ICICI Bank: ದೇಶದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಐಸಿಐಸಿಐ ಬ್ಯಾಂಕ್ ನೆಟ್ ಬ್ಯಾಂಕಿಂಗ್ ಸೇವೆಯಲ್ಲಿ ವ್ಯತ್ಯಯ
ದೇಶದ ಎರಡನೇ ಅತಿದೊಡ್ಡ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ನ ಗ್ರಾಹಕರು ನೆಟ್ ಬ್ಯಾಂಕಿಂಗ್ ಸೇವೆಯಲ್ಲಿ ಸಮಸ್ಯೆಯನ್ನು ಎದುರಿಸಿದ ಬಗ್ಗೆ ದೂರಿತ್ತಿದ್ದಾರೆ.
ದೇಶದ ಎರಡನೇ ಅತಿ ದೊಡ್ಡ ಖಾಸಗಿ ಬ್ಯಾಂಕ್ ಆದ ಐಸಿಐಸಿಐ ಬ್ಯಾಂಕ್ನ (ICICI Bank) ನೆಟ್ ಬ್ಯಾಂಕಿಂಗ್ ಸೇವೆಯು ಸಮಸ್ಯೆಗೆ ಈಡಾಗಿರುವ ಬಗ್ಗೆ ಗ್ರಾಹಕರು ಶುಕ್ರವಾರ ದೂರು ನೀಡಿದ್ದು, ಪುಟ ಪ್ರತಿಕ್ರಿಯಿಸುತ್ತಿಲ್ಲ ಎಂದು ದೂರು ನೀಡಿದ್ದಾರೆ. ಐಸಿಐಸಿಐ ಬ್ಯಾಂಕ್ನ ಆ್ಯಪ್ ಮೂಲಕ ಲಾಗ್ ಇನ್ ಆಗುವುದಕ್ಕೆ ಪ್ರಯತ್ನ ಮಾಡಿದವರಿಗೂ ಕಷ್ಟವಾಗಿದೆ. “ಸದ್ಯಕ್ಕೆ ನಿಮ್ಮ ಮನವಿಯನ್ನು ಪ್ರೊಸೆಸ್ ಮಾಡುವುದಕ್ಕೆ ಕಷ್ಟವಾಗುತ್ತಿದೆ. ದಯವಿಟ್ಟು ಸ್ವಲ್ಪ ಸಮಯದ ನಂತರ ಪ್ರಯತ್ನಿಸಿ” ಎಂಬ ಸಂದೇಶ ಕಾಣಿಸಿಕೊಳ್ಳುತ್ತಿದೆ. ಹಲವು ಗ್ರಾಹಕರು ಟ್ವಿಟರ್ ಮೂಲಕ ತಮ್ಮ ಅಹವಾಲನ್ನು ಹೇಳಿಕೊಂಡಿದ್ದು, ಇಂಟರ್ನೆಟ್ ಬ್ಯಾಂಕಿಂಗ್ ಸಂಪರ್ಕಿಸಲು ಸಾಧ್ಯವಾಗುತ್ತಿಲ್ಲ ಎಂದಿದ್ದಾರೆ.
ಐಸಿಐಸಿಐ ಡೈರೆಕ್ಟ್ ಟ್ವಿಟರ್ ಹ್ಯಾಂಡಲ್ನಿಂದ ಮಾಹಿತಿಯನ್ನು ನೀಡಲಾಗಿದೆ. “ಪ್ರಿಯ ಗ್ರಾಹಕರೇ, http://ICICIdirect.com ಸದ್ಯಕ್ಕೆ ಡೌನ್ ಆಗಿದೆ. ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಹಜ ಸ್ಥಿತಿಗೆ ತರುವ ಸಲುವಾಗಿ ಕೆಲಸ ಮಾಡುತ್ತಿದ್ದೇವೆ ಮತ್ತು ಈ ಬಗ್ಗೆ ಅಪ್ಡೇಟ್ ಮಾಡುತ್ತೇವೆ. ಆಗಿರುವ ಅನನುಕೂಲಕ್ಕೆ ವಿಷಾದಿಸುತ್ತೇವೆ,” ಎಂದು ಟ್ವೀಟ್ ಮಾಡಲಾಗಿದೆ. ಬಳಕೆದಾರರೊಬ್ಬರು ಟ್ವಿಟರ್ನಲ್ಲಿ ಬರೆದುಕೊಂಡಿದ್ದು, @ICICIBank_Care @ICICIBank ಟ್ಯಾಗ್ ಮಾಡಿದ್ದಾರೆ. ವೆಬ್ ಆಗಲಿ ಅಥವಾ ಮೊಬೈಲ್ ಆ್ಯಪ್ ಆಗಲೀ ಯಾವುದೂ ಕಳೆದ 3 ಗಂಟೆಯಿಂದ ಕಾರ್ಯ ನಿರ್ವಹಿಸುತ್ತಿಲ್ಲ ಎಂದಿದ್ದಾರೆ.
ಮತ್ತೊಬ್ಬ ಬಳಕೆದಾರರು ಬರೆದಿದ್ದು, ಎಲ್ಲ @ICICIBank ಸೇವೆಗಳು ಇಂಟರ್ನಲ್ ಸರ್ವರ್ ಎರರ್ ಕಾರಣಕ್ಕೆ ಡೌನ್ ಆಗಿವೆ @ICICI_Direct ಡಿಮ್ಯಾಟ್, ಯುಪಿಐ, ನೆಟ್ಬ್ಯಾಂಕಿಂಗ್, ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್ ಮತ್ತು ಐಮೊಬೈಲ್ ಎಲ್ಲವೂ ಕಳೆದ 1.5 ಗಂಟೆಯಿಂದ ಡೌನ್ ಆಗಿವೆ @PMOIndia. ಇದು ಬೇಗ ಹಿಂತಿರುಗಬಹುದು ಎಂಬ ಭರವಸೆ ಇದೆ ಎಂದಿದ್ದಾರೆ.
ಇದನ್ನೂ ಓದಿ: ICICI Bank: ಐಸಿಐಸಿಐ ಬ್ಯಾಂಕ್ಗೆ ಮೂರನೇ ತ್ರೈಮಾಸಿಕದಲ್ಲಿ ಶೇ 25ರಷ್ಟು ಲಾಭ ಹೆಚ್ಚಳ