ಖಾಸಗಿ ಬ್ಯಾಂಕ್ ಆದ ಎಚ್‌ಡಿಎಫ್‌ಸಿ ಬ್ಯಾಂಕ್ನಿಂದ (HDFC Bank) 2020ರ ಮೇ 18ನೇ ತಾರೀಕಿನಂದು ಹಿರಿಯ ನಾಗರಿಕರಿಗಾಗಿ ವಿಶೇಷ ಫಿಕ್ಸೆಡ್ ಡೆಪಾಸಿಟ್ ಮತ್ತು ರೆಕರಿಂಗ್ ಡೆಪಾಸಿಟ್ ಆರಂಭಿಸಿತು. “ಸೀನಿಯರ್ ಸಿಟಿಜನ್ ಕೇರ್ ಎಫ್ಡಿ” ಪ್ಲಾನ್ ಅನ್ನು ಬ್ಯಾಂಕ್ ಆರಂಭಿಸಿದ್ದು ಹಿರಿಯ ನಾಗರಿಕರಿಗೆ ಉತ್ತಮ ರಿಟರ್ನ್ಸ್ ದೊರೆಯಲಿ ಎಂಬ ಕಾರಣಕ್ಕಾಗಿ. ಈ ಯೋಜನೆಯನ್ನು ಪ್ರಾರಂಭ ಮಾಡಿದ್ದು ಅಲ್ಪಾವಧಿಗೆ ಹಾಗೂ ಮಾರ್ಚ್ 31, 2022ಕ್ಕೆ ಕೊನೆ ಆಗುವುದಾಗಿ ಆಗಲೇ ಘೋಷಿಸಲಾಗಿತ್ತು. ಆದರೆ ಬ್ಯಾಂಕ್ನ ಅಧಿಕೃತ ವೆಬ್ಸೈಟ್ ಪ್ರಕಾರ, ಇದೀಗ ಯೋಜನೆಯನ್ನು 2022ರ ಸೆಪ್ಟೆಂಬರ್ 30ರ ತನಕ ವಿಸ್ತರಣೆ ಮಾಡಲಾಗಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ಎಫ್ಡಿ
ದೀರ್ಘಾವಧಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡುತ್ತಾ ಸಾಗಿದರೆ ಹೆಚ್ಚಿನ ರಿಟರ್ನ್ಸ್ ಸಿಗುತ್ತದೆ. ಈಗಾಗಲೇ ಹಿರಿಯ ನಾಗರಿಕರಿಗೆ ಶೇ 0.50ರಷ್ಟು ಹೆಚ್ಚಿನ ಬಡ್ಡಿ ಸಿಗುತ್ತದೆ. 5 ಕೋಟಿ ರೂಪಾಯಿಗಿಂತ ಕಡಿಮೆ ಮೊತ್ತಕ್ಕೆ 5 ವರ್ಷ ಒಂದು ದಿನದಿಂದ 10 ವರ್ಷಗಳ ಅವಧಿಗೆ ಅದಕ್ಕೂ ಹೆಚ್ಚುವರಿಯಾಗಿ ಶೇ 0.25ರಷ್ಟು ಬಡ್ಡಿ ಸಿಗುತ್ತದೆ. ಈ ಹೆಚ್ಚುವರಿ ಬೆನಿಫಿಟ್ ಮೇ 18, 2020ರಿಂದ ಸೆಪ್ಟೆಂಬರ್ 30, 2022ರ ವರೆಗೆ ನಡೆಯುವ ಆಫರ್ ಅವಧಿಯಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡಿಸುವ ಹಿರಿಯ ನಾಗರಿಕರಿಗೆ ಮಾತ್ರ ಲಭ್ಯವಿರುತ್ತದೆ. ಈ ವಿಶೇಷ ಠೇವಣಿ ಆಯ್ಕೆಯು ಹೊಸ ಠೇವಣಿಗಳಿಗೆ ಮತ್ತು ಹೇಳಿದ ಅವಧಿಯಾದ್ಯಂತ ರಿನೀವಲ್ಗೆ ಮಾನ್ಯವಾಗಿರುತ್ತದೆ. ಅನಿವಾಸಿ ಭಾರತೀಯರು ಈ ಒಪ್ಪಂದಕ್ಕೆ ಅರ್ಹರಲ್ಲ.
