ್ಲ್ಸ್ ಸಲಾಮೆಹ್ ಅವರು ಇನ್ಫೋಸಿಸ್​ನ ಸೀನಿಯರ್ ವೈಸ್ ಪ್ರೆಸಿಡೆಂಟ್ ಆಗಿದ್ದರು. ಅಕೌಂಟ್ ಎಕ್ಸ್​ಪ್ಯಾನ್ಷನ್ ವಿಭಾಗದ ಜಾಗತಿಕ ಮುಖ್ಯಸ್ಥರಾಗಿದ್ದ ಅವರು ಇನ್ಫೋಸಿಸ್ ವ್ಯವಹಾರ ವೃದ್ಧಿಗೆ ದೊಡ್ಡ ಕೊಡುಗೆ ನೀಡಿದ್ದರು. ಇನ್ಫೋಸಿಸ್​ಗೆ ಮುನ್ನ ಅವರು ಬೆಲ್ ಕೆನಡಾ, ನಾರ್ಟೆಲ್ ನೆಟ್ವರ್ಕ್ಸ್, ಎಚ್​ಪಿ, ಡಿಎಸ್​ಸಿ ಕಂಪನಿಗಳಲ್ಲಿ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿರುವುದು ತಿಳಿದುಬಂದಿದೆ.

ಇದನ್ನೂ ಓದಿ: ಭಾರತದಲ್ಲಿ ಮೊದಲ ಬಾರಿಗೆ ಪಿ ಅಂಡ್ ಪಿ ಡಬಲ್ ಡೆಕರ್ ರೈಲು; ಕೆಳಗೆ ಸರಕು, ಮೇಲೆ ಜನರು

ಹಿರಿಯ ಉದ್ಯೋಗಿಗಳ ವಲಸೆ

ಕಾರ್ಪೊರೇಟ್ ವಲಯದಲ್ಲಿ ಸಿಇಒಗಳದ್ದು ಜವಾಬ್ದಾರಿಯುತ ಸ್ಥಾನ. ವ್ಯವಹಾರ ಚತುರತೆ ಮತ್ತು ಸಾಂಘಿಕ ಶಕ್ತಿ ಇರುವ ತಂಡವನ್ನು ಮುನ್ನಡೆಸುವ ಶಕ್ತಿ ಇರುವ ಸಿಇಒಗಳಿಗೆ ಬಹಳ ಬೇಡಿಕೆ ಇದೆ. ಅನುಭವಿಗಳಾದ ಹಲವು ಹಿರಿಯರು ಬೇರೆ ಬೇರೆ ಕಂಪನಿಗಳನ್ನು ಸೇರಿ ಸಿಇಒಗಳಾಗಿರುವುದುಂಟು. ಇನ್ಫೋಸಿಸ್​ನಿಂದಲೇ ಹಲವು ಉನ್ನತ ಅಧಿಕಾರಿಗಳು ಬೇರೆಡೆಗೆ ವಲಸೆ ಹೋಗಿ ನಿರ್ಣಾಯಕ ಹುದ್ದೆ ಪಡೆದಿರುವುದುಂಟು.

ಇನ್ಫೋಸಿಸ್​ನ ಮಾಜಿ ಅಧ್ಯಕ್ಷ ರವಿಕುಮಾರ್ ಈ ವರ್ಷದ ಆರಂಭದಲ್ಲಿ ಕಾಗ್ನೈಜೆಂಟ್ ಕಂಪನಿಯ ಸಿಇಒ ಆಗಿ ನೇಮಕವಾದರು.

ಇನ್ಫೋಸಿಸ್​ನ ಮತ್ತೊಬ್ಬ ಮಾಜಿ ಅಧ್ಯಕ್ಷ ಮೋಹಿತ್ ಜೋಷಿ ಅವರು ಟೆಕ್ ಮಹೀಂದ್ರಗೆ ಸಿಇಒ ಆಗಿದ್ದಾರೆ.

ಇದನ್ನೂ ಓದಿ: ಭಾರತ ಮುಂದುವರಿದ ದೇಶವಾಗಬೇಕಾದರೆ ಎಷ್ಟು ವೇಗದಲ್ಲಿ ಬೆಳೆಯಬೇಕು ಗೊತ್ತಾ? ಇಲ್ಲಿದೆ ಸಂಶೋಧಾನಾ ವರದಿ

ಇನ್ಫೋಸಿಸ್​ನ ಚೀಫ್ ಇನ್ಫಾರ್ಮೇಶನ್ ಸ್ಟ್ರಾಟಿಜಿ ಆಫೀಸರ್ ಆಗಿದ್ದ ವಿಶಾಲ್ ಸಳವಿ ಅವರು ಕ್ವಿಕ್ ಹೀಲ್ ಎಂಬ ಸೈಬರ್ ಸೆಕ್ಯೂರಿಟಿ ಕಂಪನಿಗೆ ಕಳೆದ ತಿಂಗಳು ಸಿಇಒ ಆಗಿ ಸೇರಿದ್ದಾರೆ.

ವಿಪ್ರೋದ ಅಮೆರಿಕ ಮಾರುಕಟ್ಟೆ ಯೂನಿಟ್​ನ ಸಿಇಒ ಆಗಿದ್ದ ಆಂಗನ್ ಗುಹಾ ಅವರು ಬಿರ್ಲಾ ಸಾಫ್ಟ್ ಕಂಪನಿಯ ಸಿಇಒ ಮತ್ತು ಎಂಡಿ ಆಗಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್