AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Sri Lanka Crisis: ಶ್ರೀಲಂಕಾ ಪ್ರಧಾನಿ ಮನೆಗೆ ಬೆಂಕಿ, ರಾಜೀನಾಮೆಗೆ ಅಧ್ಯಕ್ಷ ಗೊಟಬಾಯ ನಿರ್ಧಾರ, ಈವರೆಗಿನ 10 ಮುಖ್ಯ ಬೆಳವಣಿಗೆಗಳಿವು

ಶ್ರೀಲಂಕಾದಲ್ಲಿ ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಆಕ್ರೋಶ ಮೇರೆಮೀರಿದೆ. ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲವಾಗಿದ್ದು, ಸೇನೆ ಸಹ ಅಸಹಾಯಕ ಸ್ಥಿತಿ ತಲುಪಿದೆ.

Sri Lanka Crisis: ಶ್ರೀಲಂಕಾ ಪ್ರಧಾನಿ ಮನೆಗೆ ಬೆಂಕಿ, ರಾಜೀನಾಮೆಗೆ ಅಧ್ಯಕ್ಷ ಗೊಟಬಾಯ ನಿರ್ಧಾರ, ಈವರೆಗಿನ 10 ಮುಖ್ಯ ಬೆಳವಣಿಗೆಗಳಿವು
ಶ್ರೀಲಂಕಾದ ಆರ್ಥಿಕ ಬಿಕ್ಕಟ್ಟಿನಿಂದ ಬೇಸತ್ತಿರುವ ಜನರು ಬೀದಿಗಿಳಿದು ಹೋರಾಡುತ್ತಿದ್ದಾರೆ.
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on:Jul 10, 2022 | 9:58 AM

Share

ಆರ್ಥಿಕ ಬಿಕ್ಕಟ್ಟಿನಿಂದ ಕಂಗೆಟ್ಟಿರುವ ಶ್ರೀಲಂಕಾದಲ್ಲಿ ಜನರು ರೊಚ್ಚಿಗೆದ್ದು ಬೀದಿಗಿಳಿದಿದ್ದಾರೆ. ದಿನದಿಂದ ದಿನಕ್ಕೆ ಪರಿಸ್ಥಿತಿ ಬಿಗಡಾಯಿಸುತ್ತಿದ್ದು, ಜನರ ಆಕ್ರೋಶಕ್ಕೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ. ಉದ್ರಿಕ್ತ ಜನರನ್ನು ನಿಯಂತ್ರಿಸಲು ಪೊಲೀಸರು ವಿಫಲವಾಗಿದ್ದು, ಸೇನೆ ಸಹ ಅಸಹಾಯಕ ಸ್ಥಿತಿ ತಲುಪಿದೆ. ಹಲವು ಪೊಲೀಸ್ ಅಧಿಕಾರಿಗಳು ಬಹಿರಂಗವಾಗಿಯೇ ಪ್ರತಿಭಟನೆಗಳಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ಶನಿವಾರ ಸಿಟ್ಟಿಗೆದ್ದ ಜನರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಮನೆಗೆ ಬೆಂಕಿ ಹಚ್ಚಿದ್ದಾರೆ. ಅಧ್ಯಕ್ಷ ಗೊಟಬಾಯ ರಾಜಪಕ್ಸ ಮನೆಗೆ ನುಗ್ಗಿದ ಜನರು ದಾಂದಲೆ ಮಾಡಿದ್ದಾರೆ. ಜನಾಕ್ರೋಶಕ್ಕೆ ಹೆದರಿದ ಗೊಟಬಾಯ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ. ಸೂಟ್​ಕೇಸ್​ಗಳನ್ನು ಹಡಗಿಗೆ ತುಂಬುವ ವಿಡಿಯೊ ತುಣುಕೊಂದು ವೈರಲ್ ಆಗಿದ್ದು, ಇದೇ ಹಡಗಿನಲ್ಲಿ ಗೊಟಬಾಯ ಪರಾರಿಯಾಗಬಹುದು ಎಂದು ಹೇಳಲಾಗಿದೆ.