5 ವರ್ಷ 1 ದಿನದಿಂದ 10 ವರ್ಷಗಳಲ್ಲಿ ಮೆಚ್ಯೂರ್ ಆಗುವ ಠೇವಣಿಗಳ ಮೇಲೆ ಎಚ್‌ಡಿಎಫ್‌ಸಿ ಬ್ಯಾಂಕ್ ಶೇ 5.60 ನಿಯಮಿತ ದರವನ್ನು ನೀಡುತ್ತದೆ. ಆದರೆ ಹಿರಿಯ ನಾಗರಿಕರು ಶೇ 6.35ರ ಬಡ್ಡಿದರವನ್ನು ಪಡೆಯುತ್ತಾರೆ. ಇದು ಶೇ 0.75ರಷ್ಟು ಹೆಚ್ಚುವರಿಯಾಗಿದೆ. ಸೀನಿಯರ್ ಸಿಟಿಜನ್ ಕೇರ್ ಎಫ್‌ಡಿಯನ್ನು 5 ವರ್ಷಗಳ ಅಥವಾ ಅದಕ್ಕೂ ಮೊದಲು (ಸ್ವೀಪ್ ಇನ್/ ಭಾಗಶಃ ಕ್ಲೋಸ್ ಸೇರಿದಂತೆ) ಅವಧಿಗೆ ಪೂರ್ವವಾಗಿ ಹಿಂಪಡೆಯಬಹುದು. ಆದರೆ ಬ್ಯಾಂಕ್‌ನಲ್ಲಿ ಠೇವಣಿ ಇರಿಸಿರುವ ಅವಧಿಗೆ ಅನ್ವಯವಾಗುವ ನಿಗದಿತ ದರದಿಂದ ಶೇ 1.00ರಷ್ಟು ಬಡ್ಡಿದರವನ್ನು ಕಳೆಯಲಾಗುತ್ತದೆ, ಅಥವಾ ಅವರಿಗೆ ನೀಡುತ್ತಿದ್ದ ಬಡ್ಡಿದರದಲ್ಲಿ ಯಾವುದು ಕಡಿಮೆಯೋ ಅದನ್ನು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತಿಳಿಸಿದೆ.
ಎಚ್‌ಡಿಎಫ್‌ಸಿ ಬ್ಯಾಂಕ್ ಸೀನಿಯರ್ ಸಿಟಿಜನ್ ಕೇರ್ ರೆಕರಿಂಗ್ ಡೆಪಾಸಿಟ್ ಸ್ಕೀಮ್
ರೆಕರಿಂಗ್ ಡೆಪಾಸಿಟ್ ಅನ್ನು ಅದರ ಠೇವಣಿ ವಿಧಾನವನ್ನು ಹೊರತುಪಡಿಸಿ ಎಫ್ಡಿಗೆ ಹೋಲಿಕೆ ಮಾಡಬಹುದು. ಯಾರು ನಿಯಮಿತವಾಗಿ ಪ್ರತಿ ತಿಂಗಳು ಉಳಿತಾಯ ಮಾಡುವುದಕ್ಕೆ ಬಯಸುತ್ತಾರೋ ಅವರಿಗೆ ಈ ಸೀನಿಯರ್ ಸಿಟಿಜನ್ ಕೇರ್ ಆರ್‌ಡಿ ಸೂಕ್ತ ಆಗುತ್ತದೆ. “ಸೀನಿಯರ್ ಸಿಟಿಜನ್ ಕೇರ್ ಆರ್‌ಡಿ” ಯೋಜನೆಯಡಿ ಮರುಕಳಿಸುವ ಠೇವಣಿ ಕಾಯ್ದಿರಿಸಲು ಬಯಸುವ ಹಿರಿಯ ನಾಗರಿಕರಿಗೆ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ವೆಬ್‌ಸೈಟ್‌ನಲ್ಲಿ “ಶೇ 0.25 ಹೆಚ್ಚುವರಿ ಪ್ರೀಮಿಯಂ ಅನ್ನು (ಅಸ್ತಿತ್ವದಲ್ಲಿರುವ ಪ್ರೀಮಿಯಂ ಶೇ 0.50ಗಿಂತ ಹೆಚ್ಚು) ನೀಡಲಾಗುವುದು ಎಂದು ಉಲ್ಲೇಖಿಸಿದೆ.
