Adani Group 5G Spectrum: 5G ಸ್ಪೆಕ್ಟ್ರಮ್ ಮುಕ್ತ ಬಿಡ್ಡಿಂಗ್ನಲ್ಲಿ ಅದಾನಿ ಸಮೂಹವೂ ಭಾಗಿ; ಆದರೆ ಉದ್ದೇಶ ಮಾತ್ರ ಒಟ್ಟಾರೆ ಬೇರೆ
ಅದಾನಿ ಸಮೂಹದಿಂದ 5G ಸ್ಪೆಕ್ಟ್ರಂಗಾಗಿ ಬಿಡ್ಡಿಂಗ್ ಮಾಡಲಾಗುತ್ತಿದೆ. ಆದರೆ ಅದರ ಬಳಕೆ ಉದ್ದೇಶ ಮಾತ್ರ ಬೇರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ನಾವು 5G ಸ್ಪೆಕ್ಟ್ರಮ್ನಲ್ಲಿ ಆಸಕ್ತಿ ಹೊಂದಿದ್ದೇವೆಯೇ ಎಂಬ ಬಗ್ಗೆ ಸಾಕಷ್ಟು ಮಂದಿ ಕೇಳುತ್ತಿದ್ದಾರೆ. ನಮ್ಮ ಉದ್ದೇಶವು ಗ್ರಾಹಕ ಮೊಬಿಲಿಟಿ ವಲಯದ ಕಡೆಗಲ್ಲ ಎಂದು ಅದಾನಿ ಸಮೂಹದಿಂದ (Adani Group) ಸ್ಪಷ್ಟನೆ ನೀಡಲಾಗಿದೆ. ಈ ಹರಾಜಿನ ಮೂಲಕ ಭಾರತವು ಮುಂದಿನ ತಲೆಮಾರಿನ 5G ಸೇವೆಗಳನ್ನು ತರುವುದಕ್ಕೆ ಸಿದ್ಧತೆ ನಡೆದಿದೆ. ಈ ಮುಕ್ತ ಬಿಡ್ಡಿಂಗ್ ಪ್ರಕ್ರಿಯೆಯಲ್ಲಿ ಪಾಲ್ಗೊಂಡವರ ಪೈಕಿ ನಾವೂ ಒಬ್ಬರು. ನಾವು 5G ಸ್ಪೆಕ್ಟ್ರಮ್ ಹರಾಜಿನಲ್ಲಿ ಭಾಗವಹಿಸುತ್ತಿರುವ ಉದ್ದೇಶ ಏನೆಂದರೆ, ಖಾಸಗಿ ನೆಟ್ವರ್ಕ್ ಸಲ್ಯೂಷನ್ಸ್ ಒದಗಿಸುವುದಕ್ಕೆ ಮತ್ತು ಅದರ ಜತೆಗೆ ವಿಸ್ತೃತ ಸೈಬರ್ ಸೆಕ್ಯೂರಿಟಿಯನ್ನು ವಿಮಾನ ನಿಲ್ದಾಣಗಳು, ಬಂದರು ಹಾಗೂ ಸರಕು ಸಾಗಣೆ, ವಿದ್ಯುತ್ ಉತ್ಪಾದನೆ, ಪ್ರಸರಣ, ವಿತರಣೆ ಮತ್ತು ವಿವಿಧ ಉತ್ಪಾದನೆ ಕಾರ್ಯಚಟುವಟಿಕೆಗಳಿಗಾಗಿ ಎಂದು ಕಂಪೆನಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇದರ ಜತೆಗೆ, ನಮಗೆ ಮುಕ್ತ ಬಿಡ್ಡಿಂಗ್ನಲ್ಲಿ 5G ಸ್ಪೆಕ್ಟ್ರಮ್ ದೊರೆತಲ್ಲಿ ನಾವು ಈಚೆಗೆ ಘೋಷಣೆ ಮಾಡಿದ ಅದಾನಿ ಫೌಂಡೇಷನ್ನ ಗ್ರಾಮೀಣ ಪ್ರದೇಶದಲ್ಲಿನ ಶಿಕ್ಷಣ, ಹೆಲ್ತ್ಕೇರ್ ಮತ್ತು ಕೌಶಲಾಭಿವೃದ್ಧಿ ಕ್ಷೇತ್ರಕ್ಕೆ ಸಹಾಯ ಆಗಲಿದೆ. ಈ ಎಲ್ಲವೂ 5G ತಂತ್ರಜ್ಞಾನದಿಂದ ಅನುಕೂಲ ಪಡೆದುಕೊಳ್ಳುತ್ತವೆ ಎಂದು ಹೇಳಲಾಗಿದೆ.
ಇದರ ಜತೆಜತೆಗೆ ನಮ್ಮದೇ ಆದ ಡಿಜಿಟಲ್ ಪ್ಲಾಟ್ಫಾರ್ಮ್ ಮೂಲಕ ಸೂಪರ್ ಅಪ್ಲಿಕೇಷನ್ಗಳು, ಎಡ್ಜ್ ಡೇಟಾ ಸೆಂಟರ್ಗಳು, ಮತ್ತು ಇಂಡಸ್ಟ್ರಿ ಕಮ್ಯಾಂಡ್ ಮತ್ತು ಕಂಟ್ರೋಲ್ ಸೆಂಟರ್ಗಳನ್ನು ನಿರ್ಮಿಸುತ್ತೇವೆ. ನಮಗೆ ಅತ್ಯುತ್ತಮ ಗುಣಮಟ್ಟದ ಡೇಟಾ ಸ್ಟ್ರೀಮಿಂಗ್ ಸಾಮರ್ಥ್ಯದ ಅಗತ್ಯ ಇದೆ. ಅದು ಹೈ ಫ್ರೀಕ್ವೆನ್ಸಿ ಮತ್ತು ಕಡಿಮೆ ಲೆಟೆನ್ಸಿ 5G ನೆಟ್ವರ್ಕ್ ನಮ್ಮ ಎಲ್ಲ ವ್ಯವಹಾರಗಳಿಗೆ ಅಗತ್ಯ ಇದೆ. ಮತ್ತು ಇವೆಲ್ಲವೂ ದೇಶ ನಿರ್ಮಾಣದ ಹಾಗೂ ಆತ್ಮನಿರ್ಭರ್ ಭಾರತದ ಸಿದ್ಧಾಂತಕ್ಕೆ ಪೂರಕವಾಗಿದೆ ಎಂದು ಅದಾನಿ ಸಮೂಹದ ವಕ್ತಾರರು ಹೇಳಿದ್ದಾರೆ.