Rupee: ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲಿ ವ್ಯವಹಾರ ನಡೆಸುವ 22 ದೇಶಗಳು; ಇಲ್ಲಿದೆ ಇವುಗಳ ಪಟ್ಟಿ

List of countries trading in rupee: ಡಾಲರ್ ಮೇಲಿನ ಅವಲಂಬನೆ ತಪ್ಪಿಸಲು ಮತ್ತು ದೇಶೀಯ ಕರೆನ್ಸಿಯನ್ನು ಪ್ರಬಲಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ. ಈ ನಿಟ್ಟಿನಲ್ಲಿ ರುಪಾಯಿ ಬಳಸು ವಹಿವಾಟು ನಡೆಸುವಂತೆ 22 ದೇಶಗಳನ್ನು ಭಾರತ ಒಪ್ಪಿಸಿದೆ.

Rupee: ಭಾರತದೊಂದಿಗೆ ಡಾಲರ್ ಬದಲು ರುಪಾಯಿಯಲ್ಲಿ ವ್ಯವಹಾರ ನಡೆಸುವ 22 ದೇಶಗಳು; ಇಲ್ಲಿದೆ ಇವುಗಳ ಪಟ್ಟಿ
ರುಪಾಯಿ
Follow us
|

Updated on: Aug 06, 2023 | 11:03 AM

ನವದೆಹಲಿ, ಆಗಸ್ಟ್ 6: ವಿಶ್ವದ ಬಹುತೇಕ ವ್ಯವಹಾರಗಳು ಡಾಲರ್ ಕರೆನ್ಸಿ ಮೂಲಕವೇ ನಡೆಯುತ್ತದೆ. ಡಾಲರ್​ಗೆ ಪರ್ಯಾಯ ಅಂತಾರಾಷ್ಟ್ರೀಯ ಕರೆನ್ಸಿಯಾಗಿ (Alternative to Dollar Currency) ಈಗ ಯಾವುದೂ ಇಲ್ಲ. ಚೀನಾದ ಕರೆನ್ಸಿ ಈಗೀಗ ಹೆಚ್ಚೆಚ್ಚು ಬಳಕೆ ಆಗುತ್ತಿದೆ. ಆದರೂ ಡಾಲರ್​ಗೆ ಸೆಡ್ಡು ಹೊಡೆಯುವಷ್ಟು ಮಟ್ಟಕ್ಕೆ ಚೀನಾ ಕರೆನ್ಸಿ ಬೆಳೆದಿಲ್ಲ. ಈ ಹೊತ್ತಿನಲ್ಲಿ ಭಾರತ ತನ್ನ ರುಪಾಯಿಯನ್ನು (Rupee Currency) ಅಂತಾರಾಷ್ಟ್ರೀಯ ಕರೆನ್ಸಿಯಾಗಿ ಮಾಡಲು ಅತೀವ ಪ್ರಯತ್ನ ಮಾಡುತ್ತದೆ. ತನ್ನ ಆಮದು ಮತ್ತು ರಫ್ತುಗಳಿಗೆ ಸಾಧ್ಯವಾದಷ್ಟು ರುಪಾಯಿ ಕರೆನ್ಸಿಯಲ್ಲಿ ವ್ಯವಹಾರ ಮಾಡಲು ಭಾರತ ಪ್ರಯತ್ನಿಸುತ್ತಿದೆ. ವರದಿ ಪ್ರಕಾರ 22 ದೇಶಗಳು ರುಪಾಯಿಯಲ್ಲಿ ವ್ಯವಹರಿಸಲು ಒಪ್ಪಿವೆ. ಈ ದೇಶಗಳು ವಿಶೇಷ ರುಪಾಯಿ ವೋಸ್ಟ್ರೋ ಬ್ಯಾಂಕ್ ಖಾತೆಗಳನ್ನು ತೆರೆದು ಭಾರತದ ಜೊತೆ ರುಪಾಯಿಯಲ್ಲಿ ವ್ಯವಹರಿಸಲು ತೊಡಗಿವೆ. ಇದರಲ್ಲಿ ಜರ್ಮನಿ, ಬ್ರಿಟನ್, ಸಿಂಗಾಪುರ ಮೊದಲಾದ ದೇಶಗಳೂ ಸೇರಿವೆ.