31 ಮಾರ್ಚ್ 22 ರವರೆಗೆ ಮಾನ್ಯವಾಗಿರುವ ವಿಶೇಷ ಠೇವಣಿ ಅವಧಿಯಲ್ಲಿ 5 (ಐದು) ವರ್ಷದಿಂದ 10 ವರ್ಷಗಳ ಅವಧಿಗೆ ಹೆಚ್ಚಿನ ಅವಧಿಗೆ ಠೇವಣಿ ಕಾಯ್ದಿರಿಸಲು ಬಯಸುವ ಹಿರಿಯ ನಾಗರಿಕರು ಮೇಲಿನ ಅವಧಿಯಲ್ಲಿ ಬುಕ್ ಮಾಡಿದ ಹೊಸ ಠೇವಣಿಗಳಿಗೆ ಈ ವಿಶೇಷ ಕೊಡುಗೆ ಅನ್ವಯಿಸುತ್ತದೆ. ಈ ಕೊಡುಗೆಯು ಅನಿವಾಸಿ ಭಾರತೀಯರಿಗೆ ಅನ್ವಯಿಸುವುದಿಲ್ಲ. “90 ರಿಂದ 120 ತಿಂಗಳಲ್ಲಿ ಮೆಚ್ಯೂರ್ ಆಗುವ ರೂ. 2 ಕೋಟಿಗಿಂತ ಕಡಿಮೆ ಆರ್‌ಡಿ ಮೇಲೆ ಬ್ಯಾಂಕ್ ಶೇ 5.60 ಪ್ರಮಾಣಿತ ದರವನ್ನು ನೀಡುತ್ತದೆ. ಆದರೆ ಹಿರಿಯರು ಶೇ 6.35ರಷ್ಟು ಬಡ್ಡಿ ದರ ಸ್ವೀಕರಿಸುತ್ತಾರೆ. ಇದು ಅಸ್ತಿತ್ವದಲ್ಲಿರುವ ಪ್ರೀಮಿಯಂ ಶೇ 0.50ಕ್ಕಿಂತ ಶೇ 0.25 ಅಥವಾ ಒಟ್ಟಾರೆ ಶೇ 0.75 ಹೆಚ್ಚಿನದಾಗಿರುತ್ತದೆ.
ಹಿರಿಯ ನಾಗರಿಕರಿಗಾಗಿ ಎಚ್‌ಡಿಎಫ್‌ಸಿ ಬ್ಯಾಂಕ್ ಎಫ್ಡಿ ದರಗಳು ರೂ. 2 ಕೋಟಿ ರೂಪಾಯಿಗಿಂತ ಕಡಿಮೆ ಇರುವ ದೇಶೀಯ ಫಿಕ್ಸೆಡ್ ಡೆಪಾಸಿಟ್ಗಳ ಮೇಲೆ ಈ ಕೆಳಗಿನ ಬಡ್ಡಿ ದರಗಳನ್ನು ನೀಡುತ್ತಿದ್ದು, ಇದು ಫೆಬ್ರವರಿ 14, 2022ರಿಂದ ಜಾರಿಗೆ ಬಂದಿದೆ.
ಅವಧಿ ಬಡ್ಡಿದರಗಳು (ವಾರ್ಷಿಕ)
7 – 14 ದಿನಗಳು ಶೇ 3.00
15 – 29 ದಿನಗಳು ಶೇ 3.00
30 – 45 ದಿನಗಳು ಶೇ 3.50
46 – 60 ದಿನಗಳು ಶೇ 3.50
61 – 90 ದಿನಗಳು ಶೇ 3.50
91 ದಿನಗಳು – 6 ತಿಂಗಳು ಶೇ 4.00
6 ತಿಂಗಳು 1 ದಿನದಿಂದ – 9 ತಿಂಗಳು ಶೇ 4.90
9 ತಿಂಗಳು 1 ದಿನ < 1 ವರ್ಷ ಶೇ 4.90
1 ವರ್ಷ ಶೇ 5.50
1 ವರ್ಷ 1 ದಿನ – 2 ವರ್ಷಗಳು ಶೇ 5.50
2 ವರ್ಷಗಳು 1 ದಿನ – 3 ವರ್ಷಗಳು ಶೇ 5.70
3 ವರ್ಷ 1 ದಿನ- 5 ವರ್ಷಗಳು ಶೇ 5.95
5 ವರ್ಷಗಳು 1 ದಿನ – 10 ವರ್ಷಗಳು ಶೇ 6.35
ಮೂಲ: ಬ್ಯಾಂಕ್ ವೆಬ್ಸೈಟ್
ಇದನ್ನೂ ಓದಿ: HDFC Bank: ಎಚ್‌ಡಿಎಫ್‌ಸಿ ಬ್ಯಾಂಕ್ ಉಳಿತಾಯ ಖಾತೆ ಬಡ್ಡಿ ದರಗಳ ಪರಿಷ್ಕರಣೆ; ಸಂಪೂರ್ಣ ವಿವರ ಇಲ್ಲಿದೆ