  1. ಶ್ರೀಲಂಕಾ ರಾಜಧಾನಿ ಕೊಲಂಬೊದಲ್ಲಿರುವ ಲಂಕಾ ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಮನೆಗೆ ಪ್ರತಿಭಟನಾಕಾರರು ಬೆಂಕಿ ಹಚ್ಚಿದ್ದರು. ಇದರಿಂದ ರಾನಿಲ್ ಅವರಿಗೆ ಅಪಾಯವೇನೂ ಆಗಿಲ್ಲ. ಆದರೆ ಇಡೀ ಜಗತ್ತು ಶ್ರೀಲಂಕಾದ ಜನರ ಆಕ್ರೋಶ ಹೇಗಿರಬಹುದು ಎಂಬುದಕ್ಕೆ ಸಾಕ್ಷಿಯಾಗಿದ್ದು, ಶ್ರೀಲಂಕಾದ ವಿಷಮ ಪರಿಸ್ಥಿತಿಯ ಬಗ್ಗೆ ವಿಶ್ವದ ಬಹುತೇಕ ದೇಶಗಳ ಮಾಧ್ಯಮಗಳು ವರದಿ ಮಾಡಿವೆ.
  2. ವಿಶ್ವ ಹಣಕಾಸು ಸಂಸ್ಥೆಯ ಶ್ರೀಲಂಕಾದ ವಿದ್ಯಮಾನವನ್ನು ಗಂಭೀರವಾಗಿ ಪರಿಶೀಲಿಸುತ್ತಿದ್ದು, ಪ್ರಧಾನಿ ರಾನಿಲ್ ವಿಕ್ರಮ ಸಿಂಘೆ ಅವರೊಂದಿಗೆ ಮಾತುಕತೆಗೆ ವೇಗ ನೀಡಲು ನಿರ್ಧರಿಸಿದೆ.
  3. ರಾಜಧಾನಿ ಕೊಲಂಬೊದಲ್ಲಿ ಸೇನೆಯ ನಿಯೋಜನೆ ಹೆಚ್ಚಿಸಲಾಗಿದೆ. ಅಧ್ಯಕ್ಷ ಗೊಟಬಾಯ ರಾಜಪಕ್ಸ ಜುಲೈ 13ರಂದು ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಶ್ರೀಲಂಕಾದಲ್ಲಿ ವಿವಿಧ ಪಕ್ಷಗಳು ಜೊತೆಗೂಡಿ ಸರ್ಕಾರ ರಚಿಸಬೇಕು ಎನ್ನುವ ಜನರ ಬೇಡಿಕೆ ಈಡೇರುವ ಸಾಧ್ಯತೆಯಿದೆ.
  4. ಶ್ರೀಲಂಕಾ ಸರ್ಕಾರವು ಜುಲೈ 14ರಂದು ಮಧ್ಯಂತರ ಬಜೆಟ್ ಮಂಡಿಸಲಿದ್ದು, ವಸ್ತುಸ್ಥಿತಿಯ ಅವಲೋಕನದೊಂದಿಗೆ ದೇಶವನ್ನು ಬಿಕ್ಕಟ್ಟಿನಿಂದ ಹೊರಗೆ ತರಲು ತೆಗೆದುಕೊಳ್ಳಲಿರುವ ಕ್ರಮಗಳ ಬಗ್ಗೆಯೂ ಬಜೆಟ್​ನಲ್ಲಿ ಮಾಹಿತಿ ಇರಲಿದೆ.
  5. ಕಳೆದ ಮೇ ತಿಂಗಳಲ್ಲಿ ಪ್ರಧಾನಿ ಗಾದಿಗೆ ಏರಿದ ರಾನಿಲ್ ವಿಕ್ರಮಸಿಂಘೆ ಬಗ್ಗೆ ಜನರಿಗೆ ಅಪಾರ ನಿರೀಕ್ಷೆಗಳಿದ್ದವು. ಆದರೆ ತಮ್ಮ ಜೀವನದ ಸ್ಥಿತಿಗತಿಯಲ್ಲಿ ಯಾವುದೇ ಬದಲಾವಣೆ ಕಂಡುಬರದ ಹಿನ್ನೆಲೆಯಲ್ಲಿ ಜನರು ರೊಚ್ಚಿಗೆದ್ದು ಪ್ರಧಾನಿ ನಿವಾಸದ ಮೇಲೆ ದಾಳಿ ನಡೆಸಿದರು. ಸಿಕ್ಕಸಿಕ್ಕ ವಾಹನಗಳಿಗೆ ಕಲ್ಲುತೂರಿ, ಬೆಂಕಿಹಚ್ಚಿದರು. ರಾನಿಲ್ ವಿಕ್ರಮ ಸಿಂಘೆ ಸಹ ಇದೀಗ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ.
  6. ಸರ್ವಪಕ್ಷದ ಸರ್ಕಾರ ರಚನೆಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕು ಎನ್ನುವ ನಮ್ಮ ಪಕ್ಷದ ನಾಯಕರ ಶಿಫಾರಸು ಒಪ್ಪಿಕೊಳ್ಳುತ್ತೇನೆ. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತೇನೆ ಎಂದು ರಾನಿಲ್ ಟ್ವೀಟ್ ಮಾಡಿದ್ದಾರೆ.
  7. ಹಿಂಸಾಚಾರವನ್ನು ಶ್ರೀಲಂಕಾದ ಕ್ರಿಕೆಟ್ ಆಟಗಾರರಾದ ಸನತ್ ಜಯಸೂರ್ಯ ಮತ್ತು ಮಹೇಲಾ ಜಯವರ್ಧನೆ ಖಂಡಿಸಿದ್ದು, ಶಾಂತಿ ಕಾಪಾಡಬೇಕೆಂದು ಜನರಲ್ಲಿ ಮನವಿ ಮಾಡಿದ್ದಾರೆ.
  8. ಪ್ರತಿಭಟನಾನಿರತರು ಮನೆಗೆ ನುಗ್ಗುವ ಕೆಲವೇ ನಿಮಿಷಗಳ ಮೊದಲು ಅಧ್ಯಕ್ಷ ಗೊಟಬಾಯ ಓಡಿಹೋದರು. ಅವರು ದೇಶದಿಂದಲೇ ನಿರ್ಗಮಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಒಂದಿಷ್ಟು ಸೂಟ್​ಕೇಸ್​ಗಳನ್ನು ನೌಕಾಪಡೆಯ ಹಡಗಿಗೆ ತುಂಬುತ್ತಿರುವ ದೃಶ್ಯಗಳ ವೈರಲ್ ಆಗಿವೆ.
  9. ವಿದೇಶಿ ಮೀಸಲು ನಿಧಿ ಕೊರತೆಯಿಂದ ತೀವ್ರ ಸಂಕಷ್ಟ ಸ್ಥಿತಿ ಅನುಭವಿಸುತ್ತಿರುವ ಶ್ರೀಲಂಕಾದಲ್ಲಿ ಇಂಧನ, ಆಹಾರ, ಔಷಧಿ ಕೊರತೆ ಕಾಣಿಸಿಕೊಂಡಿದೆ. ಶ್ರೀಲಂಕಾದ ಇಂದಿನ ಸ್ಥಿತಿಗೆ ಅಧ್ಯಕ್ಷ ಗೋಟಬಾಯ ರಾಜಪಕ್ಸ ಅವರ ಆಡಳಿತ ವೈಖರಿಯೇ ಕಾರಣ ಎಂದು ಜನರು ದೂರುತ್ತಿದ್ದಾರೆ.
  10. ಗೊಟಬಾಯ ರಾಜಪಕ್ಸ ರಾಜೀನಾಮೆ ನೀಡಬೇಕು ಎಂದು ಕಳೆದ ಮಾರ್ಚ್​ ತಿಂಗಳಿನಿಂದಲೂ ಜನರು ಆಗ್ರಹಿಸುತ್ತಲೇ ಇದ್ದಾರೆ. ಆದರೆ ಗೊಟಬಾಯ ಮಾತ್ರ ಅಧಿಕಾರಕ್ಕೆ ಅಂಟಿಕೊಂಡಿದ್ದರು. ಇದೀಗ ಜನಾಕ್ರೋಶಕ್ಕೆ ಮಣಿದಿರುವ ಅವರು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ.