ಏನಿದು ವೋಸ್ಟ್ರೋ ಬ್ಯಾಂಕ್ ಅಕೌಂಟ್?

ಇದು ರುಪಾಯಿ ಕರೆನ್ಸಿಯಲ್ಲಿ ಅಂತಾರಾಷ್ಟ್ರೀಯ ವಹಿವಾಟು ನಡೆಸಲು ಅನುವಾಗುವಂತೆ ಸರ್ಕಾರ ರೂಪಿಸಿರುವ ವಿಶೇಷ ವ್ಯವಸ್ಥೆ ಈ ವೋಸ್ಟ್ರೋ ಅಕೌಂಟ್. ಭಾರತದ ಜೊತೆ ವ್ಯವಹಾರ ನಡೆಸುವ ದೇಶದ ಒಂದು ಬ್ಯಾಂಕು ಭಾರತದ ನಿಗದಿತ ಬ್ಯಾಂಕ್​ನಲ್ಲಿ ವೋಸ್ಟ್ರೋ ಅಕೌಂಟ್​ವೊಂದನ್ನು ತೆರೆಯುತ್ತದೆ. ಇದರಲ್ಲಿ ರುಪಾಯಿ ಕರೆನ್ಸಿಯನ್ನು ಇರಿಸಲಾಗುತ್ತದೆ. ಆ ದೇಶದ ಮಾರಾಟಗಾರರು ಅಥವಾ ಖರೀದಿದಾರರು ಈ ವೋಸ್ಟ್ರೋ ಖಾತೆಯಲ್ಲಿ ರುಪಾಯಿ ಬಳಸಿ ಭಾರತೀಯ ಕಂಪನಿಯಿಂದ ವಹಿವಾಟು ನಡೆಸಬಹುದು.

ಇದನ್ನೂ ಓದಿ: API: ಚೀನಾ ಅವಲಂಬನೆ ತಗ್ಗಿಸಲು ಭಾರತದಲ್ಲೇ ತಯಾರಾಗುತ್ತಿವೆ 38 APIಗಳು; ಏನಿವುಗಳ ವಿಶೇಷತೆ?

ರುಪಾಯಿ ವೋಸ್ಟ್ರೋ ಬ್ಯಾಂಕ್ ಅಕೌಂಟ್ ಬಳಸುವ 22 ದೇಶಗಳ ಪಟ್ಟಿ

  1. ರಷ್ಯಾ
  2. ಜರ್ಮನಿ
  3. ಇಸ್ರೇಲ್
  4. ಬ್ರಿಟನ್
  5. ಸಿಂಗಾಪುರ
  6. ಓಮನ್
  7. ನ್ಯೂಜಿಲೆಂಡ್
  8. ಮಯನ್ಮಾರ್
  9. ಬಾಂಗ್ಲಾದೇಶ
  10. ಬೆಲಾರಸ್
  11. ಬೋಟ್ಸ್​ವಾನ
  12. ಫಿಜಿ
  13. ಗಯಾನ
  14. ಕಜಕಸ್ತಾನ್
  15. ಕೀನ್ಯಾ
  16. ಮಾಲ್ಡೀವ್ಸ್
  17. ಮಾರಿಷಸ್
  18. ಮಯನ್ಮಾರ್
  19. ಸೇಯ್ಷೆಲೆಸ್ (Seychelles)
  20. ಶ್ರೀಲಂಕಾ
  21. ತಾಂಜಾನಿಯಾ
  22. ಉಗಾಂಡ

ಭಾರತದ ಈ ಪ್ರಯತ್ನ ಇನ್ನೂ ಆರಂಭಿಕ ಹಂತದಲ್ಲಿದ್ದು, ಮುಂಬರುವ ವರ್ಷಗಳಲ್ಲಿ ಹೆಚ್ಚೆಚ್ಚು ರಾಷ್ಟ್ರಗಳು ರುಪಾಯಿ ಕರೆನ್ಸಿಯಲ್ಲಿ ವಹಿವಾಟು ನಡೆಸಲು ಮುಂದಾಗಬಹುದು. ರುಪಾಯಿ ಕರೆನ್ಸಿಗೆ ಹೆಚ್ಚೆಚ್ಚು ಅಂತಾರಾಷ್ಟ್ರೀಯ ಮಾನ್ಯತೆ ಪ್ರಾಪ್ತವಾಗಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