Published On - 9:58 am, Sun, 10 July 22

ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಹೆಸರಿಗೆ ಬ್ರ್ಯಾಂಡ್​​ ಬೆಂಗಳೂರು, ಜನ ಕುಡಿತಿರೋದು ಕಲುಷಿತ ನೀರು!
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆ ಶಿವಕುಮಾರ್ ಕೂಡ ಸಿಎಂ ಆಗ್ಲಿ ಅಂತ ನನ್ನಾಸೆ! ಜಮೀರ್ ಅಹ್ಮದ್
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಡಿಕೆಶಿ ತಂಡದ ಡಿನ್ನರ್​​ ಮೀಟಿಂಗ್​​ ಬಗ್ಗೆ ಸೋಮಶೇಖರ್​​ ಬಿಗ್​​ ಅಪ್ಡೇಟ್​​
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಾಂಗ್ರೆಸ್​ನ ನೂರಕ್ಕೂ ಹೆಚ್ಚು ಶಾಸಕರು ಡಿಕೆಶಿ ತೆಕ್ಕೆಗೆ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?
ಕಷ್ಟಪಟ್ಟಿದ್ದ ಡಿಕೆಶಿಗೆ ಕೊನೆಗೂ ಫಲ, ಅಧಿವೇಶನದ ಬಳಿಕ ಶುಭಸುದ್ದಿ?